भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೆಸಗೊಳ್

[ಕ್ರಿ] ವಿಚಾರಿಸು (ಆ ಪಟದೊಳಾಕೆ ಬರೆಯದೆ ಬಂಚಿಸಿದ ಅವಿನಾಣಂಗಳನಱಿಯೆ ಬೆಸಗೊಂಡು ಪಟಮಂ ಕೈಗೊಂಡು: ಆದಿಪು, ೩. ೪೫ ವ)

ಬೆಸದಲ್

ಬೆಸದಲ್ಲಿ, ಅಪ್ಪಣೆಯಲ್ಲಿ (ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆಂ: ಪಂಪಭಾ, ೩. ೨ ವ)

ಬೆಸನ

[ನಾ] ಕಾರ್ಯಸಾಧನೆ (ಅಱಿದೆನಿದಂ ಶಕ್ತಿಯೊಳ್ ಮುಕ್ತಿಯಂ ಸಾಧಿಸಲಕ್ಕುಂ ಮಂತ್ರಶಕ್ತಿಪ್ರಕಟನಪಟುಗಳ್ಗೆ ಏನಸಾಧ್ಯಂಗಳೋ ಪೇೞ್ ಬೆಸನಂ ಪಾರ್ದಿರ್ಪುದು: ಆದಿಪು, ೩. ೪೪); [ನಾ] ಆಜ್ಞೆ (ಬೆಸಸಿದೊಡದು ಮಾರ್ಕೊಳ್ಳದೆ ಬೆಸನಂ ಬಲವಂದು ಬಾಹುಬಲಿಯಂ: ಆದಿಪು, ೧೪. ೧೧೭);

ಬೆಸನಂ ಪಾರ್

[ಕ್ರಿ] ಕಾರ್ಯಸಿದ್ಧಿಗಾಗಿ ಎದುರು ನೋಡು (ಮಂತ್ರಶಕ್ತಿಪ್ರಕಟನಪಟುಗಳ್ಗೇನಸಾಧ್ಯಂಗಳೋ ಪೇೞ್ ಬೆಸನಂ ಪಾರ್ದಿರ್ಪುದು ಆಂ ನಿನ್ನಿನಿಯನಂ ಅಱಸಲ್ ಸಾರ್ವೆಂ: ಆದಿಪು, ೩. ೪೪)

ಬೆಸನಂಗಳ್

[ನಾ] ವ್ಯಸನಗಳು (ಬೆಸನೆಡೆಗಳ್ಗೆ ತೊೞ್ತು ಬೆಸನಂಗಳ್ ಅವುಂಕಿದೊಡಾಗದು ಎಂದು ಬಗ್ಗಿಸುವೆಡೆಗೆ ಆಳ್ದಂ: ಪಂಪಭಾ, ೧೩. ೫೮ ವ) [ಸಪ್ತವ್ಯಸನಗಳು: ಸ್ತ್ರೀ, ದ್ಯೂತ, ಬೇಟೆ, ಮದ್ಯಪಾನ, ವಾಕ್ಪಾರುಷ್ಯ, ದಂಡಪಾರುಷ್ಯ, ಅರ್ಥದೂಷಣ ಎಂಬ ಏಳು ವ್ಯಸನಗಳು; ಈ ಪಟ್ಟಿ ಬೇರೆಬೇರೆಡೆ ಬೇರೆಯಾಗುತ್ತವೆ]

ಬೆಸನೇಂ

ಏನು ಕಾರ್ಯ [ಆಗಬೇಕಾಗಿದೆ] (ಬೆಸನೇಂ ಏಗೆಯ್ವುದೊ ನಿನಗೊಸೆದೇನಂ ಕುಡುವುದು ಎಂದೊಡೆ ಅವಳ್ ಮಕ್ಕಳ್ ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯)

ಬೆಸವೇೞ್

[ಕ್ರಿ] [ಬೆಸನಂ ಪೇೞ್] ಕಾರ್ಯ [ಏನೆಂದು] ಹೇಳು (ಬೆಸಸೆನೆಯುಂ ನುಡಿಯಲ್ ಶಂಕಿಸಿದಪೆಂ ಆಂ ಎಂದೊಡೆ ಏಕೆ ಶಂಕಿಸಿದಪೈ ನೀಂ ಬೆಸವೇೞ್ ಎನೆ ಜಯವಧು ಕೂರ್ತೊಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ: ಪಂಪಭಾ, ೧೨. ೯೦)

