भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪನಿಪುಲ್

[ನಾ] ಇಬ್ಬನಿ ಕೂತ ಹುಲ್ಲು (ನರಭೋಗಮೆಂಬೀ ಪನಿಪುಲ್ಲಂ ನಕ್ಕೆ ತೃಷ್ಣೆ ಪೇೞ್ ಪೋದಪುದೇ: ಆದಿಪು, ೯. ೫೭)

ಪನ್ನಗ

[ನಾ] ಕಶ್ಯಪ ಕದ್ರು ಇವರ ಸಂತತಿ, ನಾಗವಂಶ (ವಿದ್ಯಾಧರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡೆ: ಪಂಪಭಾ, ೫. ೮೮ ವ); [ನಾ] ಹಾವು (ವಿಷ ಪನ್ನಗನಂ ಪನ್ನತನನೆಡೆಯೊಳ್ ಅರಿಗಂ ತನ್ನಯ ಗರುಡಾಸ್ತ್ರದಿಂದೆ ಕುಱಿದಱಿದಱಿದಂ: ಪಂಪಭಾ, ೧೨. ೨೦೫)

ಪನ್ನಗಕೇತನ

[ನಾ] ದುರ್ಯೋಧನ (ಅಹಿತಂ ಇಳೆಯಂ ಕುಡಂ ಆಸನ್ನಂ ಕಾಳೆಗಂ ಅಱಿಯಿರೆ ಪನ್ನಗಕೇತನನ ಚಲದ ಕಲಿತನದ ಅಳವಂ: ಪಂಪಭಾ, ೭. ೬೪)

ಪನ್ನಗಧ್ವಜ

[ನಾ] ದುರ್ಯೋಧನ (ಸೋಲ್ತ ತನ್ನ ಬಲಮಂ ಅಳುಂಬಮಾದ ವಿಕ್ರಮಾರ್ಜುನನ ಭುಜಬಲಮುಮಂ ಕಂಡು ಕನಕ ತಾಳಧ್ವಜಂಗೆ ಪನ್ನಗಧ್ವಜನಿಂತೆಂದಂ: ಪಂಪಭಾ, ೧೧. ೧೩ ವ)

ಪನ್ನಗಪತಿ

[ನಾ] ನಾಗರಾಜ, ಆದಿಶೇಷ (ಪೂಗಳೊಳ್ ಕಲ್ಪವೃಕ್ಷಂಗಳ ಪೂಗಳ್ ದೀಪದೊಳ್ ಪನ್ನಗಪತಿಯ ಫಣಾರತ್ನದೀಪಂ: ಆದಿಪು, ೧೬. ೨)

ಪನ್ನಗರ್

[ನಾ] ನಾಗರು (ವಿದ್ಯಾಧರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡೆ: ಪಂಪಭಾ, ೫. ೮೮ ವ)

ಪನ್ನಗವಿದ್ಯೆ

[ನಾ] [ಜೈನ] ಹಾವು ಮುಂತಾದವು ಕಚ್ಚಿದರೆ ಮದ್ದು ಮಾಡುವ ವಿದ್ಯೆ (ದಕ್ಷಿಣೋತ್ತರಶ್ರೇಣಿಗಳಂ ನಮಿವಿನಮಿಗಳ್ಗೆ ಕೊಟ್ಟು ಗಾಂಧಾರಪನ್ನಗವಿದ್ಯೆಗಳನವರ್ಗೆ ವಿಧಿಪೂರ್ವಕಂ ಇತ್ತು: ಆದಿಪು, ೯. ೧೨೧ ವ)

ಪನ್ನಗಶಯನ

[ನಾ] ಹಾವಿನ ಹಾಸಿಗೆಯವನು, ವಿಷ್ಣು, ಶ್ರೀಕೃಷ್ಣ (ದುರ್ಯೋಧನನಪ್ಪೊಡೆ ಶ್ವೇತಕೃಷ್ಣಕಾರಕಂ ಕೃಷ್ಣನಂ ತನಗೆ ಮಾಡದನ್ನೆಗಂ ಮುನ್ನಮೆ ಪನ್ನಗಶಯನನಂ ನಮಗೆ ಮಾಡುವುದು: ಪಂಪಭಾ, ೯. ೧೦ ವ)

ಪನ್ನಗೋದಾತ್ತ ಸಮಸ್ತ ಲೋಕಂ

ನಾಗಲೋಕವೇ ಮೊದಲಾದ ಎಲ್ಲ ಲೋಕ (ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋದಾತ್ತ ಸಮಸ್ತ ಲೋಕಂ: ಪಂಪಭಾ, ೧. ೭೫)

ಪನ್ನತ

[ನಾ] ವೀರ, ಪರಾಕ್ರಮಿ (ವಿಷಪನ್ನಗನಂ ಪನ್ನತನಂ ಎಡೆಯೊಳ್ ಅರಿಗಂ ತನ್ನಯ ಗರುಡಾಸ್ತ್ರದಿಂದೆ ಕುಱಿದಱಿದಱಿದಂ: ಪಂಪಭಾ, ೧೨. ೨೦೫)

ಪನ್ನಿರ್

[ನಾ] ಹನ್ನೆರಡು (ಎರಡೆಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂೞುಮಂ ಅದರ್ಕೆ ತಕ್ಕ ಪರಿಕರಮುಮಂ ಒರ್ವ ಮಾನಸಂ ಕೊಂಡು ಪೋಪಂ: ಪಂಪಭಾ, ೩. ೨೫ ವ)

