भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಣ್ಣವಣ್ಣಿಗೆ

[ನಾ] [ಬಣ್ಣ+ಪಣ್ಣಿಗೆ] ಬಣ್ಣದ ಕೆಲಸ, ಬಣ್ಣ ಹಾಕುವುದು (ಬಣ್ಣದ ಕಣದ ಬಣ್ಣವಣ್ಣಿಗೆಯ ಜವಳಿಗಳನೆ ಮೊಗಂ ನೋಡದೆ ಸೂಸಿದಾಗಳ್: ಆದಿಪು, ೪. ೩೪ ವ)

ಬಣ್ಣವಾಸಿಗ

[ನಾ] ಬಣ್ಣದ ಹೂಗಳ ಬಾಸಿಗ, ಕುಚ್ಚು (ನಮೇರು ಮಂದಾರ ಪಾರಿಜಾತದ ಬಣ್ಣವಾಸಿಗಂಗಳುಂ: ಆದಿಪು, ೨. ೬೭ ವ)

ಬಣ್ಣವುರ

[ನಾ] [ವರ್ಣಪೂರ] ಒಂದು ಬಗೆಯ ವಸ್ತ್ರ (ಕಾಮಕಾಂತೆ ಬೞಿಯಂ ತನ್ನಿಚ್ಚೆಯಿಂ ಮೆಚ್ಚಿ ಬಣ್ಣವುರಂ ತೀವಿದ ಮಾೞ್ಕೆಯಾಯ್ತು .. .. ಮಹೀಮಂಡಲಂ: ಪಂಪಭಾ, ೭. ೨೪)

ಬಣ್ಣಸರ

[ನಾ] ಬಣ್ಣಬಣ್ಣದ ಮಣಿಗಳ ಸರ ಮತ್ತು [ವರ್ಣಸ್ವರ] ಎಂದರೆ ವರ್ಣಸ್ವರಾನುಸಾರಿಯಾದ ನರ್ತನ (ಬಣ್ಣಸರಂಗೊಂಡಂತಿರೆ ಬಣ್ಣಸರಂ ಸೊಗಯಿಸಿದುದು ಏನವಳ್ ಪರಿಣತೆಯೋ: ಆದಿಪು, ೯. ೩೧)

ಬಣ್ಣಸರಂಗೊಳ್

[ಕ್ರಿ] ಬಣ್ಣಬಣ್ಣದ ಸರವನ್ನು ಧರಿಸು (ಬಣ್ಣಸರಂಗೊಂಡಂತಿರೆ ಬಣ್ಣಸರಂ ಸೊಗಯಿಸಿದುದು ಏನವಳ್ ಪರಿಣತೆಯೋ: ಆದಿಪು, ೯. ೩೧)

ಬಣ್ಣಿಸು

[ಕ್ರಿ] ಬಣ್ಣ ಹಾಕು (ಕರ್ಣಿಕೆಯಂದಮಾಗೆ ಕೀಲಿಸಿ ಪೊಸತಪ್ಪ ಮಾಣಿಕದ ನುಣ್ಪರಲಂ ಮಧು ಮನ್ಮಥಂಗೆ ಬಣ್ಣಿಸಿ ಸಮೆದಂತೆ ತೋಱುವುದು: ಆದಿಪು, ೧೧. ೧೧೬)

ಬತ್ತಲೆಗ

[ನಾ] ದಿಗಂಬರ ಸನ್ಯಾಸಿ (ತಲೆವಱಿದುಟ್ಟುದಿಕ್ಕಿ ಸುರಲೋಕ ಸುಖಂಗಳನುಣ್ಬೆವೆಂಬ ಬತ್ತಲೆಗರ ಮಾತುಗೇಳದಿರು: ಆದಿಪು, ೨. ೯)

ಬತ್ತು

[ಕ್ರಿ] ಒಣಗು (ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟ ಅಲರ್ಗಣ್ಣ ನೋಟಂ ಉಣ್ಮಿದ ಬೆಮರ್ ಓಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು: ಪಂಪಭಾ, ೪. ೬೦)

ಬಂದ

[ಗು] [√ವರ್] ಚಿಗುರಿದ (ಮೃದುಮಧುರಸ್ವನಂ ನೆಗೞೆ ಬಂದ ಎಳಮಾವಿನೊಳಿರ್ದು ಕೂಡೆ ಪಾಡಿದುದು ಮದಾಳಿಮಾಲೆ: ಪಂಪಭಾ, ೧೪. ೧೨)

ಬಂದ ಕರ್ಬು

[ನಾ] [√ಬಲ್] ಬಲಿತ ಕಬ್ಬು (ಕಾಯ್ತು ಕರೆವಂತಿರ್ದತ್ತು ಚೆಂದೆಂಗು ಸಾರಲೆವಂತಿರ್ದುದು ಬಂದ ಕರ್ಬು: ಆದಿಪು, ೧೧. ೬೮)