ಬೆಸಸು

[ಕ್ರಿ] ಆಜ್ಞೆಮಾಡು (ಬೆಸಸಿದೊಡದು ಮಾರ್ಕೊಳ್ಳದೆ ಬೆಸನಂ ಬಲವಂದು ಬಾಹುಬಲಿಯಂ: ಆದಿಪು, ೧೪. ೧೧೭); [ಕ್ರಿ] ಹೇಳು, ತಿಳಿಸು (ಅಂತು ಕೊಟ್ಟ ಅಯ್ದು ಮಂತ್ರಂಗಳಂ ಆಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆ ಎಂದು ಬೆಸಸಿದೊಡೆ: ಪಂಪಭಾ, ೧. ೮೯ ವ)

ಬೆಸೆ

[ಕ್ರಿ] ಗರ್ವಿಸು (ಪೊಸಸುಸಿಲ ಮಸಕದ ಬಸದೊಳೆ ಬಸದಾಗಿಯುಮಸಿಯಳೆನಗಸವಸದೊಳೆ ಬೆಸೆದು ಪೋಗಿ: ಆದಿಪು, ೪. ೧೨ ವ); [ನಾ] ಗರ್ವ (ಕುಲಧನಂ ಸಮದಗಜಂ ಜಾತ್ಯಶ್ವಮೆಂಬಿವಂ ಮತ್ತೊರ್ಬ ಪಗೆವಂಗೆ ಕೊಟ್ಟು ಬೆಸೆವವಂ ಅರಸದೆಂತೊ ಪಗರಣದರಸಂ: ಆದಿಪು, ೧೨. ೯೮)

ಬೆಸೆಕೋಲ್

[ನಾ] ಹತ್ತಿ ಹಿಂಜುವ ಬಿಲ್ಲು (ಕುಡುವೊಡೆ ನಿಸ್ತ್ರಪಂ ಕುಡುವುದು ಏಱಿಸಿದಂ ಬೆಸೆಕೋಲನೆಂದು ಪೇೞ್ ಕುಡುವುದೆ ಕನ್ನೆಯಂ ದ್ವಿಜಕುಲಂಗೆ: ಪಂಪಭಾ, ೩. ೬೬)

ಬೆಳಗು

[ಕ್ರಿ] ಪ್ರಕಟಪಡಿಸು (ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ: ಪಂಪಭಾ, ೧೪. ೬೦); [ನಾ] ಬೆಳಕು (ಕೊಟ್ಟ ಮಾಣಿಕಂಗಳ ಬೆಳಗಿಟ್ಟಳಂ ತನಗೊಡಂಬಡೆ: ಪಂಪಭಾ, ೪. ೪೦); [ನಾ] ಕಾಂತಿ (ನೀರದಪಥದೊಳ್ ಮುತ್ತಿನ ಹಾರದ ಬೆಳಗೆಸೆಯೆ ನಾರದಂ ಬಂದಿರ್ದಂ: ಪಂಪಭಾ, ೧೨. ೧೪೦)

ಬೆಳಂತಿಗೆ

[ನಾ] ಹೊಳೆಯುವ, ಶುಭ್ರವಾದ (ಕಾಂತಿಯೊಳೆ ಪುದಿದು ಬೆಳಪ ಬೆಳಂತಿಗೆ ಬೆಳ್ದಿಂಗಳಲರ್ದ ಪೊಸಜಾದಿ: ಆದಿಪು, ೧೧. ೯)

ಬೆಳಪು

[ನಾ] ಬೆಳಗು, ಕಾಂತಿಯುಕ್ತವಾಗು (ಅಂಬರತಳಮೊಡನೆ ಬೆಳಗೆ ಬೆಳಪುದನ್ ಶೌರ್ಯಾಂಬುನಿಧಿ ತೊಟ್ಟಿಸಲೊಡಂ ಇರದೆ ಅಂಬರದಿಂದುಳ್ಕುವುಳ್ಕಮಂ ಪೋಲ್ತು ಶರಂ: ಆದಿಪು, ೧೨. ೯೦)

