भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೆಳ್ಳುಳ್ಳಿ

[ನಾ] ಬಿಳಿಯ ಉಳ್ಳಿ, ಲಶುನ (ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ: ಪಂಪಭಾ, ೧೩. ೭೧ ವ)

ಬೆಳ್ಳೆ

[ನಾ] ದಡ್ಡಿ, ಮೂರ್ಖಳು (ತಾಂ ಗಡ ನಾಳೆ ಪೋಗಿ ದಿವಿಜಾಂಗನೆಯೊಳ್ ತೊಡರ್ದಿರ್ಪಂ ಇಲ್ಲಿ ಮಾಣ್ದು ಆಂ ಗಡಂ ಇರ್ಪೆನಂತು ಬೆಳ್ಳೆನೆ: ಪಂಪಭಾ, ೧೦. ೪೫)

ಬೇಗ

[ನಾ] ಸಮಯ (ಆ ಮದಂ ಅವರ್ಗಂತೇನೇತಱೊಳಾಯ್ತು ಅದನಿನಿಸಾನುಂ ಬೇಗದೊಳೆ ಕಳೆದು ತೋಱೆನೆ ರಣದೊಳ್: ಆದಿಪು, ೧೪. ೨೫); [ನಾ] ಹೊತ್ತು, ಸಂದರ್ಭ (ಊಳ್ವ ಬಗ್ಗಿಸುವ ಬೇಗದೊಳಾ ಕಟಕಂಗಳೆಯ್ದೆ ಕೆಯ್ಕೊಂಡುವು ಮಂದರಕ್ಷುಭಿತ ದುಗ್ಧಪಯೋಧಿ ಗಂಭೀರನಾದಮಂ; ಪಂಪಭಾ, ೧೦. ೪೯)

ಬೇಗಂ

[ಅ] ತ್ವರೆ, ವೇಗ (ಇಂತು ಭರತರಾಜನ ರಥದ ಮನೋರಥದ ಬೇಗಮೊದವಿದುದಾಗಳ್: ಆದಿಪು, ೧೨. ೮೦)

ಬೇಗೆ

[ನಾ] ಉರಿ, ಜ್ವಾಲೆ (ಘೋರಕಾಂತಾರಮನೊಂದು ಬೇಗೆ ಪರಿವಂತು ರಥಂ ಪರಿದತ್ತು: ಪಂಪಭಾ, ೮. ೯೮)

ಬೇಂಟ

[ನಾ] ಪ್ರಣಯ (ವಿಸ್ಮಯಮಪ್ಪಿನಮಾ ಸ್ವಯಂಪ್ರಭೆ ಲಲಿತಾಂಗನಳ್ಳೆರ್ದೆಗೆ ತೊಟ್ಟನೆ ಬೇಂಟಮೆ ಪುಟ್ಟೆ ಪುಟ್ಟಿದಳ್: ಆದಿಪು, ೨. ೭೩)

ಬೇಟ

[ನಾ] [√ಬೇಡು] ಅಭಿಲಾಷೆ (ಮೇಲ್ವಾಯ್ದುಂ ಏವೈಸಿಯುಂ ಪಿರಿದುಂ ಲುಂದುವ ಬೇಟದೊಂದು ಸುಸಿಲಂ ನೋಯಿಕ್ಕುಂ: ಆದಿಪು, ೧೨. ೨೩); [ನಾ] ಪ್ರಣಯ (ಅಂತಾ ಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟ ಎಳವಾಳೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತಿರ್ದಳ್: ಪಂಪಭಾ, ೫. ೧೦ ವ)

ಬೇಟಕಾರ್ತಿ

[ನಾ] ವೇಶ್ಯೆ (ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪಬೇಟದಾಣ್ಮನಂ ಪಿಡಿದು: ಪಂಪಭಾ, ೪. ೯೮ ವ)

ಬೇಟಕಾಱ

[ನಾ] ಪ್ರಣಯಿ (ಇದಂ ಪುಗಲಿಂ ಗಡಿಂ ಎಂದು ಬೇಟಕಾಱರಂ ಇರದೆ ಊಱಿ ಸಾಱಿ ಜಡಿವಂತೆ ಎಸೆಗುಂ ಸಹಕಾರಕೋಮಳ ಅಂಕುರಪರಿತುಷ್ಟ ಪರಪುಷ್ಟಗಳ ಧ್ವನಿ ನಂದನಂಗಳೊಳ್: ಪಂಪಭಾ, ೨. ೧೩)

ಬೇಟದರಸಿ

[ನಾ] ಪ್ರೀತಿಯ ರಾಣಿಯರು (ದುಶ್ಶಾಸನಾದಿಗಳಪ್ಪ ನೂರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಂ ಎಂಬ ಬೇಟದರಸಿಯರುಂ: ಪಂಪಭಾ, ೭. ೩೨ ವ)

