भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಭಾನು

[ನಾ] ಸೂರ್ಯ (ಭವಂ ಭವನ ಗೋತ್ರದಿಂದ ಅಜಂ ಅಜಾಂಡದಿಂ ಭಾನು ಭಾನುವೀಧಿಯಿಂ ಇಳಾತಳಂ ತಳದಿನೆಯ್ದೆ ಕಿೞ್ತೆೞ್ದು: ಪಂಪಭಾ, ೧೧. ೧೩೩)

ಭಾನುಮತಿ

[ನಾ] ದುರ್ಯೋಧನನ ಹೆಂಡತಿ (ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾಡುತ್ತಿರೆ: ಪಂಪಭಾ, ೯. ೬೯)

ಭಾನುವಳಯ

[ನಾ] ಸೂರ್ಯಮಂಡಲ (ಕರಂಗಳಡಂಗಿ ಕಿಲುಂಬುಗೊಂಡ ಕನ್ನಡಿಗೆಣೆಯಾಯ್ತು ಭಾನುವಳಯಂ: ಪಂಪಭಾ, ೬. ೩೬)

ಭಾನುವೀಧಿ

[ನಾ] ಸೂರ್ಯನ ಮಾರ್ಗ, ಆಕಾಶ (ಭವಂ ಭವನ ಗೋತ್ರದಿಂದ ಅಜಂ ಅಜಾಂಡದಿಂ ಭಾನು ಭಾನುವೀಧಿಯಿಂ ಇಳಾತಳಂ ತಳದಿನೆಯ್ದೆ ಕಿೞ್ತೆೞ್ದು: ಪಂಪಭಾ, ೧೧. ೧೩೩)

ಭಾಮಂಡಲ[ಳ]

[ನಾ] [ಜೈನ] ಪ್ರಭಾವಲಯ, ಅರ್ಹಂತನಿಗಿರುವ ಎಂಟು ಪ್ರಾತಿಹಾರ್ಯಗಳಲ್ಲಿ ಒಂದು (ಇರೆ ಭಾಮಂಡಲದೀಪ್ತಿಯ ಪರೆಪುಂ ಛತ್ರತ್ರಯ ಪ್ರಭಾಪರಿಕರಮುಂ: ಆದಿಪು, ೧೦. ೪೦); [ನಾ] ಕಾಂತಿಯ ಬಳಸು, ಪರಿವೇಷ (ಪ್ರಚಂಡ ಮಾರ್ತಂಡ ಮರೀಚಿ ತೀವ್ರ ಜ್ವಳನ ಆಸ್ಫಾರ ಕರಾಳ ಕರವಾಳ ಭಾಮಂಡಳ ಪರೀತ ಉದ್ಯತ ದೋರ್ದಂಡ ಚಂಡಪ್ರಚಂಡ ಸುಭಟ: ಪಂಪಭಾ, ೧೩. ೫೧)

ಭಾರತ

[ಗು] ಭರತವಂಶಕ್ಕೆ ಸಂಬಂಧಪಟ್ಟ (ಭರತನಪಾರಗುಣಂ ತನ್ನ ಪೆಸರೊಳಮರ್ದೆಸೆಯೆ ಯಶೋಭಾರಂ ಕುಲಮುಂ ಕಥೆಯುಂ ಭಾರತಮೆನೆ ನೆಗೞ್ದಂ: ಪಂಪಭಾ, ೧. ೬೩); [ನಾ] ಭಾರತ ಯುದ್ಧ (ಒಟ್ಟಜೆಯಿಂ ಭಾರತದೊಳ್ ಕಟ್ಟಾಳ್ಗಳನಿಱಿದು ತವಿಸಲ್ ಆ ಜೆಟ್ಟಿಗರಂ ಪುಟ್ಟಿದಂ ಎಂಬವೊಳ್ ಅದಟಂ ಪುಟ್ಟಿದಂ ಅಭಿಮನ್ಯು ಕಲಿತನಂ ಪುಟ್ಟುವವೋಲ್: ಪಂಪಭಾ, ೫. ೨೯)

ಭಾರತಿ

[ನಾ] ನಾಟ್ಯದ ವೃತ್ತಿಗಳಲ್ಲಿನ ಒಂದು ಬಗೆ, ಶೃಂಗಾರಾದಿ ಎಲ್ಲ ರಸಪ್ರತಿಪಾದಕವಾದುದು (ಭಾರತಿ ಸಾತ್ವತಿ ಕೈಶಿಕಿ ಆರಭಟಿಯುಮೆಂಬ ವೃತ್ತಿಯೊಳ್ ಸಂಚಾರಿಸುವ ಭಾವಮಂ ವಿಸ್ತಾರಿಸುವ ಬೆಡಂಗು: ಆದಿಪು, ೯. ೨೬)

