भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೂತು

[ನಾ] ಭೂತ (ಈ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗಿಂತಾದರಂಗೆಯ್ವುದೆಲ್ಲಂ ನಮ್ಮಂ ಮೆೞ್ಪಡಿಸಲೆಂದೆ ಮಾಡಿದಂ: ಪಂಪಭಾ, ೩. ೪ ವ); [ನಾ] ಸಾಮಾನ್ಯವ್ಯಕ್ತಿ (ತಲೆಯೊಳ್ ನಾಲಗೆಯುಳ್ಳ ಬೂತುಗಳ್ಗೆಲ್ಲಂ ಇಲ್ಲೆನ್ನದೆ ಈಯುತ್ತುಂ ನಿಜನಿವಾಸಕ್ಕೆ ವಂದು: ಪಂಪಭಾ, ೧೨. ೫೨ ವ)

ಬೂತುಗೊಳ್

[ಕ್ರಿ] ಪಿಶಾಚಿ ಮೆಟ್ಟು, ಆವೇಶಗೊಳ್ಳು (ನೆಟ್ಟನೆ ಬೂತುಗೊಳ್ವ ತೆಱದಿಂ ದಶಕಂಧರನಾಡಿ ಪಾಡಿ ನಾಣ್ಗೆಟ್ಟಿರೆ: ಪಂಪಭಾ, ೯. ೫೩)

ಬೂತುತಪ

[ನಾ] ಬಡಪಾಯಿಗಳ ತಪಸ್ಸು (ಮತ್ತಿನ ಬೂತುತಪಂಗಳ್ ಎಮ್ಮ ಪುರ್ವಿನ ಕಡೆಯೊಂದು ಜರ್ವಿನೊಳೆ ತೀರ್ವುವು: ಪಂಪಭಾ, ೭. ೮೧)

ಬೃಹಂದಳೆ

[ನಾ] ಬೃಹನ್ನಳೆ, ನಪುಂಸಕ (ಬಾಳೆಯರಂ ದಲಾಡಿಪ ಬೃಹಂದಳೆ ಫಲ್ಗುಣಂ: ಪಂಪಭಾ, ೯. ೬); [ನಾ] ಅಜ್ಞಾತವಾಸ ಕಾಲದಲ್ಲಿ ಅರ್ಜುನ ತಳೆದಿದ್ದ ನಪುಂಸಕನ ವೇಷ (ಒಂದಬ್ದದೊಳೆ ಬೃಹಂದಳೆಯಾಗೆಂದು ಮುನಿದು ಶಾಪಮನಿತ್ತಳ್: ಪಂಪಭಾ, ೮. ೨೯)

ಬೃಂಹಿತ

[ನಾ] ಆನೆಯ ಘೀಳಿಡುವಿಕೆ (ಘನಾಘನನಿನಾದದಿಂ ಬೃಂಹಿತಂಗೆಯ್ವ ವಿಜಯಗಜಮಂ ನೆಲನಂ ಪೊಕ್ಕಡಂಗಿದ ಪಗೆವರಂ ಅಗುೞ್ದು ಕೊಲ್ವುದಂ ಉದಾಹರಿಸುವಂತೆ: ಪಂಪಭಾ, ೯. ೯೫ ವ)

ಬೆಂಕೆ

[ನಾ] ಉರಿ, ಬೆಂಕಿ (ಅದಱ ಬೆಂಕೆ ಪೋಪಿನಂ ಎಱಗಿಸು ನೀಂ ಮ್ಲೇಚ್ಛಖಂಡಮಂ ಪಡುವಣದಂ: ಆದಿಪು, ೧೩. ೩೩)

ಬೆಂಕೊಳ್

[ಕ್ರಿ] ಹಿಂಬಾಲಿಸು, ಬೆನ್ನಟ್ಟು (ನಿನ್ನಂ ಉೞುಗಿಸಲುಂ ಆಜಿಯೊಳ್ ಎನ್ನಂ ಬೆಂಕೊಂಡು ಕಾದಲುಂ ಬಂದು ಈಗಳ್ ಬಿನ್ನನೆ ಮೊಗದಿಂ ಬೀರರ್ ಬೆನ್ನಿತ್ತುದಂ ಇನಿಸು ನೋಡ ಸರಸಿಜಮುಖೀ: ಪಂಪಭಾ, ೩. ೭೩)

ಬೆಕ್ಕಸಂಬಡು

[ಕ್ರಿ] ಬೆರಗಾಗು (ಬಗೆಯನುಱೆ ಸೆಱೆವಿಡಿದ ವಿದ್ಯಾಧರವಿಳಾಸಕ್ಕಂ ಬೆಕ್ಕಸಂಬಟ್ಟು: ಆದಿಪು, ೨. ೪೧ ವ)

ಬೆಗಡುಗೊಳ್

[ಕ್ರಿ] ಭಯಪಡು (ಆಗಳದಂ ಕಂಡು ಉತ್ತರಂ ಒತ್ತರಂ ಒತ್ತಿದಂತೆ ಬೆರ್ಚಿ ಬೆಗಡುಗೊಂಡು: ಪಂಪಭಾ, ೮. ೯೯ ವ)

ಬೆಂಗೀಶ

[ನಾ] ಬೆಂಗಿ [ವೆಂಗಿ] ದೇಶದ ರಾಜ (ಕನಕೋಚ್ಚಾಸನ ಸಂಸ್ಥಿತಂ ನೃಪನವಂ ಬೆಂಗೀಶಂ ಉತ್ತುಂಗಪೀನ ನಿಜಾಂಸಾರ್ಪಿತ ಲಂಬಹಾರನವಂ ಪಾಂಡ್ಯಂ: ಪಂಪಭಾ, ೩. ೫೪)