ಬಂದ ಕೋಡು

[ನಾ] [√ವರ್] ಮೂಡಿದ ಕೊಂಬೆ (ಮಾವಿನ ಬಂದ ಕೋಡೆ ಕೋಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ: ಪಂಪಭಾ, ೨. ೧೫)

ಬಂದ ದೂವೆ

[ನಾ] ಚಿಗುರಿದ ಎಳೆ ಹುಲ್ಲು (ಚಂದ್ರನನಂಭೋನಿಧಿ ಬಂದ ದೂವೆ ಮಲೆಯಂ ಕಾರ್ಗಾಲಮಂ .. .. ಸೋಗೆ ನೆನೆವಂತಾಂ ನೆನೆವೆಂ ಸರೋಜಮುಖಿಯಂ: ಆದಿಪು, ೧೨. ೩೧)

ಬಂದ ಬಟ್ಟೆಯಿನೆ ಬಿಜಯಂಗೆಯ್

ಬಂದ ದಾರಿ ಹಿಡಿದು ಹೊರಟುಹೋಗು (ಕೆಮ್ಮಗೆ ನಿಮ್ಮಡಿ ಬೞಲಿಸಲ್ವೇಡ ಬಂದ ಬಟ್ಟೆಯಿನೆ ಬಿಜಯಂಗೆಯ್ಯಿಂ: ಪಂಪಭಾ, ೯. ೪೮ ವ)

ಬಂದ ಮಾವು

[ನಾ] ಹಣ್ಣುಬಿಟ್ಟ ಮಾವಿನ ಮರ (ಬಂದ ಮಾವು ಬೀಯದು ಕುಸುಮಾಸ್ತ್ರನಾಜ್ಞೆ ತವದು ಎಲ್ಲಿಯುಮಿಲ್ಲಿಯ ನಂದನಂಗಳೊಳ್: ಪಂಪಭಾ, ೪. ೨೧)

ಬದಗುಗೆಯ್

[ಕ್ರಿ] ಊಳಿಗತನವನ್ನು ಮಾಡು (ಪೆಱರ ಕೀೞಿಲೊಳ್ ಎಮ್ಮಬ್ಬೆಯುಂ ಮುತ್ತಬ್ಬೆಯುಂ ಸಾರ್ದು ಬದಗುಗೆಯ್ದುಣೆ: ಆದಿಪು, ೩. ೩೪ ವ)

ಬದರೀಫಳ

[ನಾ] ಬೋರೇ ಹಣ್ಣು (ದಿನತ್ರಯದೊಳ್ ಬದರೀಫಳಮಾತ್ರ ಆಹಾರಿಗಳುಂ ಆರೋಗ್ಯಶರೀರಂಗಳುಂ ಸೌಂದರಾಕಾರಂಗಳುಂ ತ್ರಿಪಲ್ಯೋಪಮಜೀವಿಗಳುಂ ಆಗಿ: ಆದಿಪು, ೫. ೪೧ ವ)

ಬಂದಿಕಾಱ

[ನಾ] ಸೆರೆ ಹಿಡಿಯುವವನು (ಬಂದಿಕಾಱನಂತೆ ಸೆಱೆಗೆಯ್ದುಂ ವ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ .. .. ರಸವಾದಿಯಂತೆ ಕಟ್ಟಿಯುಂ ಪೆರ್ಜೋಡೆಯಂತೆ ನುಣ್ಣಿತಂ ವೇೞ್ದು: ಪಂಪಭಾ, ೬. ೭೨ ವ)

ಬಂದೈ

ಬಂದೆಯಾ? (ಲಾಕ್ಷಾಗೃಹಮಂ ಪುಗಿಸಲುಂ ಅಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಪಿಂಗಾಕ್ಷಂಗೆ ವೇೞ್ದು ಸೈರಿಸದೆ ಆಕ್ಷೇಪದಿಂ ಎಮ್ಮನಿಲ್ಲಿ ಛಿದ್ರಿಸ ಬಂದೈ: ಪಂಪಭಾ, ೭. ೩೨)

ಬದ್ದವಣ

[ನಾ] [ವರ್ಧಮಾನ] ಮಂಗಳವಾದ್ಯ (ಇಡಿದಿರೆ ಪೂತಮರದ್ರುಮದ ಇಡುವುಗಳೊಳ್ ಬದ್ದವಣದ ಪುಡಿವೊಲ್: ಆದಿಪು, ೭. ೭೩)

ಬದ್ದೆ

[ನಾ] ಎಳವೆಯ ಚರ್ಯೆ, ಮುದ್ದು (ಪದಮುಮಂ ಇಂಬುಮಂ ಅಣಮಱಿಯದೇವುದು ಬದ್ದೆ ಬೆಳ್ಮಿಗಂ ಪಜ್ಜೆ ದಲೆಂಬುದನೆರಡುಮಂ ಅಱಿವಾತನೆ ಚದುರಂ ಚದುರಂಗೆ ಬದ್ದವಜ್ಜೆಗಳೊಳವೇ: ಪಂಪಭಾ, ೫. ೪೫)

Search Dictionaries

Loading Results

Follow Us :   
  Download Bharatavani App
  Bharatavani Windows App