भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪಯಃಪಯೋಧಿ

[ನಾ] ಹಾಲಿನ ಸಮುದ್ರ (ಪಯಃಪಯೋಧಿ ಫೇನಸಂಕಾಶದುಕೂಲಪ್ರಚ್ಛದಾಚ್ಛಾದಿತ ವಿಚಿತ್ರ ನೇತ್ರೋಭಯೋಪಧಾನ ಶಯ್ಯಾತಲದೊಳ್: ಆದಿಪು, ೫. ೨೨ ವ)

ಪಯಃಪೂರ

[ನಾ] ಹಾಲ ಹೊಳೆ (ನರಲೋಕಂಬರಂ ಉಣ್ಮಿ ಪೊಣ್ಮಿದ ಪಯಃಪೂರಂಗಳಿಂದಂ: ಆದಿಪು, ೭. ೧೦೧)

ಪಯಃಪೂರ್ಣ

ನೀರಿನಿಂದ ತುಬಿದ (ವಿಮಳಾರ್ಣವ ಪಯಃಪೂರ್ಣಕಳಧೌತಕಳಶಂಗಳಂ ಕಳಶೋದ್ಧಾರ ಮಂತ್ರಪೂರ್ವಕಂ: ಆದಿಪು, ೭. ೮೦ ವ)

ಪಯಃಪ್ಲವ

[ನಾ] [ಹಾಲಿನ) ಪ್ರವಾಹ (ಪಾಲ್ಗಡಲೊಂದುಂಟಾಗದೆ ಮೇರುವ ತುದಿಯೊಳಮೀಗಳೆನಲ್ ನೆಱೆದುದಾ ಪಯಃಪ್ಲವದೆಸಕಂ: ಆದಿಪು, ೭. ೮೮)

ಪಯಿಂಛಾಸಿರ್ವರ್

[ನಾ] ಹತ್ತು ಸಾವಿರ [ಮಂದಿ](ಪಟ್ಟಂಗಟ್ಟಿದ ಇಳಾಧಿನಾಥರೆ ಪಯಿಂಛಾಸಿರ್ವರ್ ಒಳ್ಳಾನೆಗಳ್ ಪಟ್ಟಂಗಟ್ಟಿದುವು ಒಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ: ಪಂಪಭಾ, ೧೦. ೧೧೭)

ಪಯೋಜಜ

[ನಾ] ಕಮಲದಲ್ಲಿ ಹುಟ್ಟಿದವನು, ಬ್ರಹ್ಮ (ರಜಂಬೊರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರ ಒಳ್ವರಕೆಯನಾಂತು: ಪಂಪಭಾ, ೧೨. ೨೨೧)

ಪಯೋಜರಜ

[ನಾ] ತಾವರೆಯ ಪರಾಗ (ಕವಿದ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿಲ್ಗವಿಲನುಮಾಗಿ ಬಂದ ಮಲಯಾನಿಲಂ: ಪಂಪಭಾ, ೨. ೧೪)

ಪಯೋಧರಕಾಲ

[ನಾ] ಮೋಡಗಳ ಕಾಲ, ಮಳೆಗಾಲ (ಪಯೋಧರಕಾಲದೊಳ್ ಎರಡು ತಡಿಯುಮಂ ಪೊಯ್ದು ಪರಿವ ತೊಱೆಗಳುಮಂ ತೊವಲ್ತು ಸೊಗಯಿಸುವ ಅಡವಿಗಳುಮಂ: ಪಂಪಭಾ, ೭. ೨೫ ವ)

ಪಯೋಧರಚೂಚುಕ

[ನಾ] ಮೊಲೆತೊಟ್ಟು (ಒದವಿದ ಕರ್ಪನೆಯ್ದೆ ಪರಿವೃತ್ತ ಪಯೋಧರಚೂಚುಕಕ್ಕೆ: ಆದಿಪು, ೮. ೪೭)

ಪಯೋಧರಪಥಗಾಮಿನೀವಿದ್ಯೆ

[ನಾ] ಆಕಾಶದಲ್ಲಿ ಸಂಚರಿಸುವ ಸಾಮರ್ಥ್ಯ, ಆಕಾಶಗಾಮಿನೀವಿದ್ಯೆ (ಆತಂ ತನ್ನ ಪಯೋಧರಪಥಗಾಮಿನೀವಿದ್ಯೆಯಂ ಬೆಸಸಿದೊಡೆ: ಆದಿಪು, ೨. ೧೪ ವ)

