भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಭೂರ್ಜ

[ನಾ] ಒಂದು ಬಗೆಯ ಮರ (ಕಕುಭ ಅಶೋಕ ಕದಂಬ ಲುಂಗ ಲವಲೀಭೂಜ ಆರ್ಜುನ ಅನೋಕಹ ಪ್ರಕರಂ: ಪಂಪಭಾ, ೫. ೮೦)

ಭೂವಧೂವರ

[ನಾ] ಭೂಮಿಯೆಂಬ ಹೆಣ್ಣಿನ ಒಡೆಯ (ಪಯೋರುಹವಿಳಾಸಸ್ಥಾನೆಯಿಂ ಭೂವಧೂವರಂ ಅಬ್ಜೇಕ್ಷಣೆ ಕಲ್ಪವೃಕ್ಷದಿಂ ಇಳಾಲೋಕೈಕಕಲ್ಪದ್ರುಮಂ: ಆದಿಪು, ೮. ೨೭)

ಭೂವಲಯ

[ನಾ] ಭೂಮಂಡಲ, ರಾಜ್ಯ (ಭೂವಲಯಮಂ ಅಯ್ಯನಿತ್ತುದುಮಂ ಆಂ ನಿನಗಿತ್ತೆಂ ಇದೇವುದಣ್ಣ ನೀನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗೞ್ತೆ ಮಾಸದೇ: ಆದಿಪು, ೧೪. ೧೩೦);

ಭೂಷಣ

[ನಾ] ಆಭರಣ (ಸುರತರುಪ್ರಸೂನ ಗ್ರಥಿತ ಸುರಭಿದಾಮ ದುಕೂಲಾಂಬರ ವಿಚಿತ್ರ ಭೂಷಣ ಸುರಭಿವಿಲೇಪನ ಪ್ರಮುಖ ಭೋಗೋಪಭೋಗಂಗಳೊಳಂ: ಆದಿಪು, ೯. ೩ ವ)

ಭೂಷಣಾಂಗ

[ನಾ] [ಜೈನ] ಒಂದು ಕಲ್ಲವೃಕ್ಷ, ಆಭರಣಗಳನ್ನು ನೀಡುವಂಥದು (ಭಾಜನಾಂಗದ ವಸ್ತ್ರಾಂಗದ ಭೂಷಣಾಂಗದ ಅಳವಂ ಚಕ್ರೇಶ್ವರಂ ತಾಳ್ದಿದಂ: ಆದಿಪು, ೪. ೩೫)

ಭೂಷಾ

[ನಾ] ಆಭರಣ, ಕಿವಿಯ ಆಭರಣ (ಮಕುಟಂ ಕೇಯೂರಂ ಕರ್ಣಕುಂಡಲಂ ಕೊಪ್ಪು ಸರಿಗೆ ದುಸರಂ ಮಣಿಮುದ್ರಿಕೆ ತಿಸರಮೆಂಬ ಭೂಷಾನಿಕರಮಂ ಆ ಭೂಷಣಾಂಗತರು ಕುಡುತಿರ್ಕುಂ: ಆದಿಪು, ೫. ೩೪)

ಭೃಂಗ

[ನಾ] ದುಂಬಿ (ಎತ್ತಿದ ಪರಾಗರಾಗ ಮುದಿತ ಆಶಾ ಭಾಸಂ ಉದ್ಯತ್ ಮಧು ಉನ್ಮದಭೃಂಗಧ್ವನಿ ಮಂಗಳಧ್ವನಿಯೆನಲ್: ಪಂಪಭಾ, ೫. ೬)

ಭೃಂಗರುತಿ

[ನಾ] ದುಂಬಿಗಳ ಶಬ್ದ, ಝೇಂಕಾರ (ಭೃಂಗರುತಿಗಳ್ ಮಾಂಗಲ್ಯಗೇಯಂಗಳ ಅಂದಮನೀಯೆ: ಪಂಪಭಾ, ೭. ೭೭)

ಭೃಂಗಾಂಗನಾ

[ನಾ] [ಭೃಂಗ+ಅಂಗನಾ] ಹೆಣ್ಣು ದುಂಬಿ (ಪುಷ್ಪಿತ ಹೇಮಪಂಕಜ ರಜಸ್ಸಂಸಕ್ತಭೃಂಗಾಂಗನಾನಿಕರಂ ಸಾರಸ ಹಂಸ ಕೋಕಿಳಕುಳಧ್ವಾನೋತ್ಕರಂ: ಪಂಪಭಾ, ೫. ೮೦)

ಭೃಂಗಾರ

[ನಾ] ಬಂಗಾರದ ಕಳಶ, ಪಾತ್ರೆ (ಸಾರಮಿದು ರತ್ನಮಯ ಭೃಂಗಾರಂ ಹರಿಪೀಠಮಿದು ಜಗತ್ತ್ರಿತಯಾಳಂಕಾರಂ: ಆದಿಪು, ೧೩. ೧೭)

ಭೃಂಗಾರು

[ನಾ] ಬಂಗಾರದ ಕಳಶ (ಎಣ್ಬರುಂ ದಿಗ್ವನಿತೆಯರುಂ ಪರಮಜಿನೋತ್ಸವದೊಳ್ ಶೃಂಗಾರಂಬೆರಸು ಭೃಂಗಾರುಧಾರಿಗಳಾಗಲುಂ: ಆದಿಪು, ೭.. ೩ ವ)

