भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೆಟ್ಟನೆ

[ಅ] ಬಿರುಸಾಗಿ, ಕಡ್ಡಿ ತುಂಡುಮಾಡಿದಂತೆ (ಅೞಿದೆಂ ನೆಟ್ಟನೆ ಬೆಟ್ಟನೆ ಇಂತು ನುಡಿವೈ ನೀಂ ಕಂದ ಪೋಗು ಇಂದೆ ಕೆಟ್ಟು ಅೞಿದತ್ತಾಗದೆ ಸೋಮವಂಶಂ: ಪಂಪಭಾ, ೯. ೮೬)

ಬೆಟ್ಟಾಗು

[ಕ್ರಿ] ಬೆಟ್ಟವಾಗು, ದೊಡ್ಡದಾಗು (ಅಂತು ಕನಕರೇಣುಗಳ್ ಪುಟ್ಟಿದ ಪಾಸಱೆಗಳುಮಂ ಕನಕದ ಪಿರಿಯ ಸೆಲೆಗಳುಮಂ ಬೆಟ್ಟಾಗಿ ಪುಂಜಿಸಿ: ಪಂಪಭಾ, ೬. ೩೧ ವ)

ಬೆಟ್ಟಿತ್ತು

[ಗು] ಬಿರುಸು, ಗಾಢ (ಬಿಸಿದುಂ ಬೆಟ್ಟಿತ್ತುಂ ಉಸಿರದೇಂ ತೀರ್ದಪುದೇ: ಪಂಪಭಾ, ೪. ೬೦)

ಬೆಟ್ಟು

[ಕ್ರಿ] ಇರಿ, ಚುಚ್ಚು (ಕಾಯ್ದ ಕರ್ಬೊನ್ನ ಸೂಜಿಗಳಂ ಬೆರಲ್ಗಳೊಳ್ ಬೆಟ್ಟುವರುಂ: ಆದಿಪು, ೫. ೮೫ ವ); [ನಾ] ಬೆಟ್ಟ (ಇಡಿದಿರೆ ರೋಮಕೂಪದೊಳಗೆ ಉರ್ಚಿದ ಸಾಲ ಸರಲ್ಗಳುಂ ತೆಱಂಬಿಡಿದಿರೆ ಬೆಟ್ಟು ಒರ್ಗುಡಿಸಿದಂತೆ ನೆಱಲ್ದಿರೆ: ಪಂಪಭಾ, ೧೩, ೬೨)

ಬೆಡಂಗ

[ನಾ] ಚೆಲುವ (ತಳಿರೊಳ್ ನೀನೆ ಬೆಡಂಗನೈ ನನೆಗಳೊಳ್ ನೀಂ ನೀಱನೈ: ಆದಿಪು, ೧೦. ೯೬)

ಬೆಡಂಗು

[ನಾ] ಸೊಗಸು, ರಮ್ಯತೆ (ಕರಣಾಂಗಹಾರಮೃದುಪದ ಪರಿಕ್ರಮಂಗಳ ಬೆಡಂಗುಗಳ ಜತಿಯೊಳ್ ಅಳಂಕರಿಸಿದುದೆಂಬಿನಂ: ಆದಿಪು, ೭. ೧೮)

ಬೆಡಂಗುಗೆಡು

[ಕ್ರಿ] ಸೊಗಸನ್ನು ಕಳೆದುಕೊ (ನಗೆಗಣ್ ಸೋರ್ವ ಕದುಷ್ಣವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂಕೆಗಳಿಂ ನಾಡೆ ಬೆಡಂಗುಗೆಟ್ಟ ಇರವು ಇದಿಂತೇಕಾರಣಂ: ಪಂಪಭಾ, ೪. ೬೮)

ಬೆಂಡುಮಗುೞ್

[ನಾ] ಅಂಗಾತವಾಗು, ಅಸ್ತವ್ಯಸ್ತವಾಗು (ಮುಡಿಯ ಪೂವಿನ ರಜದಿಂ ವಾಸಿಸಿದ ನೀರ ಕದಡಿಂದಾಸವದೊಳ್ ಸೊರ್ಕಿ ಬೆಂಡುಮಗುೞ್ದವು ಮೀಂಗಳ್: ಪಂಪಭಾ, ೫. ೬೫)

ಬೆಂಡುಮರಲ್

[ನಾ] ಭಾರದಿಂದ ಬೆಂಡಾಗು (ನಿಷಾದಿತಿಯೆಂಬ ಬೇಡಿತಿಗಂ ಅಯ್ವರ್ ಮಗಂದಿರ್ಗಂ ಉಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಲುಂದಿದರ್: ಪಂಪಭಾ, ೩. ೪ ವ)

ಬೆದಬೆದ

[ಅ] ಅನುಕರಣ ಪದ, ತೀವ್ರವಾಗಿ (ಇನಿತುಮಿಲ್ಲದೆ ಗುಱುಗುಮ್ಮೆಂದು ಪಸಿದಿರ್ದು ಬೆದಬೆದ ಬೆಂದಿನಿಬರ್ ಕಟ್ಟಿಕೊಳ್ವ ಕಣಿಯೇಂ ಪೇೞಿಂ: ಆದಿಪು, ೯. ೯೦)

ಬೆದಱು

[ನಾ] ಅಂಜಿಕೆ (ಕಾಪುಂ ಮೇಪುಂ ತೋಡುಂ ಬೀಡುಂ ದೆಸೆಯುಂ ಕೊಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಱುಂ ಕೆದಱುಂ ಪೆರ್ಚುಂ ಕುಂದುಮನಱಿದು: ಪಂಪಭಾ, ೫. ೪೩. ವ); ಹೆದರು (ಧ್ಯಾನಮರೀಚಿಯಿಂ ಬೆದಱೆ ಘಾತಿತಮಸ್ತಮಂ: ಆದಿಪು, ೧೦. ೧೭)

