भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪ್ರವಿಭಾಗ

[ನಾ] ಬೇರೆ ಬೇರೆ ಭಾಗಗಳು (ಅಪಾತ್ರದಾನಂ ಭೋಗಭೂಮಿಗಳೊಳಂ ಭೋಗಭೂಮಿಪ್ರವಿಭಾಗ ದ್ವೀಪಂಗಳೊಳಂ: ಆದಿಪು, ೧೦. ೧೦ ವ)

ಪ್ರವಿಭಾಸಿ

[ಗು] ಪ್ರಕಾಶಿಸುತ್ತಿರುವ (ಗಂಧೇಭ ಕಂಧರಬಂಧ ಪ್ರವಿಭಾಸಿಯಪ್ಪ ಅರಿಗನಂ ಕಾಣುತ್ತೆ ಕಣ್ಸೋಲ್ತು: ಪಂಪಭಾ, ೪. ೩೮)

ಪ್ರವಿಭಾಸಿತ

[ಗು] ಪ್ರಕಾಶಮಾನವಾದ (ತುಂಗವನ್ಯಮತಂಗಜದಂತೆ ಆಘಾತನಿಪಾತಿಸಲ್ಲಕೀಭಂಗಮಂ ಮಣಿಮೌಕ್ತಿಕ ನೀಳಸ್ಥೂಳ ಶಿಲಾಪ್ರವಿಭಾಸಿತ ಉತ್ತುಂಗಮಂ: ಪಂಪಭಾ, ೧. ೧೧೫)

ಪ್ರವಿಮಲ

[ಗು] ಪರಿಶುದ್ಧವಾದ (ಪ್ರವಿಮಲಸದ್ಗೀರ್ವಾಣದಾತವ್ಯ ಸಾಯಕ ಸಂಪೂರ್ಣ ಕಳಾಪ್ರವೀಣನಂ.. .. ಸರ್ವಲಕ್ಷಣಸಂಪೂರ್ಣಂ ಅಪ್ಪ ಮಗನಂ ಅಮೋಘಂ ಪಡೆವೆಂ: ಪಂಪಭಾ, ೧. ೧೩೪ ಮತ್ತು ೧೩೪ ವ)

ಪ್ರವಿಲಸತ್

[ಗು] ಪ್ರಕಾಶಮಾನವಾದ (ಉಗ್ರವೈರಿ ಮದವನ್ಮಾತಂಗಕುಂಭ ಆರ್ದ್ರ ಮೌಕ್ತಿಕ ಲಗ್ನೋಜ್ಜ್ವಲ ಬಾಣನಂ ಪ್ರವಿಲಸತ್ ಗೀರ್ವಾಣ ದಾತವ್ಯ ಸಾಯಕ ಸಂಪೂರ್ಣಕಳಾಪ್ರವೀಣನಂ ಇಳಾಭಾರಕ್ಷಮ ಅಕ್ಷೋಣನಂ: ಪಂಪಭಾ, ೧. ೧೩೪)

ಪ್ರವೀರ

[ನಾ] ಶ್ರೇಷ್ಠ ವೀರ (ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರ್ ಎಕ್ಕೆಕ್ಕೆಯಿಂ ಒರ್ವರೊರ್ವರೆ ಬಿಗುರ್ತಿರದೆ ಆಂತು: ಪಂಪಭಾ, ೮. ೧೦೮)

ಪ್ರವ್ಯಕ್ತ

[ಗು] ವೇದ್ಯವಾದುದು, ತಿಳಿದಿರುವಂಥದು (ಸೂಕ್ತಂ ಭವ್ಯಜನಪ್ರವ್ಯಕ್ತಂ ಜೈನಾಗಮೋಕ್ತಂ ಇಂ ನಿನಗೆ ಮದೀಯೋಕ್ತಂ: ಆದಿಪು, ೫. ೬೧)

