भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪ್ರಪಾತ

[ನಾ] ಕೊರಕಲು, ಜಲಪಾತ (ಹಿಮವತ್ಪರ್ವತದ ಸಿಂಧುಪ್ರಪಾತಮನೆಯ್ದಿ: ಆದಿಪು, ೧೩. ೬೭ ವ)

ಪ್ರಬಂಧ

[ನಾ] ಮಹಾಕಾವ್ಯ (ವರ್ಣಕಂ ಕತೆಯೊಳಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂಡಿತರೆ ತಗುಳ್ದು ಬಿಚ್ಚಳಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ: ಪಂಪಭಾ, ೧. ೧೧)

ಪ್ರಬೋಧೆ

[ನಾ] [ನಿದ್ದೆಯಿಂದ] ಎಚ್ಚರಗೊಂಡವಳು (ಉದಯಾಚಳಚೂಡಾಮಣಿ ಮರೀಚಿನಿಚಯಚುಂಬಿತ ಅಂಬುಜವನಲಕ್ಷ್ಮಿಯೊಡನೆ ಲಬ್ಧಪ್ರಬೋಧೆಯಾಗಿ: ಆದಿಪು, ೮. ೨೬ ವ)

ಪ್ರಭಗ್ನ

[ಗು] ಮುರಿಯಲ್ಪಟ್ಟ (ಇವಲ್ತೆ ತೋರ್ಪುವ ಮಧುಪವ್ರಜ ಪರಿವಾರಿತ ಮಾದ್ಯತ್ ಗಜಕಟಕರ್ಷಪ್ರಭಗ್ನ ಚಂದನತರುಗಳ್: ಆದಿಪು, ೨. ೨೭)

ಪ್ರಭವ

[ನಾ] ಜನ್ಮಸ್ಥಾನ (ಆ ಸಕಳಾರ್ಥಸಂಯುತಂ ಅಳಂಕೃತಿಯುಕ್ತಂ ಉದಾತ್ತ ವೃತ್ತಿ ವಿನ್ಯಾಸಂ ಅನೇಕ ಲಕ್ಷಣ ಗುಣ ಪ್ರಭವಂ: ಪಂಪಭಾ, ೧. ೯); [ನಾ] (ದೀಪ್ತಕಂದರ್ಪದರ್ಪಕ್ಷುಭಿತಗಳನಿನಾದಂ ಪ್ರಸ್ಫುರತ್ ಘರ್ಮವಾರಿ ಪ್ರಭವಂ: ಪಂಪಭಾ, ೫. ೨೮)

ಪ್ರಭಾತ

[ನಾ] ಬೆಳಗು (ಆಗಳ್ ಆ ವಿಕಚಾಂಬುಜಸೌರಭಮನೊಸೆದು ಸೇವಿಸುವಾ ಪೆಣ್ದುಂಬಿಗಳ ಸರಮನೆತ್ತಿ ತಱುಂಬುತ್ತುಂ ಬಂದುದಾ ಪ್ರಭಾತಸಮೀರಂ: ಪಂಪಭಾ, ೧೨. ೧೦೫)

ಪ್ರಭಾತಪಟಹ

[ನಾ] ಅರಮನೆಗಳಲ್ಲಿ ಬೆಳಗಿನ ಹೊತ್ತು ಮೊಳಗುವ ಭೇರಿ (ಅಮರವಾದಕವಾದ್ಯಮಾನ ದುಂದುಭಿ ಶಂಖ ಕಾಹಳಾ ಪ್ರಭಾತಪಟಹಧ್ವನಿಗಳ್ ದೆಸೆದೆಸೆಗೆಸೆಯುಂ: ಆದಿಪು, ೮. ೨೬ ವ)

ಪ್ರಭಾಭಿದ್

[ಗು] ಕಾಂತಿಯಿಂದ ಭೇದಿಸಲ್ಪಟ್ಟ (ಸಮುನ್ಮಿಷದ್ವಿವಿಧ ರತ್ನಮಾಲಾ ಪ್ರಭಾಭಿದಾರುಣ ಜಲಪ್ಲವಾವಿಳ ವಿಳೋಳ ವೀಚೀರಯ ಪ್ರದಾರಿತ ಕುಳಾಚಲೋದಧಿ ಪರೀತಮಾಗಿರ್ದ: ಪಂಪಭಾ, ೧. ೫೧ ವ)

ಪ್ರಭಾವನೆ

[ನಾ] [ಜೈನ] ಸಮ್ಯಗ್ದರ್ಶನದ ಎಂಟು ಅಂಗಗಳಲ್ಲ್ಲಿ ಕೊನೆಯದು, ಜೈನಧರ್ಮದ ಹಿರಿಮೆಯನ್ನು ತಿಳಿಸುವುದು (ಅನೇಕ ಉಪಪತ್ತಿಗಳಿಂ ಸ್ವಪಕ್ಷಸ್ಥಾಪನಂ ಗೆಯ್ದು ಸನ್ಮಾರ್ಗಪ್ರಕಾಶನದಿಂ ಮಾರ್ಗಪ್ರಭಾವನೆಯಂ ಮಾಡಿ: ಆದಿಪು, ೨. ೨೨ ವ)

ಪ್ರಭಾವಳಯ

[ನಾ] ಕಾಂತಿಯ ಆವರಣ (ದಳಿತಕಮಲಚ್ಛಾಯಾಟೋಪಂ ಮನೋಜರಸ ಪ್ರಭಾವಳಯನಿಳಯಂ ಪ್ರೋದ್ಯತ್ ಭ್ರೂವಿಭ್ರಮಂ: ಪಂಪಭಾ, ೪. ೭೭)

