भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಗೆಯಾಣ್ಮ

[ನಾ] ಮನದನ್ನ, ಪ್ರಿಯ (ಮನೆಯಾಣ್ಮನ ಕಣ್ಣೆಮೆಯ ಕಾಂಡಪಟಮಾಗೆಯುಂ ಬಗೆಯಾಣ್ಮನ ಕಣ್ಣೆಮೆಯ ದೂದವಿಯಾಗೆಯುಂ: ಪಂಪಭಾ, ೪. ೮೧ ವ)

ಬಗೆವೇೞ್

[ಕ್ರಿ] ಸಮಾಧಾನಪಡಿಸು (ತನಯರನಿಟ್ಟು ಸಂತತಿಯೊಳ್ ಇಂತೆಮಗಂ ಬಗೆವೇೞದೇಕೆ ಪೋದನೊ ನೃಪಂ: ಆದಿಪು, ಆದಿಪು, ೯. ೭೬)

ಬಗ್ಗಿಸು

[ಕ್ರಿ] ಇಂಚರವುಂಟುಮಾಡು (ಮಾವನೆ ಮಱೆಗೊಂಡು ಬಗ್ಗಿಸುವ ಕೋಗಿಲೆ ಕೋಗಿಲೆಯಿರ್ಕೆದಾಣದೊಳ್ ಜಿನುಗುವ ತುಂಬಿ: ಆದಿಪು, ೧. ೬೫); [ಕ್ರಿ] ಗದರಿಸು (ಕಳಕಳಿಪ ಅಮರಿಯರಂ ಕಣ್ಣೊಳೆ ಬಗ್ಗಿಸುವಲ್ಲಿ .. .. ಕರಮೆರ್ದೆಗೊಳಿಸಿದುದಾಕೆಯ ವಿಭ್ರಮಭ್ರೂಭಂಗಂ: ಆದಿಪು, ೭. ೧೫); [ಕ್ರಿ] ಟೀಕಿಸು (ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡಿದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಳಗಿಳಿಗಳುಮಂ: ಪಂಪಭಾ, ೧. ೧೧೫ ವ)

ಬಂಚಿಸು

[ಕ್ರಿ] ಮರೆಮಾಚು (ಕೆಲಕೆಲವು ಅವಿನಾಣಂಗಳಂ ನಾಣ್ಚಿ ಬಂಚಿಸಿ ಪಿರಿದುಮನುರಾಗದಿಮೆನ್ನ ಬರೆದ ಪಟಮನಿದಂ ಅರ್ಚಿಸಿ: ಆದಿಪು, ೩. ೪೩ ವ); [ಕ್ರಿ] ವಂಚಿಸು (ಲಸನ್ನೇತ್ರಂಗಳಂ ಕೂಡೆ ಬಂಚಿಸುತುಂ ಮೆಟ್ಟುವ ಮೆಟ್ಟಿನೊಳ್ಪು: ಆದಿಪು, ೭. ೧೨೩); [ಕ್ರಿ] ತಿಳಿಯದ ರೀತಿಯಲ್ಲಿ (ಎನ್ನಂ ಬಂಚಿಸಿ ಪೋದುದಱೊಳ್ ನಿನಗೆ ಪಗೆವರಿಂದ ಇನಿತೆಡಱಾಯ್ತು: ಪಂಪಭಾ, ೧೩. ೧೦೪)

ಬಚ್ಚ

[ನಾ] [ವೈಶ್ಯ] ವ್ಯಾಪಾರಿ (ಧನದ ಭವನಮೆನಿಪ ಸಿರಿಯ ಬಚ್ಚರ ಆಪಣಂಗಳಿಂ ಪೊದಳ್ದ ಕಾವಣಂಗಳಿಂ: ಪಂಪಭಾ, ೧. ೫೮)

ಬಜ್ಜರಿಗೞ್ತೆ

[ನಾ] ಹೇಸರಗತ್ತೆ (ಕರಿಯ ಪಿರಿಯ ಮೆಯ್ಯ ನಿಡಿಯ ಕಿವಿಯ ಕುಣಿದು ಮೆಟ್ಟುವ ಬಜ್ಜರಿಗೞ್ತೆಗಳುಮಂ: ಆದಿಪು, ೪. ೫೪ ವ) [ಎಲ್. ಬಸವರಾಜು ಅವರ ಆವೃತ್ತಿ]

