भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಭೂತನಾಥ

[ನಾ] ಶಿವ (ಕರ್ಣಾರ್ಜುನರೇಱಂ ನೋಡಲ್ಕೆ ಭೂತನಾಥಂ ಬಂದಂ: ಪಂಪಭಾ, ೧೨. ೧೩೯)

ಭೂತವಾದಿ

[ನಾ] ನಿರೀಶ್ವರವಾದಿ (ಅನೇಕ ಯುಕ್ತೋಕ್ತಿಗಳಿಂ ಭೂತವಾದಿಯಪ್ಪ ಮಹಾಮತಮಂ ನಿರಾಕರಿಸಿ: ಆದಿಪು, ೨. ೧೦ ವ)

ಭೂತಸ್ವಭಾವ

[ನಾ] [ಪಂಚ]ಭೂತಗಳ ಸಮುದಾಯ (ನಿಮ್ಮ ಮುನ್ನೆ ನುಡಿದ ಕಾಯಾಕಾರಪರಿಣತಭೂತಸ್ವಭಾವಮೆ ಚೈತನ್ಯಂ: ಆದಿಪು, ೨. ೧೦ ವ)

ಭೂತಳ

[ನಾ] ನೆಲ (ಪಾಸಱೆ ಸಿಂಹಪೀಠಂ ಅಳಿನಿರುತಿ ಮಂಗಳಗೀತಿ ಭೂತಳಂ ಪಾಸು ಮೃಗವ್ರಜಂ ಪರಿಜನಂ ಪೊದಱ್ ಓಲಗಸಾಲೆ: ಪಂಪಭಾ, ೭. ೨೯)

ಭೂತಾಂಗನಾ

[ನಾ] ಪಿಶಾಚಸ್ತ್ರೀಯರು (ಭೂತಾಂಗನಾನಿಕರಂ ಶೋಣಿತವಾರಿಯಂ ಕುಡಿದು ಅಗುರ್ವಪ್ಪನ್ನೆಗಂ ಸೂಸೆ ನೋಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ; ಪಂಪಭಾ, ೧೨. ೨೫)

ಭೂತಿ

[ನಾ] ಬೂದಿ (ಮನೋಜಾತಮಹೋತ್ಸಾಹರ್ ತದ್ಭೂತಿಯನಿಟ್ಟರ್ ತ್ರಿಪುಂಡ್ರಮಂ ದಿವಿಜೇಂದ್ರರ್: ಆದಿಪು, ೧೬. ೫೩)

ಭೂಧರ

[ನಾ] ಬೆಟ್ಟ, ಪರ್ವತ (ಶರಭಂಗಳ್ಗೆಡೆ ಸಿಂಹದುರ್ವು ವನಗಂದೇಭೋತ್ಕರಕ್ಕೆಂದುಂ ಆಗರಮ್ ಈ ಭೂಧರಂ: ಆದಿಪು, ೧೩. ೮೨); [ನಾ] [ಕೂರ್ಮಾವತಾರದಲ್ಲಿ] ಭೂಮಿಯನ್ನು ಹೊತ್ತವನು, ವಿಷ್ಣು, ಶ್ರೀಕೃಷ್ಣ (ಏನೆಂಬೆನಾಂ ಮಱೆದೆಂ ಮುನ್ನಿನದೊಂದು ವೈರಮನಿದಿಂತೇಕಾರಣಂ ಭೂಧರಾ: ಪಂಪಭಾ, ೧೨. ೨೦೭)

ಭೂಪ

[ನಾ] ರಾಜ (ಪೇೞಿಂ ಎನ್ನನಾವನೆಚ್ಚಂ ಎಂಬ ಮುನಿಯ ಮುನಿದ ಸರಮಂ ಕೇಳ್ದು ಬಿಲ್ಲನಂಬುಮಂ ಈಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ: ಪಂಪಭಾ, ೧. ೧೧೧ ವ)

ಭೂಪಟಲ

[ನಾ] ಭೂಮಂಡಲ (ಸಮಸ್ತ ಭೂಪಟಲಮನಾಂ ತೊೞಲ್ದು ಅಱಸಿ ನಿನ್ನನೊಡಗೂಡಿ ನಿಜೇಶನಂ ಯಶಃಪಟಹನಿನಾದಮಂ ಪರಪುವೆಂ: ಆದಿಪು, ೩. ೪೫)

ಭೂಪತಿ

[ನಾ] ಮಹಾರಾಜ (ನಷ್ಟಂ ನಷ್ಟಂ ಮೃತಂ ಮೃತಂ ಎಂಬುದು ಇನ್ನೞಲದಿರ್ ಮೇಲಪ್ಪುದಂ ಬಗೆ ಭೂಪತೀ: ಪಂಪಭಾ, ೧೩. ೨೨)