ಪ್ರವ್ರಜ್ಯ

[ನಾ] [ಜೈನ] [ಸಂಚಾರ ಮಾಡುವ] ಸನ್ಯಾಸದೀಕ್ಷೆ (ಹೇಯಂ ಸಾಮ್ರಾಜ್ಯಂ ಉಪಾದೇಯಂ ಪ್ರವ್ರಜ್ಯಮೆಂದು ಮಾಣದೆ ರಾಜ್ಯಶ್ರೀಯಂ ಕೊಟ್ಟಂ ಮುಕ್ತಿಶ್ರೀಯಂ ಬಗೆದರ್ಕಗತಿಗಾ ಭರತೇಶಂ: ಆದಿಪು, ೧೬. ೬೨)

ಪ್ರಶಮನ

[ಕ್ರಿ] ಉಪಶಮನಮಾಡು, ಶಾಂತಗೊಳಿಸು (ಯುದ್ಧಾಡಂಬರೋಪಸರ್ಗದೊಳಂ ಆಕುಳವ್ಯಾಕುಳರಾಗಿ ತತ್ ಪ್ರಶಮನಪ್ರತೀಕಾರಮಾಗೆ ನಾಕಲೋಕ ಸೌಂದರಿಯರೊಡನೆ ಅನಿಮೇಷರ್: ಆದಿಪು, ೧೪. ೧೧೫ ವ)

ಪ್ರಶಮಿತ

[ಗು] ಅಡಗಿಸಲ್ಪಟ್ಟ (ಮೇಘಕುಮಾರ ಸಸಿಂಸಿಕ್ತ ಪ್ರಶಮಿತ ರಜಃಪ್ರಸರಧರಣೀತಳನುಂ: ಆದಿಪು, ೧೦. ೬೭ ವ); ಶಮನಗೊಂಡ (ಎಂಬುದುಂ ಪ್ರಚಂಡಕೋಪಪಾವಕ ಪ್ರಶಮಿತಶೋಕರಸನುಂ: ಪಂಪಭಾ, ೧೧. ೧೧೭ ವ)

ಪ್ರಶಮಿಸು

[ಕ್ರಿ] ಉಪಶಮನಗೊಳ್ಳು (ವಿಶದಯಶ ಧರ್ಮಂ ಅಷ್ಟಾದಶಕೋಟ್ಯನುಕೋಟಿಸಾಗರೋಪಮಕಾಲಂ ಪ್ರಶಮಿಸಿ ನಿಂದುದು: ಆದಿಪು, ೯. ೬೩)

ಪ್ರಶಸ್ತ

[ಗು] ಶ್ರೇಷ್ಠವಾದ, ಶುಭಕರವಾದ (ಮಱುದಿವಸಂ ಪ್ರಶಸ್ತ ಮೌಹೂರ್ತಿಕನಿರೂಪಿತ ಶುಭಲಗ್ನೋದಯದಿಂದೆ: ಪಂಪಭಾ, ೧೪. ೧೭ ವ)

ಪ್ರಶಸ್ತಿಕ್ರಮ

[ನಾ] ಬಿರುದುಗಳನ್ನು ಹೇಳುವ ಕ್ರಮ (ಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚ ಮಹಾಶಬ್ದ ಮಹಾ ಸಾಮಂತರೆನಲ್ ಸಮನೆನಿಪರೆ ಗುಣದೊಳ್ ಅರಿಗನೊಳ್ ಸಾಮಂತರ್: ಪಂಪಭಾ, ೧. ೪೯)

ಪ್ರಶಾಂತಿ

[ನಾ] [ಜೈನ] ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು, ವೈರಾಗ್ಯ ವೃತ್ತಿ (ಗೃಹೀಶಿತ್ವ ಪ್ರಶಾಂತಿ .. .. ನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿ ನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯ ಕ್ರಿಯೆಗಳುಂ: ಆದಿಪು, ೧೫. ೧೫ ವ)

ಪ್ರಶ್ರಯ

[ನಾ] ನಮ್ರತೆ, ವಿನಯ (ಉಡುಗಿ ಪಿಂಛಚ್ಛತ್ರಮಂ ಪ್ರಶ್ರಯಾಕರವೇಷೋಚಿತರ್ ಅರ್ಘ್ಯಹಸ್ತರ್ ಇದಿರಂ ಬಂದರ್ ಭಯಭ್ರಾಂತಿಯಿಂ: ಆದಿಪು, ೧೨. ೬೮)