ಬೇಟದಾಣ್ಮ

[ನಾ] ಪ್ರಿಯಕರ (ಒರ್ವಳ್ ತನ್ನಂ ಉೞಿದ ಪೊಸ ಬೇಟದಾಣ್ಮನಂ ಏಗೆಯ್ದುಂ ಪೋಗಲೀಯದೆ ತನ್ನಳಿಪನೆ ತೋಱಿ: ಪಂಪಭಾ, ೪. ೯೬ ವ)

ಬೇಂಟೆ

[ನಾ] ಕಾಡುಪ್ರಾಣಿಗಳನ್ನು ಕೊಲ್ಲುವುದು (ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗವ್ಯಾಯಾಮ ಕಾರ್ತಿಕೇಯಂ ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದಟ್ಟಿ ನಾರಾಯಣನುಂ ತಾನುಂ .. .. ಬೇಂಟೆಗೆ ಪೊಱಮಟ್ಟು: ಪಂಪಭಾ, ೫. ೪೭ ವ)

ಬೇಂಟೆಕಾಱ

[ನಾ] ಬೇಟೆಗಾರ (ಅಂತು ನೋಡಿದ ಪೆಂಡಿರೆಲ್ಲಂ ಕಾಮದೇವನೆಂಬ ಬೇಂಟೆಕಾಱಂಗೊಡ್ಡಿದ ಪುಲ್ಲೆಗಳಂತೆ: ಪಂಪಭಾ, ೪. ೩೮ ವ)

ಬೇಂಟೆಜಾಱು

[ನಾ] ಬೇಟೆಯ ಬಗೆಗಿನ ಜಾರಿಕೆಯ ಮಾತು (ಮತ್ತಂ ಬೇಂಟೆಜಾಱಲ್ಲದೆ ಬೇಂಟೆಯ ಮಾತಂ ಬಿನ್ನಪಂಗೆಯ್ವೆಂ: ಪಂಪಭಾ, ೫. ೪೦ ವ)

ಬೇಂಟೆಯ

[ನಾ] ಬೇಡ, ಬೇಟೆಕಾರ (ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು ಬೇಂಟೆವಱಿ ದೊರೆಯೊಳ್ ಒಡಂಬಟ್ಟ ಅಸಿಯ ಸುರಗಿ ದಳಿವದ ತೊಟ್ಟ ಅಂಗಿಗೆ ತನ್ನೊಳ್ ಅಮರೆ ಬೇಂಟೆಯನೊರ್ವಂ: ಪಂಪಭಾ, ೫. ೩೬)

ಬೇಂಟೆಯಾತ

[ನಾ] ಬೇಟೆಗಾರ (ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗವ್ಯಾಯಾಮ ಕಾರ್ತಿಕೇಯಂ ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದಟ್ಟಿ: ಪಂಪಭಾ, ೫. ೪೭ ವ)

ಬೇಂಟೆವಱೆ

[ನಾ] [ಬೇಂಟೆ+ಪಱೆ] ಬೇಟೆಯ ಡೋಲು (ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು ಬೇಂಟೆವಱಿ ದೊರೆಯೊಳ್ ಒಡಂಬಟ್ಟ ಅಸಿಯ ಸುರಗಿ ದಳಿವದ ತೊಟ್ಟ ಅಂಗಿಗೆ ತನ್ನೊಳ್ ಅಮರೆ ಬೇಂಟೆಯನೊರ್ವಂ: ಪಂಪಭಾ, ೫. ೩೬)

ಬೇಂಟೆವಸದನ

[ನಾ] [ಬೇಂಟೆ+ಪಸದನ] ಬೇಟೆಯ ಉಡುಪು (ಬೇಂಟೆವಸದನಂಗೊಂಡು ಕಂಡಿಯ ಬಾಗಿಲೊಳ್ ಉದಾತ್ತನಾರಾಯಣಂ ನಾರಾಯಣನುಮಿರ್ದು: ಪಂಪಭಾ, ೫. ೪೭ ವ)

ಬೇಂಟೆವೋಗು

[ಕ್ರಿ] ಬೇಟೆಯಾಡಲು ಹೋಗು (ನಾಮಿದನಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಂ ಎಂದು ನಿಚ್ಚಂ ಬೇಂಟೆವೋಗೆ: ಪಂಪಭಾ, ೩. ೪ ವ)

ಬೇಡ

[ನಾ] ಬೇಟೆಯ ವೃತ್ತಿಯವನು (ಕಾಡೊಳ್ ಬೇಡರಂತೆ ತೊೞಲ್ವ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಂ: ಪಂಪಭಾ, ೭. ೩೨ ವ); [ಅ] ರಾಕರಣೆಯನ್ನು ಸೂಚಿಸುವ ಅವ್ಯಯ (ಬೇಡ ವಿರೋಧಮೆಂತುಂ ಅರಿಕೇಸರಿಯೊಳ್ ಸಮಸಂದು ಸಂಧಿಯಂ ಮಾಡು: ಪಂಪಭಾ, ೧೩. ೫೪)

Search Dictionaries

Loading Results

Follow Us :   
  Download Bharatavani App
  Bharatavani Windows App