भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೆಂಬಿಡಿ

[ಕ್ರಿ] [ಬೆನ್+ಪಿಡಿ] ಹಿಂದೆ ಬರು, ಹಿಂದಿನಿಂದ ಬರು (ಮುಳಿದು ಮನಃಪ್ರಿಯಂ ಪೆಱಗುಗೆಯ್ದಿರೆ ಬೆಂಬೆಡಿದಪ್ಪಿಕೊಂಡ ನಲ್ಲಳ ಮೊಲೆಯೊತ್ತಿನೊಳ್ ತಳರ್ದುದು .. .. ಕೋಪಮೋಪನಾ: ಆದಿಪು, ೧೨. ೩೪);

ಬೆಂಬೀೞ್

[ಕ್ರಿ] ಬೆನ್ನ ಮೇಲೆ ಬೀಳು, [ಶರಶಯನದ ಮೇಲೆ] ಮಲಗು (ಅದಟಂ ಸಿಂಧುತನೂಭವಂ ವಿಜಯನೊಳ್ ಮಾರ್ಕೊಂಡು ಅಣಂ ಕಾದಲಾಱದೆ ಬೆಂಬಿೞ್ದೊಡೆ: ಪಂಪಭಾ, ೧೧. ೫೫); [ಕ್ರಿ] ಹೊಂಚುಹಾಕು (ಕರಂ ಬೆಂಬಿೞ್ದು ದುರ್ಯುಕ್ತಿಯಿಂದದಯಂ ಧರ್ಮಜನಿಕ್ಕಿದಂ ಗುರುವಂ: ಪಂಪಭಾ, ೧೨. ೩೫)

ಬೆಮರ ನೀರ್ಗಳ ಪೊನಲ್

[ನಾ] ಬೆವರು ನೀರಿನ ಧಾರೆ (ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲೊಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨)

ಬೆಮರ್

[ನಾ] ಬೆವರು (ಸುರಿಯೆ ಬೆಮರ್ ಕುರುಳ್ವಿಡಿದು ಮುತ್ತುಗಳಂ ಮಱಿದುಂಬಿ ಕಾಣುವಂತಿರೆ: ಪಂಪಭಾ, ೮. ೬೦)

ಬೆರಗು

[ನಾ] ಉಪಾಯ ಅಥವಾ ವಿವೇಕ (ನೊಂದ ಸಿಂಗದ ಮೇಲೆ ಬೆರಗಱಿಯದ ಬೆಳ್ಳಾಳ್ ಪಾಯ್ವಂತೆ ಕಿೞ್ತ ಬಾಳ್ವೆರಸು ಪಾಯ್ವುದುಂ: ಪಂಪಭಾ, ೧೧. ೧೦೩ ವ)

ಬೆರಲಂ ಮಿಡಿಯಿಸು

[ಕ್ರಿ] ಸೋಜಿಗಗೊಳಿಸು (ಬೆರಲ ಕೊರಲ ಕೂಟಂ ಬೆರಲಂ ಮಿಡಿಯಿಸಿದೆನಿಸಿ ರಾಗದ ತೊಡರೊಳ್ ತೊಡರ್ದಪುವಲ್ಲಿ ಕಿನ್ನರಯುಗಳಂ: ಆದಿಪು, ೯. ೧೧೭)

ಬೆರಲ್

[ನಾ] ಬೆರಳು (ಬೆರಲ ಕೊರಲ ಕೂಟಂ ಬೆರಲಂ ಮಿಡಿಯಿಸಿದುದು: ಆದಿಪು, ೯. ೧೧೭)

ಬೆರಸು

[ಕ್ರಿ] ಸಂಭೋಗಿಸು (ಪೆಂಡಿರ್ ಪೆಂಡಿರೊಳ್ ಅದೆಂತು ಬೆರಸುವರಬಲೇ: ಪಂಪಭಾ, ೧. ೭೬)

ಬೆರ್ಚಿಸು

[ಕ್ರಿ] ಭಯಪಡಿಸು (ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳ್ ಆಶ್ರಮಕ್ಕೆ ಗುರುವಾಗಿ ಪಾಂಡುರಾಜನಿರ್ಪನ್ನೆಗಂ: ಪಂಪಭಾ, ೧. ೧೧೬ ವ)

