भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪ್ರತ್ಯಗ್ರ

[ಗು] ನವೀನವಾದ (ಪ್ರತ್ಯಗ್ರ ಚಿಂತಾಮಣಿಮಯ ರಚನಾಶ್ಚರ್ಯನಿಶ್ಶೇಷಭೂಷಾರ್ಚನೆಯಂ ಸರ್ವಜ್ಞಬಿಂಬಾವಳಿಗೆ ಪರಸಿದರ್: ಆದಿಪು, ೧೪. ೧೧೬)

ಪ್ರತ್ಯಂತ

[ಗು] ಸುತ್ತಮುತ್ತಲ (ಬಳವತ್ ಪ್ರತ್ಯಂತ ಭೂಪಾಳಕನಿಕರ ಮಹಾವಾಹಿನೀವಾಹಿನೀಸಂಕುಳಂ ಅತ್ಯುತ್ಸಾಹದಿಂದಂ ಪುಗೆ: ಆದಿಪು, ೧೩. ೪೫); [ನಾ] ಗಡಿಪ್ರದೇಶ (ಪೊಂಗುವ ಮಲೆಪರ ಮಲೆಗಳ ಡಂಗಂಗಳ್ ಮಲೆವ ಮಂಡಲಂಗಳ್ ಪ್ರತ್ಯಂತಗಳ್ ಎನಲ್ ಒಳವೆ ಪಾಂಡವರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ: ಪಂಪಭಾ, ೯. ೩೯)

ಪ್ರತ್ಯಂತಭೂಪಾಲಕ

[ನಾ] ನೆರೆರಾಜ್ಯದ ರಾಜ (ಬಲವತ್ ಪ್ರತ್ಯಂತಭೂಪಾಲಕನಿಕರ ಮಹಾವಾಹಿನೀವಾಹಿನೀಸಂಕುಲಂ ಅತ್ಯುತ್ಸಾಹದಿದ ಪುಗೆ ದೆಸೆದೆಸೆಯಂ: ಆದಿಪು, ೧೩. ೪೫)

ಪ್ರತ್ಯಂತವಾಸಿ

[ನಾ] ಗಡಿಯಲ್ಲಿ ವಾಸಿಸುವವನು (ಪ್ರತ್ಯಂತವಾಸಿಗಳಪ್ಪ ಏೞ್ನೂಱು ಕುಕ್ಷಿನಿವಾಸಿಗಳುಂ ಎೞ್ಪತ್ತಿರ್ಛಾಸಿರ ದುರ್ಗಾಟವಿಗಳುಂ: ಆದಿಪು, ೧೫. ೩ ವ)

ಪ್ರತ್ಯಭಿಜ್ಞಾನ

[ನಾ] [ಪ್ರತಿ+ಅಭಿಜ್ಞಾನ] ಅದೇ ಇದು ಎಂದು ಗುರುತಿಸುವುದು (ತದೇಕತ್ವಗ್ರಾಹಕ ಪ್ರತ್ಯಭಿಜ್ಞಾನಮುಂ ಲೂನಪುನರ್ಜಾತ ನಖಕೇಶಾದಿಗಳೊಳ್ ಪೂರ್ವಾಪರೈಕತ್ವಂ ಇಲ್ಲದಲ್ಲಿಯುಂ ಕಾಣಲಕ್ಕುಂ: ಆದಿಪು, ೨. ೯ ವ)

ಪ್ರತ್ಯವಾಯ

[ನಾ] ಕೇಡು, ತೊಂದರೆ (ಅಂತೀತನ ಕಟಕಕ್ಕೆ ನಿತ್ಯಕ್ಷಯವ್ಯಯಪ್ರತ್ಯವಾಯಂಗಳಂ ಮಾಡಿ ಬೇಸಱಿಸಿ ತೆರಳ್ಚುವಂ: ಆದಿಪು, ೧೩. ೫೮ ವ)

ಪ್ರತ್ಯಾಖ್ಯಾನ

[ನಾ] ಸ್ಕಾರ, ತೊರೆಯುವಿಕೆ (ಮಹಾಬಳನಂ ಜಾತರೂಪಧರನಂ ಮಾಡಿ ಚತುರ್ವಿಧಾಹಾರ ಶರೀರಪ್ರತ್ಯಾಖ್ಯಾನಮಂ ಕೊಟ್ಟು: ಆದಿಪು, ೨. ೫೧ ವ)

