भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪಣ್ತೆಱಗು

[ಕ್ರಿ] ಹಣ್ಣು ಬಿಟ್ಟು ಬಾಗಿದ (ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ: ಪಂಪಭಾ, ೧. ೧೧೫ ವ)

ಪಣ್ಪಲ

[ನಾ] ಹಣ್ಣುಹಂಪಲ (ಒರೆದ ತಱಗೆಲೆಯೆ ಪರಿಯಣಮಾಗೆ ಪಣ್ಪಲಮೆತ್ತಿದ ಬೋನಮಾಗೆ ಸಿರಿಯ ಮಹಿಮೆಯಂ ಮೆಱೆಯಲೇನಾರ್ತುದೊ ಬನದೊಳಿರ್ಪಿರವಾ ಪಾಂಡವರಾ: ಪಂಪಭಾ, ೭. ೨೮)

ಪಣ್ಯಕರ್ಮ

[ನಾ] ಕ್ರಯವಿಕ್ರಯಗಳನ್ನು ನಡೆಸುವುದು, ವ್ಯಾಪಾರ (ಅಖಿಳ ಕ್ಷತ್ರಿಯಸಮೂಹಕ್ಕೆ ಶಸ್ತ್ರಕರ್ಮಮುಮಂ ವಣಿಗ್ವಂಶಕ್ಕೆ ಪಾಶುಪಾಲ್ಯ ಕೃಷಿ ಪಣ್ಯಕರ್ಮಂಗಳುಮಂ: ಆದಿಪು, ೮. ೬೪ ವ)

ಪಣ್ಯವನಿತೆ

[ನಾ] ಪಣ್ಯವಧು, ವೇಶ್ಯೆ (ಪಣ್ಯವನಿತೆವೋಲ್ ಕೃತಿ ಸೌಂದರ್ಯದ ಚಾತುರ್ಯದ ಕಣಿಯೆನೆ ವಿದಗ್ಧಬುಧಜನದ ಮನಮನಲೆಯಲೆವೇಡಾ: ಆದಿಪು, ೧. ೧೭)

ಪತಂಗ

[ನಾ] ದೀಪದ ಹುಳು (ಕೋಪಶಿಖಿಕಳಾಪಂಗಳೊಳ್ ಪುಡಪುಡನೆ ಪುೞ್ಗಿ ಸಾಯಲೆಂದು ಪಾಯ್ವ ಪತಂಗಂಗಳಂತೆ: ಪಂಪಭಾ, ೧೧. ೩೯ ವ); [ನಾ] ಸೂರ್ಯ (ಕನಕಗಿರಿಯಂ ಬಲಗೊಳ್ವ ಪತಂಗದಂಪತಿಯಂತೆ ಆ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞ್ ಬಲವಂದು: ಪಂಪಭಾ, ೩. ೭೫ ವ)

ಪತಂಗಮಂಡಲ

[ನಾ] ಸೂರ್ಯಮಂಡಲ (ಪತಂಗಮಂಡಲಂ ಅಪರಗಿರಿತಟಮನೆಯ್ದುವುದುಂ: ಪಂಪಭಾ, ೧೨. ೮೮ ವ)

ಪತತ್

[ಗು] ಬಿದ್ದ, ಉದುರಿದ (ಎಂದು ಭಾಸ್ಕರತನೂಜೆಯಂ ಉಭಯತಟನಿಕಟ ಕುಸುಮನಿವಹ ಪತತ್ ಪರಾಗಪಟಳ ಪಿಶಂಗತರತ್ತರಂಗ ಸರೋಜೆಯಂ: ಪಂಪಭಾ, ೫. ೫೮ ವ)

ಪತತ್ರಿ

[ನಾ] ಬಾಣ (ಒರ್ವರೊರ್ವರನೆ ಮಚ್ಚರದಿಂ ಗಱಿಸನ್ನೆಗೆಯ್ದು ಇದಿರ್ಚಿದ ಪದದೊಳ್ ಪತತ್ರಿಮಯಂ ಎಂಬಿನಿತಾಯ್ತು ಸಮಸ್ತದಿಕ್ತಟಂ: ಪಂಪಭಾ, ೧೦. ೮೭)

ಪತದ್ವಜ್ರ

[ನಾ] [ಪತತ್+ವಜ್ರ] ಬಡಿಯುವ ಸಿಡಿಲು (ಕುಪಿತ ಅನೇಕಪ ದಂದಶೂಕ ದವ ದೈತ್ಯ ಅರಾತಿ ಚೋರ ಅಂಧಕಾರ ಪತದ್ವಜ್ರ ವಿಷ ಅಭಿಚಾರಿಕ ಜರಾತಂಕಾದಿ ಭೇದಂಗಳಪ್ಪ: ಆದಿಪು. ೧೬. ೯)

ಪತಾಕಿನಿ

[ನಾ] ಸೈನ್ಯ (ಅಂತು ದ್ರೋಣಂ ಏಣಗೋಣಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮಂ ಒಂದು ತಲೆಯಾಗೋಡುವ ಕೌರವ್ಯಧ್ವಜಿನಿಯುಮಂ: ಪಂಪಭಾ, ೧೨. ೩೦ ವ)

ಪತಾಕಿನೀಚಕ್ರ

[ನಾ] ಸೇನಾಸಮೂಹ (ಚಕ್ರೇಶ್ವರಂಗೆ ಚಕ್ರರತ್ನ ಸ್ಖಲನಮಂ ಪತಾಕಿನೀಚಕ್ರಪ್ರಧಾನಪ್ರಭುಗಳಱೆಯ ಬಿನ್ನಪಂಗೈದೊಡೆ: ಆದಿಪು, ೧೪. ೬ ವ)

