भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪ್ರಮಾದ

[ನಾ] [ಜೈನ] ಹದಿನೈದು ಬಗೆಯ ದೋಷಗಳು: ಸ್ತ್ರೀಕಥೆ, ಭೋಜನಕಥೆ, ರಾಷ್ಟ್ರಕಥೆ, ಅವನೀಪಾಲಕಥೆ ಎಂಬ ನಾಲ್ಕು ವಿಕಥೆಗಳು; ಕ್ರೋಧ, ಮಾನ, ಮಾಯೆ, ಲೋಭ ಎಂಬ ನಾಲ್ಕು ಬಗೆಯ ಕಷಾಯಗಳು; ಸ್ಪರ್ಶನೇಂದ್ರಿಯ, ರಸನೇಂದ್ರಿಯ, ಘ್ರಾಣೇಂದ್ರಿಯ, ಚಕ್ಷುರಿಂದ್ರಿಯ, ಕರ್ಣೇಂದ್ರಿಯ ಎಂಬ ಐದು ಇಂದ್ರಿಯಗಳು, ನಿದ್ರೆ ಮತ್ತು [ನಾ] ಸ್ನೇಹ (ಮತ್ತಂ ಚತುರಶೀತಿಸಹಸ್ರ ಗುಣಮಣಿಭೂಷಣ ವಿಭೂಷಿತನುಂ ಅಷ್ಟಾದಶಸಹಸ್ರ ಶೀಲರತ್ನಾಕರನುಂ ಆಗಿ ಪಂಚದಶಪ್ರಮಾದಂಗಳಂ ಬಂಚಿಸಿ: ಆದಿಪು, ೬. ೨೯ ವ)

ಪ್ರಮಿತ

[ಗು] ಅಳತೆಯ, ಮಿತಿಯ (ಮಹೇಂದ್ರಕಲ್ಪದೊಳ್ ಸಪ್ತಸಾಗರೋಪಮಪ್ರಮಿತ ಜೀವಿತನೆಂ ಸಾಮಾನಿಕದೇವನಾಗಿ ಪುಟ್ಟಿದೆಂ: ಆದಿಪು, ೩. ೫೦ ವ)

ಪ್ರಮುಚ್ಯಮಾನ

[ಗು] ಬಿಡಲ್ಪಡುತ್ತಿದ್ದ (ಅನವರತ ಪ್ರಮುಚ್ಯಮಾನ ಪ್ರಚುರ ನಿಜನಾರಾಚರಾಜಿಯಿಂದಂ ಅವಿರಳಮದಜಳ ತೈಲಪಾಕ ದುರಾಲೋಕಂಗಳಪ್ಪ ತದ್ಬಲ ಕರಟಿಕಟ ಕಟಾಹಂಗಳಂ ಅಪತುಚ್ಛಚ್ಛಿದ್ರಂಗಳ್ಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ)

ಪ್ರಮುದಿತ

[ಗು] ಸಂತುಷ್ಟಗೊಂಡ (ನಿಜಪರಿರಕ್ಷಣಕ್ಷಮ ಕ್ಷಮಾವಲ್ಲಭ ಲಾಭಪ್ರಮುದಿತ ಮೇದಿನೀಹೃದಯದಂತೆ: ಆದಿಪು, ೭. ೩೬ ವ)

ಪ್ರಮೃಷ್ಟ

[ಗು] ಲೇಪಿಸಿದ (ಅಂತಾರೋಗಿಸಿದಿಂ ಬೞಿಯಂ ಆಚಮಿತ ಚಂದ್ರಕಾಂತದ್ರವಸುರಭಿಸಲಿಲನುಂ ಘನಸಾರ ಚಂದನಸಾರ ಪ್ರಮೃಷ್ಟ ಕರತಳನುಂ: ಆದಿಪು, ೧೧. ೨೭ ವ)

ಪ್ರಮೋದ

[ನಾ] ಸಂತೋಷ (ಇದುವೆ ಸುಕವಿಪ್ರಮೋದಪ್ರದಂ ಇದುವೆ ಸಮಸ್ತಭವ್ಯಲೋಕಪ್ರಮದಪ್ರದಂ ಎನೆ ನೆಗೞ್ದ ಆದಿಪುರಾಣದೊಳ್ ಅಱಿವುದು ಕಾವ್ಯಧರ್ಮಮಂ ಧರ್ಮಮುಮಂ: ಆದಿಪು, ೧. ೩೮)

