भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪ್ರಳಯದುಳ್ಕ

ವಿನಾಶಕಾರಕವಾದ ಉಲ್ಕೆ (ಆಗಳ್ ಪ್ರಳಯದುಳ್ಕಮುಳ್ಕುವಂತೆ ತನ್ನೆಚ್ಚಂಬು ಮುನಿಕುಮಾರನ ಕಣ್ಣೊಳಮೆರ್ದೆಯೊಳಂ ಉಳ್ಕೆ: ಪಂಪಭಾ, ೧. ೧೧೧ ವ)

ಪ್ರಳಯಾನಳ

[ನಾ] ಪ್ರಳಯಕಾಲದ ಬೆಂಕಿ (ಎಂಬತ್ತುನಾಲ್ಕು ಲಕ್ಕ ಬಂಡಿಯೊಳ್ ತಡತಂಡದೆ ತೀವಿದ ಅಕಾಂಡಪ್ರಳಯಾನಳ ವಿಸ್ಫುಲಿಂಗೋಪಮಾನಂಗಳಪ್ಪ ನಿಶಿತಕಾಂಡಂಗಳಿಂದೊಡ್ಡಿದ ಚತುರ್ಬಲಂಗಳ ಮೆಯ್ಯೊಳ್: ಪಂಪಭಾ, ೧೧. ೧೯ ವ)

ಪ್ರಾಕಟಂ ಮಾಡು

[ಕ್ರಿ] ಪ್ರಕಟವಾಗಿ ತೋರಿಸು (ತನ್ನ ದೋರ್ಗರ್ವದ ಅಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತು ಎತ್ತಿದೊಡೆ: ಪಂಪಭಾ, ೭. ೭೪)

ಪ್ರಾಗಲ್ಭ್ಯ

[ನಾ] ಪ್ರೌಢಿಮೆ (ಸುಹೃದ್ಬಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ: ಪಂಪಭಾ, ೩. ೩೩); [ನಾ] ಪ್ರೌಢಿಮೆಯುಳ್ಳವನು (ಕೃತಶಾಸ್ತ್ರರ್ ಧೃತಶಸ್ತ್ರರ್ ಅಪ್ರತಿಹತಪ್ರಾಗಲ್ಭ್ಯರ್ ಈಗಳ್ ಪೃಥಾಸುತರ್ ಉದ್ಯೋಗಮಂ ಎತ್ತಿಕೊಳ್ವ ದೆವಸಂ ಸಾರ್ಚಿತ್ತು: ಪಂಪಭಾ, ೮. ೮೭)

ಪ್ರಾಗ್ಜನ್ಮ

[ನಾ] [ಪ್ರಾಕ್+ಜನ್ಮ] ಹಿಂದಿನ ಹುಟ್ಟು (ಈ ಶಾರ್ದೂಲಂ ಪ್ರಾಗ್ಜನ್ಮದೊಳ್ ಈ ವಿಷಯದ ಹಸ್ತಿನಾಪುರದ ಪರದಂ ಧನದತ್ತಂಗಂ ಆತನ ಪರದಿತಿ ಧನದತ್ತೆಗಂ ಉಗ್ರಸೇನನೆಂಬೊಂ ತನೂಜಂ: ಆದಿಪು, ೫. ೧೪ ವ)

ಪ್ರಾಗ್ಭಾರಭೂತಳ

[ನಾ] [ಜೈನ] ಸಿದ್ಧಕ್ಷೇತ್ರ (ಭರತಂ ದರ್ಶನದೊಳ್ ಮಂದರಮಾ ಪ್ರಾಗ್ಭಾರಭೂತಳಂಬರೆಗಂ ನೀಳ್ದಿರೆ ಕಂಡು ವಿಸ್ಮಿತಾಂತಃಕರಣಂ: ಆದಿಪು, ೧೬. ೪೧)

ಪ್ರಾಗ್ವಿದೇಹ

[ನಾ] ಪೂರ್ವ ವಿದೇಹ (ದೇವನಲ್ಲಿಂ ತಳರ್ದು ಜಂಬೂದ್ವೀಪದ ಪ್ರಾಗ್ವಿದೇಹದ ಸೀತಾನದಿಯ ಬಡಗಣ ತಡಿಯ ಪುಷ್ಕಳಾವತೀವಿಷಯದ ಪ್ರತಿಬದ್ಧ ಪುಂಡರೀಕಿಣಿಯೊಳ್: ಆದಿಪು, ೬. ೨೦ ವ)

