भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಳೆದೆಸಕ

[ನಾ] ಬೆಳೆದ ರೀತಿ (ಅಂತು ವಸುಷೇಣನಾ ಲೋಕಾಂತಂಬರಮಳವಿ ಬಳೆಯೆ ಬಳೆದೆಸಕಮನೋರಂತೆ ಜನಂಗಳ ಕರ್ಣೋಪಾಂತದೊಳೊಗೆದೆಸೆಯೆ ಕರ್ಣನೆಂಬನುಮಾದಂ: ಪಂಪಭಾ, ೧. ೯೮)

ಬಳೆದೊಡು

[ಕ್ರಿ] [ಬಳೆ+ತೊಡು] [ಗಂಡಸು] ಬಳೆಯನ್ನು ತೊಡು ಎಂದರೆ ಹೇಡಿಯಾಗು (ಇಂತು ಗೋವಳಿಗನ ಗೆಡೆಗೊಂಡು ಮುಂ ಬಳೆದೊಟ್ಟ ಪೇಡಿಯೆ ನಿಮ್ಮನಿಂತಿಳಿಸಿ ಮದ್ಬಲಮೆಲ್ಲಮಂ ಕೊಲೆ: ಪಂಪಭಾ, ೧೧. ೧೪)

ಬಳೆಯಿಸು

[ಕ್ರಿ] ನೀಳವಾಗಿಸು (ಕಳೆದುದು ಪತ್ರಭಂಗದ ಬೆಡಂಗುಗಳಂ ಕುಟಿಲಾಲಕಂಗಳಂ ಬಳೆಯಿಸಿದತ್ತು ಕಣ್ಗೆಸೆವ ರಾಗಮನೆಯ್ದಿಸಿ ಕೇಶಹಸ್ತಮಂ ಚಳಿಯಿಸಿದತ್ತು: ಆದಿಪು, ೧೧. ೧೫೦); [ಕ್ರಿ] ಮಾಡಿಸು (ಉತ್ಪಾತಶಾಂತಿಪೌಷ್ಟಿಕ ಕ್ರಿಯೆಗಳಂ ಮಹಾಬ್ರಾಹ್ಮಣರಿಂದಂ ಬಳಿಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು: ಪಂಪಭಾ, ೧. ೧೩೩ ವ)

ಬಳೆಯುತ್ತಿರ್ಪನ್ನೆಗಂ

ಬೇಳೆಯುತ್ತಿರುವಷ್ಠರಲ್ಲಿ (ಕುಂತಿ ಕುಂತಿಭೋಜನ ಮನೆಯೊಳ್ ಬಳೆಯುತ್ತಿರ್ಪನ್ನೆಗಂ ಆ ನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂಗೊಳೆ ಕೊಟ್ಟಂ ದುರ್ವಾಸಂ ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ: ಪಂಪಭಾ, ೧. ೮೮ ಮತ್ತು ೧. ೮೯)

ಬಳೆಯೆ ನುಡಿ

[ಕ್ರಿ] ಹೆಚ್ಚಾಗಿ ಮಾತಾಡು (ಒಂದು ಮನೆವಾರ್ತೆಗಿದೇನೆಂದರಸ ಬಳೆಯೆ ನುಡಿದಪೆ: ಆದಿಪು, ೧೪. ೩೦)

ಬಳೆವರ್

[ಕ್ರಿ] ಬೆಳೆಯುತ್ತಿರು (ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪವರ್: ಪಂಪಭಾ, ೧. ೧೧೮ ವ)

ಬಳೆವೋಗು

[ಕ್ರಿ] ಬಳೆಯು [ಅಣಸು] ಕಳಚಿ ಬೀಳು (ಕಟ್ಟಿದಿರೊಳೆ ನೂಂಕಿದಾನೆಗಳ ಕೋಡುಗಳಿಂ ಬಳೆವೋಗೆ ಪೊಯ್ದುಂ: ಪಂಪಭಾ, ೧೦. ೪೧)

