भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಫಳಕರ್ಪೂರ

[ನಾ] ಫಲಿತ ಕರ್ಪೂರದ ಮರ (ಫಳಕರ್ಪೂರ ಲವಂಗ ಲುಂಗ ಲವಳೀ ಹಿಂತಾಳ ತಾಳೀ ತಮಾಳ ಲತಾಸುಂದರನಂದನಕ್ಕಳುರೆ ಮುಂ ತನ್ನರ್ಚಿಗಳ್: ಪಂಪಭಾ, ೫. ೮೬)

ಫಳಪಾಕವಿರಾಮ

[ನಾ] ಫಲ ಬಂದು ಒಣಗುವುದು (ಆ ಪ್ರಸ್ತಾವದೊಳ್ ಫಳಪಾಕವಿರಾಮಂಗಳಪ್ಪ ಗರ್ಭಷಷ್ಟಿವ್ರೀಹಿ ಯವ ಗೋಧೂಮಾದಿ ಮಹೌಷಧಂಗಳುಂ: ಆದಿಪು, ೮. ೬೧ ವ)

ಫಳಪಾಕಾಂತ

[ನಾ] [ಫಳಪಾಕ+ಅಂತ] ಹಣ್ಣು ಬಿಟ್ಟ ಮೇಲೆ (ಆಯುಷ್ಯಾವಸಾನದೊಳ್ ಓಷಧಿಗಳಂತೆ ಫಳಪಾಕಾಂತದೊಳ್ ಕ್ಷುತವಿಜೃಂಭಣವ್ಯಾಜದಿಂ ಲೋಕಾಂತರಿತರಾಗಿ: ಆದಿಪು, ೫. ೬೯ ವ); [ನಾ] ಬೆಳೆ ಬಿಟ್ಟ ಮೇಲೆ ನಾಶವಾಗುವ, ವಾರ್ಷಿಕ ಬೆಳೆ (ಫಳಪಾಕಾಂತಂಗಳಪ್ಪ ಔಷಧಿಗಳಂ ಸ್ತಂಬಕರ್ಯಾದಿ ನಾನಾವಿಧ ಧಾನ್ಯಂಗಳಂ: ಆದಿಪು, ೬. ೭೭ ವ)

ಫಳವಿನಮ್ರ

[ಗು] ಹಣ್ಣುಗಳ ಭಾರದಿಂದಾಗಿ ಬಾಗಿದ (ಮಹೀಭುಜನೆಯ್ದಿದಂ ಫಳವಿನಮ್ರಮಹೀಜಸಹಸ್ರಾಘಾಟಮಂ ಉತ್ಪಳಖೇಟಮಂ: ಆದಿಪು, ೪. ೫೮)

ಫಳಾಮೃತ

[ನಾ] ಹಣ್ಣಿನ ರಸ (ಪನಸು ಆಮ್ರ ಕದಳಿ ನಾರಂಗ ನಾಳಿಕೇರೀ ಫಳಾಮೃತಾಸ್ವಾದದೆ ತಣ್ಣನೆ ತಣಿದು: ಆದಿಪು, ೧೧. ೮೧)

ಫಾಲ್ಗುನ

[ನಾ] ಚಾಂದ್ರಮಾನದ ಹನ್ನೆರಡನೆಯ ತಿಂಗಳು (ವಿಶ್ವನಾಥನಾದಿಜಿನಂ ಫಾಲ್ಗುನ ಬಹುಲೈಕಾದಶಿಯೊಳಂ ಅನಂತಸುಖನಿಲಯಂ ಉತ್ತರಾರಾಷಾಢದೊಳೀ ಧ್ಯಾನಮರೀಚಿಯಿಂ ಬೆದಱೆ: ಆದಿಪು, ೧೦. ೧೬)

ಫುಲ್ಲಶರ

[ನಾ] ಮನ್ಮಥ (ಫುಲ್ಲಶರಂಗಿಸುವೆಡೆಗಿವೆ ನಲ್ಲಂಬುಗಳೆನಿಸಿ ತುಱುಗಿ ಮಲರ್ದಲರ್ದಸೆವೀ ಮೊಲ್ಲೆಯುಂ: ಆದಿಪು, ೧೧. ೧೧೪)

ಫೇನ

[ನಾ] ನೊರೆ (ಉಟ್ಟ ದುಗುಲಂ ಗಂಗಾನದೀ ಫೇನಂ ಉಜ್ಜ್ವಲಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಂ .. .. ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭)

Search Dictionaries

Loading Results

Follow Us :   
  Download Bharatavani App
  Bharatavani Windows App