भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪ್ರತಿಪತ್ತಿ

[ನಾ] ಗೌರವ ಕಾಣಿಕೆ (ಬಂದ ವಿದ್ಯಾಧರರಂ ಯಥೋಚಿತ ಪ್ರತಿಪತ್ತಿಗಳಿಂ ಸಂತೋಷಂಬಡಿಸಿ: ಆದಿಪು, ೪. ೮೯ ವ)

ಪ್ರತಿಪದ್ದಿನ

[ನಾ] [ಪ್ರತಿಪತ್+ದಿನ] ಪಾಡ್ಯದ ದಿನ (ವಿತತಾಷಾಢದ ಬಹುಳ ಪ್ರತಿಪದ್ದಿನದಂದು ಕೀರ್ತಿ ನೆಗೞ್ದಿರೆ ಭಗವತ್ಕೃತಯುಗಮಾದುದರಿಂದಂ ಕೃತಯುಗಮೆಂಬರ್ ಪುರಾಣವಿದರಿದನೀಗಳ್: ಆದಿಪು, ೮. ೬೬)

ಪ್ರತಿಪಾದುಕ

[ನಾ] ಸಣ್ಣ ಪೀಠ (ಅನೇಕರತ್ನರಚಿತ ಪ್ರತಿಪಾದುಕವಿನ್ಯಸ್ತ ಕಾಂಚನಮಂಚೋಪಶೋಭಿತದೊಳ್ .. .. ನಿದ್ರಾರಸವಶಗತರಾಗಿರ್ದರ್: ಆದಿಪು, ೫. ೨೨ ವ)

ಪ್ರತಿಪೂರಿತ

[ಗು] ತುಂಬಿಹೋದ (ಧ್ವನತ್ತೂರ್ಯಸಂತತಿ ನಾದಪ್ರತಿಪೂರಿತ ಅಖಿಳಕುಳಕ್ಷೋಣೀಧ್ರಕುಂಜಂ: ಆದಿಪು, ೭. ೩೮)

ಪ್ರತಿಬದ್ಧ

[ಗು] ಸೇರಿದ, ಕೂಡಿಕೊಂಡಿರುವ (ಪೂರ್ವವಿದೇಹದ ವತ್ಸಕಾವತೀವಿಷಯದ ಪ್ರತಿಬದ್ಧ ಪ್ರಭಾಕರೀಪುರಿಯೊಳ್: ಆದಿಪು, ೩. ೫೮ ವ)

ಪ್ರತಿಬೋಧಿಸು

[ಕ್ರಿ] ಎಚ್ಚರಿಸು (ಎಂದು ತನ್ನಂ ಪ್ರತಿಬೋಧಿಸಿದ ನಿಜತನೂಜನ ವಚನತಿಗ್ಮರೋಚಿ ರುಚಿನಿಚಯದಿಂ ಆತ್ಮೀಯ ಚೇತೋನಿಚಿತ ಮೋಹಾಂಧ ತಮಸ್ತೋಮಮಂ ಕಳೆದು: ಆದಿಪು, ೨. ೧೭ ವ); [ಕ್ರಿ] ತಿಳಿಸು (ಎಂದವರ್ ಪ್ರತಿಬೋಧಿಸಿ ಪೋಗಲೊಡಂ ಪರಿನಿಷ್ಕ್ರಮಣಕಲ್ಯಾಣೋತ್ಸವ ಉತ್ಸುಕರಾಗಿರಲ್: ಆದಿಪು, ೯. ೬೩ ವ)

ಪ್ರತಿಮ

[ನಾ] ಸಮಾನ (ಮಹಾಶುಕ್ರಕ್ಕೆ ಸಂದು ಈತಂ ಇಂದ್ರಂ ಇವಂ ತತ್ ಪ್ರತಿಮಂ ಪ್ರತೀಂದ್ರನೆನೆ ಸಂದು: ಆದಿಪು, ೩. ೭೬)

ಪ್ರತಿಮಾಯೋಗ

[ನಾ] [ಜೈನ] ಒಂದೇ ಸ್ಥಳದಲ್ಲಿದ್ದು ತಪಸ್ಸನ್ನಾಚರಿಸುವುದು (ತದನುಮತದೊಳ್ ಬೞಿಯಂ ಏಕವಿಹಾರಿಯಾಗಿ ಸಂವತ್ಸರಾವಧಿವರಂ ಪ್ರತಿಮಾಯೋಗದೊಳ್ ನಿಲೆ: ಆದಿಪು, ೧೪. ೧೩೯ ವ)

ಪ್ರತಿಮೆ

[ನಾ] ವಿಗ್ರಹ, ಬೊಂಬೆ (ಪ್ರತಿಮೆಗಳೞ್ತು ಮೊೞಗಿದುದು ಅತಿರಭಸದೆ ಧಾತ್ರಿ ದೆಸೆಗಳುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೨)

ಪ್ರತಿಷೇಧ

[ನಾ] ತಡೆ (ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಕೊಳಿಸುವಂತೆ ಅನಾಗತಬಾಧಾಪ್ರತಿಷೇಧಂ ಮಾಡುವಂತಟ್ಟಿ: ಪಂಪಭಾ, ೧೩. ೭೦ ವ)

