भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪಂಚಷಟ್

[ನಾ] ಐದಾರು (ಶತಯೋಜನ ವಿಷ್ಕಂಭದೊಳಂ ಪಂಚಷಡ್ಯೋಜನ ವಿಸ್ತಾರದೊಳಂ ಅಷ್ಟಯೋಜನ ಉತ್ಸೇಧದೊಳಂ: ಆದಿಪು, ೭. ೭೩ ವ)

ಪಂಚಸಪ್ತತ್ಯುತ್ತರಪಂಚಶತ

[ನಾ] ಐನೂರ ಎಪ್ಪತ್ತೈದು (ಅಸಂಖ್ಯೇಯ ವರ್ಷವಿರಾಮದೊಳ್ ಪಂಚಸಪ್ತತ್ಯುತ್ತರಪಂಚಶತ ಶರಾಸನೋತ್ಸೇಧಸಂಹನನುಂ: ಆದಿಪು, ೬. ೬೧ ವ)

ಪಂಚಸಪ್ತತ್ಯುತ್ತರಷಟ್ಛತ

[ನಾ] ಆರುನೂರ ಎಪ್ಪತ್ತೈದು (ಅಸಂಖ್ಯಾತವರ್ಷಂಗಳ್ ಸಲೆ ಪಂಚಸಪ್ತತ್ಯುತ್ತರಷಟ್ಛತ ಬಾಣಾಸನೋತ್ಸೇಧನುಂ: ಆದಿಪು, ೬. ೫೮ ವ)

ಪಂಚಾಂಗಮಂತ್ರ

[ನಾ] ವೇದಕ್ಕೆ ಸಂಬಂಧಿಸಿದ ಐದು ಮಂತ್ರಗಳು: ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ ಮತ್ತು ಸಮಾರಾಧನೆ (ಅರಾತಿಜನಕ್ಕೆ ಕಾಳಕೂಟಾಂಕುರಗಳುಮಂ ಪೋಲ್ತು ಪಂಚಾಂಗಮಂತ್ರಸ್ವರೂಪದೊಳ್ ಮೂರ್ತಿಮಂತ್ರಂಗಳಾದಂತೆ ಸೊಗಯಿಸಿ ಬಳೆಯೆ: ಪಂಪಭಾ, ೨. ೩ ವ)

ಪಂಚಾಂಗವ್ಯಾಕರಣ

[ನಾ] ಸೂತ್ರಪಾಠ, ಧಾತುಪಾಠ, ಉಣಾದಿಪಾಠ, ಗಣಪಾಠ ಮತ್ತು ಲಿಂಗಾನುಶಾಸನ ಎಂಬ ಐದು ಅಂಗಗಳುಳ್ಳ ವ್ಯಾಕರಣ (ಅಂತು ಪಂಚಾಂಗವ್ಯಾಕರಣದೊಳಂ ವೃತ್ತಭೇದಮಪ್ಪ ಛಂದೋವಿಚಿತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪ ಅಲಂಕಾರದೊಳಂ: ಪಂಪಭಾ, ೨. ೩೪ ವ)

ಪಂಚಾಣುವ್ರತ

[ನಾ] [ಜೈನ] ಗೃಹಸ್ಥರು ಅನುಸರಿಸಬೇಕಾದ ಅಹಿಂಸೆ ಸತ್ಯ ಅಸ್ತೇಯ ಬ್ರಹ್ಮಚರ್ಯ ಮತ್ತು ಅಪರಿಗ್ರಹವೆಂಬ ಐದಯ ವ್ರತಗಳು (ಪಂಚಾಣುವ್ರತಾದಿ ಪ್ರವರ್ತನ ಸ್ವಭಾವಸಂಯಮಮುಂ: ಆದಿಪು, ೧೫. ೧೩ ವ)

ಪಂಚಾಶತ್

[ನಾ] ಐವತ್ತು (ಪಶ್ಚಿಮಾಭಿಮುಖನಾಗಿ ಪೋಗಿ ಪಂಚಾಶದ್ಯೋಜನಾಯಾಮದೊಳಂ ದ್ವಾದಶಯೋಜನವಿಸ್ತಾರ ಅಷ್ಟಯೋಜನೋತ್ಸೇಧ ವಜ್ರಕವಾಟಪುಟಮುಂ: ಆದಿಪು, ೧೩. ೪೬ ವ)

ಪಂಚಾಂಶದಧಿಕಷಟ್ಛತ

[ನಾ] ಆರು ನೂರೈವತ್ತು (ಅಂತಾತನಿಂ ಬೞಿಯಂ ಕೆಲವು ಕಾಲಂ ಕೞಿಯೆ ಪಂಚಾಂಶದಧಿಕಷಟ್ಛತ ಚಾಪೋತ್ಸೇಧವಪುವುಂ: ಆದಿಪು, ೬. ೫೯ ವ)

ಪಂಚಾಶದಧಿಕಸಪ್ತಶತ

ಏಳುನೂರೈವತ್ತು (ಪಂಚಾಶದಧಿಕ ಸಪ್ತಶತ ಧನುರ್ವ್ಯಾಪ್ತಂಗಳುಂ ಏಕಚಾಪೋತ್ಸೇಧ ಚಿತ್ರಧರ್ಮಚಕ್ರಧರ ಯಕ್ಷಾದಿಷ್ಠಿತಂಗಳುಮಪ್ಪ: ಆದಿಪು, ೧೦. ೩೬ ವ)

ಪಂಚಾಶದಭ್ಯಧಿಕಸಪ್ತಶತ

[ನಾ] ಏಳುನೂರೈವತ್ತು (ಅಲ್ಲಿಂ ಬೞಿಯಂ ಅನೇಕ ಕೋಟಿ ಸಂವತ್ಸರಂಗಳ್ ಪೊಂದಿದಿಂ ಬೞಿಯಂ ಪಂಚಾಶದಭ್ಯಧಿಕಸಪ್ತಶತ ಕೋದಂಡಪ್ರಮಾಣಮೂರ್ತಿಯುಂ: ಆದಿಪು, ೬. ೫೬ ವ)

ಪಂಚಾಶ್ಚರ್ಯ

[ನಾ] [ಜೈನ] ಆಹಾರದಾನ ಸಮಯದಲ್ಲಿ ಆಗುವ ಐದು ಅತಿಮಾನುಷ ಸೋಜಿಗಗಳು: ದೇವದುಂದುಭಿ ಸ್ವನ, ಪುಷ್ಪವೃಷ್ಟಿ, ಸುವರ್ಣವೃಷ್ಟಿ, ಮೆಲುಗಾಳಿ, ದೇವಪ್ರಶಂಸೆ (ಸುರತೂರ್ಯಧ್ವಾನಂ ಎಯ್ತರ್ಪ ಅಲರ ಸರಿ ಪೊದಳ್ದಿರ್ದ ರೈಧಾರೆ ದೇವೇಂದ್ರರ ಅಹೋದಾನಪ್ರಸಿದ್ಧಧ್ವನಿ ಸುರಭಿಸಮೀರಪ್ರಚಾರಂ ಜಗಕ್ಕೆ ಅಚ್ಚರಿ ಪಂಚಾಶ್ಚರ್ಯಮೆತ್ತಂ ನೆಗೞೆ: ಆದಿಪು, ೪. ೯೮)

ಪಂಚಾಸ್ಯ

[ನಾ] ಸಿಂಹ (ಕದನಪ್ರಾರಂಭಶೌಂಡಂ ರಿಪುನೃಪಬಲ ದಾವಾನಲಂ ವೈರಿಭೂಭೃತ್ ಮದವತ್ ಮಾತಂಗಕುಂಭಸ್ಥಳ ದಳನಖರೋಗ್ರಾಸಿ ಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)