ಬಳ್ಕು

[ಕ್ರಿ] ತೊನೆದಾಡು (ತ್ರಿವಳಿಗಳುಂ ವಿರೋಧಿನೃಪರುತ್ಸವಮುಂ ಕಿಡೆವಂದುವು ಆನನೇಂದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮುನ್ನೆ ಬಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು: ಪಂಪಭಾ, ೧. ೧೨೫); [ಕ್ರಿ] ನಡುಗು (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಬಳ್ವಳ

[ಗು] ಅತಿಶಯ (ನನೆಗಳ ಗೊಂಚಲಂ ತಳಿರ ತೊಂಗಲನಾಡುವ ಬಳ್ವಳಪ್ಪ ಕೊಂಬಿನ ಮಿಡಿಯಂ ತೆರಳ್ಚಿ ತೆಗೆದು ಓವದೆ ಕಾಯದೆ: ಆದಿಪು, ೧೧. ೧೩೨)

ಬಳ್ವಳ ನೀಳ್

[ಕ್ರಿ] ತುಂಬ ದೀರ್ಘವಾಗು (ಬಳ್ವಳ ನೀಳ್ದ ಕಣ್ಮಲರ ತಳ್ತಮೆಯಿಂ ಕರೆಗಣ್ಮಿ ಬೆಳ್ಗಡಲ್ಗಳ್ ಪರಿಯಲ್ಕಂ ಆಟಿಸಿದೊಡೆ: ಪಂಪಭಾ, ೭. ೬೮)

ಬಳ್ವಳ ಬಳೆ

[ಕ್ರಿ] ಎಲ್ಲೆಲ್ಲೂ ವ್ಯಾಪಿಸು (ಸುರಕಾಂತಾನೃತ್ಯಮೆತ್ತಂ ಪಸರಿಸಿರೆ ನಭೋಭಾಗದೊಳ್ ದೇವತೂರ್ಯಸ್ವರಂ ಆಶಾಚಕ್ರದೊಳ್ ಬಳ್ವಳಬಳೆದಿರೆ: ಆದಿಪು, ೮. ೬೭); [ಕ್ರಿ] ಬಳಬಳ ಬೆಳೆ, ಸೊಂಪಾಗಿ ಬೆಳೆಯುವುದು (ಮಾಧವೀಲತೆಯ ಬಳ್ಳವಳ್ಳಿಯ ಬಳ್ಳಿಗಾವಣದ ಮುಂದೆ ಬಳ್ವಳ ಬಳೆದೆಳದಳಿಸುವ ಪೊಸ ಕೆಂದಳಿರ ಗೊಂದಳದೊಳೆ: ಆದಿಪು, ೧೧. ೭೩ ವ)

ಬಳ್ವಳನಾಗು

[ಕ್ರಿ] ವಿಶಾಲಗೊಳ್ಳು (ದೆಸೆಗಳನೆಂಟುಂ ನೆಱೆಯೆ ಮುನ್ನಮೆ ಮಳ್ವಳನಾಗೆ ಮಾಡದೆ ಆಗಸಮುಮಂ ಉಚ್ಚಮಾಗಿನಿಸನೆತ್ತದೆ: ಆದಿಪು, ೧೧. ೩೫)

ಬಳ್ವಳಾಗು

[ಕ್ರಿ] ವಿಸ್ತರಿಸು (ಆತನ ಪಡೆಗೆ ನಡೆಯಲೆಡೆಮಾಡಿದಂತೆ ಬಳ್ವಳಾದ ದೆಸೆಗಳುಂ: ಆದಿಪು, ೧೧. ೫ ವ)

