Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಚ್ಚುಕೊಡು
[ಕ್ರಿ] ಹಂಚಿ ಕೊಡು (ವೃಷಭನಾಥಂ ಉೞಿದಪತ್ಯವರ್ಗಕ್ಕೆಲ್ಲಂ ಇಳಾತಳವಿಭಾಗಮಂ ಪಚ್ಚುಕೊಟ್ಟು: ಆದಿಪು, ೯. ೭೨ ವ)
ಪಚ್ಚುಕೊಳ್
[ಕ್ರಿ] ಹಂಚಿಕೊ (ಜಕ್ಕವಕ್ಕಿಗಳ್ ಸುರತಮಕರಧ್ವಜನ ಸುಭದ್ರೆಯ ವಿರಹಸಂತಾಪಮಂ ಪಚ್ಚುಕೊಂಡಸುಂಗೊಡಗಲೆ: ಪಂಪಭಾ, ೪. ೪೮ ವ)
ಪಚ್ಚುಗಂಟಿಕ್ಕು
[ಕ್ರಿ] ಕೂದಲನ್ನು ಎರಡು ಭಾಗ ಮಾಡಿ ಗಂಟುಹಾಕು (ಅಳಿನೀಳೋಜ್ವಳ ಸಹಸ್ರಕುಂತಳಂಗಳ್ ಪರಕಲಿಸಿ ಬಂದು ಪೊಱಮುಯ್ವನಳ್ಳಿಱಿಯೆ ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪನ್ನೆಗಂ: ಪಂಪಭಾ, ೧೨. ೨೦೨ ವ)
ಪಚ್ಚೆ
[ನಾ] ನವರತ್ನಗಳಲ್ಲಿ ಒಂದು, ಹಸಿರು ಮಣಿ (ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯ ಅಂಚೆಯ ಕುಂತಳಿಕೆಯ ಮಾೞ್ಕೆಯ ಸಿಪ್ಪುಗಳೊಳ್ ತೀವಿ: ಪಂಪಭಾ, ೪. ೮೭ ವ)
ಪಚ್ಚೆಸಾರ
[ನಾ] ಪಚ್ಚೆಯ ಹಸಿರು ಹಾರ (ಪಚ್ಚೆಸಾರದ ಹಾರದ ತೋರಣಂಗಳಂ ಉಗುಳುತ್ತುಂ ಬಂದು: ಆದಿಪು, ೪. ೨೫ ವ)
ಪಂಜಿ
[ನಾ] ಹಿಂಜಿದ ಹತ್ತಿಯ ಉಂಡೆ (ತನು ಪಂಜಿವೊಲ್ ಬೆಳರ್ತಿರ್ಪಿನೆಗಂ ಹಿಮಂ ಎಕ್ಕಿದರಲೆವೋಲ್ ಪುದಿದಿರೆಯುಂ: ಆದಿಪು, ೬. ೩೩)
ಪಜ್ಜ
[ನಾ] ಮುತ್ತಜ್ಜ (ತನಯಂ ತಾಯ್ ತಂದೆ ತಮ್ಮಂ ಕೆಳೆಯಂ ಆಳ್ ಪಜ್ಜಂ ಎಮ್ಮಜ್ಜಂ ಇಷ್ಟಾಂಗನೆಯೆಂದು ಆರಾರಂ ಆವಾವಱಿಕೆಯ ಭವಸಂಬಂಧಮಂ ಕಂಡು: ಆದಿಪು, ೩. ೫೫)
ಪಜ್ಜಳಿಕೆ
[ನಾ] ಕಾಂತಿ (ಆತನ ಬೆಳ್ಗೊಡೆಯ ಪಜ್ಜಳಿಸುವ ಪಜ್ಜಳಿಕೆಯೆ ತನ್ನೊಳಪೊಕ್ಕಂತೆ: ಆದಿಪು, ೧೧. ೫ ವ)
ಪಜ್ಜಳಿಸು
[ಕ್ರಿ] [ಪ್ರಜ್ವಲಿಸು] ಹೊಳೆ, ಪ್ರಕಾಶಿಸು (ಕನಕಗಿರಿ ರತ್ನಾಂಶುನಿಕಾಯಂ ಬೆಳಗೆ ಮೊಳೆದು ಪಜ್ಜಳಿಸುತ್ತಿರ್ಪಿನಂ: ಆದಿಪು, ೬. ೯೦); [ಕ್ರಿ] ಕಾದು ಕೆಂಪಾಗು (ಕಾಯ್ದು ಪಜ್ಜಳಿಸುವ ಲೋಹಪಿಂಡಮನೆ ಭೋಂಕೆನೆ ನೀರೊಳಗರ್ದಿದಂತೆವೊಲ್ ಪೊಳೆಪುಡಿದಿರ್ದಂ: ಆದಿಪು, ೭. ೯೮)
ಪಟ
[ನಾ] ಚಿತ್ರ, ಚಿತ್ರಪಟ (ಅತಿರಹಸ್ಯಂಗಳಪ್ಪ ಕೆಲಕೆಲವು ಅವಿನಾಣಂಗಳಂ ನಾಣ್ಚಿ ಬಂಚಿಸಿ ಪಿರಿದುಮನುರಾಗದಿಂದಂ ಎನ್ನ ಬರೆದ ಪಟಮನಿದನರ್ಚಿಸಿ: ಆದಿಪು, ೩. ೪೩ ವ)
ಪಟಕುಟಿ
