भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪಡಿಗ

[ನಾ] ಪೀಕದಾನಿ (ಎರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪೞಿಯ ಸುಖಾಸನಂಗಳೊಳಂ: ಪಂಪಭಾ, ೪. ೪೩ ವ)

ಪಡಿಗರ್ಚ್ಚು

[ನಾ] ಮುಸುರೆ, ಕಲಗಚ್ಚು ? (ಇದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗರ್ಚ್ಚಿಕ್ಕಿದಂತೆ ಇಕ್ಕಿ ನಿಂದ ನರನಂದನನಂ ಕಂಡು: ಪಂಪಭಾ, ೧೧. ೯೪ ವ)

ಪಡಿಚಂದ

[ನಾ] [ಪ್ರತಿಚ್ಛಂದ] ಪ್ರತಿಕೃತಿ, ಪ್ರತಿಬಿಂಬ (ಅಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕೆಯ್ದುವನಿಕ್ಕಿ ಸತ್ತ ಸಾವಿನ ಪಡಿಚಂದಮಾಗಿಯುಂ ಇದೇಂ ನಿಮಗೞ್ತಿಯೊ ಗಂಡವಾತುಗಳ್: ಪಂಪಭಾ, ೧೨. ೪೧); [ನಾ] ಮಾದರಿ (ನೀನುಂ ಆಜಿಗೆ ಸೆಡೆದಿರ್ದೆಯಪ್ಪೊಡೆ ಇರು ಚಕ್ರನಿಘಾತದಿಂ ಇಕ್ಕಿ ಬೀರಂ ಉರ್ವಿಗೆ ಪಡಿಚಂದಮಾಗೆ ತಱಿದೊಟ್ಟಿ ಜಯಾಂಗನೆಗೆ ಆಣ್ಮನಾದಪೆಂ: ಪಂಪಭಾ, ೧೨. ೨೦೮)

ಪಂಡಿತ

[ನಾ] ವಿದ್ವಾಂಸ (ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ ಸಬ್ಬವದವರೊಡನೆ ಅಂತು ಒಸೆದ ಅನ್ನವಾಸದೊಳ್ ಇರ್ದನಾಗಳ್ ಹರಿಗಂ: ಪಂಪಭಾ, ೩. ೮೦)

ಪಂಡಿತಿಕ್ಕೆ

[ನಾ] ಪಾಂಡಿತ್ಯ (ಮುಗುಳ್ನಗೆ ನಗುತ್ತುಂ ಬರ್ಪಂ ಒಂದೆಡೆಯೊಳ್ ಒಂದು ಕಂದದ ಮೊದಲುಮಂ ವೃತ್ತದ ತುದಿಯುಮಂ ಒಂದುಮಾಡಿ ಪದಮಿಕ್ಕಿ ಓದಿ ಪಂಡಿತಿಕ್ಕೆಗೆ ಮುಯ್ವಾಂತುಂ: ಪಂಪಭಾ, ೪. ೯೪ ವ)

ಪಡಿದೆಱೆ

[ಕ್ರಿ] [ಪಡಿ+ತೆಱೆ] ಬಾಗಿಲು ತೆಗಿ (ಪಡಿದೆಱೆದಂದದಿಂದಂ ತೆಱೆದತ್ತು ಪೊದಳ್ದ ಸಂಕೆಯಿಂ ನಡುಕಂ: ಪಂಪಭಾ, ೫. ೧೫)

ಪಡಿಯಱ

[ನಾ] [ಪ್ರತೀಹಾರ] ಕಾವಲುಗಾರಿಕೆ (ಬನದ ಪಡಿಯಱನನಂಗಂ ನಿನಗಿತ್ತೊಡೆ ಪುಗಲಿಂ ಎಂಬುದೇಂ ದೋಷಮೆ: ಆದಿಪು, ೧೧. ೧೩೫);

ಪಡಿವಡೆ

[ನಾ] [ಪಡಿ+ಪಡೆ] ಪ್ರತಿ ಸೈನ್ಯ, ಶತ್ರು ಸೈನ್ಯ (ಮದಕರಿಯಂ ಹರಿಯಂ ಪಡಿವಡೆಗುರ್ಚಿದ ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ: ಪಂಪಭಾ, ೧. ೧೯)

ಪಡಿಸಣ

[ನಾ] [ಪ್ರತೀಕ್ಷಣ} ಮೇಲ್ವಿಚಾರಣೆ (ಮನೋಹರಿಯಂ ಪಡಿಸಣವಂ ನೋಡಲುಂ ಮಾಳತಿಕೆಯಂ ಬಡ್ಡಿಸಲುಂ: ಆದಿಪು, ೭.. ೨೧ ವ)

