Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಂಚಪಾಂಡವರು
[ನಾ] ದ್ರೌಪದಿಯಲ್ಲಿ ಪಾಂಡವರು ಧರ್ಮರಾಯನೇ ಮೊದಲಾಗಿ ಕ್ರಮವಾಗಿ ಪಡೆದ ಪ್ರತಿವಿಂಧ್ಯ, ಶ್ರುತಸೋಮ, ಶ್ರುತಕೀರ್ತಿ, ಶತಾನೀಕ ಮತ್ತು ಶ್ರುತಸೇನ ಎಂಬ ಮಕ್ಕಳು (ಶ್ರುತಸೋಮಕಪ್ರಮುಖರಪ್ಪ ಪಂಚಪಾಂಡವರಂ ಪಾಂಡವರೆ ಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು: ಪಂಪಭಾ, ೧೩. ೧೦೬ ವ)
ಪಂಚಭೂತ
[ನಾ] ಪೃಥ್ವಿ, ಅಪ್ಪು, ತೇಜಸ್, ವಾಯು, ಆಕಾಶಗಳೆಂಬ ಪ್ರಕೃತಿಯ ಐದು ಮೂಲವಸ್ತುಗಳು (ಪರಮಾನಂದಪರಂಪರೆ ದೊರೆಕೊಂಡಂತಿತ್ತು ಪಂಚಭೂತಂಗಳೊಳಂ: ಆದಿಪು, ೭. ೩೭)
ಪಂಚಮಕಾಲ
[ನಾ] [ಜೈನ] ಅವಸರ್ಪಿಣಿಯ ಐದು ಕಾಲಭೇದಗಳಲ್ಲಿ ಐದನೆಯದು (ಧರಣೀಪಾಳಕ ಮುನಿವರರ್ ಪಂಚಮಕಾಲದೊಳಣಮಾಗರಲ್ತೆ ಋದ್ಧಿಪ್ರಾಪ್ತರ್: ಆದಿಪು, ೧೫. ೪೧)
ಪಂಚಮನಿನದ
[ನಾ] ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದಗಳೆಂಬ ಸಂಗೀತದ ಏಳು ಸ್ವರಗಳಲ್ಲಿ ಒಂದು (ನವಚೂತಾಂಕುರ ಸುರಭಿದ್ರವಮಂ ಸವಿದನಿತಱಿಂದೆ ಮದನಧನುರ್ಜ್ಯಾರವಸನ್ನಿಕಾಶಮೀಗಳ್ ಕಿವಿಯಂ ಮುಟ್ಟಿದುದು ಪಿಕದ ಪಂಚಮನಿನದಂ: ಆದಿಪು, ೧೧. ೮೬)
ಪಂಚಮಹಾಕಲ್ಯಾಣ
[ನಾ] [ಜೈನ] ಜಿನನಿಗೆ ನಡೆಯುವ ಗರ್ಭಾವತರಣ, ಜನ್ಮ, ಪರಿನಿಷ್ಕ್ರಮಣ, ಕೇವಲಜ್ಞಾನ ಮತ್ತು ಪರಿನಿರ್ವಾಣಗಳೆಂಬ ಐದು ಕಲ್ಯಾಣಗಳು (ಸಕಳ ಶ್ರಾವಕವ್ರತಂಗಳಂ ಷೋಡಶ ತೀರ್ಥಕರಭಾವನೆಗಳಂ ಚತುಸ್ತ್ರಿಂಶತ್ ಅತಿಶಯಂಗಳುಮಂ ಅಷ್ಟಮಹಾ ಪ್ರಾತಿಹಾರ್ಯಂಗಳುಮಂ ಪಂಚಮಹಾಕಲ್ಯಾಣಂಗಳುಮಂ: ಆದಿಪು, ೩. ೪೦ ವ)
