भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೆಳ್ಕುಱು

[ಕ್ರಿ] [ಬೆಳ್ಕು+ಉಱು] ಭಯ ಹೊಂದು, ಹೆದರು (ಬೆಳ್ಕುಱೆ ರಿಪುಸೇನೆ ತೇರನೊಸೆದು ಆನೆಸಗುತ್ತಿರೆ ಕರ್ಣನಂ ಗೆಲಲ್ ನೆಱೆವರೆ ಫಲ್ಗುಣನುಂ ಅಚ್ಯುತನುಂ: ಪಂಪಭಾ, ೧೨. ೧೦೦)

ಬೆಳ್ಗಡಲ್

[ನಾ] ಬಿಳಿಯ ಸಮುದ್ರ (ಬಳ್ವಳ ನೀಳ್ದ ಕಣ್ಮಲರ ತಳ್ತಮೆಯಿಂ ಕರೆಗಣ್ಮಿ ಬೆಳ್ಗಡಲ್ಗಳ್ ಪರಿಯಲ್ಕಂ ಆಟಿಸಿದೊಡೆ: ಪಂಪಭಾ, ೭. ೬೮)

ಬೆಳ್ಗೊಡೆ

[ನಾ] ಅಧಿಕಾರ ಸಂಕೇತವಾದ ಬಿಳಿಯ ಕೊಡೆ (ಪೇೞ್ ಮಗನೆ ಬೇಳ್ಗೊಡೆಯೆಲ್ಲಿದುದೆತ್ತ ಪೋಯ್ತು ಸುತ್ತಿಱಿದ ಚತುರ್ಬಲಂ ನಿನಗಮೀಯಿರವಾದುದೆ ವೈರಿಭೂಪರಿಂ: ಪಂಪಭಾ, ೧೩. ೬೪)

ಬೆಳ್ತನ

[ನಾ] ಬೆಪ್ಪುತನ (ಸತ್ತರನೆ ಸಾಯದರಂತೆಣಿಸುತ್ತುಮಿರ್ಪ ಬೆಳ್ತನದನಿತಲ್ಲದೆ ಆ ಮರನಂ ಆ ದವದಗ್ನಿ ಬರ್ದುಂಕಲೀಗುಮೇ: ಆದಿಪು, ೯. ೫೯)

ಬೆಳ್ನೊರೆ

[ನಾ] ಬಿಳಿಯ ನೊರೆ (ಚಮರೀರುಹಂಗಳಂತಿರೆ ಕಳಹಂಸೆ ಬೆಳ್ಗೊಡೆಗಳಂತಿರೆ ಬೆಳ್ನೊರೆ ಗೊಟ್ಟಿಗಾಣರಂತಿರೆ ಮಱಿದುಂಬಿ: ಪಂಪಭಾ, ೫. ೫೮)

ಬೆಳ್ಪನೞಿ

[ಕ್ರಿ] [ಕಣ್ಣಿನ] ಬಿಳುಪು ಬಣ್ಣವನ್ನು ಹೋಗಲಾಡಿಸು (ಮೞಮೞಿಪ ರೂಪು ಕಣ್ಗಳೊಳ್ ಬೆಳ್ಪನೞಿಯೆ ಸೋಂಕುವ ಕೆಂಪುಗಳುಮಂ ತಮ್ಮ ಕೆಂಪಂ ಕಣ್ಗಳ್ಗೆ ಕೊಟ್ಟು ಕಣ್ಗಳ ಬೆಳ್ಪಂ ತಮಗೆ ಮಾಱುಗೊಂಡಂತೆ: ಪಂಪಭಾ, ೪. ೮೮ ವ)

ಬೆಳ್ಪಸದನ

[ನಾ] ಬಿಳಿಯ ಉಡುಗೆ (ಅಲರ್ದ ಪೊಸಜಾದಿ ದಿಶಾಕಾಂತೆಯ ಬೆಳ್ಪಸದನದ ದಗುಂತಿಯನೇಂ ನಾಡೆಯುಂ ಮಾಡಿದುದೋ: ಅದಿಪು, ೧೧. ೯)

