Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಫಣಾಗಣಮಣಿಕಿರಣ
[ನಾ] ಹೆಡೆಗಳ ಸಮೂಹದ ರತ್ನದ ಕಾಂತಿ (ಆಗಳ್ ಅನಂತಂ ಅನಂತ ಫಣಾಗಣಮಣಿಕಿರಣಮೆಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಿಸಿ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)
ಫಣಾಮಣಿ
[ನಾ] ಹೆಡೆಯ ಮಣಿ (ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಂ ಉರ್ಚಿದ ಫಣಾಮಣಿಮಂಗಳರಶ್ಮಿಯೋ ಪಂಪಭಾ, ೧. ೯೬)
ಫಣಾರತ್ನ
[ನಾ] ಫಣಾಮಣಿ (ದೀಪದೊಳ್ ಪನ್ನಗಪತಿಯ ಫಣಾರತ್ನದೀಪಂ ವಿತಾನಾವಳಿಯೊಳ್ ದಿವ್ಯಂ ವಿತಾನಂ ತುಱುಗಿದುವು: ಆದಿಪು, ೧೬. ೨)
ಫಣಿ
[ನಾ] ಹಾವು (ಮತ್ಸ್ಯ ಮಕರ ಕುಲಿಶ ಕಲಶ ಕುಳೀರ ವರಾಹ ವಾನರ ಕಂಠೀರವ ಚಮೂರು ಮಯೂರ ಗರುಡ ಫಣಿರಾಜಚಿಹ್ನಂಗಳಪ್ಪ: ಆದಿಪು, ೧೧. ೨೮ ವ)
ಫಣಿಕೇತನ
[ನಾ] ರ್ಪಧ್ವಜ, ದುರ್ಯೋಧನ (ಎಂಬುದುಂ ಬೞಿಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನಂ ಇಂತೆಂದಂ: ಪಂಪಭಾ, ೧೩. ೨೩ ವ)
ಫಣಿಗೇಹ
[ನಾ] ಫಣಿಗೃಹ (ಫಣಿಫಣಾಸ್ಫುರಿತದೀಪಿಕಾವ್ಯೂಹಮಂ ಕ್ವಣಿತಮಣಿಕಿಂಕಿಣೀನಿನದ ಫಣಿಗೇಹಮಂ .. .. ನೋಡಿ: ಆದಿಪು, ೭. ೨೭ ರಗಳೆ)
ಫಣಿಪ್ರಭು
[ನಾ] ಫಣಿಪತಿ (ಫಣಿಪ್ರಭುಗಂ ಎತ್ತಮತ್ತಳಗಮಲ್ತೆ ರೂಪಸ್ತವಂ ಗುಣಸ್ತವಂ ಉದಾತ್ತವೃತ್ತ ಭವದೀಯ ವಸ್ತುಸ್ತವಂ: ಆದಿಪು, ೧೩. ೯೦)
ಫಣಿಫಣಾ
[ನಾ] ಹಾವಿನ ಹೆಡೆ (ಫಣಿಫಣಾಸ್ಫುರಿತ ಮಣಿದೀಪಿಕಾವ್ಯೂಹಮಂ: ಆದಿಪು, ೭. ೨೭ ರಗಳೆ)
ಫಣಿಭೂಷಣ
[ನಾ] ಹಾವುಗಳೆಂಬ ಆಭರಣ (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಂಗಸಂಗತ ಲಸತ್ ಭಸಿತಂ ಪ್ರಭುಶಕ್ತಿ ಶಕ್ತಿ ನಿರ್ಮಳಮಣಿಭೂಷಣಂ ಫಣಿಭೂಷಣಂ ಆಗೆ: ಪಂಪಭಾ, ೧. ೨)
ಫಣಿರಾಜಕೇತನ