ಪ್ರಸಕ್ತ

[ಗು] ತೊಡಗಿದ್ದ (ಮಂಗಳಗೀತ ನೃತ್ಯೋನ್ಮಿಶ್ರಿತ ಅನೇಕಾನಕಲಯಾನುಗತ ಲೀಲಾಲಾಸ್ಯಪ್ರಸಕ್ತ ಕಾಮಿನೀಕಮನೀಯಮಾಗಿ: ಆದಿಪು, ೮. ೩೫ ವ)

ಪ್ರಸಂಗ

[ನಾ] ಆಚರಣೆ (ಸುರಾಸುರಸಭೆಗಂ ನಾಭಿರಾಜಾದಿ ಮನುಜಸಭೆಗಂ ಮೆಱೆಯಲೆಂದು ಶುದ್ಧಂ ವಿಚಿತ್ರಂ ಎಂಬ ಪೂರ್ವರಂಗಪ್ರಸಂಗದೊಳ್: ಆದಿಪು, ೭. ೧೧೫ ವ); [ನಾ] ಚಟುವಟಿಕೆ (ಆದಿದೇವನ ಪರಿನಿಷ್ಕ್ರಮಣಕಲ್ಯಾಣಂ ಅತ್ಯಾಸನ್ನಮೆಂಬುದಂ ನಿಜಾವಧಿಬೋಧದಿಂದಮಱಿದು ಸಂಗೀತಪ್ರಸಂಗದಿಂದಂ ಓಲಗಿಸಲೆಂದು: ಆದಿಪು, ೯. ೮ ವ), ನೋಡಿ, ‘ಪೂರ್ವರಂಗ’

ಪ್ರಸರ

[ನಾ] ಹರಹು (ರಸಭಾವ ಆಲಸನಯನ ಪ್ರಸರಂಗಳ ಪೊಳೆವ ಪೊಳೆಪುಗಳ್ ಬಳ್ವಳ ನೀಳ್ದೆಸೆದುವು ರಂಗದೊಳ್: ಆದಿಪು, ೭. ೧೧೮); [ನಾ] ರಾಶಿ (ಬೆಸನಾವುದು ಎಮಗೆ ಬೆಸನಂ ಬೆಸಸು ಏವಾೞ್ತೆಯೆಂದು ಮುಂದಿಟ್ಟರ್ ಸ್ರಗ್ವಸನವಿಲೇಪನ ಭೂಷಾಪ್ರಸರಂಗಳಂ: ಆದಿಪು, ೯. ೧೨೫); [ನಾ] ಗುಂಪು (ಮದೇಭಪ್ರಸರಸಹಸ್ರಂ ಕೆಡೆದುವು ವಿಸಸನದೊಳ್ ದ್ರೋಣನಿದಿರ್ಗೆ ಮಾರ್ವಲಂ ಒಳವೇ: ಪಂಪಭಾ, ೧೨. ೨೬)

ಪ್ರಸರ್ಪತ್

[ಗು] ಹರಡಿರುವ (ಅಧಃಸ್ಸ್ಥಳ ಪ್ರಸರ್ಪತ್ಸಿಂಧುವಾಹ ಪ್ರವಾಹ ವಿರಾಜಿತಮುಂ: ಆದಿಪು, ೧೩. ೪೬ ವ)

ಪ್ರಸವ

[ನಾ] ಹೆರಿಗೆ (ಅಮರಮನೋರಮೆಯರುಂ ಮನಮಱಿದು ನಿಜಮನೋರಥಂಗಳಂ ಸಲಿಸೆಯುಂ ಅನುಕ್ರಮದೊಳ್ ಪರಿಪೂರ್ಣಪ್ರಸವಸಮಯದೊಳ್: ಆದಿಪು, ೭. ೩೫ ವ); [ನಾ] ಹೂವು (ಕೞ್ತಲೆಯನಲೆವ ಸೊಡರ್ಗುಡಿಗಳನೀ ಅಳ್ಳಿಱಿದಲೆವುವು ಬನದೊಳಗುಳ್ಳಲರ್ದು ಉಜ್ವಳಿಪ ಚಂಪಕಪ್ರಸವಂಗಳ್: ಆದಿಪು, ೧೧. ೬೭)

Search Dictionaries

Loading Results

Follow Us :   
  Download Bharatavani App
  Bharatavani Windows App