ಪಂಚೇಂದ್ರಿಯ

[ನಾ] ಸ್ಪರ್ಶನ, ರಸನ, ಘ್ರಾಣ, ಚಕ್ಷು, ಶ್ರೋತ್ರ ಎಂಬ ಐದು ಇಂದ್ರಿಯಗಳು[ಳ್ಳವು] (ಸ್ಪರ್ಶನ ರಸನ ಘ್ರಾಣ ಚಕ್ಷುಃ ಶ್ರೋತ್ರೇಂದ್ರಿಯ ಸಮನ್ವಿತಂಗಳಪ್ಪ ಮನುಷ್ಯಾದಿ ಪಂಚೇಂದ್ರಿಯಂಗಳ್: ಆದಿಪು, ೧೦. ೬೩ ವ)

ಪಂಚೋತ್ತರಸಪ್ತತಿಯುತಸಪ್ತಶತ

[ನಾ] ಏಳುನೂರ ಎಪ್ಪತ್ತೈದು (ಆನತನಿಂ ಬೞಿಯಂ ಎನಿತಾನುಂ ಕಾಲದಿಂ ಪಂಚೋತ್ತರ ಸಪ್ತತಿಯುತಸಪ್ತಶತ ಕಾರ್ಮುಕೋತ್ಸೇಧಕಾಯನುಂ: ಆದಿಪು, ೬. ೫೬ ವ)

ಪಚ್ಚ

[ನಾ] ಮೇಲುಹಾಸಿಗೆ (ಪೊಳೆವ ಪಚ್ಚದೊಳೆ ಸೊಗಯಿಸುವ ಮೃದುತಲ್ಪದೊಳ್: ಆದಿಪು, ೭. ೨೭ ರಗಳೆ)

ಪಚ್ಚ ಪಸಿಯೆಗ್ಗ

[ನಾ] ಶುದ್ಧ ಹಸಿದಡ್ಡ (ಎಣ್ಬರೇಱಿದ ಕೞ್ತೆಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು: ಪಂಪಭಾ, ೪. ೯೪ ವ)

ಪಚ್ಚನೆ ಪಸಿಯ ಗೋವ

[ನಾ] ಹಚ್ಚಹಸಿಯ ಗೊಲ್ಲ (ಮನೆ ನಿನಗೆ ನಂದಗೋಪನ ಮನೆ ತುಱುಗಾರ್ತಿ ನಿನಗೆ ಮನೆವೆಂಡತಿ ಪಚ್ಚನೆ ಪಸಿಯ ಗೋವನೈ: ಪಂಪಭಾ, ೬. ೫೨)

ಪಚ್ಚವಡಿಸು

[ಕ್ರಿ] ಹೊದಿಸು (ತೊವಲ್ತು ಸೊಗಯಿಸುವ ಅಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್: ಪಂಪಭಾ, ೭. ೨೫ ವ)

ಪಚ್ಚಿಕ್ಕು

[ಕ್ರಿ] ಭಾಗಮಾಡು (ದಿಕ್ಕರಿಯ ತಲೆಯುಂ ಆತನ ತಲೆಯುಂ ಪಚ್ಚಿಕ್ಕಿದಂತೆ ಕೆಯ್ಗಳುಂ ಅಚ್ಚರಿಯಪ್ಪಿನೆಗಂ ಒಡನೆ ಉರುಳ್ದುವು ಧರೆಯೊಳ್: ಪಂಪಭಾ, ೧೧. ೮೨)

ಪಚ್ಚು

[ಕ್ರಿ] ಭಾಗ ಮಾಡು (ಕರವಾಳಂ ಘರವಟ್ಟಿಸಿ ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂತಿರೆ ಪಿರಿದು ಪೊಯ್ದಂ: ಪಂಪಭಾ, ೧೨. ೩೦)

Search Dictionaries

Loading Results

Follow Us :   
  Download Bharatavani App
  Bharatavani Windows App