Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಟ್ಟ
[ನಾ] ಪಟ್ಟವಸ್ತ್ರ (ಪಂಚರತ್ನಶಿಖಾವಿರಾಜಮಾನಮಪ್ಪ ಪಟ್ಟಮನೆತ್ತಿ ಯಾದವವಂಶಸಂಭೂತೆಯುಂ ಅನೇಕಲಕ್ಷಣೋಪೇತೆಯುಂ ಅಪ್ಪ ಸುಭದ್ರೆಗೆ ಮಹಾದೇವಿಪಟ್ಟಮಂ ಕಟ್ಟಿದಾಗಳ್: ಪಂಪಭಾ, ೧೪. ೧೮ ವ); [ನಾ] ವೀರಪಟ್ಟ (ಜೋಳದ ಪಾೞಿ ನಿಜಾಧಿನಾಥನ ಆಹವದೊಳ್ ಅರಾತಿತಿನಾಯಕರ ಪಟ್ಟನೆ ಪಾಱಿಸೆ ಸಂದ ಪೆಂಪು: ಪಂಪಭಾ, ೧೪. ೫೦)
ಪಟ್ಟಕ
[ನಾ] ಪಟ, ಬಟ್ಟೆ (ತನ್ನ ಮಗಳ್ದಿರೊಳಪ್ಪ ಸ್ನೇಹದಿಂ ಅವರ ರೂಪಂ ಪಟ್ಟಕದೊಳ್ ಬರೆಯಿಸಿ: ಚಾವುಂಪು, ಪು. ೪೫೧. ಸಾ. ೨೬); ಪೀಠ (ಕೃಷ್ಣದ್ವೈಪಾಯನನಂ ಕಂಡಜಾತಶತ್ರು ತನ್ನೇಱಿದ ಪಟ್ಟಕದಿಂದಿೞಿದು .. .. ಸಾಷ್ಟಾಂಗವೆಱಗಿ ಪೊಡಮಟ್ಟು: ಪಂಪಭಾ, ೭. ೫೯ ವ)
ಪಟ್ಟಣ
[ನಾ] ಸಮುದ್ರತೀರದ ಊರು (ಸಮುದ್ರೋತ್ತೀರ್ಣ ನಿವಾಸಂಗಳಪ್ಪ ಪಟ್ಟಣಂಗಳುಮಂ ನಿಮ್ನಗಾತಟ ನಿಕಟವರ್ತಿಗಳಪ್ಪ ಮಹಾದ್ರೋಣಾಮುಖಂಗಳುಮಂ: ಆದಿಪು, ೮. ೬೩ ವ)
ಪಟ್ಟಣಿಗೆ
[ನಾ] ಪಟ್ಟೆಯ ಸೀರೆ, ದುಕೂಲ (ಮುಸುಕಿಟ್ಟ ಪಟ್ಟಣಿಗೆಯುಂ ಪೊಱಪೊಣ್ಮುವ ಕಣ್ಣ ಬೆಳ್ಪುಂ ಓಪರ ಮನದೊಳ್ ತೆಱಂಬೊಳೆವ ಬಾಳೆಗಳಂತಿರೆ: ಆದಿಪು, ೧೧. ೪೫)
ಪಟ್ಟದ ಮೊದಲಿಗ
[ನಾ] ಅಧಿಕಾರಕ್ಕೆ ಅತ್ಯಂತ ಹಿರಿಯ ಹಕ್ಕುದಾರ (ಪಟ್ಟದ ಮೊದಲಿಗರ್ ಆಜಗೆ ಜಟ್ಟಿಗರವರೆಂದುಮಾಳ್ವ ಮುನ್ನಿನ ನೆಲನಂ ಕೊಟ್ಟು ಬೞಿಯಟ್ಟು ನಿನಗೊಡವುಟ್ಟಿದರಾ ದೊರೆಯರಾಗೆ ತೀರದುದುಂಟೇ: ಪಂಪಭಾ, ೯. ೪೦)
ಪಟ್ಟನೆ ಪಾಱಿಸು
