भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಡಗಣ

[ಗು] ದಿಕ್ಕಿನ (ಜಂಬೂದ್ವೀಪದ ಮೇರುವಿನ ಮೂಡಣ ವಿದೇಹದ ಸೀತಾನದಿಯ ಬಡಗಣ ತಡಿಯೊಳ್: ಆದಿಪು, ೩. ೮ ವ)

ಬಡಗಮೊಗ

[ನಾ] ಉತ್ತರಾಭಿಮುಖ (ಬಡಗಮೊಗದಿರ್ದು ಕರ್ಮದ ತೊಡರಂ ಪಱೆವಂತೆ ಕೇಶಪಾಶಮನಂತಾಗಡೆ ಪಱಿಸು: ಆದಿಪು, ೬. ೨೪)

ಬಡಗು

[ನಾ] ಉತ್ತರದಿಕ್ಕು (ಅೞ್ದುದಿಲ್ಲೆಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪೆಂಪಾರ್ಗಗಸ್ತ್ಯಂಬರಂ: ಪಂಪಭಾ, ೪. ೨೦)

ಬಂಡಣ

[ನಾ] [ಭಂಡನ] ಯುದ್ಧ (ಬಂಡಣದೊಳೆನ್ನನೋಡಿಸಿ ಕೊಂಡುಯ್ದಂ ನಿನ್ನನಾ ಸರಿತ್ಸುತಂ ಆನುಂ ಪೆಂಡತಿಯೆಂ: ಪಂಪಭಾ, ೧. ೭೬)

ಬಡತನ

[ನಾ] ದಾರಿದ್ರ್ಯ (ಜಗದ ಬಡತನಮನೊರ್ಮೆಯೆ ಬಗೆದಂತಿರೆ ಕಿಡಿಪ ಚಕ್ರಿ: ಆದಿಪು, ೮. ೩೦); [ನಾ] ಕೃಶತೆ (ಆಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಂ ಒಡನೊಡನೆ ಕೆಟ್ಟುವು: ಪಂಪಭಾ, ೧. ೧೪೧ ವ)

ಬಡಪ

[ನಾ] ಜಡಿಮಳೆ (ಬೆಳ್ಮಸೆಯಂಬಿನ ಸರಿ ಮೊನೆಯಂಬಿನ ಸೋನೆ ಪಾರೆಯಂಬಿನ ತಂದಲ್ ಘನಮಾದುದು ಅಲ್ಲಿ ಕಿತ್ತಂಬಿನ ಬಡಪಮಿದೆನಿಸಿ ಪಾಂಡ್ಯಂ ಅಂಬಂ ಕಱೆದಂ: ಪಂಪಭಾ, ೧೨. ೮೦)

ಬಡಪಡು

[ಕ್ರಿ] ಬಡವಾಗು (ಸುಪರ್ವಪರ್ವತದ ಕಾಂಚನರೇಣುಗಳಂ ಪರಾಕ್ರಮೋದ್ಯೋಗದಿಂ ಎತ್ತಿ ತಂದು ನಿನಗಿತ್ತ ಅದಟಂ ಬಡಪಟ್ಟು ಬೆಟ್ಟದೊಳ್ ಪೋಗಿ ತೊೞಲ್ದು: ಪಂಪಭಾ, ೭. ೪೭)

ಬಡಪಾರ್ವ

[ನಾ] ಬಡ ಹಾರುವ (ಸಿರಿಮೆಯ್ಯೊಳಗೆ ಅಂದು ಅಱಿವಿರೆ ನೆರವಿಯೊಳಾಱಿವರ್ ಒರ್ಮೆ ಕಂಡರಂ ಅಱಿಯಲ್ಕರಿದೆಮ್ಮಂ ಬಡಪಾರ್ವರನರಸರೆ ನೀಮೀಗಳ್ ಅಱಿವಿರಱಿಯಿರೋ ಪೇೞಿಂ: ಪಂಪಭಾ, ೨. ೬೩)

ಬಡವಡು

[ಕ್ರಿ] ಬಡವಾಗು, ಕೃಶವಾಗು (ಸುಭದ್ರೆಯ ರೂಪಂ ಆಪಾದಮಸ್ತಕಂಬರಂ ಎಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟು: ಪಂಪಭಾ, ೫. ೧೫ ವ)

ಬಡವಾಗ್ನಿ

[ನಾ] ಬಡಬಾಗ್ನಿ, ಸಮುದ್ರದಲ್ಲಿನ ಅಗ್ನಿ (ಪ್ರಳಯದುರಿಯಂ ಉರುಳಿಮಾಡಿದಂತಾನುಂ ಬಡವಾಗ್ನಿಯಂ ಅನುವಿಸಿದಂತಾನುಂ: ಪಂಪಭಾ, ೧೦. ೮೦ ವ)

ಬಡವು

[ನಾ] ಕೃಶತೆ (ನೀನುಂ ಎನ್ನನೆ ನೋಡಿ ನಭದೊಳಿರ್ದಪೆಯಪ್ಪುದಱೆಂದೆ ನಿನ್ನನಾಂ ಅನುವಿಪೆಂ ಎನ್ನ ಮೆಯ್ಬಡವೊ ನಲ್ಲನ ಮೆಯ್ಬಡವೋ ನಿಶಾಕರಾ: ಆದಿಪು, ೧೨. ೪೧); [ನಾ] ಬಡಪಾಯಿ, ಬಡಪ್ರಾಣಿ (ಕರಿಕಳಭಂಗಳ ಶಿಶುಕೇಸರಿಗಳ ಬೞಿಯಂ ತಗುಳ್ದು ಬಡವುಗಳಂ ಅವಂ ತಿರಿಪಿ ಪಿಡಿಯುತ್ತುಂ: ಪಂಪಭಾ, ೨. ೧೦)