ಪಂಚಮಹಾಶಬ್ದ
[ನಾ] ಐದು ವಾದ್ಯಗಳು; ಇವುಗಳ ವಿವರಗಳು ಕಾಲಕಾಲಕ್ಕೆ ಬದಲಾಗಿವೆ: ಸಾಮಾನ್ಯವಾದ ಪಟ್ಟಿಯೆಂದರೆ ಕೊಂಬು, ತಮಟೆ, ಶಂಖ, ಭೇರಿ, ವೀಣೆ, ಜಯಗಂಟೆ; ಐದು ವಾದ್ಯಗಳ ಬಾಜನೆಯ ಗೌರವ (ಇಳನ್ಮತ್ತಾಳಿನೀಗೀತ ಪಂಚಮಹಾಶಬ್ದ ವಿಜೃಂಭಿತಧ್ವನಿಲಸದ್ಗಾಂಧಾರನಾದಂ: ಆದಿಪು, ೧೨. ೪೮); [ನಾ] ಪಂಚವಾದ್ಯಗಳ ಗೌರವಕ್ಕೆ ಅರ್ಹರಾದ (ಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾ ಸಾಮಂತರೆನಲ್ ಸಮನೆನಿಪರೆ ಗುಣದೊಳ್ ಅರಿಗನೊಳ್ ಸಾಮಂತರ್: ಪಂಪಭಾ, ೧. ೪೯)
ಪಂಚಮಾಂಬುಧಿ
[ನಾ] ಕ್ಷೀರಸಮುದ್ರ (ಪಂಚಮಹಾಂಬುಧಿಪವಿತ್ರಜಳ ಪರಿಪೂರ್ಣಸುವರ್ಣಕಲಶಂಗಳಿಂದಂ ಅಭಿಷೇಕಂಗೆಯ್ದು: ಆದಿಪು, ೯. ೬೩ ವ)
ಪಂಚಮಿ
[ನಾ] ಶುಕ್ಲ ಕೃಷ್ಣಪಕ್ಷಗಳಲ್ಲಿನ ಐದನೆಯ ದಿನ (ಸಿಪಕ್ಷದ ಪಂಚಮಿ ದಿನಪತಿವಾರಂ ಶುಭದ ಮೂಲನಕ್ಷತ್ರದೊಳ್ ಅನ್ವಿತಮಾಗೆ ನೆಗೞ್ದುದೀ ಮತ್ಕೃತಿ: ಆದಿಪು, ೧೬. ೭೭)
ಪಂಚರತುನ
[ನಾ] ಐದು ಬಗೆಯ ರತ್ನಗಳು (ಪಂಚರತುನದೊಳೆ ನೆಱೆದ ಪಸರದಿಂ ತೋರಣಂಗಳೊಳೆ ತೊಡರ್ದ ತಿಸರದಿಂ: ಪಂಪಭಾ, ೩. ೨೨)
ಪಂಚರತ್ನ
[ನಾ] ಐದು ರತ್ನಗಳು, ವಿವಿಧ ಆಕರಗಳಲ್ಲಿನ ವಿವರಗಳಲ್ಲಿ ವ್ಯತ್ಯಾಸಗಳಿವೆ; ಅವುಗಳಲ್ಲಿ ಒಂದು ಪಟ್ಟಿ: ಸುವರ್ಣ, ರಜತ, ಮುಕ್ತಾ, ಮಾಣಿಕ್ಯ, ಪ್ರವಾಳಕ (ಪಂಚರತ್ನದ ಕೊಡೆಯಂ ಪಿಡಿದಮರಿ ಜನದ ಮನದಡಿವಿಡಿದಳ್: ಆದಿಪು, ೭. ೫)
ಪಂಚರತ್ನಹಿರಣ್ಮಯ
[ನಾ] ಐದು ರತ್ನಗಳು ಹಾಗೂ ಚಿನ್ನದಿಂದ ಕೂಡಿದ (ಮಯಂ ಪಂಚರತ್ನಹಿರಣ್ಮಯಂ ಚತುರಶ್ರಂ ಮೂಱುಂ ಯೋಜನದಳವಿಯ ಸಭಾಮಂಟಪಮಂ ಒಂದು ಲಕ್ಕ ರಕ್ಕಸವಡೆಯಿಂ ಪೊತ್ತು ತರಿಸಿ: ಪಂಪಭಾ, ೬. ೨ ವ )