ಪಯೋಧಿ

[ನಾ] ಸಮುದ್ರ (ಆಗಳ್ ಸುರತಮಕರಧ್ವಜಂ ಅನಂಗಾಮೃತಪಯೋಧಿಯೊಳ್ ಮೂಡಿ ಮುೞ್ಕಾಡಿದರಂತೆ ಕಿಱಿದು ಬೇಗಮನಿರ್ದು: ಪಂಪಭಾ, ೫. ೧೫ ವ)

ಪಯೋಧಿನಾದ

[ನಾ] ಸಮುದ್ರದ ಮೊರೆತ (ಪ್ರಳಯಪಯೋಧಿನಾದಮನೆ ಪೋಲ್ತು ರಣಾನಕ ಆರವಂ ಈಗಳ್ ಅಗ್ಗಳಂ ಎಸೆದಪ್ಪುದು: ಪಂಪಭಾ, ೧೧. ೧೧)

ಪಯೋಧಿಮಂಥನü

[ನಾ] ಸಮುದ್ರಮಥನ (ಮದಗಜ ಬೃಂಹಿತಧ್ವನಿ ತುರಂಗಮ ಹೇಷಿತಘೋಷಂ ಆದಂ ಒರ್ಮೊದಲೆ ಪಯೋಧಿಮಂಥನ ಮಹಾರವಮಂ ಗೆಲೆ: ಪಂಪಭಾ, ೩. ೩೮)

ಪಯೋನಿಧಿ

[ನಾ] ಸಮುದ್ರ (ಅನಿಬರುಂ ಉತ್ಪಾತಮರುದಾಭಿಘಾತ ಉದ್ಭೂತಪಯೋನಿಧಿಗಳಂತೆ ಮಸಗಿದರಾಗರ್: ಆದಿಪು, ೧೪. ೬)

ಪಯೋರುಹಜ

[ನಾ] ಬ್ರಹ್ಮ (ಇವರಂ ಕೂಡಿ ಪಯೋರುಹಜಂಗಕ್ಕೆ ಸಮಸಮಾಯೋಗಯಶಂ: ಆದಿಪು, ೪. ೨೯)

ಪಯೋರುಹವಿಳಾಸಸ್ಥಾನೆ

[ನಾ] ಕಮಲದಲ್ಲಿ ವಿಲಾಸದಿಂದ ನೆಲಸಿರುವವಳು, ಲಕ್ಷ್ಮಿ (ಪಯೋರುಹವಿಳಾಸಸ್ಥಾನೆಯಿಂ ಭೂವಧೂವರಂ ಅಬ್ಜೇಕ್ಷಣೆ ಕಲ್ಪವೃಕ್ಷದಿಂ ಇಳಾಲೋಕೈಕಕಲ್ಪದ್ರುಮಂ: ಆದಿಪು, ೮. ೨೭)

ಪರಂಕಲಿಸು

[ಕ್ರಿ] ವಿಸ್ತಾರವಾಗಿ ಹರಡು, ಹಬ್ಬು (ಗಱಿಸನ್ನೆಗೆಯ್ದು ತೆಗೆನೆಱೆದು ಎಱಗಿ ಪರಂಕಲಿಸಿ ಪರ್ವಿ ಕೂಕಿಱಿದು ಇಸೆ ಕೆಂಗಱಿಯ ಮೊನೆಯಂಬುಗಳ್ ಕಣ್ದೆಱೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ: ಪಂಪಭಾ, ೧೦. ೭೩)

ಪರಕಲಿಸು

[ಕ್ರಿ] ಹರಡು (ಅಂತು ನೂರ್ವರೊಳ್ ಒರ್ವನ ಅಗುರ್ಬು ಪರ್ಬಿ ಪರಕಲಿಸೆ: ಪಂಪಭಾ, ೧. ೧೩೧ ವ); [ಕ್ರಿ] ಕೆದರು (ಅಳಿನೀಳೋಜ್ವಳಸಹಸ್ರ ಕುಂತಳಂಗಳ್ ಪರಕಲಿಸಿ ಬಂದು ಪೊಱಮುಯ್ವಂ ಅಳ್ಳಿಱಿಯೆ ಪಚ್ಚುಗಂಟಿಕ್ಕಿ: ಪಂಪಭಾ, ೧೨. ೨೦೨ ವ)

ಪರಕೆ

[ನಾ] ಹರಕೆ, ಆಶೀರ್ವಾದ (ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಂ ಓದುವ ಋಚೆಗಳುಂ ಪರಸುವ ಪರಕೆಗಳುಂ ಎಸೆಯೆ ಪಸೆಯೊಳಿರ್ದು: ಪಂಪಭಾ, ೩. ೭೬ ವ)

ಪರಕೆಯಂ ಕೊಡು

[ಕ್ರಿ] ಆಶೀರ್ವಾದ ಮಾಡು (ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು: ಪಂಪಭಾ, ೧. ೧೨೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App