ಪ್ರತ್ಯಾಲೀಢ

[ನಾ] ಬಿಲ್ಗಾರನು ಕುಳಿತುಕೊಳ್ಳುವ ಒಂದು ರೀತಿ (ಆಲೀಢ ಪ್ರತ್ಯಾಲೀಡ ಸಮಪಾದಂಗಳೆಂಬ ಆಸನಂಗಳೊಳಂ ಪೆಱವುಂ ಶರಾಸನವಿದ್ಯೆಗಳೊಳ್ ಅತಿ ಪ್ರವೀಣರುಂ ಜಾಣರುಂ ಆಗಿ: ಪಂಪಭಾ, ೧೩. ೩೮ ವ) [“ಬಲಗಾಲನ್ನು ಹಿಂದಕ್ಕೆ ಮಡಿಸಿ ಎಡಗಾಲನ್ನು ಹಿಂದಕ್ಕೆ ಮಡಿಸಿ ಕುಳ್ಳಿರುವುದು” ದೀಪಿಕೆ, ಪು ೫೨೩

ಪ್ರತ್ಯಾಸನ್ನಮೃತ್ಯು

[ನಾ] ಸಮೀಪಿಸಿರುವ ಸಾವು (ಬಹ್ವಾರಂಭ ಸಂರಂಭ ರೌದ್ರಧ್ಯಾನಪರಿಣತಂ ಉಪಾರ್ಜಿತ ನರಕಾಯುಷ್ಯಂ ಪ್ರತ್ಯಾಸನ್ನಮೃತ್ಯುವಾಗಿ: ಆದಿಪು, ೨. ೧೧ ವ)

ಪ್ರತ್ಯುತ್ಪನ್ನಪ್ರತಿಭ

[ನಾ] ಸಮಯಾನುಸಾರವಾಗಿ [ವಿಚಾರ] ಹೊಳೆಯುವ ಪ್ರತಿಭೆಯುಳ್ಳವನು (ಜನಪದಸಮಭಿಜಾತನುಂ ಅನ್ವಯಾಗತನುಂ ಅಭಿರೂಪನುಂ ಪ್ರತ್ಯುತ್ಪನ್ನಪ್ರತಿಭನುಂ: ಆದಿಪು, ೧೪. ೪೩ ವ)

ಪ್ರಥಮ ಕಲ್ಪೇಶ್ವರ

[ನಾ] [ಜೈನ] ಮೊದಲನೆಯ ಕಲ್ಪದ ಇಂದ್ರ, ಸೌಧರ್ಮೇಂದ್ರ (ಕಳಶೋದ್ಧಾರ ಮಂತ್ರಪೂರ್ವಕಂ ಪೃಣತಿಪ್ರಸ್ತಾವಪುರಸ್ಸರಂ ಮಾಡಿ ಪ್ರಥಮಕಲ್ಪೇಶ್ವರನುಂ ಈಶಾನೇಂದ್ರನುಂ ಎತ್ತಿಕೊಂಡು: ಆದಿಪು, ೭. ೮೦ ವ)

ಪ್ರಥಮಕಲ್ಯಾಣ

[ನಾ] [ಜೈನ] ತೀರ್ಥಂಕರನಿಗೆ ಮಾಡುವ ಪಂಚಕಲ್ಯಾಣಗಳಲ್ಲಿ ಮೊದಲನೆಯದು, ಗರ್ಭಾವತರಣ (ದೇವೇಂದ್ರಂ .. .. ಪ್ರಥಮಕಲ್ಯಾಣಮಂ ನಿರ್ವರ್ತಿಸಿದಂ: ಆದಿಪು, ೭. ೩೨ ವ)

ಪ್ರಥಮಚಳಿತದಕ್ಷಿಣಚರಣ

[ನಾ] ಮೊದಲು ಬಲಗಾಲನ್ನು ಇಟ್ಟವನು (ದಿವ್ಯಚಾಪಮಂ ಪಿಡಿದು ಪ್ರಥಮ ಚಳಿತ ದಕ್ಷಿಣಚರಣನಾಗಿ ನಿಜನಿವಾಸದಿಂ ಪೊಱಮಟ್ಟು: ಪಂಪಭಾ, ೪. ೧೨ ವ)