[ಕ್ರಿ] ಪಟ್ ಎಂದು ಹಾರಿಹೋಗುವಂತೆ ಮಾಡು (ವೈರಿಗಳ ಪಟ್ಟನೆ ಪಾಱಿಸಿ ಕಾವುದೆನ್ನ ಬೆಳ್ಗೊಡೆಯುಮಂ ಎನ್ನ ಪಟ್ಟಮುಮಂ ಎನ್ನುಮಂ: ಪಂಪಭಾ, ೧೨. ೫೧)
ಪಟ್ಟಬಂಧ
[ನಾ] ಪಟ್ಟ ಕಟ್ಟುವುದು, ಪಟ್ಟಾಭಿಷೇಕ (ಮಧುಮನೋಭವರಿರ್ವರುಂ ಅೞ್ತಿವಟ್ಟು ಮಲ್ಲಿಗೆಗೆ ಬಸಂತದೊಳ್ ಬಯಸಿ ಮಾಡಿದರಲ್ಲದೆ ಪಟ್ಟಬಂಧಮಂ: ಆದಿಪು, ೧೧. ೧೦೩)
ಪಟ್ಟಬಂಧ ಮಹೋತ್ಸವ
ಪಟ್ಟಾಭಿಷೇಕ ಮಹೋತ್ಸವ (ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦)
ಪಟ್ಟವಂ ಮಾಡು
[ಕ್ರಿ] ಪಟ್ಟ ಕಟ್ಟು, ಪಟ್ಟಾಭಿಷೇಕ ಮಾಡು (ಆನರಸುಗೆಯ್ವ ಪೞುವಗೆಯನದಂ ಪರಿಹರಿಸಿದೆಂ ಆತನಂ ಈ ಕಿರೀಟಿ ಗೆಲ್ದು ಎನಗೆ ಪಟ್ಟವಂ ಮಾಡುವನೇ: ಪಂಪಭಾ, ೧೨. ೧೨೯)
ಪಟ್ಟವಣೆ
[ಕ್ರಿ] ಹಸೆಮಣೆ (ಬಿಡುಮುತ್ತಿನ ಬಳಸಿದ ಕಡೆ ನಡುವಣ ಚೆಂಬೊನ್ನ ಪಟ್ಟವಣೆ ರನ್ನದ ಕನ್ನಡಿವೆರಸು: ಆದಿಪು, ೪. ೩೩)
ಪಟ್ಟಸಾಲೆ
[ನಾ] ಪಡಸಾಲೆ, ಹಜಾರ (ಜನಸಮ್ಮೋಹನ ತಮಃಪಟಮಂ ವಿಚಿತ್ರಚಿತ್ರಪಟಮಂ ಆ ಚೈತ್ಯಾಲಯದ ಕೆಲದ ಪಟ್ಟಸಾಲೆಯ ಮುಂತೆ ನೇಱಿ: ಆದಿಪು, ೩. ೪೫ ವ)
ಪಟ್ಟಿಗೆ
[ನಾ] ಕೊರಳ ಹಾರ (ಜೋಗಿಯ ಕೊರಲೊಳ್ ಇಂಬಾಗಿರ್ದುದು ಪೊಳೆವ ಪೊನ್ನ ಪಟ್ಟಿಗೆ: ಲೀಲಾವತಿ, ೪. ೭೨); ಪಟ್ಟಿಕೆ, ಡಾಬು (ಬೆಡಗಿನ ಸೇತಮಾಲೆ ಪಟ್ಟಿಗೆ ಕಟಿಸೂತ್ರಮೆಂಬಿವು ಮನಂಗೊಳೆ .. .. ಮೆಱೆದತ್ತು ವಿಳಾಸಿನೀಜನಂ: ಆದಿಪು, ೧೨. ೧೨)
ಪಟ್ಟಿರ್
[ಕ್ರಿ] [√ಪಡು] ಮಲಗಿರು (ಒರ್ವ ಪಾರ್ವಂ ವಿಸ್ತೀರ್ಣ ಜೀರ್ಣ ಕರ್ಪಟಾವೃತ ಕಟಿತಟನುಂ ಆಗಿ ಬಂದು ಕಣ್ಮುಚ್ಚಲ್ ಎಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ: ಪಂಪಭಾ, ೩. ೩೧ ವ)