ಪತಾಕಿನೀಪತಿ

[ನಾ] ಸೇನಾಧಿಪತಿ (ಆಗಳ್ ಪತಾಕಿನೀಪತಿಯ ನಿಯಮದಿಂ ಪೂರ್ವದಿಗ್ಭಾಗಸ್ಥಿತಮಂ ಖಂಡಮನಪ್ರತಿಹತ ಶಾಸನಾಂಕಿತಂ ಮಾಡಿ: ಆದಿಪು, ೧೩. ೮೧ ವ)

ಪತಾಕೆ

[ನಾ] ಬಾವುಟ, ಧ್ವಜ (ಪತಾಕೆಯೊಂದು ವಿಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳೆ ಗರ್ಭಚಿಹ್ನಂ: ಪಂಪಭಾ, ೧. ೧೨೦)

ಪತಿ

[ನಾ] ಒಡೆಯ, ಆದಿಜಿನ (ದೇವೋತ್ತರಕುರುಗಳೆ ನಾನಾವಿಧ ಕಲ್ಪಾಂಘ್ರಿಪಂಗಳಿಂದಂ ಪತಿಯಂ ತೀವಿ ಬಳಸಿರ್ದುವೆನೆ ಕಲ್ಪಾವನಿರುಹ ಭೂಮಿಭಾಗಂ ಅತಿರಮಣೀಯಂ: ಆದಿಪು, ೧೦. ೩೪)

ಪತಿಂವರಾ

[ನಾ] ಮದುವೆಯಾಗಲಿರುವ ಹೆಣ್ಣು (ನಿಜವಿಜಯಶ್ರೀ ಪತಿಂವರಾಪರಿಣಯನೋತ್ಸವಾಲೋಕನ ಕುತೂಹಲ ಪ್ರಚಲಿತ ಸಮಸ್ತ ಸಾಮಂತಚಕ್ರನುಂ: ಆದಿಪು, ೧೪. ೯೧ ವ) [ಎಲ್. ಬಸವರಾಜು ಅವರ ಆವೃತ್ತಿಯ ಪಾಠ]

ಪತಿವ್ರತಾಗುಣ

[ನಾ] ಪಾತಿವ್ರತ್ಯಗುಣ (ದಿವ್ಯಮುನಿಪುಂಗವರಂ ಬಗೆದಿರ್ಪಿನಂ ನಿಜಾತ್ಯಂತ ಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತವಿಶ್ರಾಂತಯಶರ್ಕಳಂ ವರತನೂಭವರಂ ಪಡೆ ನೀಂ ತಳೋದರೀ: ಪಂಪಭಾ, ೧. ೧೧೮)

ಪತ್ತತಿಶಯ

[ನಾ] [ಜೈನ] ಕೇವಲಜ್ಞಾನಪ್ರಾಪ್ತಿಯಿಂದ ಜಿನನಿಗೆ ಒದಗುವ ಹತ್ತು ಅತಿಶಯಗಳು: ನಾಲ್ಕು ದಿಕ್ಕಿಗೆ ನೂರು ಯೋಜನ ಸೀಮೆಯಲ್ಲಿ ಸುಭಿಕ್ಷತೆ, ಪರಿಮಿತ ಪ್ರಮಾಣದ ಉಗುರು ಮತ್ತು ಕೂದಲುಗಳಿರುವ ದೇಹ, ಭೋಜನಾಭಾವ, ದೇಹಕ್ಕೆ ಯಾವುದೇ ಬಾಧೆಯಿಲ್ಲದಿರುವುದು, ನಾಲ್ಕು ಮುಖಗಳಿಂದ ಕೂಡಿರುವುದು, ಸರ್ವಶಾಸ್ತ್ರಜ್ಞತೆ, ರೆಪ್ಪೆಯಾಡದಿರುವುದು, ಆಕಾಶಗಮನಸಾಮರ್ಥ್ಯ, ಪ್ರಾಣಿಹಿಂಸೆಯಿಲ್ಲದಿರುವುದು, ದೇಹಕ್ಕೆ ನೆರಳಿಲ್ಲದರುವುದು (ಇಂತು ಪತ್ತತಿಶಯಗಳಿವೇಂ ಜಿನನೊಳ್ ಪೊದಳ್ದುವೋ: ಆದಿಪು, ೧೦. ೪೩)

ಪತ್ತಱು

[ನಾ] [ಪತ್ತು+ಆಱು] ಹದಿನಾರು (ಸೆಱೆಕೋಲ್ ಸೆಱೆಕೋಲಿಂ ಪತ್ತಱುಗಾವುದ ಬಲದ ಪವಣನನಿತಿನಿತೆಂದಾನಱಿಯೆಂ: ಪಂಪಭಾ, ೧೦. ೫೯)

ಪತ್ತಳೆ

[ನಾ] [ಪತ್ರಿಕಾ] ಓಲೆ, ಸಂದೇಶ (ಇಂತಿದು ಪತ್ತಳೆ ಎಂದು ಸಾಱುವಂದಂ ಮಿಗೆ ಕರ್ಚಿ ಪಾಱಿದುವು ಕೆಂದಳಿರಂ ಗಿಳಿವಿಂಡಿನೋಳಿಗಳ್: ಪಂಪಭಾ, ೫. ೩೧)

ಪತ್ತಿ

[ನಾ] ಪದಾತಿ ಸೈನ್ಯ (ಪತ್ತಿ ಶಸ್ತ್ರ ದ್ಯುತಿಪರಿಕg ಸಾಂದ್ರೀಭವಚ್ಚಂಡರೋಚಿಃ ಕಿರಣೌಘಂ: ಆದಿಪು, ೪. ೨೪)

Search Dictionaries

Loading Results

Follow Us :   
  Download Bharatavani App
  Bharatavani Windows App