ಬೆಳ್ಪು

[ನಾ] ಬಿಳಿಪು (ಹಿಮಧವಳ ಆತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣಕುಂಭಮನೆ ನಿರಂತರಂ ಗೆಲೆ: ಪಂಪಭಾ, ೧. ೧೨೦); [ನಾ] ಕಾಂತಿ (ನೀಳ್ಪಂ ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಚಿದಂತೆ ಕಿಸುಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳ್: ಪಂಪಭಾ, ೨. ೩೯ ವ)

ಬೆಳ್ಪೇಱು

[ಕ್ರಿ] ಬಿಳಿಚಿಕೊಳ್ಳು (ಬಸಿಱ ತೆಳ್ಪೞಿದಿತ್ತೆ ಮೊಗಂ ಬೆಳ್ಪೇಱಿದುದೇ ಕುಚಚೂಚುಕಂ ಮಸುಳ್ದುವೇ ತ್ರಿವಳೀರುಚಿಯುಂ ಮೇಣ್ ಕುಂದಿತೇ: ಆದಿಪು, ೭. ೩೧)

ಬೆಳ್ಪೊಱಸು

[ನಾ] ಬಿಳಿಯ ಪಾರಿವಾಳ, [ಎಲ್. ಬಸವರಾಜು ನೀಡುವ ಅರ್ಥ] ಗೂಬೆ (ದ್ರುಪದಸುತೆಯಂ ಎೞೆದುಯ್ಯಯೆಯುಂ ಇಂತಿನಿತೊಂದಾದುದು ದುಶ್ಶಾಸನನಿಂದಂ ಶಕುನಿಯೆಂಬ ಬೆಳ್ಪೊಱಸಿಂದಂ: ಪಂಪಭಾ, ೭. ೨೦)

ಬೆಳ್ಮಸೆಯಂಬು

[ನಾ] ಬೆಳ್ಳಗೆ ಸಾಣೆ ಹಿಡಿದ ಬಾಣ (ಬೆಳ್ಮಸೆಯಂಬಿನ ಸರಿ ಮೊನೆಯಂಬಿನ ಸೋನೆ ಪಾರೆಯಂಬಿನ ತಂದಲ್ ಘನಮಾದುದು: ಪಂಪಭಾ, ೧೨. ೮೦)

ಬೆಳ್ಮಿಗ

[ನಾ] ಬೆಪ್ಪು ಪ್ರಾಣಿ (ಎಮ್ಮ ಪಾಸಿದ ಚತ್ರಪಟಮೆಂಬ ಬಲೆಯೊಳ್ ನಿಮ್ಮಂತಪ್ಪ ಬೆಳ್ಮಿಗಂಗಳ್ ಆಗಳೆ ತೊಡರ್ಗುಂ: ಆದಿಪು, ೩. ೮೮ ವ); [ನಾ] ಅಂಜುವ ಮೃಗ (ಪದಮುಮಂ ಇಂಬುಮಂ ಅಣಂ ಅಱಿಯದುದು ಏವುದು ಬದ್ದೆ ಬೆಳ್ಮಿಗಂ ಪಜ್ಜೆ ದಲ್ ಎಂಬುದಂ ಎರಡುಮನಱಿವಾತನೆ ಚದುರಂ ಚದುರಂಗೆ ಬದ್ದೆವಜ್ಜೆಗಳೊಳವೇ: ಪಂಪಭಾ, ೫. ೪೫)

ಬೆಳ್ಮುಗಿಲ್

[ನಾ] ಬಿಳಿಯ ಮೋಡ (ಪೊಸಮುತ್ತಿನ ತುಡುಗೆ ಪೊದಳ್ದೆಸೆಯೆ ದುಕೂಲಾಂಬರಂ ನಿಜಾಂಗದೊಳಂ ಸಂದೆಸೆದಿರೆ ಬೆಳ್ಮುಗಿಲಿಂದಂ ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ ಬಂದಂ: ಪಂಪಭಾ, ೨. ೬೮)

