Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಗರಣದರಸ
[ನಾ] ನಾಟಕದ ರಾಜ, ವೇಷಧಾರಿ (ಬಗೆಗೊಂಡ ಕುಲಧನಂ ಸಮದಗಜಂ ಜಾತ್ಯಶ್ವಮೆಂಬಿವಂ ಮತ್ತೊರ್ಬಂ ಪಗೆವಂಗೆ ಕೊಟ್ಟು ಚಿಃ ಕೆಮ್ಮಗೆ ಬೆಸೆವವಂ ಅರಸದೆಂತೊ ಪಗರಣದರಸಂ: ಆದಿಪು, ೧೨. ೯೮)
ಪಂಗಿಗ
[ನಾ] ಹಂಗಿಗೊಳಗಾದವನು (ಮುಂಬಟ್ಟಿಸಿ ಕೊಲುತಿರ್ಪ ಜವನೆಂಬಱಕೆಯ ಪಗೆವಂಗದೆಂತು ಪಂಗಿಗನಪ್ಪೆಂ: ಆದಿಪು, ೪. ೭೭)
ಪಗಿಲ್
[ಕ್ರಿ] ಅಂಟಿಕೊ (ಬಿಗಿದೊಗೆದ ನಿನ್ನ ಮೊಲೆಗಳ ಮೃಗಮದದ ಪುಳಿಂಚುಗಳ್ ಪಗಿಲ್ತಿರಲ್: ಪಂಪಭಾ, ೮. ೬೭)
ಪಗೆ
[ನಾ] ಶತ್ರು (ರಸದಾನಾದಿಗಳೊಳ್ ಛಿದ್ರಿಸುವಮಪ್ಪೊಡೆ ಅವರ್ ಆಪ್ತವಂತರುಂ ಬುದ್ಧಿವಂತರುಂ ಆಗಿ ನೆಗೞ್ದರ್ ಇನ್ನಾವ ಮಾೞ್ಕೆಯೊಳ್ ಪಗೆಯಂ ಕೆಯ್ಗೆ ಮಾಡುವುದು ಪೇೞಿಂ: ಪಂಪಭಾ, ೬. ೬೭ ವ)
ಪಗೆಗೊಳ್
[ನಾ] ದ್ವೇಷವನ್ನು ತಾಳು (ಸೊಡರ ಬೆಳಗಿನೊಳ್ ಕೊರಗುವ ಜಾದಿಯಂ ತುಂಬಿಯೊಳ್ಪಗೆಗೊಂಡ ಸಂಪಗೆಯಂ: ಆದಿಪು, ೧೧. ೧೦೯)
ಪಗೆಯಂ ನೆಱಪು
[ಕ್ರಿ] ಹಗೆಯನ್ನು ತೀರಿಸು (ಪಗೆ ಸಾಱುವುದುಂ ಕೊಲ್ಲೆಂ ಪಗೆ ಸಾಱಿದ ನಿನ್ನನಾರ ಮಱೆಯಂ ಪೊಕ್ಕುಂ ಪಗೆಯಂ ನೆಱಪನೆ ನೆಱಪುವ ಬಗೆಯೊಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ: ಪಂಪಭಾ, ೫. ೧೦೦)
ಪಗೆಯನಭ್ಯಾಸಂಗೆಯ್
[ಕ್ರಿ] ಹಗೆತನವನ್ನು ಕಲಿ (ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನಭ್ಯಾಸಂಗೆಯ್ವಂತೆ ವಿದ್ಯಾಭ್ಯಾಸಂಗೆಯ್ದು: ಪಂಪಭಾ, ೨. ೫೮ ವ)
ಪಗೆಯಿಱಿಯ ಬಂದರ ಮೂಗನರಿ
ಶತ್ರುವನ್ನು ಕೊಲ್ಲ ಬಂದವರ ಮೂಗು ಕತ್ತರಿಸು (ಅನ್ನೆಗಂ ಪಗೆಯಿಱಿಯ ಬಂದರ ಮೂಗನರಿದರೆಂಬಂತೆ ಅನಿಬರುಂ ಬಾಯಂ ಬಿಟ್ಟು ನೋಡೆ ನೋಡೆ: ಪಂಪಭಾ, ೭. ೩೨ ವ)
ಪಗೆವ
[ನಾ] ಶತ್ರು (ಜವನೆಂಬಱಿಕೆಯ ಪಗೆವಂಗದೆಂತು ಪಂಗಿಗನಪ್ಪೆಂ: ಆದಿಪು, ೪. ೭೭); ದ್ವೇಷಿಸುವವನು (ನಿನ್ನಂ ಪಗೆವರ ಬೇರೊಳ್ ಬೆನ್ನೀರಂ ಪೊಯ್ದು ನಿನಗೆ ಮಾೞ್ಪೆಂ ಧರೆಯಂ: ಪಂಪಭಾ, ೮. ೩೪)
ಪಗೆವಡೆ
[ನಾ] ಶತ್ರುಸೈನ್ಯ (ಪಗೆವಡೆಯೊಡ್ಡುಗಳಂ ಒಡೆಯಲ್ಕೆ ವೇೞ್ದೆರ್ದೆ ಧಗಮೆನೆ ಸೈರಿಸುವ ಉಪಾಯಮಾವುದು ಕಱುವೇ: ಪಂಪಭಾ, ೧೧. ೯೧)
ಪಗೆವಾಡಿ