ಬೆಂಗೆವರ್

[ಕ್ರಿ] ಬೆನ್ನ ಮೇಲೆ ಹತ್ತು (ದಾನಪ್ರಮೋದ ವಾಚಾಳಷಟ್ಚರಣ ಚಾರಣ ಗಣೋಚ್ಚಾರ ಝಂಕಾರ ಜಯಾಶೀರ್ಘೋಷಮುಮಪ್ಪ ವಿಜಯಗಜದ ಬೆಂಗೆ ವಂದು: ಆದಿಪು, ೧೪. ೯೦ ವ)

ಬೆಂಗೆವಾಯ್

[ಕ್ರಿ] [ಬೆಂಗೆ+ಪಾಯ್] ಹಾರಿ ಬೆನ್ನ ಮೇಲೆ ಕುಳಿತುಕೊ (ಮದಾಂಧ ಗಂಧಸಿಂಧುರಮಪ್ಪ ಪಟ್ಟವರ್ಧನನ ಬೆಂಗೆವಾಯ್ದು .. .. ಸುಯೋಧನಂ ಪೊಱಮಟ್ಟಂ: ಪಂಪಭಾ, ೧೦. ೨೬ ವ)

ಬೆಚ್ಚ ತೞ್ಕೆ

[ನಾ] ಬೆಚ್ಚನಾದ ಅಪ್ಪುಗೆ (ಬಾಯ್ಗೂಟದೊಳ್ ಅೞ್ಕಱಂ ಪಡೆದು ಕೂಟದೊಳುಣ್ಮಿದ ಬೆಚ್ಚ ತೞ್ಕೆಯೊಳ್ ಕೂಟಸುಖಂಗಳಂ ಪಡೆದನೇಂ ಚದುರಂ ಗಳ ಬದ್ದೆದಲ್ಲೞಂ: ಪಂಪಭಾ, ೩. ೮೨)

ಬೆಚ್ಚನುಸಿರ್

[ನಾ] ಬಿಸಿಯುಸಿರು ಬಿಡು (ನಿನ್ನನೆ ಕಾಣಲಾಗದು ಎಂದು ಆ ಲಲಿತಾಂಗಿ ಬೆಚ್ಚನುಸಿರ್ದು ಅಚ್ಚರಿವೆತ್ತಿರೆ ಮೂರ್ಛೆವೋಪುದುಂ: ಆದಿಪು, ೩. ೨೩)

ಬೆಚ್ಚನೆ

[ಅ] ಬಿಸಿಯಾಗಿ (ಆ ಲಲಿತಾಂಗಿ ಬೆಚ್ಚನುಸಿರ್ದಚ್ಚರಿವೆತ್ತಿರೆ ಮೂರ್ಛೆವೋಪುದುಂ: ಆದಿಪು, ೩. ೨೩)

ಬೆಚ್ಚಿಸು

[ಕ್ರಿ] ಹೆದರು (ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಿಯೊಳ್ ತೊಡಂಕಿ ನಿಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಱುವ: ಪಂಪಭಾ, ೮. ೧೦೪)

ಬೆಚ್ಚು

[ಕ್ರಿ] ಬೆಸುಗೆಗೊಳ್ಳು (ಅಂದಿನ ರೂಪು ಶಾಸನಂ ಬರೆದುದು ಬರ್ಚಿಸಿತ್ತು ಅಮರ್ದುದು ಅೞ್ದುದು ಅಳಂಕಿದುದು ಉರ್ಚಿ ಪೊಕ್ಕು ಬೇರ್ವರಿದುದು ಬೆಚ್ಚುದು ಅಚ್ಚಿಱಿದುದು: ಆದಿಪು, ೩. ೪೩)

ಬೆಚ್ಚು ನೀರ್ದಳಿ

[ಕ್ರಿ] ಹೆದರಿಕೆಯನ್ನು ಹೋಗಲಾಡಿಸಲು ಮುಖಕ್ಕೆ ಬಿಸುಪುನೀರನ್ನು ಚುಮುಕಿಸು (ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚು ನೀರ್ದಳಿದಾಗಳ್: ಪಂಪಭಾ, ೧. ೪೩)

ಬೆಜ್ಜ

[ನಾ] ವೈದ್ಯ (ಅಣುಗಾಳ್ಗಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳಂ ಉಡಿಯಲುಂ ಓವಲುಂ ಮರ್ದು ಬೆಜ್ಜರುಮಂ ಅಟ್ಟುತ್ತುಂ: ಪಂಪಭಾ, ೧೧. ೨ ವ)

ಬೆಟ್ಟನಾಗು

[ಕ್ರಿ] ಬಿರುಸಾಗು, ರಭಸವುಳ್ಳವನಾಗು (ನೀಮಿಂತು ಕೆಯ್ಕೊಂಡು ಕಾದೆ ಜಗತ್ಪೂಜಿತ ಬೆಟ್ಟನಾದೊಡೆ ಎಮಗಿಂ ಬಾೞ್ವಾಸೆಯಾವಾಸೆಯೋ: ಪಂಪಭಾ, ೧೧. ೧೨೭)

Search Dictionaries

Loading Results

Follow Us :   
  Download Bharatavani App
  Bharatavani Windows App