ಬಜ್ಜರಿಗೆ

[ನಾ] ಹೇಸರಗತ್ತೆ (ಅವಯವದೆ ಕುಣಿದು ಮೆಟ್ಟಿವ ಸವಡಿಯ ವಜ್ಜರಿಗೆ ಪಿಡಿದ ಸತ್ತಿಗೆಯ ವಿಳಾಸವದು ಅಮರ್ದ ಲೀಲೆಯಿಂ: ಆದಿಪು, ೧೧. ೪೧) [ನರಸಿಂಹಶಾಸ್ತ್ರಿಗಳು ‘ಬಿಜ್ಜಣಿಗೆ’ ಎಂಬ ಪಾಠವನ್ನೂ ವೆಂಕಟಾಚಲಸ್ತ್ರಿಗಳು ‘ವಜ್ಜರಿಗೆ ಎಂಬ ಪಾಠವನ್ನೂ ಸ್ವೀಕರಿಸುತ್ತಾರೆ]

ಬಂಟು

[ನಾ] ಮೈಗಾವಲ ಪಡೆ (ತುರಗಮುಮೊಂದು ಸತ್ತಿಗೆಯುಮೊಂದಿರೆ ಕಾಪಿನ ಬಂಟು ಸುತ್ತಲುಂ ಬರೆ: ಆದಿಪು, ೧೧. ೪೬)

ಬಟ್ಟಗೊಡೆ

[ನಾ] [ಬಟ್ಟ+ಕೊಡೆ] ಗುಂಡಾದ ಛತ್ರಿ (ಬಟ್ಟಗೊಡೆ ಚಂದ್ರಕಾಂತಿಯಂ ಅಟ್ಟುಂಬರಿಗೊಳೆ ಪೊದಳ್ದ ಕೃಷ್ಣಾಜಿನಂ ಒಂದು ಇಟ್ಟಳಮೆಸೆಯೆ ಬೆಡಂಗಂ ಪುಟ್ಟಿಸೆ ಗಾಡಿಗಳೊಳೆಸೆವ ವೀಣಾಕ್ವಣಿತಂ: ಪಂಪಭಾ, ೬. ೯)

ಬಟ್ಟನೆ ಬಾ

[ಕ್ರಿ] ಸುತ್ತುವರಿ (ಷೋಡಶ ಋತ್ವಿಜರ್ಗೆ ಇತ್ತುದಕ್ಕೆ ಬಾಯ್ವಿಟ್ಟಿರೆ ವಿಪ್ರಕೋಟಿ ಮಡಗಲ್ಕೆಡೆಯಿಲ್ಲದೆ ಪೊನ್ನ ರಾಶಿಯಂ ಬಟ್ಟನೆ ಬಂದು ಕಾಯೆ ಏಂ ತೊದಳಿಲ್ಲದಿತ್ತನೋ: ಪಂಪಭಾ, ೬. ೩೯)

ಬಟ್ಟಿಗೆವಲಗೆ

[ನಾ] [ಮೃತ್ತಿಕಾಫಲಕ] ಚಿತ್ರ ಬರೆಯುವ [ಮಣ್ಣಿನ] ಹಲಗೆ (ಬರೆಯಲೆಂದು ಬಟ್ಟಿಗೆವಲಗೆಯಂ ತರಿಸಿ ತಿಟ್ಟಮಿಟ್ಟು ಬರೆವನ್ನೆಗಂ: ಆದಿಪು, ೪. ೬೩ ವ)

ಬಟ್ಟಿತು

[ಗು] (ತುಱುಗೆಮೆ ನೀಳ್ದ ಪುರ್ವು ನಿಡುಗಣ್ ಪೊಱೆಯಲ್ಲದೆ ಬಟ್ಟಿತಪ್ಪ ಬಾಯ್ದೆಱೆ ತನುರೇಖೆಗೊಂಡ ಕೊರಲ್ .. .. ಎಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್: ಪಂಪಭಾ, ೧. ೧೦೮)

