Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪ್ರಸವಂ
[ನಾ] ಹುಟ್ಟಿದ್ದು (ಭಸಿತಂ ಕರ್ಪೂರಕಾಳಾಗರುಬಹುಳರಜಂ ವಲ್ಕಲಂ ಕಲ್ಪವೃಕ್ಷಪ್ರಸವಂ ಯಜ್ಞೋಪವೀತಂ ಕನಕಕಮಳನಾಳೋತ್ಕರಂ: ಪಂಪಭಾ, ೭. ೭೮)
ಪ್ರಸವಾಗಾರ
[ನಾ] ಹೆರಿಗೆ ಕೋಣೆ (ಪ್ರಸವಾಗಾರದಂತೆ ನಿಷಿದ್ಧಾನ್ಯಪ್ರವೇಶಮುಂ ರಾಜಭವನದಂತೆ ಕೃತರಕ್ಷಾ ವಿಧಿಯುಂ: ಆದಿಪು, ೧೩. ೪೬ ವ)
ಪ್ರಸಾಧನ
[ನಾ] ಅಲಂಕಾರ (ವಿದ್ಯಾಧರಪ್ರಸಾಧನಂ ಎನಗಿಂದಿನೊಳಿನಿತೆಂಬಂತೆ ನೆಱೆಯೆ ಕೆಯ್ಗೆಯ್ಯೆ: ಆದಿಪು, ೨. ೫೦ ವ)
ಪ್ರಸಾಧನಗ್ರಹಣ
[ನಾ] ಒಡವೆ ಧರಿಸುವಿಕೆ (ಮತ್ತೊರ್ಬಳ್ ಪ್ರಸಾಧನಗ್ರಹಣಪ್ರಸ್ತಾವದೊಳ್: ಆದಿಪು, ೧೧. ೨೧ ವ)
ಪ್ರಸಾಧನಶಾಲೆ
[ನಾ] ನೇಪಥ್ಯಗೃಹ, ಅಲಂಕಾರಗೃಹ (ಪಂಚರತ್ನ ಪ್ರಭಾಪ್ರಸಾದಿತ ಪ್ರಸಾಧನಶಾಲೆಯೊಳಗೆ ಸ್ವಯಂಪ್ರಭೆಯಂ ಆನೆ ಪಸದನಂಗೊಳಿಸುತ್ತುಮಿರ್ದು: ಆದಿಪು, ೪. ೧೧ ವ)
ಪ್ರಸಾಧಿತ
[ಗು] ಅಲಂಕಾರಗೊಂಡ (ಅಂತು ನಿಷ್ಪನ್ನಮಜ್ಜನಂ ವಿನಿಹಿತನೀರಾಜನನುಮಾಗಿ ಸುರರಾಜನ ಸಮರ್ಪಿತ ಸಂತಾನಕುಸುಮದಾಮಾಂಬರ ಭೂಷಣಪ್ರಸಾಧಿತಂ: ಆದಿಪು, ೮. ೭೧ ವ); [ಗು] ಚೆನ್ನಾಗಿ ಸಾಧಿಸಲ್ಪಟ್ಟ (ಪರಸ್ಪರವಿರೋಧ ಅಧಿಕ್ಷೇಪ ಹರ್ಷಿತ ಮಾರ್ಗ ಪ್ರಹಸ್ತ ಪ್ರಸಾಧಿತ ಘೋರಸಂಗ್ರಾಮರುಂ: ಪಂಪಭಾ, ೧೩. ೯೨ ವ)
ಪ್ರಸಾರ
[ನಾ] ಹರಡುವುಕೆ (ಸಾಮಂತಸೀಮಂತಿನೀ ಜನಸಮ್ಮರ್ದದಿಂ ಉತ್ಸವಧ್ವಜಪಟಪ್ರಸಾರದಿಂ: ಆದಿಪು, ೮. ೩೬)
ಪ್ರಸೂತಿಕಾಲ
[ನಾ] ಹೆರಿಗೆಯ ಸಮಯ (ಅಂತು ಗರ್ಭನಿರ್ಭರ ಪ್ರದೇಶದೊಳ್ ಅರಾತಿಗಳ್ಗೆ ಅಂತಕಾಲಂ ದೊರೆಕೊಳ್ವಂತೆ ಪ್ರಸೂತಿಕಾಲಂ ದೊರೆಕೊಳೆ: ಪಂಪಭಾ, ೧. ೧೨೬ ವ)
ಪ್ರಸೂತಿಗೃಹ
[ನಾ] ಹೆರಿಗೆಯ ಮನೆ (ಮರುದೇವೀ ವಿಳಸತ್ಪ್ರಸೂತಿಗೃಹಮಂ ರತ್ನಪ್ರಭಾಭಾರಸುರಮಂ ಪೊಕ್ಕು: ಆದಿಪು, ೭. ೪೪)
ಪ್ರಸೂನ
[ನಾ] ಹೂವು, ಮೊಗ್ಗು (ದೆಸೆಗಳ ಮೇರೆಯಂ ನಿಱಿಸಿ ಪೋಪುದುಂ ಆಭರಣಪ್ರಸೂನಸದ್ವಸನವಿಲೇಪನಾದಿಗಳೊಳಂ ಕೆಲವಂ ಗುಱಿಮಾಡಿಕೊಂಡು: ಆದಿಪು, ೬. ೮)
ಪ್ರಸ್ತಾವ