ಬೆರ್ಚು

[ಕ್ರಿ] ಹೆದರು, ಬೆಚ್ಚು (ವಿರಾಟಸೂನು ರಥದಿಂದಿೞಿದು ಓಡಿದೊಡೆ ಎಯ್ದೆ ಪೂಣ್ದು ಬೆರ್ಚಿ ಓಡೆ: ಪಂಪಭಾ, ೮. ೧೦೦)

ಬೆಲಗಸೆ

[ನಾ] ಬೊಗಸೆ (ಡೊಕ್ಕನೆ ಸುರಿಗೆಯೊಳ್ ಉರಮಂ ಬಿಕ್ಕನೆ ಬಿರಿಯಿಱಿದು ಬರಿಯಗಲನೊತ್ತಿ ಮನಂ ಕೊಕ್ಕರಿಸದೆ ಬೆಲಗಸೆಯಿಂ ಅಳುರ್ಕೆಯೆ ಮೊಗೆಮೊಗೆದು ನೆತ್ತರಂ: ಪಂಪಭಾ, ೧೨. ೧೫೩)

ಬೆಲೆ

[ನಾ] ಮೌಲ್ಯ, ಕ್ರಯ (ನಾಕದ ಫಣಿಲೋಕದಂದದ ಪೊೞಲ್ಗಳನೀ ಪೊೞಲೊಂದು ರಮ್ಯಹರ್ಮ್ಯದ ಬೆಲೆಗಂ ಬರಲ್ ನೆಱೆಯವು: ಆದಿಪು, ೬. ೮೯) ಎಲ್. ಬಸವರಾಜು ಅವರ ಆವೃತ್ತಿಯ ಪಾಠ]

ಬೆಲೆಯಿಡು

[ಕ್ರಿ] ಬೆಲೆಗಟ್ಟು (ಬೆಲೆಯಿಡಲಱಿವೊಡೆ ಮಂಡಲಿ ಬೆಲೆಯಿಡುಗೆಮ ನೋೞ್ಪೊಡಿವರ ತೇಜದ ಮೇಲುಜ್ಜ್ವಲತೇಜ ನಿನ್ನ ತೇಜಂ ನೆಲಸಿದುದೆನೆ ಪೇೞವರ್ಕೆ ಬೆಲೆಗಳುಮೊಳವೇ: ಆದಿಪು, ೧೩. ೩೦)

ಬೆಲೆಯಿಡುಗೆಮ

ಬೆಲೆಗಟ್ಟಲಿ (ಬೆಲೆಯಿಡಲಱಿವೊಡೆ ಮಂಡಲಿ ಬೆಲೆಯಿಡುಗೆಮ ನೋೞ್ಪೊಡಿವರ ತೇಜದ ಮೇಲುಜ್ಜ್ವಲತೇಜ ನಿನ್ನ ತೇಜಂ ನೆಲಸಿದುದೆನೆ ಪೇೞವರ್ಕೆ ಬೆಲೆಗಳುಮೊಳವೇ: ಆದಿಪು, ೧೩. ೩೦)

ಬೆವಸಾಯಂಗೆಯ್

[ಕ್ರಿ] ಪ್ರಯತ್ನ ಮಾಡು (ಬೆವಸಾಯಂಗೆಯಲ್ ಇನ್ನುಂಮುಂಟು ಎಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂಡವರಂ ಗೆಲ್ವುದಸಾಧ್ಯಮಾಯ್ತೇ: ಪಂಪಭಾ, ೧೩. ೫೦)

ಬೆಸ

[ನಾ] ಕೆಲಸ, ಕರ್ತವ್ಯ (ಬೆಸಸೆಮ್ಮನೀಗಳಿಂತೀ ಬೆಸದೊಳ್ ಕಡೆಗಣಿಸಿ ಬೞಿಯುಮಾವೆಡೆಯೊಳ್ ನೀಂ ಬೆಸಸುವೆಯೊ ನಿನ್ನ ಕಣ್ಣೊಳ್ ಪಸರಿಸೆ ಕಡುಗೆಂಪು ನೋಡಿಯುಂ ಸೈರಿಪೆವೇ: ಆದಿಪು, ೧೨. ೯೪); [ನಾ] ಕಾರ್ಯ (ಯಮರಾಜನಂ ಅದ್ಭುತತೇಜನಂ ಸರೋಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದು ಆವುದು ಆತ್ಮಾನುಗತಾರ್ಥಂ ಎಂದೊಡೆ: ಪಂಪಭಾ, ೧. ೧೧೯); [ನಾ] ಆದೇಶ (ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿ ಕ್ರಿಯೆಗಳಂ ಮಾಡಿ: ಪಂಪಭಾ, ೩. ೮ ವ)