ಪ್ರಾಙ್ಮುಖ

[ನಾ] [ಪ್ರಾಕ್+ಮುಖ] ಪೂರ್ವಾಭಿಮುಖ (ಮುನ್ನಮೆ ನಿಱಿಸಿದ ಮಣಿಖಚಿತೋನ್ನತ ಹರಿಪೀಠದೊಳ್ ಜಗತ್ಪತಿಯಂ ಮಾನೋನ್ನತಂ ಪಾಙ್ಮುಖದಿಂದಂ ನತಸುರಮೌಳಿ ಲಾಲಿತಾಂಘ್ರಿದ್ವಯನಂ: ಆದಿಪು, ೮. ೬೮)

ಪ್ರಾಚ್ಯಶೈಲ

[ನಾ] ಪೂರ್ವದ ಬೆಟ್ಟ (ಮನುವಂಶ ಪ್ರಾಚ್ಯಶೈಲದ್ಯುಮಣಿ .. .. ಜನಿಯಿಸಿದಂ ಚಕ್ರವರ್ತಿಪ್ರಧಾನಂ: ಆದಿಪು, ೮. ೩೯)

ಪ್ರಾಚ್ಯಾಚಲ

[ನಾ] ಪೂರ್ವದ ಬೆಟ್ಟ (ಆಸ್ಥಾನಮಂಡಪ ಮಂಡನೀಭೂತ ಮಣಿಮಯಾಸನ ಪ್ರಾಚ್ಯಾಚಳ ಶಿಖಂಡರತ್ನಮಾಗಿರ್ದ ಕುಮಾರನಂ: ಆದಿಪು, ೮. ೮ ವ)

ಪ್ರಾಚ್ಯಾರ್ಣವ

[ನಾ] ಪೂರ್ವಸಮುದ್ರ (ಮತ್ತಂ ಪ್ರಾಚ್ಯಾರ್ಣವತಟ ನಿಕಟವರ್ತಿಗಳಪ್ಪ ಪ್ರಚಂಡ ಮಂಡಳಿಕರ್ ಭರತೇಶ್ವರ ಚಕ್ರವರ್ತಿಯ ಬರವಂ ಕೇಳ್ದು: ಆದಿಪು, ೧೨. ೬೭ ವ)

ಪ್ರಾಜ್ಯ

[ಗು] ಶ್ರೇಷ್ಠ (ಮುಕ್ತಿಸಾಮ್ರಾಜ್ಯದೊಳ್ ಅತಿಪ್ರಾಜ್ಯ ಸಂಜನಿತನಿಸ್ಪೃಹನಂ ಅನವರತ ಕಲ್ಯಾಣಪರಿಮಿತದೊಳ್ .. .. ನಿಱಿಸುವುದುಂ: ಆದಿಪು, ೮. ೮ ವ); [ಗು] ಉನ್ನತವಾದ (ವಿದಿತಂ ಮೂರ್ಧಾಭಿಷಿಕ್ತರ್ ಪಲಬರರಸುಗಳ್ ಪ್ರಾಜ್ಯಸಾಮ್ರಾಜ್ಯ ಲಕ್ಷ್ಮೀಪದಮಂ ಕೈಕೊಂಡು: ಆದಿಪು, ೯. ೫೮); [ಗು] ಜನಭರಿತವಾದ, ವಿಶಾಲವಾದ (ಬೇಡಮ್ಮ ನೀನುಂ ತಪೋವನಮಂ ಸಾರ್ವುದುಂ ಆನದಾರ್ಗೆ ಮೆಱೆವೆಂ ಮತ್ ಪ್ರಾಜ್ಯಸಾಮ್ರಾಜ್ಯಮಂ: ಆದಿಪು, ೧೪. ೧೩೨)

ಪ್ರಾಣತ

[ನಾ] [ಜೈನ] ಹದಿನಾರು ಸ್ವರ್ಗಗಳಲ್ಲಿ ಹದಿನಾಲ್ಕನೆಯದು (ಅತಿಬಳಕೃಷ್ಣಂ ಗತಜೀವಿತನಾಗೆ ಮಹಾಬಳಂ ಮಹಾವ್ರತದಿಂದನ್ವಿತಮತಿ ಸಮಾಧಿಗುಪ್ತವ್ರತಿಯುಪದೇಶದೊಳೆ ಪುಟ್ಟಿದಂ ಪ್ರಾಣತದೊಳ್: ಆದಿಪು, ೩. ೭೭)

