भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಭಾಷಾ

[ನಾ] ಮಾತು (ಬೞಿಯಂ ಅಂತರ್ಮುಹೂರ್ತದೊಳ್ ಆಹಾರ ಶರೀರ ಇಂದ್ರಿಯೋಚ್ಛ್ವಾಸ ಭಾಷಾ ಮನಃಪರ್ಯಾಪ್ತಿಗಳೊಳ್ ನೆರೆದು: ಆದಿಪು, ೫. ೮೩ ವ)

ಭಾಷಾವಿದರ್

[ನಾ] ಭಾಷೆಯ ಸೂಕ್ಷ್ಮಗಳನ್ನು ಬಲ್ಲವನು (ಭಾಷಾವಿದರ್ ಕವಿತ್ವವಿಶೇಷಜ್ಞನಿಕಷರಪ್ಪೊಡಪ್ಪುದು ಸಭೆಯೊಳ್ ಮಾಷಮುಖದಂತೆ ದೋಷಗವೇಷಣಪರರಪ್ಪರ್ ಎಂದೊಡದು ತೆಗೞಲ್ತೇ: ಆದಿಪು, ೧. ೨೧)

ಭಾಷಿತ

ಮಾತು (ಭರತಸುತಂ ಮರೀಚಿ ಪರಿಗೃಹೀತ ಪರಿವ್ರಾಜಕಂ ಅಪಸಿದ್ಧಾಂತ ಭಾಷಿತಂಗಳಿಂ ಮಿಥ್ಯಾತ್ವವೃದ್ಧಿಯಂ ಮಾಡಿ: ಆದಿಪು, ೯. ೯೩ ವ)

ಭಾಸ

[ನಾ] ಪ್ರಕಾಶ (ಎತ್ತಿದ ಪರಾಗರಾಗ ಮುದಿತ ಆಶಾಭಾಸಂ ಉದ್ಯತ್ ಮಧು ಉನ್ಮದಭೃಂಗಧ್ವನಿ ಮಂಗಳಧ್ವನಿಯೆನಲ್: ಪಂಪಭಾ, ೫. ೬)

ಭಾಸಿ

[ನಾ] ಗೋಚರ[ವಾದುದು] (ಕಾಯಾಕಾರ ಪರಿಣತಭೂತ ಚೈತನ್ಯಂಗಳ್ ಬಹಿರಂತರ್ಮುಖಭಾಸಿಗಳ್: ಆದಿಪು, ೨. ೧೦ ವ)

ಭಾಸುರ

[ನಾ] ಪ್ರಕಾಶಮಾನವಾದ (ಆಸುಕರಂ ಗಡ ತಮಗತಿ ಭಾಸುರಮೃಗರಾಜನಾಮುಮಂ ಗಡಂ ಎಂದು ಆ ದೋಸಕ್ಕೆ ಮುಳಿದು: ಪಂಪಭಾ, ೫. ೪೯)

ಭಾಸ್ಕರಚಕ್ರ

[ನಾ] ಸೂರ್ಯಮಂಡಲ (ಪುರುದೇವಂಗಾದ ಕೈವಲ್ಯದ ಮಹಿಮೆಯಂ ಉಗ್ರಾಯುಧಾಗಾರದೊಳ್ ಭಾಸ್ಕರಚಕ್ರೋದ್ಭಾಸಿ ಚಕ್ರೋದ್ಭವದ ಪಿರಿದುಮಾಶ್ಚರ್ಯಮಂ: ಆದಿಪು, ೧೦. ೪೯)

ಭಾಸ್ಕರತನೂಜೆ

[ನಾ] ಸೂರ್ಯನ ಮಗಳು, ಯಮುನಾ ನದಿ (ಎಂದು ಭಾಸ್ಕರತನೂಜೆಯಂ ಉಭಯತಟನಿಕಟ ಕುಸುಮನಿವಹ ಪತತ್ಪರಾಗಪಟಳ ಪಿಶಂಗತರತ್ತರಂಗ ಸರೋಜೆಯಂ: ಪಂಪಭಾ, ೫. ೫೮ ವ)

ಭಾಸ್ಕರಸುತ

[ನಾ] ಸೂರ್ಯನ ಮಗ, ಕರ್ಣ (ಪಾರ್ವನೊಳ್ ಕಲಹಮಾಗದು ಚಿಃ ದೊರೆಯಲ್ತಿದು ಎಂದು ಭಾಸ್ಕರಸುತಂ ಒಯ್ಯನೋಸರಿಸೆ: ಪಂಪಭಾ, ೩. ೭೧)

ಭಾಸ್ವತ್

[ಗು] ಹೊಳೆಯುವ (ವೀರವೈರಿಕ್ಷಿತಿಪ ಗಜಘಟಾಟೋಪ ಕುಂಭಸ್ಥಳೀಭೇದನಂ ಉಗ್ರೋದ್ಘಾಸಿ ಭಾಸ್ವತ್ ಭುಜ ಪರಿಘನಂ ಆರೂಢಸರ್ವಜ್ಞನಂ: ಪಂಪಭಾ, ೧. ೫೧)

ಭಿಂಡಿವಾಳ

[ನಾ] ಒಂದು ಆಯುಧ, ಭಲ್ಲೆ (ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಂ ಅತಿ ಪ್ರವೀಣನುಂ: ಪಂಪಭಾ, ೨. ೩೪ ವ)