[ನಾ] ಸಂದರ್ಭ (ಎಂಬುದುಂ ಆ ಪ್ರಸ್ತಾವದೊಳ್ ಶ್ರೀಮತಿ .. .. ಮನಂಗೊಂಡು ಕೇಳಲ್ ತಗುಳ್ದಳ್: ಆದಿಪು, ೩. ೮೫ ವ); [ನಾ] ಸಮಯ (ಪರಶುರಾಮಂ ಮಱೆದು ಒರಗಿದಾ ಪ್ರಸ್ತಾವದೊಳ್ ಆ ಮುನಿಗೆ ಮುನಿಸಂ ಮಾಡಲೆಂದು ಇಂದ್ರಂ ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್: ಪಂಪಭಾ, ೧. ೧೦೪ ವ)
ಪ್ರಸ್ತಾವನಾ
[ನಾ] ಆರಂಭ (ಇಂ ಬೆಸಸಿಂ ಭಾರತಿಕಂಗೆ ನಾಟ್ಯಘಟನ ಪ್ರಸ್ತಾವನಾಟೋಪಮಂ: ಆದಿಪು, ೯. ೧೨); [ನಾ] ಸಂದರ್ಭ, ನಾಟಕದ ಒಂದು ಭಾಗ (ನಾಂದೀ ಪ್ರರೋಚನಾ ಪ್ರಸ್ತಾವನಾ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ: ಪಂಪಭಾ, ೨. ೩೪ ವ)
ಪ್ರಸ್ಥಾನ
[ನಾ] ಪ್ರಯಾಣ (ಕಂಚ ಆಕಸ್ಮಿಕ ಪಾಂಸುಪಲ್ಲವ ಜಳಸ್ಯಂದೀ ಸದಾಸಿಂಧುರ್ ಅಪ್ರಾಗೇಯಂ ಪ್ರಿಯಗಳ್ಳಭೂಪತಿ ಚಮೂಪ್ರಸ್ಥಾನಮಾಚಕ್ಷತೇ: ಪಂಪಭಾ, ೯. ೯೭)
ಪ್ರಸ್ಫುರತ್
[ಗು] ಹೊಳೆಯುವ (ದೀಪ್ತಕಂದರ್ಪದರ್ಪ ಕ್ಷುಭಿತಗಳನಿನಾದಂ ಪ್ರಸ್ಫುರತ್ ಘರ್ಮವಾರಿ ಪ್ರಭವಂ: ಪಂಪಭಾ, ೫. ೨೮)
ಪ್ರಹನ್ಯಮಾನ
[ಗು] ನುಡಿಸುವ, ಬಾಜಿಸುವ (ಯೌವನಮದಮುದಿತ ಮಾರ್ದಳಿಕ ವಾಂಶಿಕ ಪ್ರಹನ್ಯಮಾನ ವಾದ್ಯ ಮಾನ ಮೃದಂಗ ವಂಶನಿನದಲಯಚ್ಛಂದ ಸುಂದರನಟತ್ಸುಂದರೀ ಸಂದೋಹಮುಂ: ಆದಿಪು, ೭. ೩೭. ವ)
ಪ್ರಹರಣ
[ನಾ] ಏಟು, ಹೊಡೆತ (ಅರವಿಂದಬಾಧವತನೂಜನ ಮಹಾಪ್ರಹರಣಹತಿಯೊಳ್ ಯಮನಂದನನ ನೋವುಮಂ ಆತ್ಮೀಯಬಲದ ನಾಯಕರ ಸಾವುಮಂ ಅಱಿದು: ಪಂಪಭಾ, ೧೨. ೧೨೦ ವ)
ಪ್ರಹರಣಕ್ಷಮಾ
[ನಾ] ಹೊಡೆದಾಟದ ಪಟುತ್ವ (ಕ್ಷತ್ರಿಯಜಾತಿಗೆ ಸತ್ಯ ತ್ಯಾಗ ಪ್ರಜಾಪರಿಪಾಲನ ಶರಣಾಗತರಕ್ಷಣ ಪ್ರಹರಣಕ್ಷಮಾ ಆದಿಗುಣಾಚರಣಮುಮಂ: ಆದಿಪು, ೮. ೭೩ ವ)
ಪ್ರಹಸ್ತ
[ನಾ] ಚಾಚಿದ ಹಸ್ತ (ಪರಸ್ಪರ ವಿರೋಧ ವಿಕ್ಷೇಪ ಹರ್ಷಿತ ಮಾರ್ಗಪ್ರಹಸ್ತಪ್ರಾಸಾಧಿತಘೋರಸಂಗ್ರಾಮರುಂ: ಪಂಪಭಾ, ೧೩. ೯೨ ವ)
ಪ್ರಹಿತ
[ಗು] ಕಳುಹಿಸಲ್ಪಟ್ಟ (ಅಮರಾಧಿಪಪ್ರಹಿತ ಪ್ರತಿದಿನ ಪ್ರವರ್ಧಮಾನ ಸುರತರುಪ್ರಸೂನ ಗ್ರಥಿತ ಸುರಭಿದಾಮ: ಆದಿಪು, ೮. ೩ ವ)
ಪ್ರಳಯ