Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪ್ರಾದುರ್ಭಾವ
[ನಾ] ಸಫಲತೆ, ಸಿದ್ಧಿ (ಏನಾದುದೋ ಕಾರ್ಯಸಿದ್ಧಿ ಪ್ರಾದುರ್ಭಾವಕ್ಕೆ ವಿಘ್ನಂ ಪಲವೊಳವು ಅಱಿಯಲ್ಬರ್ಕುಮೇ: ಪಂಪಭಾ, ೮. ೩೦)
ಪ್ರಾಭಾತಿಕಕ್ರಿಯೆ
[ನಾ] ಬೆಳಗಿನ ಸಮಯದ ಕೆಲಸ (ಕೇವಲಜ್ಞಾನದಿಂ ವಿಶೇಷನಿಶ್ಚಯಮಂ ಮಾಡುವೆನೆಂದು ಸಕಳ ಪ್ರಾಭಾತಿಕ ಕ್ರಿಯೆಯಂ ನಿರ್ವರ್ತಿಸಿ: ಆದಿಪು, ೧೫. ೨೧ ವ)
ಪ್ರಾಭೃತ
[ನಾ] ಉಡುಗೊರೆ (ಬಾಹುಬಲಿಕುಮಾರಂಗೆ ಲೇಖಮಂ ಉನ್ಮಯೂಖರತ್ನಾಭರಣಪ್ರಾಭೃತ ಸಮೇತಮನಟ್ಟುವಂತು ಮಹಾಸಂಧಿವಿಗ್ರಹಿಗೆ ಬೆಸಸಿದೊಡೆ: ಆದಿಪು, ೧೪. ೪೩ ವ)
ಪ್ರಾಯಶ್ಚಿತ್ತ
[ನಾ] [ಜೈನ] ಅಭ್ಯಂತರತಪಗಳಲ್ಲಿ ಒಂದು; ತಿಳಿಯದೆ ನಡೆದಿರಬಹುದಾದ ತಪ್ಪಿನ ಪರಿಹಾರಕ್ಕೆ ನಡೆಸುವ ಚಿತ್ತಶೋಧನೆ (ಅಭ್ಯಂತರತಪಷಟ್ಕದೊಳಂ ಪ್ರಾಯಶ್ಚಿತ್ತ ವಿನಯ ವೈಪೃತ ಸ್ವಾಧ್ಯಾಯ ಧ್ಯಾನ ವ್ಯುತ್ಸರ್ಗಗಳಂ ಕೈಕೊಂಡು: ಆದಿಪು, ೬. ೩೩ ವ), ನೋಡಿ ‘ಅಭ್ಯಂತರತಪಸ್ಸು’
ಪ್ರಾಯೋಗ್ಯ
[ನಾ] [ಜೈನ] ಕರ್ಮವು ಕಡಿಮೆಯಾಗುವುದು (ಮೋಕ್ಷಪ್ರಾಸಾದಾರೋಹಣ ನಿಶ್ರೇಣೀಭೂತ ಕ್ಷಪಕಶ್ರೇಣಿ ಪ್ರಾಯೋಗ್ಯ ಅಧಃಪ್ರವೃತ್ತಿಕರಣಪರಿಣತಂ ಅಪೂರ್ವಕರಣ ಕ್ಷಪಕಂ ಪ್ರಥಮಶುಕ್ಲಧ್ಯಾನಪರಿಣತನಾಗಿರ್ದ: ಆದಿಪು, ೧೦. ೧೪ ವ)
ಪ್ರಾಯೋಪಗಮನ
[ನಾ] [ಜೈನ] ರೋಗವಿದ್ದರೂ ಚಿಕಿತ್ಸೆಗೆ ಅವಕಾಶವೀಯದೆ, ನಿರಾಹಾರಿಯಾಗಿ ಮರಣವನ್ನು ಹೊಂದುವ ವ್ರತ (ಪರಮಾಯುಷ್ಯಾಂತಂಬರಂ ನಿರಾಕುಳಮಾಗಿರ್ಪಾಯಿರವಿನ ಜೈನಾಭಿಪ್ರಾಯಂ ಪ್ರಾಯೋಪಗಮನದಿಂ ತೊರೆಯಿಸಿದಂ: ಆದಿಪು, ೨. ೫೩)
ಪ್ರಾರಬ್ಧ
[ಗು] ಪ್ರಾರಂಭಿಸಲ್ಪಟ್ಟ (ಪಟುನಟನ ಪ್ರಾರಬ್ಧಸಂಗೀತಕಂ ತಣಿದಂ ಸಂತತಮಿಂತು ದಿವ್ಯಸುಖದೊಳ್ ಸಂಸಾರಸಾರೋದಯಂ: ಆದಿಪು, ೨. ೭೯)
ಪ್ರಾರಂಭ
[ನಾ] ಉದ್ಯಮ, ಕಾರ್ಯ (ಸಕಳಕ್ಷತ್ರಿಯಮೋಹದಿಂ ನಿಜಭುಜಪ್ರಾರಂಭದಿಂ ಪೋಗೆ ತಾಗಿ ಕೆಲರ್ ನೊಂದೊಡೆ: ಪಂಪಭಾ, ೧. ೭೪)
ಪ್ರಾರ್ಥಿತಾರ್ಥಪ್ರದಂ
[ನಾ] ಬಯಸಿದ ಇಷ್ಟಾರ್ಥಗಳನ್ನು ಕೊಡುವವನು (ಅಮರಗಿರಿನಿಭಂ ಪ್ರಾರ್ಥಿತಾರ್ಥಪ್ರದಂ ಮಾಣ್ದಿರದೆ ಆದಿಬ್ರಹ್ಮನೆೞ್ತರ್ಪುದನೆ ಕನಸುವೇೞ್ದಪ್ಪುದೆಂದು: ಆದಿಪು, ೯. ೧೨೯ ವ)