ಬೆಳ್ಸರಿ

[ನಾ] ಬೆಳ್ಳಗಿನ ಇಬ್ಬನಿ (ಎಳವಿಸಿಲೊಳ್ ಬೆಳ್ಸರಿ ತೋರವನಿಯ ಪುದುವಿನೊಳ್ ಅರಲ್ದ ತಿಳಿಗೊಳನೆ ನಭದೊಳಿೞಿದಂತಿರ್ಕುಂ: ಆದಿಪು, ೧೧. ೮)

ಬೆಳ್ಳ

[ನಾ] ದಡ್ಡ (ಎನಗೆ ಎಕ್ಕಬಾಗೆ ನೋಡೀಗಳ್ ಈ ಇಳಾಲತಾಂಗಿ ಪುದುವಲ್ಲಳ್ ಅದೆಂತೆನೆ ಮುನ್ನ ನೂಲ ತೋಡಾಗದೆ ಕೆಟ್ಟು ಪೋದವರಂ ಇಂ ಮಗುೞ್ದುಂ ನಿಱಿಪಂತು ಬೆಳ್ಳನೇ: ಪಂಪಭಾ, ೯. ೪೬)

ಬೆಳ್ಳಕ್ಕರಿಗ

[ನಾ] ಬೆಪ್ಪನಾದ ಪಂಡಿತ, ಕೂಚುಭಟ್ಟ (ಶುಷ್ಕವೈಯಾಕರಣಂಗಂ ಶುಷ್ಕ ತಾರ್ಕಿಕಂಗಂ ಬೆಳ್ಳಕ್ಕರಿಗಂಗಂ ವಿಷಯಮೆ ಕಾವ್ಯಂ ಅತಿಚತುರಕವಿಕದಂಬಕವಿಷಯಂ: ಆದಿಪು, ೧. ೨೪)

ಬೆಳ್ಳಂಗೆಡೆ

[ಕ್ರಿ] ಪ್ರವಾಹದಂತೆ ಹರಿ (ಪೊಸತಂ ಸ್ತ್ರೀರಾಜ್ಯಮಂ ಮೇಣ್ಪಡೆದನೊ ಬಿದಿ ಲಾವಣ್ಯಸಿಂಧುಪ್ರವಾಹಂ ಪೊಸತೀಗಳ್ಬಂದು ಬೆಳ್ಳಂಗೆಡೆದುದೊ: ಆದಿಪು, ೧. ೮೨)

ಬೆಳ್ಳವಾಸ

[ನಾ] [ಜೈನ] ಚಳಿಗಾಲದಲ್ಲಿ ಪ್ರವಾಹದಲ್ಲಿ ನಿಂತು ಮಾಡುವ ತಪಸ್ಸು (ತನು ತನಗಲ್ತು ಎಂದೇಕಾಂತ ನಿವಾಸದೊಳಿಂತು ಬೆಳ್ಳವಾಸದೊಳಿರ್ದಂ: ಆದಿಪು, ೬. ೩೩)

ಬೆಳ್ಳಾಗು

[ಕ್ರಿ] ಅವಿವೇಕಿಯಾಗು (ಈ ವಿಮೋಹದೊಳದೇಕೆ ಗಡಂ ಬಗೆಯಂ ತಗುಳ್ಚಿ ಬೆಳ್ಳಾದಪನಕ್ಕಟಾ ಖಚರಂ: ಆದಿಪು, ೨. ೩೫)

ಬೆಳ್ಳಾಳ್

[ನಾ] ಅಂಜುಬುರುಕ (ಅಂತು ಕೃಷ್ಣೆಯ ಕೃಷ್ಣಕಬರಿಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಣೋರಗಮಂ ಪಿಡಿದ ಬೆಳ್ಳಾಳಂತೆ ಉಮ್ಮನೆ ಬೆಮರುತ್ತುಂ ಇರ್ದ ದುಶ್ಶಾಸನನುಮಂ: ಪಂಪಭಾ, ೭. ೫ ವ)

Search Dictionaries

Loading Results

Follow Us :   
  Download Bharatavani App
  Bharatavani Windows App