ಪ್ರತಿಷ್ಠಿತ

[ಗು] ಸ್ಥಾಪನೆಗೊಂಡ (ಆ ಜಂಬೂದ್ವೀಪದ ನಟ್ಟನಡುವೆ .. .. ವಿಶಾಲರತ್ನಶಿಲಾಪ್ರತಿಷ್ಠಿತ ಭಗ್ವಜ್ಜನ್ಮಾಭಿಷೇಕ ಸಿಂಹಾಸನಾಲಂಕೃತಮುಂ ಆಗಿ: ಆದಿಪು, ೧. ೪೯ ವ); [ಗು] ಕುಳಿತಿರುವ (ವಿವಿಧಾಯುಧಪೂರ್ಣಂಗಳ್ ಪ್ರವೀರಪುರುಷಪ್ರತತಿ ಪ್ರತಿಷ್ಠಿತಂಗಳ್ ಚೇತೋಜವಹರಿ ಯೋಗ್ಯಂಗಳ್ ತಳರ್ದುದು ಆಗಳ್ ಎಂಬತ್ತನಾಲ್ಕು ಲಕ್ಕೆ ರಥಂಗಳ್: ಆದಿಪು, ೧೧. ೩೨ )

ಪ್ರತಿಸಮಯಂ

[ನಾ] ಸದಾ ಕಾಲವೂ (ಪ್ರತಿಸಮಯಂ ಅನಂತ ಗುಣಶಕ್ತಿಖಚಿತೈಕಪರಿಣಾಮನಿವೃತ್ತಿಕರಣಕ್ಷಪಕನಾಗಿ: ಆದಿಪು, ೧೦. ೧೪ ವ)

ಪ್ರತಿಹತ

[ನಾ] ಉಡುಗಿಸಿದ (ಹತವೈರಿಕ್ಷತ್ರಚಕ್ರಂ ಭಯಚಕಿತ ಜಗದ್ವೀರಚಕ್ರಂ ವಿನಮ್ರಕ್ಷಿತಿಚಕ್ರಂ ದೀಪದೀಪ್ತಿ ಪ್ರತಿಹತ ದಿನಕೃಚ್ಚಕ್ರತೀವ್ರಾಂಶುಚಕ್ರಂ: ಆದಿಪು, ೧೪. ೩)

ಪ್ರತೀಕಾರ

[ನಾ] ನಿವಾರಣೆ (ಪಿರಿದುಮನುರಾಗದಿಂದಂ ಎನ್ನ ಬರೆದ ಪಟಮನಿದನರ್ಚಿಸಿ ಕನ್ಯಾಬ್ರತದೊಳೆ ಕಾಲಮಂ ಕೞಿಪುವೆಂ ಇದಲ್ಲದೆ ಇಲ್ಲಿಗೆ ಪೆಱತೊಂದು ಪ್ರತೀಕಾರಮಿಲ್ಲ: ಆದಿಪು, ೩. ೪೩ ವ)

ಪ್ರತೀಕ್ಷಣ

[ನಾ] ಎದುರು ನೋಡುವುದು (ಅತಿಪುರಸ್ಸರಂ ಇದಿರ್ಗೊಂಡು ತತ್ಕ್ರಿಯಾಪರಿಸಮಾಪ್ತಿಪ್ರತೀಕ್ಷಣಪರನವರಂ ಗುರುಭಕ್ತಿಪೂರ್ವಕಂ ಬಂದಿಸಿ: ಆದಿಪು, ೨. ೩೩ ವ)

ಪ್ರತೀತ

[ಗು] ಪ್ರಸಿದ್ಧವಾದ (ಆಚಂದ್ರಾರ್ಕಪ್ರತೀತ ಉಭಯಗಿರಿಶಿಖರಾತ್ ಸ್ವೋದಯಸ್ಮೈಕಹೇತೋಃ: ಪಂಪಭಾ, ೧೪. ೨೭)

ಪ್ರತೀಂದ್ರ

[ನಾ] [ಜೈನ] ಇಂದ್ರನಂತೆಯೇ ಆಯುಷ್ಯ, ಐಶ್ವರ್ಯ, ಪರಿವಾರ, ಆಜ್ಞೆ ಮುಂತಾದವುಗಳಿರುವ ದೇವರು (ಅಲ್ಲಿ ನಾಲ್ವರುಂ ಸಹಾಯರಪ್ಪ ಸಾಮಾನಿಕದೇವರುಂ ತತ್ ಪ್ರತೀಂದ್ರನುಂ ಬೆರಸು ಅಚ್ಯುತೇಂದ್ರಂ: ಆದಿಪು, ೬. ೧೩ ವ)

ಪ್ರತೋಳಿ

[ನಾ] ರಾಜಬೀದಿ (ಪಂಚರತ್ನತೋರಣ ದ್ಯುತಿಸಮುದ್ದ್ಯೋತಿ ಕನಕಪ್ರಾಕಾರ ಪ್ರತೋಳಿದ್ವಾರಮಂ ಎಯ್ದೆವಂದಾಗಳ್: ಆದಿಪು, ೧೧. ೨೩ ವ)

ಪ್ರತ್ಯಕ್ಷೀಕೃತ

[ಗು] ಕಣ್ಣೆದೆದುರು ಬರುವಂತೆ ಮಾಡಿಕೊಂಡ (ಜನ್ಮಾಂತರ ಅಭ್ಯಸ್ತ ಕಳಾಕುಶಳನುಂ ಪ್ರತ್ಯಕ್ಷೀಕೃತಸಕಲ ವಾಞ್ಮಯನಪ್ಪುದಱಿಂದಂ: ಆದಿಪು, ೮. ೩ ವ)

ಪ್ರತ್ಯಂಗ

[ನಾ] ಬೇರೆ ಬೇರೆ ಅಂಗಗಳು (ಪೆಱವುಂ ಪ್ರತ್ಯಂಗೋಚಿತಾತ್ಯಂಗಮಣಿ ಭೂಷಣಂಗಳುಮಂ ಸ್ವಮತಿಪರಿಕಲ್ಪನದಿಂ ಯುಗಾರಂಭದೊಳ್ ಪಡೆದು: ಆದಿಪು, ೮. ೫೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App