ಪಂಚರಾಯುಧ
[ನಾ] ಪಂಚರ ಎಂಬ ಆಯುಧ (ಕಕ್ಕಡೆ ಬುಂಭುಕದೊಳ್ ತಗುಳ್ದು ಪಜ್ಜಳಿಸುವ ಪಂಚರಾಯುಧಂ .. .. ಭಯಂಗೊಳಿಸೆ: ಪಂಪಭಾ, ೧೦. ೭೬)
ಪಂಚಲೋಹ
[ನಾ] ಕಿವಿಗೆ ಧರಿಸುವ ಓಲೆ ? (ಮುಖಚಂದ್ರನಂ ಚಂದ್ರಕವಳದಿಂ ತೊಡೆದು ಓರೊಂದೆ ವಜ್ರದ ಪಂಚಲೋಹಮುಮಂ ಅವರ್ಕೆ ಅಮರ್ಕೆವೆತ್ತ ಮುತ್ತಿನ ಮುಗುಳ್ಗಳುಮನಿಟ್ಟು: ಆದಿಪು, ೪. ೪೧ ವ)
ಪಂಚವರ್ಗಾಧಿಕಪಂಚಶತ
[ನಾ] ಐದು ನೂರ ಇಪ್ಪತ್ತೈದು (ಶಶಿವಿಶದಯಶಂ ನಿಜಕುಲವಿಶೇಷಕಂ ಕರುಣಿ ಪಂಚವರ್ಗಾಧಿಕಪಂಚಶತ ಶರಾಸನತನು: ಆದಿಪು, ೬. ೬೬)
ಪಂಚವಿಂಶತಿ
[ನಾ] ಇಪ್ಪತ್ತೈದು (ಪಂಚವಿಂಶತಿ ಯೋಜನ ಅವಗಾಹಮುಮಾಗಿ ಸಂದುತ್ತರಭರತಮಧ್ಯಮಖಂಡದ ನಟ್ಟನಡುವಣೆಡೆಯೊಳ್: ಆದಿಪು, ೧೩. ೬೯ ವ)
ಪಂಚವಿಂಶತ್ಯಧಿಕಷಟ್ಛತ
[ನಾ] ಆರುನೂರ ಇಪ್ಪತ್ತೈದು (ಆತನಿಂ ಬೞಿಯಂ ಅನೇಕ ಸಂವತ್ಸರಸಹಸ್ರಾತಿಕ್ರಮದೊಳ್ ಪಂಚವಿಂಶತ್ಯಧಿಕಷಟ್ಛತ ಧನುರುತ್ಸೇಧನುಂ: ಆದಿಪು, ೬. ೬೦ ವ)
ಪಂಚವಿಂಶತ್ಯನ್ವಿತಸಪ್ತಶತ
[ನಾ] ಏಳುನೂರ ಇಪ್ಪತ್ತೈದು (ಅನೇಕಾಬ್ಧಕೋಟಿಗಳ ಕಡೆಯೊಳ್ ಪಂಚವಿಂಶತ್ಯನ್ವಿತಸಪ್ತಶತ ಬಾಣಾಸನೋಚ್ಛ್ರಯನುಂ: ಆದಿಪು, ೬. ೫೭ ವ)
ಪಂಚವಿಶತ್ಯುತ್ತರಪಂಚಶತ
[ನಾ] ಐನೂರ ಇಪ್ಪತ್ತೈದು (ಪಂಚವಿಂಶತ್ಯುತ್ತರಪಂಚಶತ ಶರಾಸನೋತ್ಸೇಧನಪ್ಪ ಬಾಹುಬಲಿಕುಮಾರನ ಮೇಗೆ: ಆದಿಪು, ೧೪. ೧೦೭ ವ)
ಪಂಚಶತ
[ನಾ] ಐನೂರು (ಭರತೇಶ್ವರಂ ಪಂಚಶತ ಶರಾಸನೋತ್ಸೇಧನಪ್ಪುದಱಿಂ: ಆದಿಪು, ೧೪. ೧೦೭ ವ)
ಪಂಚಶರ