भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೋಧಾವಾಪ್ತಿ

[ನಾ] ಜ್ಞಾನಲಾಭ (ಬೋಧಾವಾಪ್ತಿಯಿಂದಂ ಸುಖಾಕರನಾಗೆಂದು ಫಲಪ್ರದೋಕ್ತಿ ತಳಿದಂ ಶೇಷಾಕ್ಷತೌಘಂಗಳಂ: ಆದಿಪು, ೯. ೬೪)

ಬೋಧಾವಾಸಾಶಯ

[ನಾ] [ಬೋಧ+ಆವಾಸ+ಆಶಯ] ಅರ್ಹಂತ, ಜಿನ (ವಾಸವನಾಸನಕಂಪದಿನಾ ಸಮಯದೊಳ್ ಅವಧಿಯಂ ಪ್ರಯೋಗಿಸಿ ಭೋಧಾವಾಸಾಶಯನ ಉದಯಮನಱಿದು: ಆದಿಪು, ೭. ೪೨) [‘ಬೋಧಾವಾಸಾಶಯ’ ನರಸಿಂಹಶಾಸ್ತ್ರಿಗಳು ಅನುಮೋದಿಸಿದ ಪಾಠ]

ಬೋಧೋದಯ

[ನಾ] ಜ್ಞಾನೋದಯ (ದೇವೇಂದ್ರಮುನಿಪದಾಬ್ಜಂ ಜಯನಂದಿಮುನಿಕ್ರಮ ಕಮಳಮೀಗೆ ಬೋಧೋದಯಮಂ: ಆದಿಪು, ೧. ೧೩)

ಬೋನ

[ನಾ] [ಭೋಜನ] ಆಹಾರ, ಊಟ (ಸುತ್ತಿದ ಕರಗದ ನೀರುಮನೆತ್ತಿದ ಬೋನಮುಮನಿದಿರೊಳಿಟ್ಟಿರೆ ಬನ್ನಿಂ ಇತ್ತೇೞ್ತಾಯೆಂದರ್ ಮುನಿಪೋತ್ತಮನಂ: ಆದಿಪು ನರಸಿಂ, ೯. ೧೨೬)

ಬೋನಮೆತ್ತು

[ಕ್ರಿ] ಊಟ ಸಿದ್ಧಪಡಿಸು (ಅಮೃತಮತಿಯಂ ಅಮೃತಾಹಾರದ ಬೋನಮನೆತ್ತಲುಂ .. .. ಪೇೞ್ದಾಗಳ್: ಆದಿಪು, ೭. ೨೧ ವ)

ಬೋನವೇಳಿಗೆ

[ನಾ] [ಬೋನ+ಪೇಳಿಗೆ] ಅಡುಗೆಯ ಪಾತ್ರೆಗಳಿಡುವ ಪೆಟ್ಟಿಗೆ (ಅನ್ನೆಗಂ ಭೀಮಸೇನನುಂ ಬೋನವೇಳಿಗೆಯಂ ಸಟ್ಟುಗಮುಮಂ ಒರ್ವ ಪರಿಚಾರಕನಿಂ ಪಿಡಿಯಿಸಿಕೊಂಡು ಬಂದು: ಪಂಪಭಾ, ೮. ೫೩ ವ)

ಬೋರಗುದುರೆ

[ನಾ] ಕಂದುಬಣ್ಣದ ಕುದುರೆ (ವಾರುವದ ಬೋರಗುದುರೆಗಳೊಳ್ ಪೂಡಿದ ಪಸುರ್ವೊನ್ನ ರಥಮನೇಱಿ: ಪಂಪಭಾ, ೧೨. ೫೩ ವ)

ಬ್ರಹ್ಮಕಲ್ಪ

[ನಾ] [ಜೈನ] ಹದಿನಾರುಕಲ್ಪಗಳಲ್ಲಿ ಒಂದು, ಬ್ರಹ್ಮ ಎಂಬ ಹೆಸರಿನ ಕಲ್ಪ (ತ್ರಿಭುವನಗುರು ಪರಿನಿಷ್ಕ್ರಮಣಕಲ್ಯಾಣ ಶಾರದಾಗಮ ಪ್ರತೀಕ್ಷಣದಿವ್ಯಹಂಸರುಂ ಬ್ರಹ್ಮಕಲ್ಪಾಂತ ನಿವಾಸಿಗಳುಮಪ್ಪ: ಆದಿಪು, ೯. ೬೦ ವ)

ಬ್ರಹ್ಮಯೋಗ

[ನಾ] ಬ್ರಾಹ್ಮೀ ಮುಹೂರ್ತ (ಬರೆ ಚೈತ್ರಂ ಕೃಷ್ಣಪಕ್ಷಂ ದೊರೆಕೊಳೆ ನವಮೀವಾಸರಂ ಪೊರ್ದೆ ಲೋಕೋತ್ತರಮಾಗಿರ್ದ ಉತ್ತರಾಷಾಢದೊಳ್ ಅತಿಶುಭದಂ ಬ್ರಹ್ಮಯೋಗಂ ಮನಂಗೊಂಡಿರೆ: ಆದಿಪು, ೭. ೩೬)

ಬ್ರಹ್ಮಸಭೆ

[ನಾ] ಬ್ರಾಹ್ಮಣರ ಗುಂಪು (ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ: ಪಂಪಭಾ, ೩. ೫೨ ವ)

ಬ್ರಹ್ಮಸೂತ್ರ

[ನಾ] ಜನಿವಾರ (ವಿಚಿತ್ರತಿಳಕವಿಳಸಿತಲಲಾಟನುಂ ತಾರಾತರಳ ಮುಕ್ತಾಫಳಕಲಿತ ಜಾನುಲಂಬಿತ ಬ್ರಹ್ಮಸೂತ್ರನುಂ: ಆದಿಪು, ೧೧. ೧೦ ವ); [ನಾ] ಹಾರ (ತಲೆನವಿರಂ ಪಚ್ಚುಗಂಟಿಕ್ಕಿ ಮಣಿಮಯಮಕುಟಮಂ ಕವಿದು ತೋರನೆಲ್ಲಿಯ ಕಾಯಿಂ ಪಿರಿಯವಪ್ಪ ಮುತ್ತಿನ ಬ್ರಹ್ಮಸೂತ್ರಮಂ ಎೞಲಿಕ್ಕಿ: ಪಂಪಭಾ, ೧೨. ೧೦೮ ವ)

ಬ್ರಹ್ಮಾಂಡ

[ನಾ] [ಬ್ರಹ್ಮ+ಅಂಡ] ಬ್ರಹ್ಮನ ಮೊಟ್ಟೆ, ಬ್ರಹ್ಮ ಸೃಷ್ಟಿಸಿದ ಮೊಟ್ಟೆಯಾಕಾರದ ವಿಶ್ವ (ಅಂತು ಬ್ರಹ್ಮಾಂಡಂ ಉರಿಯೆ ಕಾದೆ: ಪಂಪಭಾ, ೧೧. ೧೭ ವ)

ಬ್ರಹ್ಮಾಯು

[ನಾ] ದೀರ್ಘಾಯು (ಬ್ರಹ್ಮಂ ಬ್ರಹ್ಮಾಯುವಕ್ಕೆ ಎಂದು ಪರಸಿದಂ: ಪಂಪಭಾ, ೫. ೧೦೩ ವ)

ಬ್ರಹ್ಮಾಸ್ತ್ರ

[ನಾ] ಬ್ರಹ್ಮನು ಅಧಿದೇವತೆಯಾಗಿರುವ ಮಂತ್ರಾಸ್ತ್ರ (ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನಕಾಲದೊಳ್ ಬೆಸಕೆಯ್ಯದಿರ್ಕೆ: ಪಂಪಭಾ, ೧. ೧೦೫ ವ)

ಬ್ರಹ್ಮೇಂದ್ರತೆ

[ನಾ] [ಜೈನ] ಬ್ರಹ್ಮಕಲ್ಪದ ಒಡೆತನ (ಪಡೆದಂ ಬ್ರಹ್ಮೇಂದ್ರತೆಯಂ ಗಡಂ ಆತಂ ಬಗೆದು ನೋಡೆ ನಾರಕನೆತ್ತಲ್ ಗಡ ದೇವನೆತ್ತ: ಆದಿಪು, ೫. ೯೭)

ಬ್ರಾತ

[ನಾ] ವ್ರಾತ, ಸಮೂಹ (ವಿರಚಿತೋದ್ದಾಮ ಸುರಪತಿಧನುಬ್ರಾತಮಂ ಸುರುಚಿರಾಂಶೂಲ್ಲಸತ್ ರತ್ನಸಂಘಾತಮಂ: ಆದಿಪು, ೭. ೨೭ ರಗಳೆ)

ಬ್ರಾಹಣಸಮಿತಿ

[ನಾ] ಬ್ರಾಹ್ಮಣರ ಗುಂಪು (ಗಣನಾತೀತ ಆಜ್ಯಾಹುತಿಗಣದಿಂದಂ ತಣಿಯೆ ಜಾತವೇದನುಂ ಆ ಬ್ರಾಹ್ಮಣಸಮಿತಿ ಬೇಳೆ ದೇವರ್ ತಣಿಯುಂಡರ್ ನೆರೆದು ದಿವ್ಯ ಹವ್ಯಾಮೃತಮಂ: ಪಂಪಭಾ, ೬. ೩೭)

Search Dictionaries

Loading Results

Follow Us :   
  Download Bharatavani App
  Bharatavani Windows App