ಪ್ರಾರ್ಥಿಸು
[ಕ್ರಿ] ಬೇಡಿಕೊ (ಅಸುರಾಂತಕನುಂ ತಾನುಂ ಎಂತಾನುಂ ಪ್ರಾರ್ಥಿಸಿದೊಡೆ ಒಡಂಬಟ್ಟ ಅಜಾತಶತ್ರುಗೆ: ಪಂಪಭಾ, ೧೨. ೧೩೪ ವ)
ಪ್ರಾವರಣ
[ನಾ] ಉತ್ತರೀಯ (ಧಾನ್ಯನಿಚಯದೊಡನೆ ಅನೇಕ ಧಾನ್ಯಸದನಂಗಳುಂ ಕ್ಷೌಮದುಕೂಲಾದಿ ದಿವ್ಯವಸನ ವಿವಿಧ ಪ್ರಾವರಣವಿಶೇಷಂಗಳುಂ: ಆದಿಪು, ೧೫. ೩ ವ)
ಪ್ರಾಂಶು
[ಗು] ಉನ್ನತ, ಎತ್ತರವಾದ (ಸಾಲ ಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)
ಪ್ರಾಶ್ನಿಕ
[ನಾ] ಪ್ರಶ್ನಿಸುವವನು (ಸಭಾಪತಿಯಾಗಿರ್ದ ಮಹಾಬಳನುಮಂ ಪ್ರಾಶ್ನಿಕರಾಗಿರ್ದ ವಿದ್ವಜ್ಜನಮುಮಂ ಸಭಾಜನಮುಮಂ ತಿಳಿಪಿ: ಆದಿಪು, ೨. ೧೦ ವ)
ಪ್ರಾಸ
[ನಾ] ಒಂದು ಆಯುಧ, ಕೊಂತ (ನಿಬಿಡನಿಪೀಡಿತ ಪ್ರಾಸ ಮುಷ್ಟಿದುರ್ಧರ ಅಶ್ವಾರೋಹಕತುರಂಗಬಲ ಅವಗಾಢಮುಂ: ಆದಿಪು, ೧೪. ೯೩ ವ)
ಪ್ರಾಸಾದ
[ನಾ] ಮನೆ, ಕಟ್ಟಡ (ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ: ಪಂಪಭಾ, ೧. ೭೩ ವ); [ನಾ] ಉಪ್ಪರಿಗೆ (ಆ ನೆಲೆಯ ಚೌಪಳಿಗೆಗೊಳ್ ಅನೇಕ ಪ್ರಾಸಾದದ ಮೇಲೆ ಚಿತ್ರದ ಪೞವಿಗೆಗಳಂ ತುಱುಗಲಂ ಬಂಬಲ್ಗಳುಮಾಗೆ ಕಟ್ಟಿಸಿ: ಪಂಪಭಾ, ೩. ೪೦ ವ)
ಪ್ರಾಳೇಯಾಚಲ
[ನಾ] ಹಿಮವತ್ಪರ್ವತ (ಶಿಖರನಾಮೋದ್ಯನ್ನಗಂ ಪ್ರಸ್ಫುರತ್ ಪ್ರಾಳೇಯಾಚಲಂ ಈತಂ ಎಮ್ಮವೊಳ್ ಇಳಾಭೃನ್ನಾಥಂ ಎಂದು: ಪಂಪಭಾ, ೧೪. ೩೩)
ಪ್ರಿಯಗಳ್ಳ
[ನಾ] ಎರಡನೆಯ ಅರಿಕೇಸರಿಯ ಬಿರುದು (ಧುರದೊಳ್ ಮೂಱುಂ ಲೋಕಂ ನೆರೆದಿರೆಯುಂ ಕುಡುವ ಪೊೞ್ತಱೊಳ್ ಮೇರುವೆ ಮುಂದಿರೆಯುಂ ಬೀರದ ಬಿಯದಂತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯಗಳ್ಳಂ: ಪಂಪಭಾ, ೧. ೪೮)
ಪ್ರಿಯಂಗು
[ನಾ] ನವಣೆ (ಈ ಭಾಗದೊಳ್ ಅಭಿನವ ಪ್ರಿಯಂಗು ಶ್ಯಾಮಾಂಗಂ ಅರ್ಧಚಂದ್ರ ಬುದ್ಬುದ ವ್ಯಾಕೀರ್ಣ ತ್ರಿಶೂಲ: ಆದಿಪು, ೧೩. ೪೫ ವ)
ಪ್ರಿಯದಯಿತೆ
[ನಾ] ಪ್ರಿಯಕರಳು (ಪ್ರಿಯದಯಿತೆಯೆನಾಂ ನಿನಗೆಂಬೆಯೆಂದು ನೀನೆನ್ನಿಂತಗಲ್ದಿರ್ಪುದೆ ವಿಸ್ಮಯಮಂ ಮಾಡಿದಪುದು: ಆದಿಪು, ೪. ೧೬)
ಪ್ರಿಯದೊಳ್