Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಡೆಮಾತುಗೊಳ್
[ಕ್ರಿ] ವಿಷಯ ಕೇಳು, ಪ್ರಸ್ತಾಪಿಸು (ಕಿಡುವೊಡಲ ಕಿಡುವ ರಾಜ್ಯದ ಪಡೆಮಾತುಗೊಳಲ್ಕಮೆನ್ನ ಮೈಯಗಿದಪುದು: ಆದಿಪು, ೧೪. ೧೨೭)
ಪಡೆಮೆಚ್ಚೆಗಂಡ
[ನಾ] [ಎದುರು] ಸೈನ್ಯವೂ ಮೆಚ್ಚಿಕೊಳ್ಳುವ ಶೂರ (ಮಿಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯಂ ಆಱಿಸುತಿಂತೆ ತನ್ನ ಕೂರಸಿಯೊಳ್ ಅಡರ್ತು ಕೊಂದಸಿಯಳ್ ಇರ್ಕೆ ಅಸಿಯೊಳ್ ಪಡೆಮೆಚ್ಚೆ ಗಂಡನಾ: ಪಂಪಭಾ, ೧. ೬)
ಪಡೆವಂತು
ಪಡೆಯುವ ಹಾಗೆ (ಇತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರ ಮುನೀಂದ್ರನೊಳ್ ಬರಂಬಡೆದಳ್ ಎಂಬುದಂ ಕುಂತಿ ಕೇಳ್ದು: ಪಂಪಭಾ, ೧. ೧೧೬ ವ)
ಪಡೆವಳ
[ನಾ] ಸೇನಾನಿ (ಶ್ವೇತ ಭೀಷ್ಮರ ಪೇೞ್ದ ಓಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೆ ಒಡ್ಡಿ ನಿಂದಾಗಳ್: ಪಂಪಭಾ, ೧೦. ೫೧ ವ)
ಪಡೆವಳ್ಳ
[ನಾ] ಪಡೆವಳ (ದಂಡರತ್ನಂ ಪಡೆವಳ್ಳನ ಮುಂದೆ ನಡೆಯೆ ನಡೆದಂ ಭರತಂ: ಆದಿಪು, ೧೧. ೪೭)
ಪಣಮುಡಿ
[ನಾ] [ಪಣಂ+ಉಡಿ] ಪಣ[ಜೂಜು]ದಲ್ಲಿ ಸೋಲು (ಪಣಮುಡಿದರಂತೆ ಅಡ್ಡಂ ಮಾಡಲುಂ ಎಸೆದ ದೆಸೆಗಳ್ಗೋಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳಾನೆ ಬಲ್ಲೆಂ: ಪಂಪಭಾ, ೫. ೪೩ ವ)
ಪಣವ
[ನಾ] ಮದ್ದಳೆ (ಆಗಳ್ ಕುರುಧ್ವಜಿನಿಯುಂ ಅನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳ್ .. .. ಮೊೞಗೆ: ಪಂಪಭಾ, ೧೧. ೩೩ ವ)
ಪಣಿಗೆ
[ನಾ] ಹಣಿಗೆ, ಬಾಚಣಿಗೆ (ಪಸರಿಸಿ ಪಂದಲೆಯಂ ಮೆಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದಳ್ದೊಸಗೆಯಿನವನ ಕರುಳ್ಗಳೆ ಪೊಸವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ: ಪಂಪಭಾ, ೧೨. ೧೫೫)
ಪಣೆ
[ನಾ] ಮರದ ಕಾಂಡ, ಕವಲೊಡೆಯುವ ಜಾಗ (ತೀವಿರ್ದತ್ತು ಮೊದಲ್ ಮೊದಲ್ಗೆ ಪಣೆಯುಂ ಮೂಗಯ್ಯ ಮೂಗಯ್ಯೆನಿತ್ತಾವರ್ಕೆಯ್ದೆ ಕವಲ್ಕವಲ್ತು: ಆದಿಪು, ೧೧. ೯೭)
ಪಣೆಕಟ್ಟು
[ನಾ] ಹಣೆಯ ಅಲಂಕಾರ ಪಟ್ಟಿ, ತಲೆಯ ಪಾಗು (ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು ಬೇಂಟೆವಱಿ ದೊರೆಯೊಳ್ ಒಡಂಬಟ್ಟ ಅಸಿಯ ಸುರಗಿ ದಳಿವದ ತೊಟ್ಟ ಅಂಗಿಗೆ ತನ್ನೊಳ್ ಅಮರೆ ಬೇಂಟೆಯನೊರ್ವಂ; ಪಂಪಭಾ, ೫. ೩೬)
ಪಣ್