ಪ್ರಯೋಗ

[ನಾ] ಪರೀಕ್ಷೆ ಮಾಡುವುದು, ಪರಿಶೀಲನೆ (ಅದು ಸಾಧನ ದೂಷಣ ಪ್ರಯೋಗಾನ್ಯಥಾನುಪಪತ್ತಿಯಿಂ ಬಹಿರರ್ಥ ಸಿದ್ಧಿಯಕ್ಕುಂ: ಆದಿಪು, ೨. ೧೦ ವ); [ನಾ] ಸಂಗೀತದ ಅಭಿವ್ಯಕ್ತಿಕ್ರಮ (ಗಮಕ ಪ್ರಯೋಗಂ ಆಭೋಗಂ ಅಳಂಕಾರಂ ಪೊಗರ್ ನಯಂ ಮಿಱುಗು ಪೊದಳ್ದಮರೆ ಕೊಳೆ ಪಾಡುವ: ಆದಿಪು, ೭. ೧೬); [ನಾ] ಉಪಾಯ, ಮಾರ್ಗ (ಎಂತು ಧನಂಗಳಂ ಪ್ರಯೋಗಾಂತರದಿಂ ತೆರಳ್ಚಿದಪಿರಿ ಆಗದು ಇದಾದೊಡಂ ಎಂತು ರಾಜಸೂಯಾಂತಂ: ಪಂಪಭಾ, ೬. ೨೩)

ಪ್ರರೋಚನಾ

[ನಾ] ನಾಟಕದ ಒಂದು ಭಾಗ, ಆರಂಭದಲ್ಲಿ ಪ್ರೇಕ್ಷಕರ ಅಭಿರುಚಿಯನ್ನು ಹುಟ್ಟಿಸುವುದು (ನಾಂದೀ ಪ್ರರೋಚನಾ ಪ್ರಸ್ತಾವನಾ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ: ಪಂಪಭಾ, ೨. ೩೪ ವ)

ಪ್ರರೋಹ

[ನಾ] ಬಿಳಲು (ಸೃಕ್ವೋಪಾಂತಪ್ರರೂಢಶ್ಮಶ್ರುಜಾಳಂ ಆಹವ ಮಹಾಹುಂಕಾರ ಕಾಳಕೂಟವಿಟಪಿಪ್ರರೋಹ ಶಂಕಾವಹ ನಾಭಿಕೂಪಾವಲಂಬಿ ಕೂರ್ಚಕಳಾಪಂ: ಆದಿಪು, ೧೩. ೪೫ ವ)

ಪ್ರಲಂಬ

[ಗು] ನೀಳವಾದ (ವ್ಯೂಢವಕ್ಷಸ್ಸ್ಥಳಂ ಆಜಾನುಪ್ರಲಂಬ ಪ್ರಬಲಭುಜಯುಗಂ ಚಾರುವೃತ್ತೋರುಯುಗ್ಮಂ: ಆದಿಪು, ೮. ೫೧); ಜೋತುಬಿದ್ದ (ಮಹೀತಳಾಶ್ಲಿಷ್ಟಜಾನುಲಲಾಟಪಟ್ಟರ್ ಪ್ರಣಾಮಾರ್ಪಣಪುರಸ್ಸರಂ ಶಿರೋವೇಷ್ಟನ ಪ್ರಲಂಬ ಚೇಳಾಂಚಳ ಪಿಹಿತವದನರಾಗಿ: ಆದಿಪು, ೧೦. ೪೮ ವ)

ಪ್ರಲಂಬಮಾನ

[ಗು] ತೂಗುಹಾಕಲಾದ (ಅನೇಕಕಾಮನೀಕರಪಲ್ಲವ ವಿಧೂಯಮಾನ ಚಾರುಚಾಮರಾಂದೋಳಿತ ಪ್ರಾಕಾರ ಪ್ರಲಂಬಮಾನ ಮಂದಾರಮಾಳಾವಿಳಾಸದೊಳ್: ಆದಿಪು, ೮. ೬೭ ವ)

ಪ್ರವರ

[ನಾ] ಅಗ್ರ ವ್ಯಕ್ತಿ (ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ ಸಬ್ಬವದವರೊಡನೆ ಅಂತು ಒಸೆದ ಅನ್ನವಾಸದೊಳ್ ಇರ್ದನಾಗಳ್ ಹರಿಗಂ: ಪಂಪಭಾ, ೩. ೮೦)