ಬಟ್ಟಿನಂಬು

[ನಾ] ದುಂಡಾದ ಅಲಗುಳ್ಳ ಬಾಣ (ಆತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ ಕೆಲ್ಲಂಬಿನ ತಂದಲುಮಂ ಪಾರೆಯಂಬಿನ ಸೋನೆಯುಮಂ ಸುರಿಯೆ: ಪಂಪಭಾ, ೧೨. ೨೧ ವ)

ಬಟ್ಟು

[ನಾ] [ವೃತ್ತ] ಬಚ್ಚದಾಟ, ಬಿಲ್ಲೆಯಾಟ (ಒಡನಾಡಿಯುಂ ಒಡನೋದಿಯುಂ ಒಡವಳೆದುಂ ಗುಳ್ಳೆಗೊಟ್ಟಿ ಬಟ್ಟು ಉಳಿಸೆಂಡುಂ ಪೊಡೆಸೆಂಡು ಇವಂ ಆಡುತ್ತ ಒಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್: ಪಂಪಭಾ, ೨. ೩೦)

ಬಟ್ಟೆ

[ನಾ] [ವರ್ತ್ಮ] ದಾರಿ (ನಿಜಪರಿಜನಂ ಬೆರಸು ಗಂಗೆಯಂ ಪಾಯ್ದು ಅದಱ ಪಡುವಣ ದೆಸೆಯ ಕಾಮ್ಯಕವನಕ್ಕೆ ಬಟ್ಟೆಯಂ ತಗುಳ್ದು ಪೋಗೆವೋಗೆ: ಪಂಪಭಾ, ೭. ೨೧ ವ)

ಬಟ್ಟೆಗಳಂ ಸೋದಿಸು

[ಕ್ರಿ] ದಾರಿ ಹುಡುಕು, ಉಪಾಯಮಾಡು (ನಾಮಿದನಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಂ ಎಂದು ನಿಚ್ಚಂ ಬೇಂಟೆವೋಗೆ: ಪಂಪಭಾ, ೩. ೪ ವ)

ಬಟ್ಟೆದೋಱು

[ಕ್ರಿ] ತೋರಿಸು (ಗುಣಾರ್ಣವಭೂಭುಜಂಗೆ ಬಟ್ಟೆದೋಱುವವೊಲಂದು ಒಗೆದಂ ಕಮಲೈಕಬಾಂಧವಂ: ಪಂಪಭಾ, ೪. ೧೧೧)

ಬಟ್ಟೆಯ ಕಣ್

[ನಾ] ದಾರಿಯೆದುರು, ದಾರಿಗೆ ಅಡ್ಡ (ಅಲ್ಲಿಂ ತಳರ್ದು ಬಟ್ಟೆಯ ಕಣ್ಣೊಳ್ ಅಡ್ಡಂಬಿೞ್ದಿರ್ದ ವೃದ್ಧವಾನರನಂ ಕಂಡು: ಪಂಪಭಾ, ೮. ೩೧ ನ)

ಬಟ್ಟೆಯರ್

[ನಾ] ದಾರಿಹೋಕರು (ವಿವಿಧ ದೇವಗೃಹದಾಟಪಾಟದಿಂ ಮಱುಗಿ ಬಟ್ಟೆಯರ ನೋೞ್ಪ ನೋಟದಿಂ: ಪಂಪಭಾ, ೩. ೨೨)

ಬಟ್ಟೆವೋಗು

[ಕ್ರಿ] ದಾರಿಯನ್ನು ಅನುಸರಿಸು (ನಿಮ್ಮ ಮುದುಗಣ್ತನದೊಳಿದೇಂ ಉಂತೆ ಬಟ್ಟೆವೋಪೊಡೆ ಪೋಗಿಂ: ಆದಿಪು, ೯. ೧೦೭)

Search Dictionaries

Loading Results

Follow Us :   
  Download Bharatavani App
  Bharatavani Windows App