ಪನ್ನಿರ್ಛಾಸಿರಸೇೞ್ನೂರಯ್ವದಿಂಬರ್

[ನಾ] ಹನ್ನೆರಡು ಸಾವಿರದ ಏಳ್ನೂರೈವತ್ತು ಮಂದಿ (ಪನ್ನಿರ್ಛಾಸಿರದೇೞ್ನೂರೈವದಿಂಬರ್ ಮನಃಪರ್ಯಯಜ್ಞಾನಿಗಳುಂ ಅನಿಬರೆ ವಾದಿಗಳುಂ: ಆದಿಪು, ೧೬. ೪೦ ವ)

ಪನ್ನಿರ್ಮತ್ತರ್

[ನಾ] [ಪನ್ನಿರ್+ಮತ್ತರ್] ಹನ್ನೆರಡು ಮತ್ತರು (ಒಂದು ದಿವಸಂ ಮರಗೆರಸಿಯಾಡಲೆಂದು ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು: ಪಂಪಭಾ, ೨. ೩೦ ವ)

ಪನ್ನೆರಡು

[ನಾ] ಹನ್ನೆರಡು (ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನಂ ಅಗಲ್ದ ಪನ್ನೆರಡು ಮಾಸದೊಳಾದ ದಿಗ್ವಿಜಯಪ್ರಪಂಚಮುಮುಮಂ .. .. ಅಱಿದು: ಪಂಪಭಾ, ೫. ೨೩ ವ)

ಪನ್ನೆರಡು ತಪ

[ನಾ] [ಜೈನ] ತಪಸ್ವಿಗಳು ಕೈಗೊಳ್ಳಬೇಕಾದ ಅನಶನ, ಅವಮೋದರ್ಯ, ವೃತ್ತಿಪರಿಸಂಖ್ಯಾನ, ರಸಪರಿತ್ಯಾಗ, ವಿವಿಕ್ತಾವಾಸ ಎಂಬ ಆರು ಆಂತರಿಕ ತಪಸ್ಸುಗಳು ಹಾಗೂ ಕಾಯಕ್ಲೇಶ, ಪ್ರಾಯಶ್ಚಿತ್ತ ವಿನಯ, ವೈಯಾವೃತ್ಯ, ಸ್ವಾಧ್ಯಾಯ, ವ್ಯುತ್ಸರ್ಗ, ಧ್ಯಾನ ಎಂಬ ಆರು ಆಂತರಿಕ ತಪಸ್ಸಗುಳು (ಪನ್ನೆರಡು ತಪದೊಳ್ ನೆಱೆದಿರ್ಪತ್ತೆರಡು ಪರೀಷಹಂಗಳಂ ಗೆಲ್ದು: ಆದಿಪು, ೬. ೩೩ ವ)

ಪನ್ನೊರ್ವರ್

[ನಾ] ಹನ್ನೊಂದು ಮಂದಿ (ಶತಾನೀಕ ಶತದ್ಯುಮ್ನ ಶತಚಂದ್ರಂ ಮೊದಲಾಗಿ ಪನ್ನೊರ್ವರ್ ತಮ್ಮಂದಿರುಂ ಬೆರಸು ನೆಲನದಿರೆ ಮುಂಗೋಳೊಳ್ ನಡೆಯೆ: ಪಂಪಭಾ, ೯. ೯೫ ವ)

ಪಂಬಲಿಸು

[ಕ್ರಿ] ಹಂಬಲಿಸು, ತವಕಿಸು (ಅಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂಬಲಿಸದೆ ನಿದ್ದೆಗೆಟ್ಟು ನಿಡುಜಾಗರದೊಳ್ ತೊಡರ್ದು: ಪಂಪಭಾ, ೧. ೧೩೬)

ಪಂಬಲ್

[ನಾ] ಹಂಬಲ, ಆಸೆ, ನಿರೀಕ್ಷೆ (ನೀಂ ಗಳ ಪಂಬಲನೆ ಬಿಸುಡಿಂ ಇನ್ ಎನ್ನ ಎಡೆಯೊಳ್: ಪಂಪಭಾ, ೯. ೮೫)

ಪಯಃಕಲ್ಲೋಳ

[ನಾ] ನೀರಿನ ಅಲೆಗಳು (ಏಂ ಉಣ್ಮಿ ಪೊಣ್ಮಿದುದೋ ಮಂದರಕಂದರೋತ್ಥಿತ ಪಯಃಕಲ್ಲೋಳ ಕೋಳಾಹಳಂ: ಆದಿಪು, ೭. ೯೭)

ಪಯಣಂಬೋಗು

[ನಾ] ಪ್ರವಾಸ ಹೋಗು (ತಮ್ಮಯ್ವರುಂ ಪಾಂಚಾಳಿವೆರಸು ಪೋದ ದೆಸೆಯಂ ಆರುಂ ಅಱಿಯದಂತು ದ್ವೈತವನಮಂ ಪೊಱಮಟ್ಟು ಜಗುನೆಯಂ ಪಾಯ್ದು ಮೂಡಮೊಗದೆ ಪಯಣಂಬೋಗಿ: ಪಂಪಭಾ, ೮. ೫೦ ವ)

Search Dictionaries

Loading Results

Follow Us :   
  Download Bharatavani App
  Bharatavani Windows App