ಭಾರತಿಕ

[ನಾ] ನಾಟ್ಯಪ್ರದರ್ಶನದ ಸೂತ್ರಧಾರ (ಇಂ ಬೆಸಸಿಂ ಭಾರತಿಕಂಗೆ ನಾಟ್ಯಘಟನ ಪ್ರಸ್ತಾವನಾಟೋಪಮಂ: ಆದಿಪು, ೯. ೧೨)

ಭಾರದ್ವಾಜ

[ನಾ] ದ್ರೋಣ (ಅನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗಱಿಪಿದೊಡೆ ನದೀತನೂಜಂ ಭಾರದ್ವಾಜಂಗೆ ಬೞಿಯನಟ್ಟಿ ಬರಿಸಿ: ಪಂಪಭಾ, ೨. ೫೨ ವ)

ಭಾರವತಾರ

[ನಾ] [ಭಾರ+ಅವತಾರ] ಭಾರ ಇಳಿಸುವುದು (ಧರಾವನಿತೆಯ ಭಾರಾವತಾರದೊಳ್ ಎನಿತಾನುಂ ಘಸಣಿ ಪೋದುದು ಅದು ಕಾರಣದಿಂ ರಾಜಸೂಯದ ಮಾತಂ ಕೇಳ್ದಲ್ಲಿಯೆ ಮಱೆವುದು: ಪಂಪಭಾ, ೬. ೨೪ ವ)

ಭಾರ್ಗವ

[ನಾ] ಮೊದಲನೆಯದಕ್ಕೆ ಭೃಗುವಂಶಜ, ಪರಶುರಾಮ ಮತ್ತು ಎರಡನೆಯದಕ್ಕೆ ಬಿಲ್ಲುಗಾರ (ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜಕಂಠಿಕಾಪರಿಕಲಿತ ಕಂಠಲುಂಠನುಂ ಆಗಿ: ಪಂಪಭಾ, ೧. ೬೮ ವ); [ನಾ] ಕುಂಬಾರ (ಎಲ್ಲಿಯುಂ ಬೀಡುವಿಡಲೆಡೆವಡೆಯದೆ ಒಂದು ಭಾರ್ಗವ ಪರ್ಣಶಾಲೆಯೊಳ್ ಎಡೆಮಾಡಿಕೊಂಡು: ಪಂಪಭಾ, ೩. ೩೯ ವ)

ಭಾವ

[ನಾ] ಇರುವಿಕೆ (ಜೀವಾದಿ ನವಪದಾರ್ಥದೊಳ್ ಆವಗಂ ಅೞ್ತಿಯನೆ ಮಾಡು ಮೂಢತ್ರಯದೊಳ್ ಭಾವಮನೆ ಬಿಸುಡು: ಆದಿಪು, ೫. ೫೬); [ನಾ] ರಸೋತ್ಪಾದನಕರ ಚಿತ್ತವೃತ್ತಿ (ವೃತ್ತಿಯೊಳ್ ರಸಮಂ ಸಂಚಾರಿಸುವ ಭಾವಮಂ ವಿಸ್ತಾರಿಸುವ ಬೆಡಂಗು ಬೇಱೆ ನೀಲಾಂಜನೆಯಾ: ಆದಿಪು, ೯. ೨೬)

ಭಾವಕ

[ನಾ] ರಸಿಕ (ಭಾವಕನೆಂದೊಡಂ ಚದುರನೆಂದೊಡಂ ಅರ್ ಪೆಱರಾರೊ ನೀನೆ: ಪಂಪಭಾ, ೪. ೯೬)

ಭಾವನ

[ನಾ] [ಜೈನ] ನಾಲ್ಕು ಬಗೆಯ ದೇವತೆಗಳಲ್ಲಿ ಒಂದು ಬಗೆ, ಭವನವಾಸಿ (ವನವಧೂಬ್ರಾತಂ ಔತ್ಸುಕ್ಯವತ್ ಭಾವನಭಾಮಾರಾಜಿ ತದ್ಭಾವನಸುರರ್: ಆದಿಪು, ೧೦. ೩೬)

ಭಾವನಭಾಮಾರಾಜಿ

[ನಾ] ಭವನವಾಸಿ ದೇವಿಯರ ಸಮೂಹ (ವನವಧೂವ್ರಾತಂ ಔತ್ಸುಕ್ಯವತ್ ಭಾವನಭಾಮಾರಾಜಿ ತದ್ಭಾವನಸುರರ್ ಅಖಿಳವ್ಯಂತರರ್ ಜ್ಯೋತಿರಿಂದ್ರರ್: ಆದಿಪು, ೧೦. ೩೬)

