Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಭ್ರಮರವಿಹ್ವಲ
[ನಾ] ಸುತ್ತಾಟದಿಂದಾಗಿ ಅಸ್ಥಿರಗೊಂಡವನು (ವಿಯತ್ತಳಭ್ರಮಣವಿಹ್ವಲನಾಗಿ ಬೞಲ್ದು ಕಾಱುವಂತೆವೊಲಿರೆ: ಪಂಪಭಾ, ೪. ೪೬)
ಭ್ರಮರಿ
[ನಾ] ಹೆಣ್ಣು ದುಂಬಿ (ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಲೋತ್ಪನವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ: ಆದಿಪು, ೧೪. ೧೩೦)
ಭ್ರಾಜಿತ
[ನಾ] ಪ್ರಕಾಶಮಾನವಾದ (ಮುಂದೊಂದು ಎಡೆಯೊಳ್ ಅದಭ್ರ ಅಭ್ರವಿಭ್ರಮ ಭ್ರಾಜಿತ ಉತ್ತುಂಗಶೈಲಮಂ ಕಂಡು: ಪಂಪಭಾ, ೪. ೨೫ ವ)
ಭ್ರಾಂತ
[ನಾ] ಯುದ್ಧರಥವನ್ನು ನಡೆಸುವ ಒಂದು ಬಗೆ, ತಿರುಗುವ (ಆಗಳ್ ಸವ್ಯಾಪಸವ್ಯ ಭ್ರಾಂತೋದ್ಬ್ರಾಂತಂಗಳೆಂಬ ರಥಕಲ್ಪ ವಿಶೇಷವಿನ್ಯಾಸಂಗಳನಱಿದು: ಪಂಪಭಾ, ೧೨. ೭೫ ವ); [ನಾ] ಗದೆಯನ್ನು ಮೇಲೆತ್ತಿ ತಿರುಗಿಸುವುದು (ಸವ್ಯಾಪಸವ್ಯ ಭ್ರಾಂತೋದ್ಭ್ರಾಂತ ಕರ್ಷಣ ಮಂಡಳಾವರ್ತನಾದಿಗಳಪ್ಪ ಮೂವತ್ತೆರಡು ಗದಾವಿಕ್ಷೇಪದೊಳಂ: ಪಂಪಭಾ, ೧೩. ೯೨ ವ)
ಭ್ರಾಂತಿಸು
[ಕ್ರಿ] ಭ್ರಮೆಗೊಳ್ಳು (ಕಂತುಶರಭವನನಾ ಪ್ರಿಯಕಾಂತಾ ಭ್ರೂವಿಭ್ರಮ ಗ್ರಹಾಗ್ರಹ ವಶದಿಂ ಭ್ರಾಂತಿಸದೆ ಉಪಶಾಂತಮನಂ ಶಂತನುಗಿತ್ತಂ ಸಮಸ್ತರಾಜ್ಯಶ್ರೀಯಂ: ಪಂಪಭಾ, ೧. ೬೬)
ಭ್ರುಕುಟಿ
[ನಾ] ಗಂಟಿಕ್ಕಿದ ಹುಬ್ಬು (ಪೊದಳ್ದ ಲಯಾಂತಕ ತ್ರಿಶೂಲೋಪಮ ಭೀಷಣಭ್ರುಕುಟಿ ಮುನ್ನಮೆ ರೌದ್ರ ಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ: ಪಂಪಭಾ, ೭. ೬)
ಭ್ರೂಕುಟಿ
ಭ್ರುಕುಟಿ, ಹುಬ್ಬಿನ ತುದಿ (ನೋಡೀಕೆಗಳ ಭ್ರೂಕುಟಿಯೇ ಪರಮಸುಖದ ಕೋಟಿಯನೀಗುಂ: ಪಂಪಭಾ, ೭. ೯೪)
ಭ್ರೂಚಾಪ
[ನಾ] ಹುಬ್ಬೆಂಬ ಬಿಲ್ಲು (ರಸ ಭಾವಾಭಿನಯಂಗಳಂ ಭುಜಲತಾ ಭ್ರೂಚಾಪ ನೇತ್ರೋತ್ಪಲ ಪ್ರಸರಂಗಳ್ ಪಸರಂಗೆಯ್ಯುತ್ತಿರೆ: ಆದಿಪು, ೭. ೧೨೩)
ಭ್ರೂಭಂಗರ್
[ನಾ] ಹುಬ್ಬುಗಂಟುಳ್ಳವರು (ಪ್ರಕುಪಿತ ಮೃಗಪತಿಶಿಶುಸನ್ನಿಕಾಶರ್ ಅತಿ ವಿಕಟಭ್ರೂಭಂಗರ್ ನಕುಲಸಹದೇವರ್ ಇರ್ವರುಂ ಅಕಾಲಕಾಲಾಗ್ನಿರೂಪಮಂ ಕೆಯ್ಕೊಂಡರ್: ಪಂಪಭಾ, ೭. ೮)
ಭ್ರೂಲತೆ
[ನಾ] ಹುಬ್ಬೆಂಬ ಬಳ್ಳಿ (ಏನೆಂದಾಂ ಬಣ್ಣಿಸುವೆನೊ ಸೌಂದರಿಯ ವಿಳಾಸವಿಭ್ರಮಭ್ರೂಲತೆಯಂ: ಆದಿಪು, ೯. ೩೩)
ಭ್ರೂಲಾಸ್ಯ
[ನಾ] ಹುಬ್ಬಿನ ಕುಣಿತ, ಹುಬ್ಬು ಹಾರಿಸುವುದು (ಏನೆಸೆದುದೊ ಕಟಾಕ್ಷಮಾಲಾಪ್ರಸರಂ ಭ್ರೂಲಾಸ್ಯಸೌಂದರಂ ನರ್ತಕಿಯಾ: ಆದಿಪು, ೯. ೩೪)
ಭ್ರೂವಿಭ್ರಮ