भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಲ್ಕಣಿ

[ನಾ] ಶೂರ (ಕಣಿಯಂ ಶೌರ್ಯಾಭಿಮಾನಕ್ಕೆ ಎಡಱಿದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬಲ್ಕಣಿಯಂ: ಪಂಪಭಾ, ೭. ೯೫)

ಬಲ್ದಡಿಗ

[ನಾ] ಮಹಾ ದಾಂಡಿಗ, ಬಲಶಾಲಿ (ಉನ್ನತ ಮಸ್ತಕಸ್ಥಳದೊಳ್ ಅಂಬುಗಳ್ ಅೞ್ದುಡಿದಿರ್ದೊಡಂ ಅತ್ತಮಿತ್ತನೆೞೆತಂದು ಬಲ್ದಡಿಗರ್ ಇೞ್ಕುೞಿನೊಳ್ ಕಿೞೆ ನೊಂದೆಂ ಎನ್ನದೆ: ಪಂಪಭಾ, ೧೧. ೩)

ಬಲ್ದಿರ್

[ಕ್ರಿ] ಸೆಟೆದುಕೊ, ಬಿಗಿದುಕೊ (ಆದಿಬ್ರಹ್ಮರ ಕೊಟ್ಟೀ ಮೇದಿನಿಗಾನೊಡೆಯಂ ಅತನರಸಿನಿವಿರಿದಿಂದಾದೊಡಮೇಂ ಎನಗೆಂಬ ಮದೋದಯದೊಳ್ ದೇವ ಬಾಹುಬಲಿ ಬಲ್ದಿರ್ದಂ: ಆದಿಪು, ೧೪. ೧೮)

ಬಲ್ಪು

[ನಾ] ಕಾಠಿಣ್ಯ (ಸಲೆ ಮೆಲ್ಪು ಬಲ್ಪನೞಿಗುಂ ಕೈವಾರಮುಂ ಕೂಡೆ ಕೂರಿಸುಗುಂ ನಿಕ್ಕುವಂ: ಪಂಪಭಾ, ೯. ೧೯)

ಬಲ್ಪುದೋಱು

[ಕ್ರಿ] ಕಾಠಿಣ್ಯ ತೋರು (ಏಱನೆ ಸೂಱೆಗೊಂಡು ನುಡಿವೀ ನುಡಿಯಲ್ಲದೆ ಮತ್ತಂ ಆಸನಂದೋಱುವ ಬಲ್ಪುದೋಱುವ ಎರ್ದೆದೋಱುವ ಕಯ್ಪೆಸರಂಗಳ್ ಎಮ್ಮಂ ಉಂತೆ ಏಱವು: ಪಂಪಭಾ, ೮. ೨೦)

ಬಲ್ಮಿಡಿ

[ನಾ] ದೊಡ್ಡ, ಬಲಿತ ಕಾಯಿ (ತೂಗಿರ್ದ ಬಲ್ಮಿಡಿಯ ತೂಗುಂಗೊಂಬಿನೊಳ್ಪಾಯ್ದು ಮಂಡಳಿಸುತ್ತಿರ್ಪ ಶುಕಾಳಿ: ಆದಿಪು, ೧೧. ೯೬)

ಬಲ್ಮುಗುಳ್

[ನಾ] ದೊಡ್ಡ ಮೊಗ್ಗು (ಪರೆಯೆ ಪಸುರ್ಪು ಬೆಳ್ಪಡರೆ ಬಲ್ಮುಗುಳೊಳ್ ಪೊರೆದೋಱೆ ತಂಬೆಲರ್: ಆದಿಪು, ೧೧. ೧೧೦)

ಬಲ್ಮೆ

[ನಾ] ಶ್ರೇಷ್ಠತೆ, ಪ್ರೌಢಿಮೆ (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನಂ ಉಗ್ರ ಪರಶು ಪಾಟಿತರಿಪುವಂಶಾರಾಮನಂ ಇಷುವಿದ್ಯಾ ಪಾರಗನೆನಿಸಿದುದು ಬಲ್ಮೆ ವೈಕರ್ತನನಾ: ಪಂಪಭಾ, ೧. ೧೦೪); [ನಾ] ಅರಿವು (ಏರ್ವೆಸನದೊಳಾದ ಬಲ್ಮೆಯೊಳ್ ಒಡಂಬಡೆ ತಳ್ತಿಱಿವಲ್ಲಿ ಮಿಂಚಿನೊಳ್ ಮುಸುಕಿದ ಮಾೞ್ಕೆಯಾಯ್ತು ಸಮರಾಂಗಣಂ ಉಳ್ಕುವ ಬಾಳ್ಗಳ ಉಳ್ಕದಿಂ: ಪಂಪಭಾ, ೧೦. ೭೮)

ಬಲ್ಲಡವಿ

[ನಾ] ದೊಡ್ಡ ಕಾಡು (ಗುಡಿಯ ಗೂಂಟಕ್ಕೆ ಬಲ್ಲಡವಿಗಳುಂ ದಂಡಿಗೆಗೆ ವೇಣುವನಂಗಳುಂ ಆನೆಗಂಬಕ್ಕೆ ಪೆರ್ಮರಂಗಳುಮಂ ಆ ಪಡೆಗೆ ನೆಱೆಯವೆನಿಸಿ: ಪಂಪಭಾ, ೯. ೧೦೪ ವ)