ಬಂಡಳಿಸು

[ಕ್ರಿ] ಕೇಕೆ ಹಾಕು (ತೂಗುಂಗೊಂಬಿನೊಳ್ ಪಾಯ್ದು ಬಂಡಳಿಸುತ್ತಿರ್ಪ ಶುಕಾಳಿ: ಆದಿಪು, ೧೧. ೯೬) [ಎಲ್. ಬಸವರಾಜು ಸ್ವೀಕರಿಸಿರುವ ಪಾಠ; ಟಿವಿವೆಂ ಅವರಲ್ಲಿರುವುದು ‘ಮಂಡಳಿಸು’]

ಬಡಿ

[ನಾ] ಬಡಿಗೆ, ದೊಣ್ಣೆ (ದುಜ್ಜೋದನಂ ಅದೇವಂ ಮರುಳಾದನೊ ಬಡಿಗಂಡನಿಲ್ಲ ಪಾಲನೆ ಕಂಡಂ: ಪಂಪಭಾ, ೭. ೧೯); [ನಾ] ಗದೆ (ಬಡಿಗೊಳೆ ಬಿದು ಬಿಬ್ಬರಬಿರಿದು ಒಡನುಗೆ ಪೊಸಮುತ್ತು ಕೋಡನೂಱಿ ಮದೇಭಂ ಕೆಡೆದುವು: ಪಂಪಭಾ, ೧೦. ೧೦೩)

ಬಡಿಗಂಡನಿಲ್ಲ ಪಾಲನೆ ಕಂಡಂ

[ಬಡಿ+ಕಂಡನಿಲ್ಲ] ಬಡಿಗೆಯನ್ನು ಕಾಣಲಿಲ್ಲ ಎಂಬ ಗಾದೆ, ಹಾಲನ್ನು ಮಾತ್ರ ಕಂಡ, ಮುಂದಿನ ಅಪಾಯವನ್ನು ಅರಿಯದೆ ಇಂದಿನ ತಾತ್ಕಾಲಿಕ ಲಾಭಕ್ಕೆ ಮರುಳಾದ ಎಂಬರ್ಥ (ಜೂದಿನ ಗೆಲ್ಲದೊಳಾದೀ ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದುಜ್ಜೋದನಂ ಅದೇನದೇಂ ಮರುಳಾದನೊ ಬಡಿಗಂಡನಿಲ್ಲ ಪಾಲನೆ ಕಂಡಂ: ಪಂಪಭಾ, ೭. ೧೯)

ಬಡಿಗೊಳ್

[ಕ್ರಿ] ಪೆಟ್ಟು ತಿನ್ನು (ಬಡಿಗೊಂಡು ಮಸಗಿ ಬೈತ್ರಮನೊಡೆವ ಮಹಾಮಕರದಂತೆ ಕರಿಘಟೆಗಳಂ ಆರ್ದುಡಿಯೆ ಬಡಿದು: ಪಂಪಭಾ, ೧೨ ೭೮)

ಬಡಿತಂಗಾಸು

[ಕ್ರಿ] [ಲೋಹದಂತೆ] ಬಡಿಯುವುದಕ್ಕಾಗಿ ಕಾಯಿಸು (ಮಿಡುಮಿಡುಕೆ ಬಡಿತಂಗಾಸುವರುಂ ನೋಡೆ ನೋಡೆ ಕಣ್ಗಳಂ ಮೀಂಟುವರುಂ: ಆದಿಪು, ೫. ೮೫ ವ)

ಬಂಡು

[ನಾ] ಹೂವಿನ ಮಕರಂದ (ಓಗರವೂಗಳ ಬಂಡಂ ಎಯ್ದೆ ಪೀರುತ್ತ ಒಡವಂದುವು ಇಂದ್ರವನದಿಂ ಮಱಿದುಂಬಿಗಳ್: ಪಂಪಭಾ, ೧೧. ೮೧)

ಬಡ್ಡಿಸು

[ಕ್ರಿ] ಬಡಿಸು, ಆಹಾರವನ್ನು ಬೇಕೆಂದಾಗ ನೀಡು (ಮನೋಹರಿಯಂ ಪಡಿಸಣವಂ ನೋಡಲುಂ ಮಾಳತಿಕೆಯಂ ಬಡ್ಡಿಸಲುಂ: ಆದಿಪು, ೭.. ೨೧ ವ)

ಬಣಂಬೆ

[ನಾ] ಬಣಬೆ, ರಾಶಿ (ಉಬ್ಬರಮೆಂಬಿವನಱಿದು ಇಱಿದರ್ ಪೆಣಬಣಂಬೆಗಳ್ ನೆಗೆವಿನೆಗಂ: ಪಂಪಭಾ, ೧೦. ೮೨)

ಬಣ್ಣ

[ನಾ] ಸೀರೆ (ಪಳಂಚಿದ ಬಣ್ಣಂಗಳುಂ ಎಸೆಯೆ ಸೊಗಯಿಸುವ ನಿಜವಧೂಜನಂ ಬೆರಸು: ಪಂಪಭಾ, ೫. ೬೬ ವ)

Search Dictionaries

Loading Results

Follow Us :   
  Download Bharatavani App
  Bharatavani Windows App