ಬೆಳರ್

[ಕ್ರಿ] ಶುಭ್ರವಾಗಿರು (ತನು ಪಂಜಿವೊಲ್ ಬೆಳರ್ತಿರ್ಪಿನೆಗಂ ಹಿಮಮೆಕ್ಕಿದರಲೆವೋಲ್ ಪುದಿದಿರೆಯುಂ ತನು: ಆದಿಪು, ೬. ೩೩); [ಕ್ರಿ] ಬೆಳ್ಳಗಾಗು (ತೆಕ್ಕನೆ ತೀವಿದ ಮೆಯ್ಯೊಳಲರ್ದ ಸಂಪಗೆಯರಲಂತೆ ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬಳೆಯೆ: ಪಂಪಭಾ, ೧. ೧೪೩ ವ); [ಕ್ರಿ] ಬಿಳಿಚಿಕೊ (ಕೞಿಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್ ಗೞಿಯಿಸೆ ಕೆಂಪು ಕಣ್ಗಳ ಮೊದಲ್ಗಳೊಳ್: ಪಂಪಭಾ, ೪. ೬೧)

ಬೆಳರ್ಗೆಂಪು

[ನಾ] ಹೊಳೆಯುವ ಕೆಂಪು[ಬಣ್ಣ] (ಒದವಿ ತಗುಳ್ದ ಗಗ್ಗರಿಕೆ ಸೂಸುವ ಕಣ್ಬನಿ ಕಣ್ಗಳೊಳ್ ಕಲಂಕಿದ ಬೆಳರ್ಗೆಂಪು ಕಣ್ಗೆ ವರೆ: ಆದಿಪು, ೧೨. ೨೫)

ಬೆಳರ್ವಾಯ್

[ನಾ] ಬಿಳಿಚಿಕೊಂಡ ತುಟಿ (ಮದನ ದವಾನಲಾರ್ಚಿ ತನುವಂ ಸುಡೆ ತಳ್ತ ಎಮೆಯೊಳ್ ಪಳಂಚಿ ಬೀಗಿದ ಬೆಳರ್ವಾಯೊಳ್ ಉಚ್ಚಳಿಸಿ .. .. ಎಯ್ದಿದುವು ನೇತ್ರಜಲಬಿಂದುಗಳ್: ಪಂಪಭಾ, ೫. ೯) [ನಾ] ಬಿಳಿಚಿಕೊಂಡ ಬಾಯಿ (ಬೆಳರ್ವಾಯ್ಗಳೊಳ್ ಇಂಪಂ ತಾಳ್ದಿ ಪೊಱಮಡುವ ತಣ್ಗಂಪುಗಳುಂ ಅಮೃತಬಿಂದುಗಳಂತೆ ನೆಗೞ್ವ ಬೆಮರ ಬಿಂದುಗಳುಂ ಅಳವಲ್ಲದೊಪ್ಪೆ: ಪಂಪಭಾ, ೪. ೮೮ ವ)

ಬೆಳಱ್

[ಕ್ರಿ] ಬೆದರು (ಮಗನೆ ಮನಂ ಬೆಳಱದೆ ನೀನುಂ ಇತ್ತೆ ಆನುಂ ಪೆತ್ತೆಂ ನಂಬಿದ ನಿನ್ನನುಜರ್ ನಿನ್ನಂ ಬೆಸಕೆಯೆ ನೀನೆ ನೆಲನನಾಳ್ವುದು ಕಂದಾ: ಪಂಪಭಾ, ೯. ೮೨)

ಬೆಳಸು

[ನಾ] ಬೆಳೆಯುವಿಕೆ (ಅಂತವರೀರ್ವರ ಬೇಟಮೆಂಬ ಲತೆಯ ಬೆಳಸಿಂಗೆ ಪೊಯ್ನೀರೆಱೆವಂತೆ ಕೆಯ್ನೀರೆಱೆದು ಬಿಯಮಂ ಮೆಱೆದು: ಪಂಪಭಾ, ೫. ೨೫ ವ)

ಬೆಳ್

[ನಾ] ದಡ್ಡ (ಲಲಿತಪದಂ ಪ್ರಸನ್ನಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾಱರ ಕೈಗಳ ಕೇಡು: ಪಂಪಭಾ, ೧. ೧೨)

ಬೆಳ್ಕನೆವೋಗು

[ಕ್ರಿ] ದಿಗ್ಭ್ರಾಂತನಾಗು (ನಾಕಲೋಕಚ್ಯುತಿಯಂ ಆಗಳಱಿದು ಮನದೊಳಳ್ಕಿ ಬೆಳ್ಕನೆವೋಗಿ: ಆದಿಪು, ೩. ೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App