Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪ್ರಿಯೋದ್ಭವ
[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಜಾತಕರ್ಮ (ಪ್ರಿಯೋದ್ಭವ .. .. ಆಗ್ರನಿರ್ವೃತಿಯೆಂಬಯ್ವತ್ಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)
ಪ್ರೀಣನಕರ
[ನಾ] ಸಂತೋಷದಾಯಕ (ಪ್ರಾಣಿಹಿತಮಂ ವಿನೇಯಪ್ರೀಣನಕರಮಂ ಜಗತ್ತ್ರಯಪ್ರಕಟಿತಕಲ್ಯಾಣಮಂ ನೆಗೞ್ದ ಆದಿಪುರಾಣಮಂ ಅಪರಿಮಿತಭಕ್ತಿಯಿಂ ವಿರಚಿಸುವೆಂ: ಆದಿಪು, ೧. ೪೨)
ಪ್ರೀಣಿತ
[ಗು] ಸಂತುಷ್ಟಿಗೊಂಡ (ಅಂತತಿಪ್ರಮೋದ ಪ್ರೀಣಿತಾಂತಃಕರಣನಾಗಿ: ಆದಿಪು, ೯. ೧೩೨ ವ)
ಪ್ರೀತಿ
[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ, ಗರ್ಭವತಿಯು ಮೂರನೇ ತಿಂಗಳಲ್ಲಿ ಮಾಡುವ ಜಿನಪೂಜೆ (ಆಧಾನ ಪ್ರೀತಿ .. .. ಆಗ್ರನಿರ್ವೃತಿಯೆಂಬಯ್ವತ್ಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)
ಪ್ರೀತಿಕರಣ
[ನಾ] ಪ್ರೀತಿಯನ್ನುಂಟುಮಾಡುವಂಥದು (ದುರಿತಘನತಿಮಿರದಶಶತಕಿರಣಂ ಅತಿಪ್ರೀತಿಕರಣಂ ಅಖಿಳವಿನೇಯೋದ್ಧರಣಂ ಎಮಗಭವ ಭವಭಯಹರಣಂ ಭವದೀಯ ಸಮವಸರಣಂ ಶರಣಂ: ಆದಿಪು, ೧೪. ೩೮)
ಪ್ರೇಕ್ಷಣ
[ನಾ] ನೋಟ (ಅಸಮಪ್ರೇಕ್ಷಣವೀಕ್ಷಣೈಕರಸಮ ಪಾರ್ದಿರ್ದುದೀ ರಾಜಪುತ್ರಸಮೂಹಂ: ಆದಿಪು, ೯. ೧೨)
ಪ್ರೇಕ್ಷಾಗೃಹ
[ನಾ] ಪ್ರದರ್ಶನಶಾಲೆ (ವರ್ಧಮಾನಮೆಂಬೀಕ್ಷಣಪ್ರಿಯ ಪ್ರೇಕ್ಷಾಗೃಹಮುಂ: ಆದಿಪು, ೧೫. ೩ ವ)
ಪ್ರೇಂಖತ್
[ಗು] ಒಲೆದಾಡುವ (ಮಾಣಿಕ್ಯಮಾಳಾಂಶುಪಿಂಜರಿತಂ ಪ್ರೇಂಖತ್ ಅಸಂಖ್ಯವಾಜಿವಿಳಸತ್ ವೀಚೀಚಯಂ: ಆದಿಪು, ೧೪. ೯೨)
ಪ್ರೇಂಖೋಲ
[ನಾ] ತೂಗಾಟ (ಪ್ರೇಂಖೋಲಾನೇಕ ನೇತ್ರಪಟ್ಟಿಕಾ .. .. ಲಾಟಬಲಂ: ಆದಿಪು, ೧೩. ೪೫ ವ)
ಪ್ರೇಂಖೋಳಿತ
[ಗು] ತೂಗಾಡುವ (ಅತಿಪ್ರಚುರಚಳತ್ ಅವನಿಪಾಳಸಂಚಳತ್ ಚಾಮರಮರುತ್ ಪ್ರೇಂಖೋಳಿತ ಆಭರಣವಿಚಿತ್ರನೇತ್ರವೈಜಯಂತಿಕಾಂಚಳನುಂ: ಆದಿಪು, ೧೨. ೬೧ ವ)
ಪ್ರೇತ
[ನಾ] ಹೆಣ (ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮಂ ಓಗಡಿಸದೆ ಸುಡುವುದು ಗಡಂ ಇನ್ನುಡುಗುವುದೀ ಶೋಕಮಂ ಸರೋಜದಳಾಯತಾಕ್ಷೀ: ಪಂಪಭಾ, ೨. ೨೮)
ಪ್ರೋದ್ದಾಮ
[ಗು] ಅತಿಶಯವಾದ (ಅತ್ರಿಯ ಪಿರಿಯ ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ ಸಕಲ ಕ್ಷತ್ರಕುಲ ಪೂಜ್ಯನಮಳ ಚರಿತ್ರಂ ಪ್ರೋದ್ದಾಮ ಸೋಮವಂಶ ಲಲಾಮಂ: ಪಂಪಭಾ, ೧. ೬೧)
ಪ್ರೋದ್ಭೇದ
[ಗು] ಮುರಿದುಹೋದ (ಮಾದ್ಯತ್ ಗಜಗಂಡಕಷಣ ಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨)
ಪ್ರೋದ್ಯತ್
[ಗು] ಎತ್ತರವಾದ (ಸಾಲ ಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)
ಪ್ರೋನ್ನತಾಂಸ
[ನಾ] ಎತ್ತರವಾದ ಕೊರಳುಳ್ಳವನು [ಪ್ರೋನ್ನತ+ಅಂಸ] (ಏನೊಸೆದನೊ ಮನದೊಳ್ ಸೂಕ್ತಿಕರ್ಣಾವತಂಸಂ ಶ್ರೇಯಾಂಸಂ ಪ್ರೋನ್ನತಾಂಸಂ ಸುಕವಿಜನ ಮನೋಮಾನಸೋತ್ತಂಸಹಂಸಂ: ಆದಿಪು, ೯. ೧೩೨)
ಪ್ರೋಹ
[ನಾ] ಆನೆಯ ಭುಜಸ್ಥಲದ ನಡುವಣ ಅಂಗಭಾಗ (ಸುಸಂಚಿತ ಪ್ರೋಹ ಪಳಿಹಸ್ತಗಾತ್ರನುಂ ಪರಿಪೂರ್ಣಶ್ಲಿಷ್ಟ ಪಾರ್ಷ್ಣಿಯುಂ: ಆದಿಪು, ೧೨. ೫೬ ವ)
ಪ್ಲವ
[ನಾ] ಪ್ರವಾಹ (ನಿರ್ಭರಪೂರಮಾಗಿಯುಂ ಸ್ನಿಗ್ಧಾಶ್ರುಜಳಧಾರಾ ಜಳಪ್ಲವಮುಂ ಬಾರಿಸಲೆಂತುಂ ಆಱದು ವಲಂ ಕಾಳೋರಗಗ್ರಸ್ತನಂ: ಆದಿಪು, ೩. ೫೪); [ನಾ] ಅರವತ್ತು ಸಂವತ್ಸರಗಳಲ್ಲಿ ಒಂದು (ಜಗತ್ಪ್ರಕಟ ಪ್ಲವಸಂವತ್ಸರದ ಕಾರ್ತಿಕಂ ಮುದಮನೀಯೆ: ಆದಿಪು, ೧೬. ೭೩)
ಪ್ಲೋಷ