ಭಿತ್ತಿ

[ನಾ] ಹಿನ್ನೆಲೆ, ಮಾನದಂಡ (ಮರಕತಮಣಿವಿರಚಿತ ವಿಮಳಭಿತ್ತಿ ಪೊಗೞಲ್ಕಮರಿದದು ಬೇಱೆ ಭಿತ್ತಿ: ಆದಿಪು, ೪. ೩೦ ರಗಳೆ); [ನಾ] ಗೋಡೆ (ಒಂದು ಕಾಳಾಗರುಧೂಪ ಧೂಮಮಲಿನ ಶ್ಯಾಮಲಾಲಂಕೃತ ವಿಚಿತ್ರಭಿತ್ತಿವಿರಾಜಿತ ಹರ್ಮ್ಯತಳದೊಳ್: ಪಂಪಭಾ, ೪. ೧೦೮ ವ)

ಭಿನ್ನಭಾಜನ

[ನಾ] ಒಡೆದ ಮಡಕೆ, ಬೋಕಿ ಬಿಂಚು (ವಿಜ್ಞಾನಮಾತ್ರಮೇ ತತ್ವಂ ಆತ್ಮಾದಿತತ್ವಮಿಲ್ಲೆಂಬ ನಿನ್ನ ಮಾತು ಭಿನ್ನಭಾಜನಸಮಾನಂ: ಆದಿಪು, ೨. ೧೦ ವ)

ಭಿಷಕ್ ಪರಿಷತ್

[ನಾ] ವೈದ್ಯವೃಂದ (ಕುಶಲ ಭಿಷಕ್ ಪರಿಷತ್ ಸಂಪಾದಿತ ಕಲ್ಯಾಣಾಮೃತಾಹಾರಂಗಳಿರ್ದಂತೆ: ಆದಿಪು, ೮. ೩೨ ವ)

ಭೀಮ

[ನಾ] ಭೀಮ ಎಂಬ ರಾಜ (ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀಮನನತಿ ಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ: ಪಂಪಭಾ, ೧. ೨೬); [ನಾ] ಭಯಂಕರ (ಭೀಮಂ ಭಯಂಕರಂ ಪೆಱತೇ ಮಾತು ಈ ಕೂಸಿನಂದಂ ಈತನ ಪೆಸರುಂ ಭೀಮನೆ ಪೋಗೆನೆ ಮುನಿಜನಮೀ ಮಾೞ್ಕೆಯಿಂ ಆಯ್ತು ಶಿಶುಗೆ ಪೆಸರನ್ವರ್ಥಂ: ಪಂಪಭಾ, ೧. ೧೨೮); [ನಾ] ಪಾಂಡುವಿನ ಮಗ (ಭೀಮ ಅಶ್ವತ್ಥಾಮರಿರ್ವರುಂ ಚೇತರಿಸಿ ಸೂತಪತಾಕಾ ತುರಂಗಮೋಪೇತ ರಥಂಗಳನೇಱಿಕೊಂಡು: ಪಂಪಭಾ, ೧೨. ೭೭ ವ)

ಭೀಮಸೇನ

[ನಾ] ಪಾಂಡುವಿನ ಮಗ ಭೀಮ (ಭೀಮಸೇನ ಚರಣಪ್ರಹರಣಗಳಿತ ಶೋಣಿತಾರ್ದ್ರಮೌಳಿಯುಮಾಗಿ: ಪಂಪಭಾ, ೧೩. ೧೦೨ ವ)

ಭೀಷಣ

[ನಾ] ಭಯಂಕರವಾದ (ಪೊದಳ್ದ ಲಯಾಂತಕ ತ್ರಿಶೂಲೋಪಮ ಭೀಷಣಭ್ರುಕುಟಿ ಮುನ್ನಮೆ ರೌದ್ರ ಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ: ಪಂಪಭಾ, ೭. ೬)

ಭೀಷ್ಮ

[ನಾ] ಶಂತನು ಗಂಗೆಯರ ಮಗ (ಅಂತು ಭಿಷ್ಮಂ ಗ್ರೀಷ್ಮಕಾಲದ ಆದಿತ್ಯನಂತೆ ಕಾಯ್ದ ಅಂತಕಾಲದ ಅಂತಕನಂತೆ ಕೆಳರ್ದು: ಪಂಪಭಾ, ೧೧. ೪೦ ವ)

ಭುಗಭುಗನೆ

[ಅ] ಭುಗ ಭುಗ ಎಂದು (ಭುಗಭುಗನೆಚ್ಚು ಪಾಯ್ವ ಬಿಸುನೆತ್ತರ ಸುಟ್ಟುರೆಯಂ ನೆಲಕ್ಕೆ ಪರ್ದುಗಳ್ ಉಗಲೀದೆ ಅವ್ವಳಿಸಿ ಪೀರ್ವಿನಂ: ಪಂಪಭಾ, ೧೦. ೮೦)

ಭುಜ

[ನಾ] ತೋಳು (ವೀರವೈರಿಕ್ಷಿತಿಪ ಗಜಘಟಾಟೋಪ ಕುಂಭಸ್ಥಳೀಭೇದನಂ ಉದಗ್ರ ಉದ್ಘ ಅಸಿ ಭಾಸ್ವತ್ ಭುಜಪರಿಘನಂ ಆರೂಢಸರ್ವಜ್ಞನಂ: ಪಂಪಭಾ, ೧. ೫೧)

Search Dictionaries

Loading Results

Follow Us :   
  Download Bharatavani App
  Bharatavani Windows App