ಬೆಂದು

[ಅ] [√ಬೇಯ್] ಸುಟ್ಟು (ಭವಲಾಲಾಟವಿಲೋಚನಾಗ್ನಿ ಶಿಖೆಯಿಂ ಬೆಂದು ಅಳ್ಕಿ ಮತ್ತಂ ಮನೋಭವಂ ಎೞ್ಚತ್ತೊಡೆ: ಪಂಪಭಾ, ೭. ೨೪)

ಬೆನ್ನಂ ಪರಿ

[ಕ್ರಿ] ಹಿಂದೆಯೇ ಓಡು (ಭೀಮಾರ್ಜುನರ್ ಕಾಯ್ಪು ಕೆಯ್ಮಿಗೆ ಬೆನ್ನ ಪರಿದು ಎತ್ತ ಪೋಪೆಯೆಲವೋ ಪೋ ಪೋಗಲ್ ಎಂದೆಯ್ದಿದರ್: ಪಂಪಭಾ, ೭. ೩೧)

ಬೆನ್ನಟ್ಟು

[ಕ್ರಿ] ಹಿಂಬಾಲಿಸು (ಶರವ್ರಾತಂಗಳುಂ ನುರ್ಗಿ ಕಣ್ಗಿಡೆ ಬೆನ್ನಟ್ಟಿದನಂತು ನಮ್ಮ ಹರಿಗಂ ಗಂಡಂ ಪೆಱರ್ ಗಂಡರೇ: ಪಂಪಭಾ, ೧೧. ೧೩)

ಬೆನ್ನನೆ ಬರ್

[ಕ್ರಿ] ಹಿಂಬಾಲಿಸು (ನಿನ್ನಂ ಇನ್ನಾನುಂ ಅಗಲ್ವೆನೇ ಕೆಳೆಯ ಬೆನ್ನನೆ ಬಂದಪೆಂ ಆಂತರಂ ಯಮಸ್ಥಾನಮನೆಯ್ದಿಸುತ್ತ: ಪಂಪಭಾ, ೧೩. ೩)

ಬೆನ್ನಬೆನ್ನನೆ

[ಅ] ಹಿಂದೆ ಹಿಂದೆಯೇ (ಬೆನ್ನಬೆನ್ನನೆ ಬರೆ ಬಿನ್ನಬಿನ್ನನೆ ಪೋಗಿ: ಪಂಪಭಾ, ೧. ೧೧೪ ವ)

ಬೆನ್ನಲೆ ನಿಲ್

[ಕ್ರಿ] ಬೆನ್ನುಬೀಳು, ಬೆನ್ನಪೀಡೆಯಾಗು (ತೊಂಬಯ್ಸಾಸಿರ್ವರ್ ನಿಮ್ಮಂಬಿನ ಬಂಬಲೊಳೆ ಮಕುಟಬದ್ಧರ್ ಮಡಿದರ್ ನಂಬಿಂ ನಂಬಲಿಂ ಇಂದಿಂಗೊಂಬತ್ತು ದಿನಂ ದಲ್ ಎಮ್ಮ ಬೆನ್ನಲೆ ನಿಂದಿರ್: ಪಂಪಭಾ, ೧೧. ೨೯)

ಬೆನ್ನೀ

[ಕ್ರಿ] [ಬೆನ್+ಈ] ಬೆನ್ನು ಕೊಡು, ಪಲಾಯನಮಾಡು (ನಿನ್ನಂ ಉೞುಗಿಸಲುಂ ಆಜಿಯೊಳ್ ಎನ್ನಂ ಬೆಂಕೊಂಡು ಕಾದಲುಂ ಬಂದು ಈಗಳ್ ಬಿನ್ನನೆ ಮೊಗದಿಂ ಬೀರರ್ ಬೆನ್ನಿತ್ತುದಂ ಇನಿಸು ನೋಡ ಸರಸಿಜಮುಖೀ: ಪಂಪಭಾ, ೩. ೭೩); [ಕ್ರಿ] ಬೆನ್ನು ಕೊಡು, ಆಶ್ರಯವಾಗು (ಆಯ್ತೇ ಸಾಧಿಸಿಕೊಂಡು ಪಾಂಡುಸುತರಂ ನಣ್ಪಿಂಗೆ ಬೆನ್ನಿತ್ತು ದಲ್ ಸಯ್ತಾಯ್ತು ಅಜ್ಜನ ಮಾತು: ಪಂಪಭಾ, ೧೧. ೫೨)

ಬೆನ್ನೀರ್

[ನಾ] ಬಿಸಿನೀರು (ನಿನ್ನಂ ಪಗೆವರ ಬೇರೊಳ್ ಬೆನ್ನೀರಂ ಪೊಯ್ದು ನಿನಗೆ ಮಾೞ್ಪೆಂ ಧರೆಯಂ: ಪಂಪಭಾ, ೮. ೩೪)

ಬೆಂಬಲಂಬಾಯ್

[ಕ್ರಿ] [ಬೆನ್+ಬಲಂ+ಪಾಯ್] ನೆರವಿಗೆ ಹೋಗು (ಪಾಂಚಾಳರಾಜ ತನೂಜೆಯ ಮಾತಿಂಗೆ ಬೆಂಬಲಂಬಾಯ್ವಂತೆ ಭೀಮಸೇನನಿಂತೆಂದಂ: ಪಂಪಭಾ, ೭. ೫೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App