ಪ್ರವರತರ

[ಗು] ಅತ್ಯಂತ ಶ್ರೇಷ್ಠವಾದ (ಪ್ರವರತರ ಪುರಂಧ್ರೀ ನೂಪುರಾರಾವಂ ಎತ್ತಂ ಕಿವಿಗೆ ವರೆ: ಪಂಪಭಾ, ೧೪. ೧೬)

ಪ್ರವರ್ತಕ

[ನಾ] ಮೂಲಪುರುಷ (ಈ ಭವಕ್ಕೆಂಟನೆಯ ಭವದೊಳ್ ಭರತದೊಳ್ ನೀನಾದಿತೀರ್ಥಪ್ರವರ್ತಕನಾದಂದು ಈ ಶ್ರೀಮತಿ ದಾನತೀರ್ಥಪ್ರವರ್ತಕಂ ಶ್ರೇಯಾಂಸನಕ್ಕುಂ: ಆದಿಪು, ೫. ೧೩ ವ)

ಪ್ರವರ್ತನ

[ನಾ] ಹೊರಳುವುದು (ಅನವರತ ನಿಹತ ನರ ಕರಿ ತುರಗ ನಿಕುರುಂಬ ಕೀಲಾಲ ಕಲ್ಲೋಲ ಪ್ರವರ್ತನ ಅನೇಕ ನದ ನದೀ ಪ್ರವಾಹಬಾಹುಳ್ಯ ದುಸ್ತರಾವತರಣ ಮಾರ್ಗಮುಂ: ಪಂಪಭಾ, ೧೩. ೫೧ ವ); [ನಾ] ತೊಡಗುವಿಕೆ (ಪಂಚಾಣುವ್ರತಾದಿ ಪ್ರವರ್ತನಸ್ವಭಾವ ಸಂಯಮುಮುಂ: ಆದಿಪು, ೧೫. ೧೩ ವ)

ಪ್ರವರ್ಧಮಾನ

[ಗು] ಬೆಳೆಯುವ, ಹೆಚ್ಚುವ (ಅಮರಾಧಿಪಪ್ರಹಿತ ಪ್ರತಿದಿನ ಪ್ರವರ್ಧಮಾನ ಸುರತರುಪ್ರಸೂನ ಗ್ರಥಿತ ಸುರಭಿದಾಮ: ಆದಿಪು, ೮. ೩ ವ)

ಪ್ರವಾಹಮಾನ

[ಗು] ಹರಿಯುವ, ಪ್ರವಹಿಸುವ (ಸೈರಿಸಲಾಱದೆ ತಡತಡಿಸಿ ಪರಿತಂದ ಅತಿದ್ರುತ ಪ್ರವಾಹಮಾನ ಆರುಷ್ಕರದ್ರವಾವರ್ತಗರ್ತ ಗಂಭೀರೆಯುಂ: ಆದಿಪು, ೫. ೮೭ ವ)

ಪ್ರವಾಳ

[ನಾ] ಚಿಗುರು (ಅದಱಿಂ ಪ್ರವಾಳಪತ್ರಪುಷ್ಪಾಂಕುರಂಗಳಿಂದಂ ಸಂಕೀರ್ಣಮಪ್ಪ ರಾಜಾಂಗಣಮಂ ಮೆಟ್ಟದೆ ಪೆಱತೊಂದೆ ಬಟ್ಟೆಯೊಳ್ ಬಂದೆವು: ಆದಿಪು, ೧೫. ೧೧ ವ); [ನಾ] ಹವಳ (ಆ ಪ್ರವಾಳಪಾಟಲಾಧರೆಯೊಳ್ ಆ ನವಾಮ್ರದ್ರುಮ ಪಲ್ಲವಾಧರಂ: ಆದಿಪು, ೮. ೨೩ ವ)

ಪ್ರವಾಳಪಾಟಲ

[ಗು] ಹವಳದಂತೆ ಕೆಂಪಾದ (ಆ ಪ್ರವಾಳಪಾಟಲಾಧರೆಯೊಳ್ ಆ ನವಾಮ್ರದ್ರುಮಪಲ್ಲವಾಧರಂ: ಆದಿಪು, ೮. ೨೩ ವ)

ಪ್ರವಿಭಗ್ನ

[ಗು] ಮುರಿದುಹೋದ (ಅದು ಮದದಂತಿ ದಂತಮುಸಲ ಪ್ರವಿಭಗ್ನ ಮಹಾ ಮಹೀರುಹಾಸ್ಪದಂ: ಪಂಪಭಾ, ೩. ೧೦)

Search Dictionaries

Loading Results

Follow Us :   
  Download Bharatavani App
  Bharatavani Windows App