Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಬಕ
[ನಾ] ಬಕಪಕ್ಷಿ (ಬಕ ಕಲಹಂಸ ಬಲಾಕ ಪ್ರಕರ ಮೃದುಕ್ವಣಿತರಮ್ಯಮಿದಿರೊಳ್ ತೋಱೆತ್ತು ಕೊಳಂ ಪರಿವಿಕಸಿತ ಕನಕ ಕಂಜಕಿಂಜಲ್ಕಪುಂಜಪಿಂಜರಿತಜಳಂ: ಪಂಪಭಾ, ೮. ೩೮); [ನಾ] ಒಬ್ಬ ರಾಕ್ಷಸ (ಅಯ್ವರೊಳಂ ನಾಮ್ಮಾಣದೆ ಬಕನ ಬಾರಿಗೊರ್ವನನೀವೆಂ: ಪಂಪಭಾ, ೩. ೨೬)
ಬಕವೇಷ
[ನಾ] ಬಕಪಕ್ಷಿಯ ರೂಪ (ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೋಸರಿಸಿ ಬಂದು: ಪಂಪಭಾ, ೩. ೨೯ ವ)
ಬಕವೇಷಿ
[ನಾ] ಬಕನ ವೇಷ ಧರಿಸಿದವನು, ಕಪಟಿ (ಅಱಿದು ಶರಣಾಗತಜಳನಿಧಿಯಂ ಎಯ್ದೆವಂಂ ಈ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನಿತ್ತೆ: ಪಂಪಭಾ, ೫. ೭೧ ವ)
ಬಕ್ಕೆ
[ನಾ] ಒಂದು ವಿಧದ ಹಲಸಿನ ಹಣ್ಣು (ಗೊಲೆಯೊಳ್ಪಣ್ತುದು ಮೈಂದವಾೞೆ ಪಥಿಕರ್ಬರ್ಕೆಂದು ಭೃಂಗಂಗಳಿಂದೆ ಉಲಿವಂತಿರ್ದುದು ಪಣ್ತ ಬಕ್ಕೆ ತನಿವಣ್ಣಾಗಿರ್ದುದು: ಆದಿಪು, ೧೧. ೬೮)
ಬಗಿ
[ಕ್ರಿ] ತೋಡು, ಕೆತ್ತು (ಅೞ್ಗಿದ ಬಿಲ್ವಡೆ ಮಾಣದೆ ತಗ್ಗಿದ ರಥಂ ಎಯ್ದೆ ಬಗಿದ ಪುಣ್ಗಳ ಪೊಱೆಯಿಂ ಮೊೞ್ಗಿದ ಕರಿಘಟೆ ಜವಂ ಅಡುವ ಅೞ್ಗೆಯಂ ಅನುಕರಿಸೆ ವೀರಭಟರಣರಂಗಂ: ಪಂಪಭಾ, ೧೧. ೬೪):
ಬಗೆ
[ನಾ] ಮನಸ್ಸು (ತುಂಗ ಭವದ್ಬೋಧದ ಬೆಳಗಿಂಗೆ ಒಳಗಪ್ಪನಿತು ಎನ್ನ ಬಗೆ ಪುಗದು: ಆದಿಪು, ೮. ೧೦); [ಕ್ರಿ] ಚಿಂತಿಸು, ಧ್ಯಾನಿಸು (ಮುಳಿಸಿನ ದಳ್ಳುರಿಗನುಗುೞುತ್ತುಂ ಚಕ್ರರತ್ನಮಂ ಬಗೆದು ಬೆಸಸಿದಂ ಭರತೇಶಂ: ಆದಿಪು, ೧೪. ೧೧೫); [ಕ್ರಿ] ನಿರ್ಧರಿಸು (ಈಗಡೆ ಜೈನದೀಕ್ಷೆಯಂ ಕೊಂಡು ಅಡಿಗೆಱಗಿಸುವೆಂ ಸಮಸ್ತಸುರ ಸಮುದಯಮಂ ಎಂದಿಂತು ಬಗೆದು: ಆದಿಪು, ೧೪. ೧೨೭ ಮತ್ತು ೧೨೮); [ನಾ] ರೀತಿ (ಬಗೆ ಪೊಸತಪ್ಪುದಾಗೆ ಮೃದು ಬಂಧದೊಳೊಂದುವುದೊಂದಿ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು: ಪಂಪಭಾ, ೧. ೮); [ಕ್ರಿ] ಭಾವಿಸು (ವಸುಧೆಗಸದಳಮಾಯ್ತು ಆ ಮಗನಂದಂ ಎಂದು ಲೋಗರ್ ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್: ಪಂಪಭಾ, ೧. ೯೭); [ನಾ] ಚಿಂತನೆ (ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ ಕಾಲಮೇಘಸಮೂಹಂ ದೆಸೆಯೆಲ್ಲಮಂ ಕವಿದುದೋ: ಪಂಪಭಾ, ೪. ೪೯); [ನಾ] ಇಷ್ಟ (ಉಸಿರ್ದೊಡೆ ಬಗೆ ತೀರ್ಗುಂ ಬಿಸಿದುಂ ಬೆಟ್ಟಿತ್ತುಂ ಉಸಿರದೇಂ ತೀರ್ದಪುದೇ: ಪಂಪಭಾ, ೪. ೬೫); [ಕ್ರಿ] ಲೆಕ್ಕಿಸು (ದಿವ್ಯವಚನಮಂ ಅದಂ ಅಂತೇನುಂ ಬಗೆಯದೆ ಕುಡಿದು ಅಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ: ಪಂಪಭಾ, ೮. ೪೦); [ಕ್ರಿ] ಪರಿಗಣಿಸು (ಶಲ್ಯನಂ ಅಂದು ಅಖಲ್ಯನಂ ಬಗೆವವೊಲ್ ಏಳಿದಂ ಬಗೆದು ದಂತಿಯಂ ಆಗಡೆ ತೋಱಿಕೊಟ್ಟು: ಪಂಪಭಾ, ೧೦. ೧೧೧); [ನಾ] ಮನೋರಥ (ಅಂತು ತನ್ನ ಪಗೆಯುಂ ಬಗೆಯುಂ ಒಡನೊಡನೆ ಮುಡಿಯೆ: ಪಂಪಭಾ, ೧೨. ೧೫೫ ವ); [ಕ್ರಿ] ಯೋಚನೆ ಮಾಡು (ಪಗೆಗೆ ಕಣಿಯುಂಟೇ ನಣ್ಪಿಂಗಂ ಆಗರಮುಂಟೆ ನೀಂ ಬಗೆಯ: ಪಂಪಭಾ, ೧೩. ೧೦)
ಬಗೆಗಲ್
[ಕ್ರಿ] [ಬಗೆ+ಕಲ್] ಮನಸ್ಸನ್ನು ತಿಳಿ (ಈ ಕಿಱಿಯವಳ್ ನಮಗೊಂದುಮಂ ಇಂತುಟೆನ್ನಳ್ ಇನ್ನುಂ ಬಗೆಗಲ್ವಂ ಅನ್ನೆವರೆಗಂ ಉಮ್ಮಳಿಸುತ್ತಿರದಿರ್: ಆದಿಪು, ೩. ೨೬)
ಬಗೆಗುಂ
ಆಲೋಚಿಸುತ್ತದೆ (ಕನ್ನೆತನಂಗೆಯ್ಯಲ್ ಬಗೆಗುಂ ನಾಣ್ ಮಿಗೆ ಮನಮುಂ ಇೞುವರಿಯಲ್ ಬಗೆಗುಂ ಕನ್ನಡಿಕುಂ ತನ್ನಳಿಪಂ ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್: ಪಂಪಭಾ, ೪. ೫೫)
ಬಗೆಗೆ ಬರ್
[ಕ್ರಿ] ಮನಸ್ಸಿಗೆ ತೋಚು, ಇಷ್ಟವಾಗು (ಅಂತು ಕೊಟ್ಟ ಅಯ್ದು ಮಂತ್ರಂಗಳಂ ಆಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆ ಎಂದು ಬೆಸಸಿದೊಡೆ: ಪಂಪಭಾ, ೧. ೮೯ ವ)
ಬಗೆಗೆ ವರ್
[ಕ್ರಿ] ಇಷ್ಟವಾಗು (ಎಂದು ಬಗೆಗೆ ವಂದ ಪೂಗಳೊಳ್ ಪೂದುಡುಗೆಯಂ ಮಾಡಿ ವಸಂತಕಾಂತೆಯರಂತೆ ನೆಱೆಯೆ ಕಯ್ಗೆಯ್ದಾಗಳ್: ಆದಿಪು, ೧೧. ೧೨೮ ವ)
ಬಗೆಗೆಡು
[ಕ್ರಿ] [ಬಗೆ+ಕೆಡು] ಬುದ್ಧಿಹೀನನಾಗು (ಪೊಣರ್ದು ಗೆಲ್ವನೇ ನಿಜತನೂಭವಂ ಹರಿಗನೊಳ್ ಏಂ ಬಗೆಗೆಟ್ಟೆಯೊ ಧುರದೊಳ್ ಅವಂ ಮಿಗಿಲೆನೆ ನಿನಗೆ ಪಗಲೊಳೇಂ ಕೞ್ತಲೆಯೇ: ಪಂಪಭಾ, ೧೨. ೧೪೩)
ಬಗೆಗೊಳ್