ಬೆಸಕೆಯಿಸಿಕೊಳ್

[ಕ್ರಿ] ಸೇವೆ ಮಾಡಿಸಿಕೊ (ಅವನಾಳ್ವ ತೆಱೆಗೊಳ್ವ ಬಿಟ್ಟಿಬೆಸಕೆಯಿಸಿಕೊಳ್ವ ಭೋಗಿಪ ನಿಯೋಗಂಗಳುಮಂ ಮಾಡಿದಂ: ಆದಿಪು, ೮. ೬೩ ವ)

ಬೆಸಕೆಯ್

[ಕ್ರಿ] ಹೇಳಿದ ಕೆಲಸ ಮಾಡು (ಪುಣ್ಯಕ್ಷಯದೊಳ್ ತನ್ನ ವಿದ್ಯೆಗಳುಂ ತನಗೆ ಬೆಸಕಯ್ಯದಿರೆ: ಆದಿಪು, ೨. ೧೪ ವ); [ಕ್ರಿ] ಸಾಧಿತವಾಗು (ಅವರ್ಗೆ ಪ್ರಜ್ಞಪ್ತಿವಿದ್ಯೆ ಮೊದಲಾಗಿ ಕುಲಜಾತಿಸಾಧಿತವಿದ್ಯೆಗಳ್ ಪಲವುಂ ಬೆಸಕೆಯ್ವುವು: ಆದಿಪು, ೯. ೧೨೧ ವ); [ಕ್ರಿ] ಸೇವೆ ಮಾಡು (ಬೆಸಕೆಯ್ದತ್ತು ಸಮುದ್ರಮುದ್ರಿತ ಧರಾಚಕ್ರಂ .. .. ಸಮಂತೆಂಬಿನಂ ಜಸಮಾಪಾಂಡುರಮಾದುದು ನೃಪರೊಳಾರಾ ಪಾಂಡುರಾಜಂಬರಂ: ಪಂಪಭಾ, ೧. ೧೧೦); [ಕ್ರಿ] ಆಜ್ಞಾಪಾಲನೆ ಮಾಡು (ಖಾಂಡವವನದಹನಪ್ರಪಂಚದಿಂ ಬೞಿಯಂ ಅರಾತಿವನದಹನತೀವ್ರಪ್ರತಾಪಗಹನಕ್ಕೆ ಮುನ್ನಂ ಅಳ್ಕಿ ಪರಮಂಡಳಿಕರ್ ಇತ್ತುಂ ತೆತ್ತುಂ ಬೆಸಕೆಯ್ಯೆ: ಪಂಪಭಾ, ೬. ೧. ವ)

ಬೆಸಕೆಯ್ಯದಿರ್ಕೆ

ಹೇಳಿದ ಕೆಲಸ ಮಾಡದಿರಲಿ (ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನಕಾಲದೊಳ್ ಬೆಸಕೆಯ್ಯದಿರ್ಕೆ: ಪಂಪಭಾ, ೧. ೧೦೫ ವ)

ಬೆಸಕೆಯ್ಸು

[ಕ್ರಿ] ಅಧೀನಕ್ಕೆ ಬರುವಂತೆ ಮಾಡು (ಬಿರುದರಂ ಒತ್ತಿ ಬೀರರಂ ಅಡಂಗಿಸಿ ಕೊಂಕಿಗರಂ ಕೞಲ್ಚಿ ಚೆನ್ನರಂ ಅಡಿಗೊತ್ತಿ ಮಂಡಳಿಕರಂ ಬೆಸಕಯ್ಸಿ .. .. ಮಾಡಿರೆ ರಾಜಸೂಯಮಂ: ಪಂಪಭಾ, ೭. ೧೮)

Search Dictionaries

Loading Results

Follow Us :   
  Download Bharatavani App
  Bharatavani Windows App