ಭೂಭಾಗ

[ನಾ] ನೆಲದ ಮೇಲೆ (ಭೂಭಾಗದೊಳ್ ತಂದು ತಾಟಿಸುತುಂ ಕೋಟಲೆಗೊಳ್ವ ರತ್ನಮಕುಟದ್ಯೋತ ಉತ್ತಮಾಂಗಂ ವಿರಾಜಿಸುವನ್ನಂ ಪೊರಳ್ವ ಪಗೆಯಂ ಕಣ್ಣಾರ್ವಿನಂ ನೋಡಿದಳ್: ಪಂಪಭಾ, ೧೨. ೧೫೧)

ಭೂಭುಜ

[ನಾ] ರಾಜ (ಗುಣಾರ್ಣವಭೂಭುಜಂಗೆ ಬಟ್ಟೆದೋಱುವವೊಲಂದು ಒಗೆದಂ ಕಮಲೈಕಬಾಂಧವಂ: ಪಂಪಭಾ, ೪. ೧೧೧)

ಭೂಭೃತ್

[ನಾ] ಪರ್ವತ (ಪತ್ತುವಿಡಲ್ ಭೂಭರತ್ಕುಳಂಗಳ್ ಬಗೆದುವು: ಆದಿಪು, ೧೨. ೮೮); [ನಾ] ರಾಜ (ಅಂತು ಪಾಂಡುರಾಜಂ ಅಧಿಕತೇಜನುಂ ಅವನತವೈರಿಭೂಭೃತ್ ಸಮಾಜನುಂ ಆಗಿ ನೆಗೞುತ್ತಿರ್ದೊಂದು ದಿವಸಂ: ಪಂಪಭಾ, ೧. ೧೧೦ ವ)

ಭೂಭೃತ್ಪತಿ

[ನಾ] ರಾಜಾಧಿರಾಜ (ಶಾಂತರೂಪದಿನಿರ್ದತ್ತು ಅಳುರುತ್ತಮಿರ್ದ ಕೋಪಾನಳನಿಂದುಪಶಾಂತನಾದ ಭೂಭೃತ್ಪತಿವೋಲ್: ಆದಿಪು, ೧೩. ೪೦)

ಭೂಭೃನ್ಮುಖ್ಯ

[ನಾ] [ಭೂಭೃತ್+ಮುಖ್ಯ] ರಾಜರುಗಳಲ್ಲಿ ಮುಖ್ಯ, ಸಾರ್ವಭೌಮ (ಪರಿಪೂರ್ಣೇಂದುವಿಂ ಅನ್ವಯಾಭ್ರತಿಳಕಂ ತಿಗ್ಮಾಂಶುವಿಂ ತೀವ್ರಭಾಸುರತೇಜಂ ಸುರಶೈಲದಿಂ ಸಕಳಭೂಭೃನ್ಮುಖ್ಯಂ: ಆದಿಪು, ೮. ೨೭)

ಭೂಮಿ

[ನಾ] ನೆಲೆ (ಆಂ ತನಗೆ ಪರಮವಿಶ್ವಾಸಭೂಮಿಯೆನಾಗಿ ಕಿಱಿಯಂದಿಂದಿತ್ತ ನಡೆಪಿದ ಓದಿಸಿದ ದಾದಿಯೆನಪ್ಪುದಱಿಂ: ಆದಿಪು, ೪. ೨೧ ವ)

ಭೂಮಿಭಾಗ

[ನಾ] ಭೂಪ್ರದೇಶ (ನಭೋಭಾಗದಿಂ ಭೂಮಿಭಾಗಕ್ಕಿೞಿದು ತನ್ನ ಮುಂದೆ ನಿಂದ ಅರವಿಂದ ಬಾಂಧವನಂ ನೋಡಿ ನೋಡಿ: ಪಂಪಭಾ, ೧. ೯೧ ವ)

ಭೂರಿ

[ನಾ] ಮಹತ್ತರವಾದ, ಹಿರಿದಾದ (ಎಱೆದಂ ಭೂತಳರಾಜ್ಯಭೂರಿಭರಮಂ ತಾಳಲ್ಕೆ ಮತ್ಪುತ್ರಂ ಈ ಪೊಱೆಗೆ ಇನ್ನೀತನೆ ಯೋಗ್ಯಂ ಎಂಬ ಬಗೆಯಿಂ: ಆದಿಪು, ೬. ೨೩)

ಭೂರಿಭೂತಲ

[ನಾ] ವಿಶಾಲವಾದ ಭೂಮಂಡಲ (ಬಲಿಯಂ ವಾಮನರೂಪದಿಂದಮೆ ವಲಂ ಮುಂ ಬೇಡಿದೆಂ ಭೂರಿಭೂತಲಮಂ ಕುಂದೆನಗಾಯ್ತೆ ಕೊಂಡೆನಿಳೆಯಂ: ಪಂಪಭಾ, ೯. ೨೦)

ಭೂರುಹ

[ನಾ] ಮರ (ಸರಿತ್ ಗಿರಿ ದರಿ ಭೂರುಹ ಸೇತು ವನ ಸೀಮೋಪಲಕ್ಷಿತಂಗಳಪ್ಪ ಖೇಡಂಗಳುಮಂ: ಆದಿಪು, ೮. ೬೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App