[ಕ್ರಿ] ಮನಸ್ಸಿಗೆ ತೆಗೆದುಕೊ (ಬಗೆಗೊಂಡು ಅಭೀತಮನಂ ಅರ್ಚಿಸಿ ಬಂದಿಸಿ ಚೈತ್ಯಗೇಹಮುಳ್ಳನಿತುಮಂ ಆಱುಮಾಸಂ ಅದಱಿಂ ಬಳಿಕ ಅಚ್ಯುತಕಲ್ಪದೊಳ್: ಆದಿಪು, ೩. ೮); [ಕ್ರಿ] ಮನಸ್ಸಿನಾಳದಲ್ಲಿರು, ಸಹಜವಾಗಿರು (ಬಗೆಗೊಂಡ ಕುಲಧನಂ ಸಮದಗಜಂ ಜಾತ್ಯಶ್ವಮೆಂಬಿವಂ ಮತ್ತೊರ್ಬಂ ಪಗೆವಂಗೆ ಕೊಟ್ಟು ಚಿಃ ಕೆಮ್ಮಗೆ ಬೆಸೆವವಂ ಅರಸದೆಂತೊ ಪಗರಣದರಸಂ: ಆದಿಪು, ೧೨. ೯೮)
ಬಗೆಗೊಳ್
[ಕ್ರಿ] ಆಕರ್ಷಿಸು (ಕಳಕಂಠಗೀತಂ ಬಗೆಗೊಳೆಯುಂ ವೀಣಾಕ್ವಣಂ ಮನಂಗೊಳೆಯುಂ: ಆದಿಪು, ೧೧. ೨೮)
ಬಗೆದ ಬಗೆ
[ನಾ] ಕಲ್ಪನೆಯ ರೀತಿ (ಆಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ ಆದಿತ್ಯನ ತೇಜದಗುಂತಿಯುಮಂ .. .. ಸಂಕ್ರಮಿಸಿ ನಿಜನಿವಾಸಕ್ಕೆ ಪೋದಂ: ಪಂಪಭಾ, ೧. ೧೩೯ ವ); [ನಾ] ಅಂದುಕೊಂಡ ರೀತಿ (ಬಗೆಯದೆ ಮೆಯ್ಸೊಕಮಂ ಬಗೆ ಪಗೆವರ ಕಡುವೆರ್ಚಂ ಎನ್ನ ಪೂಣ್ಕೆಯಂ ಎರ್ದೆಯೊಳ್ ಬಗೆ ಮುನಿಯ ಮಂತ್ರಪದಮಂ ಬಗೆ ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ: ಪಂಪಭಾ, ೭. ೬೭)
ಬಗೆದರ್
{ಬಗೆ+ತರ್] ಮನಸ್ಸನ್ನು ಕೊಡು, ಒಪ್ಪು (ಪುತ್ರಕಳತ್ರಪರಿಗ್ರಹಕ್ಕೆ ಮಾಣದೆ ಬಗೆದರ್ಪುದು ಒಲ್ಲೆನಿದಂ ಎಂದೊಡೆ ಸೃಷ್ಟಿಯೆ ಕೆಟ್ಟುಪೋಗದೇ: ಆದಿಪು, ೮. ೧೧)
ಬಗೆದೀರ್
[ಬಗೆ+ತೀರ್] ತೃಪ್ತಿಹೊಂದು (ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ .. .. ಪತಿವ್ರತಾಗುಣದಿಂ ಮೆಚ್ಚಿಸು ನೀಂ: ಪಂಪಭಾ, ೧. ೧೧೮)
ಬಗೆದೆಡೆ
ಇಷ್ಟಬಂದ ಜಾಗ (ಬಗೆಯೆಡೆಯನೆಯ್ದಿ ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ ಜೋಡೆಯರಂ ಕಂಡು: ಪಂಪಭಾ, ೪. ೮೧ ವ)
ಬಗೆಬರ್
[ಕ್ರಿ] ಮನಸ್ಸುಂಟಾಗು (ನಾವಾಡುವಮೆ ಬನ್ನಿಂ ಎಂಬುದುಂ ಆಡುವ ಬಗೆ ಬಂದು ನೆತ್ತಮಂ ಧರ್ಮಸುತಂ: ಪಂಪಭಾ, ೬. ೭೦); ಮನಸ್ಸು ಬರು, ಮನಸ್ಸುಂಟಾಗು (ನೆಲನಂ ಒಪ್ಪಿಸಿ ತಪ್ಪದೆ ಬಾೞ್ವೆಂ ಎನ್ನದೆ ಈ ಉರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು: ಪಂಪಭಾ, ೯. ೫೦)
ಬಗೆಯಂ ತರ್
[ಕ್ರಿ] ನಿಶ್ಚಯಿಸು (ಕ್ಷಿತಿಪತಿ ಬೇಱಿರಿಸಿ ಮಾನ್ಯರಂ ಮನ್ನಿಸೆ ತದ್ವ್ರತಹೀನರುಂ ಅಂದು ಅಖಿಳಬ್ರತಮಂ ಕೈಕೊಳ್ವ ಬಗೆಗೆ ಬಗೆಯಂ ತಂದರ್: ಆದಿಪು, ೧೫. ೧೩)
ಬಗೆಯಱಿ