ಪ್ರಭಿನ್ನ

[ಗು] ಅರಳಿದ (ಬಾಸಣಿಸಿದುದು ಉತ್ಕಟ ಕುಸುಮಾಸವ ಸೌರಭದೆ ದೆಸೆಗಳೊಡನೆ ಅಳಿಕುಳಮಂ ವಾಸವವನಿತಾ ವದನಾಬ್ಜಾಸವಸೇಕಪ್ರಭಿನ್ನ ಮುಕುಳಂ ವಕುಳಂ: ಆದಿಪು, ೬. ೯೭)

ಪ್ರಭು ಮಾಡು

[ಕ್ರಿ] ನಾಯಕನನ್ನಾಗಿ ಮಾಡು (ವಿಪುಲ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ: ಪಂಪಭಾ, ೧. ೧೪)

ಪ್ರಭುತೆ

[ನಾ] ದಕ್ಷತೆ (ಇತರೇಂದ್ರರ್ ಪರಿಚಾರಕಪ್ರಭುತೆಯಿಂ ಮುಂದಾಡೆ: ಆದಿಪು, ೭. ೮೧) [ಎಲ್. ಬಸವರಾಜು ಅವರ ಆವೃತ್ತಿ]

ಪ್ರಭುಶಕ್ತಿ

[ನಾ] ಪ್ರಭುತ್ವ (ಈಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮಂ ಅವರವರ ದೆಸೆಗಳಿಂ ತೆಗೆದೊಂದುಮಾಡಿ: ಪಂಪಭಾ, ೧. ೧೩೯ ವ)

ಪ್ರಭೂತ

[ಗು] ಸಮೃದ್ಧ (ಪ್ರಭೂತ ಯವಸ ಉದಕಂಗಳುಮಂ ಸಮಸ್ತಸಸ್ಯಸಂಪತ್ಸಂಪನ್ನ ಸುಕ್ಷೇತ್ರಂಗಳುಮಂ: ಆದಿಪು, ೮. ೬೩ ವ); [ಗು] ಉಂಟಾದ (ಅಭಿಮನ್ಯು ಮರಣವಾರ್ತಾ ಪ್ರಭೂತ ಶೋಕಾಗ್ನಿ ಧರ್ಮತನಯನಂ ಇರದಂದು ಅಭಿಭವಿಸಿ ತನ್ನಂ ಅಳುರ್ದಂತೆ ಭಾಸ್ಕರಂ ಕೆಂಕಮಾದಂ ಅಸ್ತಾಚಲದೊಳ್: ಪಂಪಭಾ, ೧೧. ೧೦೬)

ಪ್ರಭೃತಿ

[ನಾ] ಜನ, ವ್ಯಕ್ತಿ (ನಂಟರಪ್ಪ ಅಶ್ವಗ್ರೀವ ವಿದ್ಯುನ್ಮಾಲಿ ನೀಲಾದಿಗಳಪ್ಪ ಪ್ರಭೃತಿಗಳ್ ಎನಿಬರಾನುಂ ಮುರಾಂತಕನಂ ಬಂದು ತಾಗಿದೊಡೆ: ಪಂಪಭಾ, ೬. ೬೪ ವ)

ಪ್ರಮತ್ತ

[ನಾ] [ಜೈನ] ಆತ್ಮನ ಎರಡು ಅವಸ್ಥೆಗಳಲ್ಲಿ ಒಂದು, ಅಶುದ್ಧಾತ್ಮನಲ್ಲಿ ಕೆಳತರಗತಿಯ ಆರು ಗುಣಸ್ಥಾನಗಳಲ್ಲಿ ಕಾಣಬರುವ ಪರಿಣಾಮ (ಅಂತರ್ಮುಹೂರ್ತಕಾಲಂ ಪ್ರಮತ್ತ ಅಪ್ರಮತ್ತ ಪರಾವರ್ತನಸಹಸ್ರಂಗೆಯ್ದು: ಆದಿಪು, ೧೦. ೧೪), ಇನ್ನೊಂದು ‘ಅಪ್ರಮತ್ತ’

ಪ್ರಮದಪದ

[ನಾ] ಆನಂದದಾಯಕ (ಇದುವೆ ಸುಕವಿಪ್ರಮೋದಪ್ರದಂ ಇದುವೆ ಸಮಸ್ತಭವ್ಯಲೋಕ ಪ್ರಮದಪ್ರದಂ ಎನೆ ನೆಗೞ್ದ ಆದಿಪುರಾಣದೊಳ್ ಅಱಿವುದು ಕಾವ್ಯಧರ್ಮಮಂ ಧರ್ಮಮುಮಂ: ಆದಿಪು, ೧. ೩೮)

ಪ್ರಮದಾ

[ನಾ] ಸ್ತ್ರೀ, ಹೆಂಗಸು (ಪ್ರಮದಾಹಸ್ತವಿನ್ಯಸ್ತ ವಾಮಕ್ರಮಕಮಳನುಂ: ಪಂಪಭಾ, ೯. ೨೮ ವ)

ಪ್ರಮಾಣ

[ನಾ] ಜೈನ] ರುಜುವಾತು (ಪ್ರಮಾಣ ನಯ ನಿಕ್ಷೇಪ ಅನುಯೋಗ ಸದಾದಿಗಳಿಂ ನಿಶ್ಚಯಿಸಿದ ಸಪ್ತತತ್ತ್ವಂಗಳೊಳಗೆ ಚೇತನಾಲಕ್ಷಣಮಪ್ಪುದು ಜೀವತತ್ತ್ವಂ: ಆದಿಪು, ೧೦. ೬೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App