[ಕ್ರಿ] ಹಣ್ಣಾಗು, ಮಾಗು (ಎಯ್ದೆ ಮಡಲ್ತ ತಳ್ತ ಮೆಯ್ಗಳೊಳ್ ಅಡರ್ದು ಓತ ದೂತವಚನಾಮೃತದೊಳ್ ಗೊಲೆಗೊಂಡ ಬೇಟವೆಂಬ ಎಳಲತೆ ಕೂಟದೊಳ್ ಪದೆದು ಪಣ್ತು ಎರ್ದೆಗಿಂಪಿನಲಂಪನೀಯದೇ: ಆದಿಪು, ೧೨. ೨೦); [ನಾ] ಹಣ್ಣು (ಪರಿದನಿಬರುಂ ಒಡನೆ ಅಡರ್ದಿರೆ ಮಮರನಂ ಮುಟ್ಟಲ್ಕೆ ಪಡೆಯದೆ ಅನಿಬರ್ಗಂ ಕಿಂಕಿರಿವೋಗಿ ಭೀಮಸೇನಂ ಪಿಡಿದಲ್ಗೆ ಪಣ್ವೊಲ್ ಅನಿಬರುಂ ಉದಿರ್ದರ್: ಪಂಪಭಾ, ೨. ೩೧); [ಕ್ರಿ] ಮಾಡು, ಸಿದ್ಧಪಡಿಸು (ಆಗಳಾಱುಂ ಋತುಗಳ ಪೂಗಳನೊಂದು ಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆಯಂತಿರ್ದ ಪೂವಿನ ಸಂತೆಯೊಳ್: ಪಂಪಭಾ, ೪. ೮೦ ವ); [ಕ್ರಿ] ಸಿದ್ಧಗೊಳ್ಳು (ಬೆಳಗಪ್ಪ ಜಾವದೊಳ್ ಬೀಡುವೀಡುಗಳ್ಗೆಲ್ಲಂ ತೊೞಲ್ದು ಏಕಿರ್ಪಿರಿ ಏೞಿಂ ಪಣ್ಣಿಂ ಎನೆ: ಪಂಪಭಾ, ೧೦. ೪೮ ವ)
ಪಣ್ಗೊಲೆ
[ನಾ] ಹಣ್ಣಿನ ಗೊನೆ (ತೂಗಿ ಪಣ್ಗೊಲೆಯಿಂ ಬಳ್ಕುವ ಕೌಂಗು ಕಾಯ್ದುಱುಗಳ ಪೇಱಿರ್ದ ಚೆಂದೆಂಗು: ಆದಿಪು, ೧. ೬೭)
ಪಣ್ಣನೆ
ಸ್ವಲ್ಪಮಟ್ಟಿಗೆ (ನಿನಗಪ್ಪುದು ಈ ಅೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಂ ಆತನ ಒಡ್ಡೞಿಯದ ಗಂಡವಾತಂ: ಪಂಪಭಾ, ೩. ೧೬)
ಪಣ್ಣಪಣ್ಣನೆ
[ಗು] ಮೆಲ್ಲ ಮೆಲ್ಲಗೆ (ಅಂತು ಎರಡು ಪಡೆಗಳುಂ ಪಣ್ಣಪಣ್ಣನೆ ಪಣ್ಣಿ ಕಾಳೆಗಕ್ಕೆ ನಡೆಯಲ್ ಒಡರಿಸಿದಾಗಳ್: ಪಂಪಭಾ, ೧೦. ೫೦ ವ)
ಪಣ್ಣಿಡು
[ಕ್ರಿ] ಸಿದ್ಧಪಡಿಸು (ಅಯ್ವರ್ ಆಲದ ಕೆೞಗಿಂ ತೊಡರ್ದರ್ ನಮ್ಮ ಭಕ್ಷದೊಳ್ ಪಣ್ಣಿಡು ಪೋಗು ನೀನುಮಾನುಂ ತಿಂಬಂ: ಪಂಪಭಾ, ೩. ೧೨)
ಪಣ್ಣಿದ ಜಂತ್ರ
[ನಾ] ಮಾಡಿದ ಅಥವಾ ಕೃತಕವಾದ ಯಂತ್ರ (ಮೌಲ, ಭೃತ್ಯ ಸುಹೃತ್ ಶ್ರೇಣಿ ಮಿತ್ರ ಆಟವಿಕ ತಂತ್ರಂಗಳ್ ಪಣ್ಣಿದ ಜಂತ್ರಂಗಳಂತೆ ಕೞಕುೞಮಾದುವು: ಪಂಪಭಾ, ೧೩. ೨೧ ವ)
ಪಣ್ಣಿದುವು
[ನಾ] ಸಿದ್ಧವಾದುವು (ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ ತೆಕ್ಕನೆ ತೀವಿ ಬಂದುವು ರಥಂ: ಪಂಪಭಾ, ೩. ೬೭)
ಪಣ್ಣು
[ಕ್ರಿ] ಸಜ್ಜುಮಾಡು (ಆಗಳ್ ಆಱುಂ ಋತುಗಳ ಪೂಗಳಂ ಒಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆಯಿರ್ಪಂತಿರ್ಪ ಪೂವಿನ ಸಂತೆಯೊಳ್: ಪಂಪಭಾ, ೪. ೮೦ ವ); [ಕ್ರಿ] ಸಜ್ಜಾಗು (ಬೆಳಗಪ್ಪ ಜಾವದೊಳ್ ಬೀಡುವೀಡುಗಳ್ಗೆಲ್ಲಂ ತೊೞಲ್ದೇಕಿರ್ಪಿರಿ ಏೞಿಂ ಪಣ್ಣಿಂ ಎನೆ: ಪಂಪಭಾ, ೧೦. ೪೮ ವ)
ಪಣ್ಣುಗೆ
[ನಾ] ಮಾಡುವಿಕೆ, ಅಲಂಕರಣ (ಏಱಿದ ಪೊನ್ನ ಪಣ್ಣುಗೆಯ ಪೆರ್ವಿಡಿ ಕಟ್ಟಿದಿರಾಗೆ ಮುಂದೆ ಬಂದೇಱಿದ ಚೆನ್ನಗನ್ನಡಿಯ ಚೇಟಿಕೆ: ಪಂಪಭಾ, ೯. ೧೦೦)
ಪಣ್ತುದಾಗು