ಭಾವನಸುರ

[ನಾ] ಭವನಿವಾಸಿ ದೇವತೆ (ವನವಧೂಬ್ರಾತಂ ಔತ್ಸುಕ್ಯವತ್ ಭಾವನಭಾಮಾರಾಜಿ ತದ್ಭಾವನಸುರರ್: ಆದಿಪು, ೧೦. ೩೬)

ಭಾವನೆ

[ನಾ] ಗೌರವ (ಜಿನನ ನಮಸ್ಕಾರಮಂತ್ರಂಗಳೊಳ್ ಭಾವನೆಯಂ ತಾಳ್ದೞ್ತಿಯಿಂದಂ ಜಿನಮಹಿಮೆಗಳಂ ಮಾಡು ನೀಂ ಭವ್ಯನೈ: ಆದಿಪು, ೩. ೭)

ಭಾವಾಭಿನಯ

[ನಾ] ಭಾವವನ್ನು ವ್ಯಕ್ತಪಡಿಸುವ ನಟನೆ (ರಸ ಭಾವಾಭಿನಯಂಗಳಂ ಭುಜಲತಾ ಭ್ರೂಚಾಪ ನೇತ್ರೋತ್ಪಲ ಪ್ರಸರಂಗಳ್ ಪಸರಂಗೆಯ್ಯುತ್ತಿರೆ: ಆದಿಪು, ೭. ೧೨೩)

ಭಾವಿತ

[ನಾ] ಧ್ಯಾನಿಸಲ್ಪಟ್ಟ (ಅಂತು ಭಾವಿತಾತ್ಮಂ ಅಧ್ಯಾತ್ಮವಿಶಾರದನಾಗಿ ಪರಮಾತ್ಮನೊಳ್ ಕೂಡಿದಂ: ಪಂಪಭಾ, ೧೨. ೨೯ ವ)

ಭಾವಿಸು

[ಕ್ರಿ] ಅನುಭವಕ್ಕೆ ತಂದುಕೊ (ಅದುವೆ ಭಾವಿಸಿ ಓದುವ ಕೇಳ್ವ ಪೂಜಿಪ ಆದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದು: ಆದಿಪು, ೧. ೯); [ಕ್ರಿವಿ] ಏಕಾಗ್ರತೆಯಿಂದ (ವಿಚಿತ್ರಚಿತ್ರವಿದ್ಯಾಕೌಶಲಮಂ ಅತಿಕುತೂಹಳ ಉತ್ತಾರಿತಲೋಚನನಾಗಿ ನೀಡುಂ ಭಾವಿಸಿ ನೋಡಿ: ಆದಿಪು, ೪. ೪ ವ); [ಕ್ರಿ] ಕಲ್ಪಿಸಿಕೊಳ್ಳು (ರಸದಭಿನಯಮಂ ಭಾವಿಸುವೊಡೆ ಆದಿದೇವನ ದೇವೇಂದ್ರನ ಬಗೆಗಂ ಅಸದಳಂ ನರ್ತಕಿಯಾ: ಆದಿಪು, ೯. ೨೭); [ಕ್ರಿ] ಲಾಲಿಸು (ಭೂವಲ್ಲಭ ಸೋತ್ಕ್ಷೇಪ ಭ್ರೂವಿಲಸಿತದತ್ತವಾಚನಾದೇಶಂ ಇದಂ ಭಾವಿಸಿಂ ಎಂದು ಅತಿಮಧುರೋದ್ಭಾವಿತ ಗಂಭೀರನಾದದಿಂ ಬಾಜಿಸಿದಂ: ಆದಿಪು, ೧೪. ೪೬); [ಕ್ರಿ] ನೆನಸು, ತೋಯುವಂತೆ ಮಾಡು (ಅಂತಲ್ತು ಅಪ್ಪಂದು ಆ ಕಾಂತೆಯಂ ವಿಧಾತ್ರಂ ಮಾಡುವಂದು ಕೊಸಗಿನ ಕೇಸರಂಗಳಂ ಅಮೃತರಸದೊಳಂ ಶೃಂಗಾರರಸದೊಳಂ ಭಾವಿಸಿ: ಪಂಪಭಾ, ೪. ೭೫ ವ)

Search Dictionaries

Loading Results

Follow Us :   
  Download Bharatavani App
  Bharatavani Windows App