ಪಡು

[ಕ್ರಿ] ಬೀಳು (ಭಾನುಮತಿ ಬಾಯೞಿದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲ ಮೇಲೆ ಕವಿದು ಪಟ್ಟು: ಪಂಪಭಾ, ೭. ೩೩ ವ)

ಪಡುವಣದ

[ಗು] ಪಶ್ಚಿಮ ದಿಕ್ಕಿನಲ್ಲಿರುವಂಥದು (ಅದಱ ಬೆಂಕೆ ಪೋಪಿನಂ ಎಱಗಿಸು ನೀಂ ಮ್ಲೇಚ್ಛಖಂಡಮಂ ಪಡುವಣದಂ: ಆದಿಪು, ೧೩. ೩೩)

ಪಡುವಣ್

[ನಾ] ಪಶ್ಚಿಮ ದಿಕ್ಕು (ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು ಮೂಡಣ ಬಡಗಣ ನೆಲನಂ ದುರ್ಯೋಧನನಾಳ್ವುದು: ಪಂಪಭಾ, ೪. ೮ ವ)

ಪಡುವಿಡು

[ಕ್ರಿ] ವಾಸಿಯಾಗು, ಜ್ವರವಿಳಿ (ಅಂತು ನಿಜಮದಜ್ವರಂ ಮಂತ್ರಿವರ್ಗವೈದ್ಯವಚನೌಷಧಿಗಳಿಂ ಪಡುವಿಡೆ: ಆದಿಪು, ೧೨. ೧೦೯ ವ) [ಎಲ್. ಬಸವರಾಜು ಅವರ ಆವೃತ್ತಿಯ ಪಾಠ]

ಪಡುವು

[ನಾ] ಪಶ್ಚಿಮದಿಕ್ಕು (ನುಡಿವಳಿಗೆ ನರನ ರಥಮಂ ಪಡುವು ಎಣ್ಗಾವುದುವರಂ ಸಿಡಿಲ್ವಿನಂ ಎಚ್ಚು ಅಚ್ಚುಡಿಯೆ ಭುಜಬಲದ ಹರಿಯ ಉರದೆಡೆಯಂ ಬಿರಿಯೆಚ್ಚು ಮೆಱೆದಂ ಅಳವಂ ಭೀಷ್ಮಂ: ಪಂಪಭಾ, ೧೧. ೨೦)

ಪಡೆ

[ಕ್ರಿ] [ಹುಟ್ಟುವ ಮುಂಚೆ] ವರ ಪಡೆ (ತೋಳ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮಂ ಅಂದು ಒಡಗಳೆದರ್ ಓಪರೋಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸಯ್ಪೊಳವೇ: ಆದಿಪು, ೫. ೨೪); [ಕ್ರಿ] ಸಂಪಾದಿಸು (ಪಡೆಯಲ್ಕಾಗದ ನಿಧಿಯಂ ಬಡವಂ ಪಡೆದಂತೆ: ಆದಿಪು, ೭. ೪೬); [ಕ್ರಿ] ಸೃಷ್ಟಿಸು, ವಿಭಾಗ ಮಾಡು (ತನ್ನ ಪಡೆದ ಸಕಳಕ್ಷತ್ರಿಯವಣಿಕ್ಶೂದ್ರರೆಂಬ ಮೂಱುವರ್ಣಂಗಳೊಳಗೆ: ಆದಿಪು, ೮. ೬೪ ವ); [ಕ್ರಿ] ಉಂಟುಮಾಡು (ವಾಸವಂಗಾಸನಕಂಪಮಂ ಪಡೆದು ತೀರ್ಥಕರತ್ವಮನಿತ್ತು ಅನಶ್ವರಾವಾಸಮನೆಯ್ದಿಸಲ್ಕೆ ಇದುವೆ ಷೋಡಶಭಾವನೆಯಿಂದೆ ಷೋಡಶ್ವಾಸಮನೆಯ್ದೆ ಭಾವಿಸುಗೆ: ಆದಿಪು, ೧೬. ೮೧); [ನಾ] ಸೈನ್ಯ (ಶ್ವೇತ ಭೀಷ್ಮರ ಪೇೞ್ದ ಓಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೆ ಒಡ್ಡಿ ನಿಂದಾಗಳ್: ಪಂಪಭಾ, ೧೦. ೫೧ ವ); [ನಾ] ಗುಂಪು, ಸಮೂಹ (ತಱಿದಂ ದೇವರ ಪಡೆ ರಾಗಿಸೆ ಮನದ ಏವದಿಂ ಅವಯವದೆ ಶಕುನಿಯಂ ಸಹದೇವಂ: ಪಂಪಭಾ, ೧೩. ೪೧)