ಬಲ್ಲಣಿ

[ನಾ] ಬಲವಾದ ಕಾಲಾಳುಸೈನ್ಯ (ಪಸರಿಸಿ ಪೊಕ್ಕು ಕೂಕಿಱಿದು ಕಾದುವ ಬಲ್ಲಣಿಗಳ್ ಪಳಂಚೆ: ಪಂಪಭಾ, ೮. ೯೩)

ಬಲ್ಲರ್

[ನಾ] ಬಲ್ಲವರು, ತಿಳಿದವರು (ತಗುಳ್ದಿರೆ ಬಲ್ಲರ್ ನಡೆ ನೋಡಿ ಕೂಡೆ ಪಡೆದತ್ತು ಅಕ್ಷೆಕ್ಷೋಹಿಣೀಸಂಖ್ಯೆಯಂ: ಪಂಪಭಾ, ೯. ೯೫)

ಬಲ್ಲಹ

[ನಾ] [ವಲ್ಲಭ] ಯಜಮಾನ, ರಾಷ್ಟ್ರಕೂಟ ಚಕ್ರವರ್ತಿ ವಲ್ಲಭರಾಜ (ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ ರಾಗಂಗಿಡದೆ ಕೊಂಡಾಡಿದಂ ಬಲ್ಲಹನಱಿಯೆ ಗುಣಾರ್ಣವಂ ಕವಿತಾಗುಣಾರ್ಣವನಂ: ಪಂಪಭಾ, ೧೪. ೫೫)

ಬಲ್ಲಾಯ

[ನಾ] ಅಧಿಕ ಸಾಮರ್ಥ್ಯ, ದಪ್ಪ (ನಿಡಿಯರ್ ಬಲ್ಲಾಯದ ಬಲ್ದಡಿಗರ್ ವಂದಿರ್ದರಯ್ವರ್: ಪಂಪಭಾ, ೩. ೧೨)

ಬಲ್ಲಾಳ್ತನ

[ನಾ] ಶೌರ್ಯ (ಈಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮಂ ಅವರವರ ದೆಸೆಗಳಿಂ ತೆಗೆದೊಂದುಮಾಡಿ: ಪಂಪಭಾ, ೧. ೧೩೯ ವ)

ಬಲ್ಲಿತ್ತಱ ಕೋಡು ಕೂರಿತು

ಬಲಿಷ್ಠರ ಕೊಂಬು ಹರಿತ, ಬಲಿಷ್ಠರನ್ನು ಅವಗಣಿಸಲಾಗದು (ಇನ್ನಿದು ಬಲ್ಲಿತ್ತರ ಕೋಡು ಕೂರಿತು ಅದನಂತಿಂತಿಂತುನಲ್ ಬರ್ಕುಮೇ: ಆದಿಪು, ೧. ೨೫)

ಬಲ್ಲಿದ

[ನಾ] ಶೂರ (ಬಲ್ಲಿದಂ ಸುರನಾ ಮಾಗಧನಲ್ಲಿ ಭೂಭುಜನ ದೋರ್ದಂಡಕ್ಕೆ ಪುಣ್ಯೋದಯಂ ನೆರಮಕ್ಕೆ: ಆದಿಪು, ೧೨. ೧೨೫)

ಬಲ್ಲಿದಿರೇ

ಸಮರ್ಥವಾಗಿದ್ದೀರಾ, ಕ್ಷೇಮವೇ (ಕೆಯ್ಯಂ ಪಿಡಿದು ಬಲ್ಲಿದಿರೆ ಎಂದು ಪ್ರಿಯದೊಳಂ ಬಿರ್ದಿನೊಳಂ ಸಂತಸಂಬಡಿಸಿ: ಪಂಪಭಾ, ೬. ೩೩ ವ)

ಬಲ್ವರಿಕೆ

[ನಾ] [ಬಲ್ಲಿತ್ತು+ಪರಿಕೆ] ಬಲವಾದ ದಾಳಿ (ಬಲ್ವರಿಕೆಯೊಳರಿ ನೃಪರ ಪಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ ಸೊಲ್ವಿನಮಾವರ್ಜಿಸಿದಂ ನಾಲ್ವತ್ತೆರಡು ಅಱಿಕೆಗಾಳೆಗಂಗಳೊಳೀತಂ: ಪಂಪಭಾ, ೧. ೨೫)

ಬಲ್ವಿಡಿವಿಡಿ

[ಕ್ರಿ] ಬಲವಾದ ಹಿಡಿತದಲ್ಲಿ ಹಿಡಿ (ಜಸಮದೊಂದೆ ಕಿಡದು ಅದನಾಂ ಬಲ್ವಿಡಿವಿಡಿದು ನೆಗೞ್ದೆಂ: ಪಂಪಭಾ, ೧೨. ೧೮೧)

ಬಲ್ಸರಿ

[ನಾ] ಜೋರಾದ ಮಳೆ (ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ತೆರಳ್ದು ದುರ್ಧರ ಹಯಂ ಅೞ್ಗಿ ಸಂದಣಿಸಿ ಸಂದಣಿ ಕೋಳ್ಗುದಿಗೊಂಡು: ಪಂಪಭಾ ಪರಿಷತ್ತು, ೩. ೭೦)

Search Dictionaries

Loading Results

Follow Us :   
  Download Bharatavani App
  Bharatavani Windows App