ಪ್ರಥಮಾನುಯೋಗ

[ನಾ] [ಜೈನ] ತೀರ್ಥಂಕರರು ಉಪದೇಶಿಸಿದ ಶಾಸ್ತ್ರಸಮುದಾಯದಲ್ಲಿ ಮೊದಲನೆಯದು (ಎರಡು ಪರಿಕರ್ಮಮುಂ ಎಂಬತ್ತೆಂಟು ಸೂತ್ರಂಗಳುಮಂ ಪ್ರಥಮಾನುಯೋಗಮುಮಂ .. .. ಯಥೋವಿಧಿಯಿಂ ನೋಂತು: ಆದಿಪು, ೩. ೪೦ ವ)

ಪ್ರದಾರಿತ

[ಗು] ಸೀಳಿದ (ವಿಳೋಳ ವೀಚೀರಯಂ ಪ್ರದಾರಿತ ಕುಳಾಚಲೋದಧಿಪರೀತಮಾಗಿರ್ದ ಜಂಬೂದ್ವೀಪದೊಳಗೆ: ಪಂಪಭಾ, ೧. ೫೧ ವ)

ಪ್ರದೇಶ

[ನಾ] ಜಾಗ (ವಾತವಲಯಮುೞಿಯೆ ಜೀವಪ್ರದೇಶಂಗಳಿಂ ಲೋಕಪ್ರದೇಶಮಂ ಪರ್ವಿ: ಆದಿಪು, ೧೬. ೪೯); [ನಾ] ನೆಲೆ (ಉತ್ತುಂಗ ಸುಸೂಕ್ಷ್ಮ ಪಾರ್ಶ್ವ ಕೃಶ ಕೋಮಳ ನಿಮ್ನ ಘನ ಉನ್ನತ ಪ್ರದೇಶಂಗಳಂ ಆ ಸಮಾನತಳದಲ್ಲಿಯೆ ಚಿತ್ರಕಂ ಎಯ್ದೆ ತೋರ್ಪವೋಲ್: ಪಂಪಭಾ, ೧೩. ೨೧)

ಪ್ರಧಾನಮಂತ್ರಿ

[ನಾ] ಮುಖ್ಯ ಅಮಾತ್ಯ (ನಿಜಪ್ರಿಯ ಪ್ರಧಾನಮಂತ್ರಿ ಮತಿವರನೊಳಂ .. .. ಆಲೋಚಿಸಿ: ಆದಿಪು, ೪. ೮೯ ವ)

ಪ್ರಧಾನಶ್ರೇಷ್ಠಿ

[ನಾ] ಮುಖ್ಯ ವರ್ತಕ (ಪ್ರಧಾನಶ್ರೇಷ್ಠಿ ಧನಮಿತ್ರನೊಳಾಲೋಚಿಸಿ: ಆದಿಪು, ೪. ೮೯ ವ)

ಪ್ರಧ್ವನ

[ನಾ] ಭೋರ್ಗರೆತ (ಆಗಳ್ ದೂತಾಳಾಪವಿಳಯಸಮೀರ ಪ್ರೇರಿತ ಪ್ರಳಯಜಳನಿಧಿಪ್ರಧ್ವನಾನುಕಾರಿಯಾಗಿ: ಆದಿಪು, ೧೪. ೮೫ ವ)

ಪ್ರಪಂಚ

[ನಾ] ವೃತ್ತಾಂತ ಮತ್ತು ವಿವರಗಳು (ಬಂದು ಖಚರಪತಿಯನೆಯ್ದಿ ತತ್ಪ್ರಪಂಚಮಂ ಸಪ್ರಪಂಚಂ ಅಱಿಪಿ: ಆದಿಪು, ೨. ೪೫ ವ); [ನಾ] ಮಹಾಕಾರ್ಯ (ಖಾಂಡವ ವನದಹನಪ್ರಪಂಚದಿಂ ಬೞಿಯಂ ಅರಾತಿವನದಹನ ತೀವ್ರಪ್ರತಾಪಗಹನಕ್ಕೆ ಮುನ್ನಂ ಅಳ್ಕಿ ಪರಮಂಡಳಿಕರ್ ಇತ್ತುಂ ತೆತ್ತುಂ ಬೆಸಕೆಯ್ಯೆ: ಪಂಪಭಾ, ೬. ೧. ವ)

Search Dictionaries

Loading Results

Follow Us :   
  Download Bharatavani App
  Bharatavani Windows App