ಬಳ್ವಳಿಕೆ

[ನಾ] ಬಳುಕಾಟ (ಮಿಸುಗುವ ತನ್ನ ಬಾಯ್ದೆಱೆಯೊಳ್ ಆಲದ ಪಣ್ಣನೆ ಮೈಯ ಬಣ್ಣದೊಳ್ ಕೊಸಗನೆ ತನ್ನ ಬಳ್ವಳಿಕೆಯೊಳ್ ಸೆಳೆಗೊಂಬನೆ ಪೋಲ್ತು: ಆದಿಪು, ೧೨. ೩೮); [ನಾ] ಅಲುಗಾಟ (ನಳಿತೋಳ ಬಳ್ವಳಿಕೆ ಕಣ್ಗೊಳೆ ಘಟ್ಟಿಮಗುೞ್ಚುವಂದಮಲ್ತು ಅರೆದು ಮಗುೞ್ಚುವಂದಮೆ ದಲ್ ಎನ್ನೆರ್ದೆಯಂ: ಪಂಪಭಾ, ೮. ೬೦); [ನಾ] ಹೊಯ್ದಾಟ, ಬೀಸಾಟ (ತಳರ್ದುದು ಕರ್ಣತಾಳ ಪವನ ಆಹತಿಯಿಂ ಜಳರಾಶಿ ಕೆಯ್ಯ ಬಳ್ವಳಿಕೆಗೆ ದಿಗ್ಜಜಂ ದೆಸೆಯಿನತ್ತ ತೆರಳ್ದುವು ಕಾಯ್ಪಿನಿಂ: ಪಂಪಭಾ, ೧೧. ೭೧)

ಬಳ್ಳ

[ನಾ] ಧಾನ್ಯದ ಒಂದು ಅಳತೆ (ಸೆಟ್ಟಿಯ ಬಳ್ಳಂ ಕಿಱಿದು ಎಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೈ: ಪಂಪಭಾ, ೧೨. ೧೭೫)

ಬಳ್ಳವಳ್ಳಿ

[ನಾ] ಹಬ್ಬುಗೆ (ಒಡೆವಳೆದ ಅಂಬರೇಚರರನ್ವಿತ ಮಂತ್ರಿಸಮೂಹಮಂ ಮನಂಬಿಡೆ ಪೊರೆದ ಇಷ್ಟಬಂಧುಜನಮಂ ಕರೆದು: ಆದಿಪು, ೨. ೫೦); [ನಾ] ಅತಿಶಯ, ಆಧಿಕ್ಯ (ಸುರತ ಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾವಿನೋದ ನೀಡದಿಂ: ಪಂಪಭಾ, ೧. ೫೮)

ಬಳ್ಳಿಗವುಂಗು

[ನಾ] [ಬಳ್ಳಿ+ಕವುಂಗು] ಎಳೆಯ ಅಡಕೆಯ ಸಸಿ (ಬಳ್ಳಿಗವುಂಗಂ ತಳ್ತೆಲೆವಳ್ಳಿಯ ಕೞ್ತಲೆಯನಲೆವ ಸೊಡರ್ಗುಡಿಗಳಂ: ಆದಿಪು, ೧೧. ೬೭)

ಬಳ್ಳಿಗಾವಣ

[ನಾ] [ಬಳ್ಳಿ+ಕಾವಣ] ಬಳ್ಳಿಯ ಚಪ್ಪರ, ಬಳ್ಳಿಮಾಡ, (ಮಾಧವೀಲತೆಯ ಬಳ್ಳವಳ್ಳಿಯ ಬಳ್ಳಿಗಾವಣದ ಮುಂದೆ ಬಳ್ವಳ ಬಳೆದೆಳದಳಿಸುವ ಪೊಸ ಕೆಂದಳಿರ ಗೊಂದಳದೊಳೆ: ಆದಿಪು, ೧೧. ೭೩ ವ)

ಬಳ್ಳಿಮಾಡ

[ನಾ] ಲತಾಕುಂಜ, ಬಳ್ಳಿಯ ಮಂಟಪ (ಸುರತ ಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾವಿನೋದ ನೀಡದಿಂ; ಪಂಪಭಾ, ೧. ೫೮)

ಬಳ್ಳಿವಳ್ಳಿ

[ನಾ] ಬಳ್ಳಿಯಂತೆ ಹಬ್ಬಿಕೊಂಡಿರುವುದು (ಮಾಧವೀಲತೆಯ ಬಳ್ಳವಳ್ಳಿಯ ಬಳ್ಳಿಗಾವಣದ ಮುಂದೆ ಬಳ್ವಳ ಬಳೆದೆಳದಳಿಸುವ ಪೊಸ ಕೆಂದಳಿರ ಗೊಂದಳದೊಳೆ: ಆದಿಪು, ೧೧. ೭೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App