ಪಡಣ
[ನಾ] [ಪತನ] ಬೀಳುವಿಕೆ, ನಾಶ (ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕ್ಕೆಂದೆತ್ತಿದ ಚಂದ್ರಕಾಂತಘಟದೊಳ್: ಪಂಪಭಾ, ೪. ೫೧)
ಪಡಪು
[ನಾ] ಸಂಪಾದನೆ, ಪ್ರಾಪ್ತಿ (ಕಡುತಪದಿಂದೆ ನಿನ್ನ ಪಡಪಾವುದೊ ಗಾವಿಲ ಸಗ್ಗಮಲ್ತೆ: ಪಂಪಭಾ, ೭. ೯೩)
ಪಡಲಗೆ
[ನಾ] [ಪಟಲಿಕಾ] ಪಡಲ, ಬೆತ್ತದ ತಟ್ಟೆ (ಮುನ್ನಂ ಪೂಜಿಸಿ ಶರಮಂ ರನ್ನದ ಪಡಲಗೆಯೊಳಿಟ್ಟು ನಿಜಪರಿವಾರಂ ತನ್ನುಳ್ಳನಿತುಂ ಬೆರಸು: ಆದಿಪು, ೧೨. ೧೧೦)
ಪಡಲಿಡು
[ಕ್ರಿ] ಚೆದುರಿಹೋಗು (ನಿಚ್ಚಂ ಧರಾಧೀಶರಂ ಪಡಲಿಟ್ಟಂತಿರೆ ಮಾೞ್ಪೆಂ ಓವದೆ ಪಯಿಂಛಾಸಿರ್ವರಂ ಯುದ್ಧದೊಳ್: ಪಂಪಭಾ, ೧೦. ೨೫); ನಾಶವಾಗು (ಪವನಜನಿಂದೆ ಕೌರವಕುಲಂ ಪಡಲಿಟ್ಟವೊಲಕ್ಕುಂ: ಪಂಪಭಾ, ೧೦. ೬೩)
ಪಡಲ್ವಡಿಸು
[ಕ್ರಿ] ಕೆಡವು, ಕತ್ತರಿಸು (ಅತಿನಿಬಿಡ ಬಾಳಕದಳೀಷಂಡಂಗಳಂ ವನದುರ್ಗಂಗಳೆಂದೆ ಪಡಲ್ವಡಿಸಿಯುಂ: ಆದಿಪು, ೮. ೪೧ ವ); [ಕ್ರಿ] ಚೆಲ್ಲಾಪಿಲ್ಲಿಯಾಗಿಸು (ಭೀಕರಕರ್ಮದ್ವಿಷರಂ ಪಡಲ್ವಡಿಸಲುಂ ಭವ್ಯರ್ಕಳಂ ಘೋರಸಂಸರಣ ಅಂಭೋನಿಧಿಪಾರಮಂ ಸಲಿಸಲುಂ: ಆದಿಪು, ೯. ೬೧)
ಪಡಲ್ವಡು
[ಕ್ರಿ] ಧ್ವಂಸವಾಗು (ಬಲ್ವರಿಕೆಯೊಳರಿ ನೃಪರ ಪಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ ಸೊಲ್ವಿನಮಾವರ್ತಿಸಿದಂ ನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ: ಪಂಪಭಾ, ೧. ೨೫);
ಪಡಿ