ಪಡೆದಂ

[ನಾ] ಹಡೆದವನು, ಬ್ರಹ್ಮ (ಪಡೆದಂ ಬ್ರಹ್ಮಂ ಜಗಮಂ ತಾನಾರ್ತನಿಲ್ಲ ಪೆಂಪಂ ನಿಮ್ಮಂ ಪಡೆದಲ್ತೆ ಪಡೆದಂ ಎನಿಸಿದ ಕಡುಪೆಂಪಿನ ಪೊಱೆಗೆ ನೀವು ಮೊದಲಿಗರಾದಿರ್: ಪಂಪಭಾ, ೬. ೧೨)

ಪಡೆನೋಡಲ್ ಬಂದವರಂ ಗುಡಿವೊಱಿಸಿದರ್

ಸೈನ್ಯ ನೋಡಲು ಬಂದವರಿಗೆ ಬಾವುಟ ಹೊರುವಂತೆ ಮಾಡಿದರು ಎಂಬ ಗಾದೆಮಾತು (ಪಡೆನೋಡಲ್ ಬಂದವರಂ ಗುಡಿವೊಱಿಸಿದರೆಂಬುದಾಯ್ತು ನಿನ್ನನ್ನೆಡೆಯೊಳ್: ಪಂಪಭಾ, ೩. ೧೫)

ಪಡೆಪು

[ನಾ] ಇಷ್ಟಾರ್ಥ, ಪಡೆಯಬೇಕೆಂದಿರುವುದು (ಕಡುತಪದಿಂದೆ ನಿನ್ನ ಪಡೆಪಾವುದೊ ಗಾವಿಲ ಸಗ್ಗಮಲ್ತೆ: ಪಂಪಭಾ, ೭. ೯೩ ಪರಿಷತ್); ಲಾಭ (ಕನಕದ ಪೂಜೆಯ ಪಡೆಪಾದಪುದಿಲ್ಲಿ ಮುನಿಯ ದಾನದಿನಧಿಪಾ: ಆದಿಪು, ೫. ೬)

ಪಡೆಪುಗಿಡು

[ಕ್ರಿ] ಧೈರ್ಯಗೆಡು, ಲಾಭ ಹೋಗು (ಬಡಿದ ಕಾರಣಂ ಕೊಂಡುಯ್ವರ್ ಪಡೆಪುಗಿಡುವಿನೆಗಂ ಎಂದು: ಆದಿಪು, ೫. ೨೦)

ಪಡೆಮಾತು

[ನಾ] ಸುದ್ದಿ, ವಿಷಯ (ಉತ್ತರಾಪಥಧ ಹಸ್ತಿನಪುರದಿಂ ಬಂದೆಂ ಎಂದೊಡೆ ಅಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನರ್ ಇರ್ಪಂದಮಾವುದು ಎಂದು ಬೆಸಗೊಳ್: ಪಂಪಭಾ, ೩. ೩೧ ವ); [ನಾ] ಕೀರ್ತಿ, ಕಂಡು ಕೇಳಿದ ಮಾತು (ಎಂದು ಎನಿತಾನುಂ ತೆಱದೊಳ್ ಅಳಿಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳಂ ನುಡಿದುಂ ಕಾಲ್ವಿಡಿದುಂ ಅಚಳಿತಧೈರ್ಯನ ಮನಮಂ ಚಲಿಯಿಸಲಾಱದೆ: ಪಂಪಭಾ, ೭. ೯೪ ವ); [ನಾ] ವಿಚಾರ, ಆಲೋಚನೆ (ಪೆಱತೇಂ ಪಡೆಮಾತೊ ನಿನ್ನದೀ ಮೇದಿನಿ ಪಟ್ಟಮುಂ ನಿನತೆ ನೀನಿರೆ ಪೆಱರ್ ನರೇಂದ್ರರೇ: ಪಂಪಭಾ, ೯. ೬೪); [ನಾ] ಬೇರೆ ಮಾತು (ಪಡೆಮಾತೇಂ ಕೊಂತಿ ಹರಿಯ ಮತದಿಂ ಕಾಯಲ್ಕೊಡರಿಸಿ ಬಂದಳ್ ಸುತರಂ: ಪಂಪಭಾ, ೯. ೭೮); [ನಾ] ಐತಿಹ್ಯ, ಕತೆ, ಮಹಿಮೆ (ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ: ಪಂಪಭಾ, ೧೨. ೨೧೭)

Search Dictionaries

Loading Results

Follow Us :   
  Download Bharatavani App
  Bharatavani Windows App