ಭೃತ

[ನಾ] ಹೀನವಾದುದು (ಅಮಳರುಂ ಈ ಬೇಳ್ವೆಯ ಮಾತಂ ತೆಮಳೆ ನುಡಿದೊಡೆ ಎಮ್ಮ ಗಂಡವಾತುಂ ಅಳುಂಬಂ ಭೃತಮಕ್ಕುಂ: ೬. ೨೬ ವ)

ಭೃತ್ಯ

[ನಾ] ಸೇವಕ (ಸ್ವಾಮ್ಯಾರ್ಥಂ ಸ್ವಾಮ್ಯವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ ಅರ್ಥರಾಜ್ಯಹರಂ ಭೃತ್ಯಂ ಯೋನ ಹನ್ಯಾನ್ಸಹನ್ಯತೇ: ಪಂಪಭಾ, ೨. ೯೦ ಶ್ಲೋಕ)

ಭೃತ್ಯಭಾವ

[ನಾ] ಸೇವಕತನ (ಅವರ ದೇಶನಾಮಕುಲಗೋತ್ರಂಗಳಂ ನೆಱೆಯೆ ತಿಳಯೆ ಬಿನ್ನಪಂಗೆಯ್ದು ಭೃತ್ಯಭಾವಮಂ ಪೂಣಿಸಿ: ಆದಿಪು, ೧೩. ೪೧ ವ)

ಭೇದ

[ನಾ] ವ್ಯತ್ಯಾಸ (ಪಾದರಿ ಪೂತುವು ತೋರಿದುವಾದುವು ಮಲ್ಲಿಗೆಗಳೆಯ್ದೆ ಪಣ್ತುವು ಮಾವು ಇಂಬಾದುದು ನಿದಾಘ ಮಧುವಿನ ಭೇದಂ ಅದು ಈ ಬನದೊಳಾತಪಕ್ಕೆಡೆಯುಂಟೇ: ಆದಿಪು, ೧೧. ೮೭); [ನಾ] ಭೇದೋಪಾಯ (ಭೇದದೊಳಲ್ಲದೆ ಗೆಲಲರಿದು ಆದಂ ಸುರಸಿಂಧುಸುತನಂ ಇಂದಿರುಳೊಳ್ ನೀಂ ಭೇದಿಸು: ಪಂಪಭಾ, ೧೧. ೨೭)

ಭೇದಿಸು

[ಕ್ರಿ] [ಮನಸ್ಸನ್ನು] ಒಡೆ (ಆನುಂ ಎನ್ನ ಬಲ್ಲ ಮಾೞ್ಕೆಯಿಂ ಭೇದಿಸಿದಪ್ಪೆಂ ನೀಮುಂ ನಿಮ್ಮ ಚೊಚ್ಚಿಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು: ಪಂಪಭಾ, ೯. ೬೩ ವ)

ಭೇರಿ

[ನಾ] ಒಂದು ಚರ್ಮವಾದ್ಯ, ನಗಾರಿ (ದ್ವಾದಶಯೋಜನ ಸಂಸರ್ಪತ್ ಗಂಭೀರಧೀರಾರಾವಂಗಳಪ್ಪ ಆನಂದಿಗಳೆಂಬ ಪನ್ನೆರಡು ಭೇರಿಗಳುಂ: ಆದಿಪು, ೧೧. ೨೮ ವ)

ಭೈತ್ರ

[ನಾ] ಹಡಗು (ಅಂತು ಚಕ್ರವರ್ತಿಯ ಪುಣ್ಯಾತಿಶಯಮನಱಿಪಿ ಜಳಧಿಯಳ್ ಭೈತ್ರಂ ಪರಿವಂತೆ: ಆದಿಪು, ೧೨. ೫೯ ವ)

ಭೈರವ

[ನಾ] ಶಿವನ ಉಗ್ರರೂಪ (ಅಂತು ದೇವನಿಕಾಯಂ ಬೆರಸು ಯುದ್ಧಸನ್ನದ್ಧನಾಗಿ ಪರಸೈನ್ಯಭೈರವನೊಳಿಱಿವೆನೆಂಬ ಪೞುವಗೆಯೊಳ್ ಭೈರವಂಬಾಯ್ವಂತೆ ಬಂದು: ಪಂಪಭಾ, ೫. ೧೦೧ ವ)

ಭೈಷಜ್ಯ[ದಾನ]

[ನಾ] [ಜೈನ] ಔಷಧಿ, ದಾನದ ನಾಲ್ಕು ಬಗೆಗಳಲ್ಲಿ ಒಂದು (ಅಭಯರ್ ನಿರೋಗರುಂ ಶ್ರುತವಿಭವಸಮನ್ವಿತರುಮಪ್ಪರ್ ಎಂಬುದು ಪಿರಿದಲ್ತು ಭವಾಂಬುಧಿಯುಮನೀಸುವರ್ ಅಭಯೌಷಧಶಾಸ್ತ್ರದಾನ ಫಳವಿಳಸನದಿಂ: ಆದಿಪು, ೧೦. ