भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಲಗೊಳ್

[ಕ್ರಿ] ಪ್ರದಕ್ಷಿಣೆ ಹಾಕು (ಶ್ರೀಮಜ್ಜಿನಭವನಮಂ ಅಖಿಳಾಮರನರಖಚರ ಚಕ್ರವರ್ತಿಸ್ತುತಮಂ ಮೂಮೆ ಬಲಗೊಂಡು: ಆದಿಪು, ೪. ೧); [ಕ್ರಿ] ಸುತ್ತು ಹಾಕು (ಕನಕಗಿರಿಯಂ ಬಲಗೊಳ್ವ ಪತಂಗದಂಪತಿಯಂತೆ ಆ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞ್ ಬಲವಂದು: ಪಂಪಭಾ, ೩. ೭೫ ವ); [ಕ್ರಿ] ನಮಸ್ಕರಿಸು (ಭವತ್ ಪದಸರೋಜಮನಾಂ ಬಲಗೊಂಡು ಮತ್ತಮಾಜಿಗೆ ನಡೆಯಲ್ಕೆ ಬಂದೆಂ: ಪಂಪಭಾ, ೧೩. ೬೫)

ಬಲಜಳನಿಧಿ

[ನಾ] ಸೈನ್ಯವೆಂಬ ಸಾಗರ (ಯಾದವಬಲಜಳನಿಧಿವೆರಸು ವಿಳಯಕಾಲಜಳನಿಧಿಯಂತೆ ತೆರಳಲ್ ಬಗೆದ ಬಲದೇವನಂ: ಪಂಪಭಾ, ೫. ೨೧ ವ)

ಬಲದೇವ

[ನಾ] [ಜೈನ] ಅರವತ್ತು ಮೂವರು ಶಲಾಕಾಪುರುಷರಲ್ಲಿನ ಒಂಬತ್ತು ಮಂದಿಯಲ್ಲಿನ ಬಲದೇವರ ಗುಂಪು; ವಿಜಯ, ಅಚಲ, ಸುಧರ್ಮ, ಸುಪ್ರಭ, ಸುದರ್ಶನ, ನಂದಿ, ನಂದಿಮಿತ್ರ, ರಾಮ, ಪದ್ಮ ಎಂಬುವವರು (ಶ್ರೀವರ್ಮನುಂ ವಿಭೀಷಣನುಂ ಎಂಬ ಪೆಸರೊಳ್ ಬಲದೇವ ವಾಸುದೇವರೆನಿಸಿ ಬಳೆಯೆ: ಆದಿಪು, ೩. ೫೦ ವ)

ಬಲಂಬೆಱು

[ಕ್ರಿ] [ಬಲಂ+ಪೆಱು] ಶಕ್ತಿಯನ್ನು ಹೆಚ್ಚಿಸಿಕೊ (ಕಥೆಯುಂ ತದಾದಿಪುರುಷಪ್ರಸ್ತುತ್ಯಜನ್ಮಾಳಿಬಂಧುರಂ ಎಂದಂದೆ ಮದೀಯವಾಗ್ವಿಭವವಿನ್ಯಾಸಂ ಬಲಂಬೆತ್ತುದು: ಆದಿಪು, ೧. ೨೫)

ಬಲವಕ್ಕ

[ನಾ] [ಬಲ+ಪಕ್ಕ] ಬಲಭಾಗ, ಬಲಗಡೆ (ದ್ರುಪದಂ .. .. ತನ್ನ ಮಕ್ಕಳ್ವೆರಸು ನೆಲಂ ಮೂರಿವಿಟ್ಟಂತೆ ಬಲವಕ್ಕದೊಳ್ ನಡೆಯೆ: ಪಂಪಭಾ, ೯. ೯೫ ವ)

ಬಲವತ್

[ಗು] ಬಲಿಷ್ಠ (ಕಾದುದು ಸರಣ್ಗೆ ವಂದರಂ ಆದುದು ಕಾಲಾಗ್ನಿ ಬಲವತ್ ಅರಿನೃಪತಿಗೆ ಕಾಪಾದುದು ನೆಲಕ್ಕೆ ತೋಳ್ವಲಂ: ಪಂಪಭಾ, ೭. ೨)

ಬಲವರ್

[ಕ್ರಿ] ಪ್ರದಕ್ಷಿಣೆ ಮಾಡು (ಆಗಳ್ ಆನೇಱಿಪೆನೆಂದು ಪೊಚ್ಚಱಿಸಿ ಬಂದು ಸುಯೋಧನನುಗ್ರಚಾಪಮಂ ಮೂಱು ಸೂೞ್ ಬಲವಂದು: ಪಂಪಭಾ, ೩. ೫೮ ಮತ್ತು ೫೮ ವ)

ಬಲಸ್ಥ

[ನಾ] ಬಲಿಷ್ಠ (ಏಂ ಬಲಸ್ಥನೊ ಭೀಮಂ: ಪಂಪಭಾ, ೧೧. ೬೮)

ಬಲಾಕ

[ನಾ] ಬೆಳ್ಳಕ್ಕಿ (ಬಕ ಕಲಹಂಸ ಬಲಾಕ ಪ್ರಕರ ಮೃದುಕ್ವಣಿತರಮ್ಯಮಿದಿರೊಳ್ ತೋಱೆತ್ತು ಕೊಳಂ: ಪಂಪಭಾ, ೮. ೩೮)

ಬಲಾಧ್ಯಕ್ಷ

[ನಾ] ಬಲಾಧಿಕೃತ (ಅಂತು ಅತಿತ್ವರಿತಗಮನ ನಿಶ್ಚಿತಮನನಾಗಿ ಬಲಾಧ್ಯಕ್ಷನಂ ಬರಿಸಿ: ಆದಿಪು, ೪. ೯೦ ವ)

ಬಲಾಬ್ಧಿ

[ನಾ] ಸೈನ್ಯಸಾಗರ (ಬಾಹುಮಂದರದಿಂ ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂರ್ವರುಮಂ ಕೊಲ್ವೆಂ ಇದೆನ್ನ ಪೂಣ್ಕೆ ನುಡಿದೆಂ ನಿಮ್ಮೀ ಸಭಾಮಧ್ಯದೊಳ್: ಪಂಪಭಾ, ೭. ೧೫)

ಬಲಿ

[ನಾ] [ಜೈನ] ಶಾಂತಿಕಪೌಷ್ಟಿಕಾದಿ ಕರ್ಮಗಳನ್ನೊಳಗೊಂಡ ಪೂಜೆ (ಶಾಂತಿಕಪೌಷ್ಟಿಕಾದಿಗಳುಮಂ ಬಗೆದು ಮಾೞ್ಪ ಬಲಿಯುಂ: ಆದಿಪು, ೧೫. ೧೩ ವ); [ನಾ] ಬಲಿ ಚಕ್ರವರ್ತಿ (ಬಲಿಯಂ ವಾಮನರೂಪದಿಂದಮೆ ವಲಂ ಮುಂ ಬೇಡಿದೆಂ ಭೂರಿಭೂತಲಮಂ: ಪಂಪಭಾ, ೯. ೨೦); [ಕ್ರಿ] [ಜೈನ] ಗಟ್ಟಿಯಾಗು (ನೀಮುಮೀಗಳ್ ವನಸಿಂಹನ್ಯಾಯದಿಂ ದುರ್ಗದೊಳೆ ಬಲಿದು ನಿಂದಲ್ಲಿ: ಆದಿಪು, ೧೩. ೫೮)

ಬಲಿಕುಸುಮ

[ನಾ] ಆಹುತಿಯರ್ಪಿಸಿ ಮಾಡುವ ಬಲಿಪೂಜೆಗಾಗಿ ಬಳಸುವ ಹೂವು (ಅಂಗಣರಚಿತಮೌಕ್ತಿಕ ರಂಗಬಲಿಯುಂ ಬಲಿಕುಸುಮ ನಿಪತದಳಿಕುಳಾರಬ್ಧಗೀತಮುಂ: ಆದಿಪು, ೪. ೫೮ ವ)

ಬಲಿಗೆದಱು

[ಕ್ರಿ] [ಬಲಿ+ಕೆದಱು] ಎರಚು, ಹರಡು (ಪರಲ್ಗಳಂ ಬಲಿಗೆದಱಿದಂತೆ ಪಸುರ್ಪೆಸೆವ ನೆಲದೊಳ್ ಉಪಾಶ್ರಯಂಬಡೆದಳಂಕರಿಸುವ ಇಂದ್ರಗೋಪಂಗಳುಮಂ ಕಿಸುಗಾಡ ನೆಲಂಗಳೆಳದಳಿರ ಬಣ್ಣಮಂ ಕೆಯ್ಕೊಂಡಂ: ಪಂಪಭಾ, ೭. ೨೫ ವ)

ಬಲಿಂದಮ

[ನಾ] ಬಲಿಯನ್ನು ದಮನಮಾಡಿದವನು, ವಾಮನ, ವಿಷ್ಣು (ಬಲಿಂದಮನಿಂ ಬಿಲ್ಲ ಬಲ್ಮೆಯಂ ಪೊಗೞಿಸಿದಂ: ಪಂಪಭಾ, ೫. ೪೮)

ಬಲಿದುಪವಾಸ

[ನಾ] ನಿಟ್ಟುಪವಾಸ (ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮಕ್ರಮಂಗಳಂ ಸಲಿಸಿದರಿಂತು ನೋನದೆ ಗೂರ್ಣಾವನಂ ಪಡೆಯಲ್ಕೆ ತೀರ್ಗುಮೇ: ಪಂಪಭಾ, ೧. ೧೩೬)

ಬಲಿಬಂಧನ

[ನಾ] ಬಲಿಂದಮ, ವಿಷ್ಣುವಿನ ವಾಮನಾವತಾರ (ದುರ್ಯೋಧನನುಮಾಗಳೆ ಬಂದು ಬಲಿಬಂಧನನ ತಲೆದೆಸೆಯೊಳ್ ಕುಳ್ಳಿರೆ: ಪಂಪಭಾ, ೯. ೧೦ ವ)

ಬಲಿಬಲಪ್ರಧ್ವಂಸಿ

[ನಾ] ಬಲಿಯ ಬಲವನ್ನು ನಾಶಮಾಡಿದವನು, ವಾಮನ, ಶ್ರೀಕೃಷ್ಣ (ಇಳಾವಿಖ್ಯಾತನಂ ಕೂರ್ತು ನೋಡಲುಂ ಅೞ್ಕರ್ತು ಅಮರ್ದು ಅಪ್ಪಲುಂ ಪಡೆವೆ ಇಂದು ಎಂಬಂತೆ ಕೆತ್ತಿತ್ತು ದಲ್ ಬಲಗಣ್ಣುಂ ಬಲದೋಳುಂ ಆ ಬಲಿಬಲಪ್ರಧ್ವಂಸಿಗೆ ಅಂದು ಇಟ್ಟಳಂ: ಪಂಪಭಾ, ೪. ೩೩)

ಬಲಿಬಲಸೂದನ

[ನಾ] ಬಲಿಯ ಬಲವನ್ನು ನಾಶಮಾಡಿದವನು (ಅಯ್ವರುಮಂ ಅಯ್ದು ಅೞಿಯೂರೊಳೆ ಬಾಳಿಸೆಂದು ಮುಂ ಬಲಿಬಲಸೂದನಂ ನುಡಿಯೆಯುಂ ಕುಡದಿರ್ದುದೆ ಪೇೞ್ಗುಂ ಎಯ್ದೆ ಮೆಯ್ಗಲಿತನಮಂ: ಪಂಪಭಾ, ೧೨. ೪೮)

ಬಲ್

[ಕ್ರಿ] ಹಟದಿಂದಿರು (ಆದಿಬ್ರಹ್ಮರ ಕೊಟ್ಟೀ ಮೇದಿನಿಗಾನೊಡೆಂ ಆತನರಸಿನಿವಿರಿದಿಂದಾದೊಡಂ ಏನ್ ಎನಗೆಂಬ ಮದೋದಯದೊಳ್ ದೇವ ಬಾಹುಬಲಿ ಬಲ್ದಿರ್ದಂ: ಆದಿಪು, ೧೪. ೧೮)

Search Dictionaries

Loading Results

Follow Us :   
  Download Bharatavani App
  Bharatavani Windows App