[ನಾ] ಫಣಿಪತಿಕೇತನ (ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್ ಆ ಕೊಳದೊಳ್ ಫಣಿರಾಜಕೇತನಂ ಮುೞುಗಿದಂ: ಪಂಪಭಾ, ೧೩. ೭೪)
ಫಣಿರಾಜಕೇತು
[ನಾ] ದುರ್ಯೋಧನ (ಮುಂದೆ ಬಂದು ಏಡಿಸುವಂತಿರೆ ಆಡಿದುದೊಂದು ಮರುಳ್ ಫಣಿರಾಜಕೇತುವಂ: ಪಂಪಭಾ, ೧೩. ೫೪)
ಫಣಿವೈರಿ
[ನಾ] ಹಾವಿನ ಶತ್ರು, ಗರುಡ (ಗಜ ವೃಷಭ ಅಂಕುಶ ಚಕ್ರ ಅಂಬುಜ ಹಂಸ ಮಯೂರ ಮತ್ಸ್ಯ ಫಣಿವೈರಿ ಮತಂಗಜರಿಪು ಚಿಹ್ನ ವಿಶಾಲಧ್ವಜಂಗಳಿಂ ಧ್ವಜಮಹೀತಳಂ ಸೊಗಯಿಸುಗುಂ: ಆದಿಪು, ೧೦. ೩೩)
ಫಣೀಂದ್ರ
[ನಾ] ಆದಿಶೇಷ (ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಕನಕಲತೆಯೆಂಬ ನಾಗಕನ್ನೆ ಕಣ್ಬೇಟಗೊಂಡು: ಪಂಪಭಾ, ೪. ೧೫ ವ)
ಫಣೀಂದ್ರಕೇತು
[ನಾ] ಸರ್ಪಕೇತನ, ದುರ್ಯೋಧನ (ಪೇೞದೊಡೆ ಪೋಗದಿರು ಈಶ್ವರನಾಣೆ ಎಂದು ಪುಲ್ಮರುಳ್ ಇನಿಸಾನುಮಂ ತಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ: ಪಂಪಭಾ, ೧೩. ೫೫)
ಫಣೀಂದ್ರಾಲಯ
[ನಾ] ನಾಗರಾಜನ ಮನೆ ಅಂದರೆ ಪಾತಾಳಲೋಕ (ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳರಶ್ಮಿಯೋ: ಪಂಪಭಾ, ೧. ೯೬)
ಫಲವಿನತ
[ನಾ] ಹಣ್ಣುಗಳ ಭಾರದಿಂದ ಜಗ್ಗಿದುದು (ಧರ್ಮಾಮೃತವರ್ಷದಿಂ ಧರ್ಮಕ್ಷೇತ್ರಂಗಳೊಳ್ ಭವ್ಯಸಸ್ಯಂಗಳಂ ಅನೇಕಬ್ರತಫಲವಿನತಂಗಳ್ ಮಾಡಿ: ಆದಿಪು, ೧೬. ೪೦ ವ)
ಫಲಾಶಿ
[ನಾ] [ಫಲ+ಆಶಿ] ಹಣ್ಣು ತಿನ್ನುವವನು (ವಿವಿಧಮೂಲ ಫಲಾಶಿಗಳುಂ ಸರೋವರ ನದೀ ನಿರ್ಝರಾಂಬುಪಾಯಿಗಳುಂ ಅಗಿ: ಆದಿಪು, ೯. ೯೩ ವ)
ಫಲ್ಗುಣ
[ನಾ] ಅರ್ಜುನ (ಕೇಳಿರೆ ಕಂಕಭಟ್ಟನೆ ಯುಧಿಷ್ಠಿರಂ ಆ ವಲಲಂ ವೃಕೋದರಂ ಬಾಳೆಯರಂ ದಲಾಡಿಪ ಬೃಹಂದಳೆ ಫಲ್ಗುಣಂ: ಪಂಪಭಾ, ೯. ೬)
ಫಳ
[ನಾ] [ಫಲ] ಸಾರ್ಥಕ್ಯ, ಪ್ರಯೋಜನ (ಶ್ರೀಗೆ ಫಳಂ ಚಾಗಂ ವಾಕ್ಶ್ರೀಗೆ ಫಳಂ ಸರ್ವಶಾಸ್ತ್ರಪರಿಣತಿ ವೀರಶ್ರೀಗೆ ಫಳಂ ಆಯಂ ಎಂದಿಂತಾಗಳುಂ ಅಱಿದೆಸೆಗಿದಂ ಪರಾಕ್ರಮಧವಳಂ: ಪಂಪಭಾ, ೬. ೧)
ಫಳಕ