[ನಾ] ಗುಡಾರ, ಡೇರೆ (ದೇವರಮ್ಯಮೆಂಬ ಪಟಕುಟಿಯುಂ ಸಿಂಹವಿಧೃತಮಪ್ಪ ಸಿಂಹವಾಹಿನಿಯೆಂಬ ಮೃದುಶಯ್ಯೆಯುಂ: ಆದಿಪು, ೧೫. ೩ ವ)
ಪಟಂಗೊಳ್
[ಕ್ರಿ] ಹಾರಾಡು, ಪ್ರಸಿದ್ಧಗೊಳ್ಳು (ನನ್ನಿ ಪಟಂಗೊಳ್ವಂತೆ ವಿವಿಧ ಧ್ವಜಪಟಂಗಳಂ ಕೊಂಡು ಗೆಲ್ಲಂಗೊಂಡು ತಾನುಮುತ್ತರನುಂ ವಿರಾಟಪುರಕ್ಕೆ ಮಗುೞ್ದು ಬರ್ಪಾಗಳ್: ಪಂಪಭಾ, ೮. ೧೦೯ ವ):
ಪಟಲ
ಸಮೂಹ [ನಾ] (ಶ್ರೀಪತಿ ಸುರದಾರಕರೊಡನಾಪೊತ್ತುಂ ನೆರೆದು ರತ್ನಧೂಳೀಪಟಲವ್ಯಾಪಿತತನು ಮೃದುಮುಗ್ಧಾಳಾಪಂ ಬಳೆದಂ: ಆದಿಪು, ೮. ೧)
ಪಟವಾಸ
[ನಾ] ಸುಗಂಧದ ಪುಡಿ, ಬುಕ್ಕಿಯ ಹಿಟ್ಟು (ದಿಶಾಯುವತಿಕೇಳಿಕೀರ್ಣ ಪಟವಾಸಚೂರ್ಣಂ ಜಗತ್ಕುಶೇಶಯನಿವಾಸಿನೀ ಪ್ರಮದಮುಷ್ಟಿಪಿಷ್ಟಾತಕಂ: ಆದಿಪು, ೧೧. ೧೫)
ಪಟವಿದ್ದೆ
[ನಾ] [ಪಟವಿದ್ಧ] ಚಿತ್ರ ಬರೆಯುವುದು (ಪಟಮಿದೆ ಸಾಲ್ಗುಂ ಅನ್ಯಭವವಲ್ಲಭನಂ ಪಟವಿದ್ದೆಯೆತ್ತಲುಂ: ಆದಿಪು, ೩. ೪೫); [ಕ್ರಿ] ಗಾಳಿಪಟ ಆಡಿಸು (ಎತ್ತಿದ ತೋಳ ಮೊತ್ತಮೊದಲ್ ಅಂಗಜನ ಪಟವಿದ್ದೆಗೆತ್ತಿದಂತೆ ಎತ್ತಂ ಅಪೂರ್ವಮಾಗೆ: ಪಂಪಭಾ, ೪. ೮೧)
ಪಟಹ
[ನಾ] ಭೇರಿ (ಅಹಿತಮಹೀಪಾಳಹೃದಯಕವಾಟ ವಿಘಟನಪಟುಗಳಪ್ಪ ವಿಜಯಘೋಷಂಗಳೆಂಬ ಪನ್ನೆರಡು ಪಟಹಂಗಳುಂ: ಆದಿಪು, ೧೧. ೨೮ ವ)
ಪಟಳ
[ನಾ] ರಾಸಿ (ಎಂದು ಭಾಸ್ಕರತನೂಜೆಯಂ ಉಭಯತಟನಿಕಟ ಕುಸುಮನಿವಹ ಪತತ್ ಪರಾಗಪಟಳ ಪಿಶಂಗತರತ್ತರಂಗ ಸರೋಜೆಯಂ: ಪಂಪಭಾ, ೫. ೫೮ ವ); [ನಾ] ಗುಂಪು (ಅಂತೆ ಗೆಯ್ವೆನೆಂದು ಕೂಜಜ್ಜಳಚರಕುಳ ಕಳರವದೊಳಂ ಕಮಳಕುವಳಯ ರಜಃಕಷಾಯಪರಿಮಿಳದ ಅಳಿಪಟಳ ಜಟಿಳಮಾಗಿ: ಪಂಪಭಾ, ೮. ೩೭ ವ); [ನಾ] ಪದರು (ಧನಂಜಯರಥ ಚಟುಳಚಕ್ರನೇಮಿ ಧಾರಾಪರಿವೃತ ಸಂಘಟ್ಟನ ಸಮುಚ್ಚಳಿತ ಪಾಂಸುಪಟಳ ಅಂಧಕಾರ ದುರ್ಲಂಕ್ಷಾಂತರಿಕ್ಷ ಕ್ಷಿತಿದಿಗಂತರಾಳಾಂತರಮುಂ: ಪಂಪಭಾ, ೧೩. ೫೧ ವ)
ಪಟಳಿಕೆ
[ನಾ] [ಪಡಲಿಗೆ] ಬೆತ್ತದ ಬುಟ್ಟಿ (ಉದ್ದಾಮ ರಜೋರಂಜಿತಂಗಳಂ ಅನರ್ಘ್ಯರತ್ನಮಯ ಪಟಳಿಕೆಯೊಳಾಂತು ಕೊಂಡು ಪೋಗಿ: ಆದಿಪು, ೯. ೭೯ ವ)
ಪಟಿಷ್ಠ
[ಗು] ಸಮರ್ಥವಾದ (ವನಕರಿಕುಂಭ ಪಾಟನಪಟಿಷ್ಠ ಕಠೋರ ನಖಪ್ರಹಾರ ಭೇದನಗಳಿತ ಅಸ್ರ ರಕ್ತಮೌಕ್ತಿಕ ಪಙ್ತಿವಿಳಾಸ ಭಾಸುರಾನನಂ ಎನೆ: ಪಂಪಭಾ, ೧೩. ೫೧)
ಪಟು