[ನಾ] ಶತ್ರು ಪಾಳೆಯ (ಕೆಮ್ಮನೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ: ಪಂಪಭಾ, ೧೦. ೧೬)
ಪಂಚಕಲ್ಯಾಣೋತ್ಸವ
[ನಾ] ತೀರ್ಥಂಕರರಿಗೆ ಸಂಬಂಧಿಸಿದ ಗರ್ಭಾವತರಣ, ಜನ್ಮ, ಪರಿನಿಷ್ಕ್ರಮಣ, ಕೇವಲಜ್ಞಾನ ಮತ್ತು ಪರಿನಿರ್ವಾಣವೆಂಬ ಐದು ಕಲ್ಯಾಣಗಳ ಆಚರಣೆಗಾಗಿ ಇಂದ್ರಾದಿಗಳು ನಡೆಸುವ ಉತ್ಸವ (ಆಕೆವೆರಸೊರ್ಮೆ ನಂದೀಶ್ವರಮಹಾಮಹಿಮೆಗಂ ಪಂಚಕಲ್ಯಾಣೊತ್ಸವಕ್ಕಂ ಅಚ್ಯುತೇಂದ್ರನೊಡನೆ ನಿಜಪೂಜಾವಿಳಾಸಮಂ ಮೆಱೆಯಲೆಂದು: ಆದಿಪು, ೨. ೭೭ ವ)
ಪಂಚಗವ್ಯ
[ನಾ] ಗೋವಿನ ಐದು ಉತ್ಪನ್ನಗಳಾದ ಹಾಲು ಮೊಸರು, ಬೆಣ್ಣೆ, ಗಂಜಳ ಮತ್ತು ಸೆಗಣಿ (ಬೀದಿಗಳೊಳೆಲ್ಲಂ ಗಂಧೋದಕ ಪಂಚಗವ್ಯಂಗಳಿಂ ತಳಿಯಿಸಿ: ಪಂಪಭಾ, ೪. ೫ ವ)
ಪಂಚಗುರು
[ನಾ] ಪಂಚಪರಮೇಷ್ಠಿಗಳು: ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ ಮತ್ತು ಸರ್ವಸಾಧುಗಳು (ಪಂಚಗುರುಸಮಕ್ಷದೊಳ್ ಬಾಹ್ಯಾಂಭ್ಯಂತರಪರಿಗ್ರಹ ಪರಿತ್ಯಾಗಪುರಸ್ಸರಂ ವೀರಸಂಸ್ಥಾನಾರೂಢನಂ ಮಹಾಬಳನಂ ಜಾತರೂಧರನಂ ಮಾಡಿ: ಆದಿಪು, ೨. ೫೧ ವ)
ಪಂಚತ್ವ
[ನಾ] ಪಂಚತೆ, ಸಾವು (ಖಳಂ ಪಂಚತ್ವಮನೈದಿ ಮರುಚ್ಚಂಚಳಮನನೀಗಳಲ್ತೆ ವಾನರನಾದಂ: ಆದಿಪು, ೫. ೧೮)
ಪಂಚದಶ
[ನಾ] ಹದಿನೈದು (ಮತ್ತಂ ಚತುರಶೀತಿಸಹಸ್ರ ಗುಣಮಣಿಭೂಷಣವಿಭೂಷಿತನುಂ ಅಷ್ಟಾದಶಸಹಸ್ರ ಶೀಲರತ್ನಾಕರನುಂ ಆಗಿ ಪಂಚದಶಪ್ರಮಾದಂಗಳಂ ಬಂಚಿಸಿ: ಆದಿಪು, ೬. ೨೯ ವ)
ಪಂಚಧನುಶ್ಶತ
[ನಾ] [ಜೈನ] ಐನೂರು ಧನುಸ್ಸು (ಪಂಚಧನುಶ್ಶತಂ ಪವಣ್ಣೆಲೆ ನರರ್ಗೆಂದೊಡೆ ಇನ್ನಿಮಿರೆ ಬಣ್ಣಿಸಲಾನಱಿಯೆಂ ವಿದೇಹಮಂ: ಆದಿಪು, ೧. ೫೨)
ಪಂಚನಮಸ್ಕೃತಿ
[ನಾ] [ಜೈನ] ಪಂಚನಮಸ್ಕಾರಗಳು: ಣಮೋ ಅರಹಂತಾಣಂ, ಣಮೋ ಸಿದ್ಧಾಣಂ, ಣಮೋ ಅಯಾರಿಯಾಣಂ, ಣಮೋ ಉವಜ್ಝಾಯಾಣಂ, ಣಮೋ ಳೋಏ ಸಬ್ಬಸಾಹೂಣಂ ಎಂಬ ಐದು ಮಂತ್ರಗಳು (ಮುನಿವೃಂದೋಚ್ಚಾರಿತ ಪಂಚನಮಸ್ಕೃತಿಗಾಂತು ಕಿವಿಯನರ್ಹತ್ಪದಮಂ ನೆನೆಯುತ್ತುಂ: ಆದಿಪು, ೨. ೫೭)
ಪಂಚಪಂಚಾಶತ್
[ನಾ] ಐವತ್ತೈದು (ಪ್ರತ್ಯೇಕ ಶೀರ್ಷಕ ಅವಘಾಟಕ ಪ್ರಕಾಂಡ ತರಳತರ ಬಂಧ ಉಪಪದಪಂಚಕ ಸಮೇತಂಗಳಾಗಿ ಪಂಚಪಂಚಾಶತ್ಪ್ರಮಾಣಂಗಳೊಳಾದ ಹಾರಂಗಳುಮಂ: ಆದಿಪು, ೮. ೫೪ ವ)
ಪಂಚಪದಂಗಳ್