ಪ್ರಾಣದಿಂದೊಳರ್

ಪ್ರಾಣದಿಂದ [ಕೂಡಿ] ಇದ್ದಾರೆ, ಬದುಕಿದ್ದಾರೆ (ಮುಳಿಸಂ ಮಾಡಿಯುಂ ಏವಮಂ ಪಡೆದುಂ ಇನ್ನೀ ಪಂದೆಗಳ್ ಪ್ರಾಣದಿಂದೊಳರ್: ಪಂಪಭಾ, ೭. ೧೪)

ಪ್ರಾಣಪರಿತ್ಯಾಗಂಗೆಯ್

[ಕ್ರಿ] ಜೀವವನ್ನು ಬಿಡುವುದು, ಸಾಯುವುದು (ಎನಗೆ ಅಂತ್ಯಕಾಲಮೆಂದು ದುರ್ಯೋಧನಂ ಪ್ರಾಣಪರಿತ್ಯಾಗಂಗೆಯ್ದಂ: ಪಂಪಭಾ, ೧೩. ೧೦೭ ವ)

ಪ್ರಾಣವಲ್ಲಭರ್

[ನಾ] ಪ್ರಾಣಪಿಯರು (ಒಡನಳುರೆ ಕಿರ್ಚು ತೋಳ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮಂ ಅಂದು ಒಡಗಳೆದರ್ ಓಪರೋಪರೊಳ್ ಒಡಸಾಯಲ್ ಪಡೆದರ್ ಇನ್ನವುಂ ಸಯ್ಪೊಳವೇ: ಪಂಪಭಾ, ೫. ೯೩)

ಪ್ರಾಣಾಚಾರ್ಯ

[ನಾ] ಪ್ರಾಣರಕ್ಷಕ ವೈದ್ಯ (ರಾಜಹಂಸವಿಳಾಸದಿಂ ಬಿಜಯಂಗೆಯ್ದು ಜಾಂಗಳಿ ವಿದ್ಯಾಪ್ರವೀಣ ಪ್ರಾಣಾಚಾರ್ಯಪರಿವೃತಂ: ಆದಿಪು, ೧೧. ೨೬ ವ) [ಎಲ್. ಬಸವರಾಜು ಆವೃತ್ತಿ]

ಪ್ರಾಣೇಶೆ

[ನಾ] ಪ್ರಾಣವಲ್ಲಭಳು (ಎಲ್ಲಿ ಪುಟ್ಟಿದಳೊ ಮತ್ ಪ್ರಾಣೇಶೆ ಎಂದು ಇಲ್ಲದ ಉಬ್ಬೆಗಮಂ ಭಾವಿಸಿ ಪಲವನಾ ಶೈಲೂಷವೇಷಂಗಳಂ: ಆದಿಪು, ೩. ೮೮)

ಪ್ರಾತಿಹಾರ್ಯ

[ನಾ] [ಜೈನ] ಕೇವಲಜ್ಞಾನ ಪಡೆದ ತೀರ್ಥಂಕರನಿಗೆ ಒದಗುವ ಅಶೋಕವೃಕ್ಷ, ದಿವ್ಯಪುಷ್ಪ ವೃಷ್ಟಿ, ದಿವ್ಯಧ್ವನಿ, ಚಾಮರ, ಆಸನ, ಭಾಮಂಡಲ, ದೇವದುಂದುಭಿ, ಛತ್ರಗಳೆಂಬ ಎಂಟು ಸವಲತ್ತುಗಳು (ಪುರುಪರಮೇಶ್ವರ ನಂದನ ದೊರೆಕೊಳಿಸುಗೆ ನಿನಗೆ ಪುರುಪರಮೇಶ್ವರನ ನಿರತಿಶಯಗುಣಪರಿಕರಮುಂ ತತ್ ಪ್ರಾತಿಹಾರ್ಯಮುಂ ಮಂಗಳಮಂ: ಆದಿಪು, ೧೨. ೫೩)

ಪ್ರಾತೀತಿಕ

[ನಾ] ಅರ್ಥಪ್ರತೀತಿಯುಳ್ಳದ್ದು (ವಿದಿತಂ ಪ್ರಾತೀತಿಕಂ ಕೋಮಳಂ ಅತಿಸುಭಗಂ ಸುಂದರಂ ಸೂಕ್ತಿಗರ್ಭಂ ಮೃದುಸಂದರ್ಭಂ: ಆದಿಪು, ೧. ೨೬)

Search Dictionaries

Loading Results

Follow Us :   
  Download Bharatavani App
  Bharatavani Windows App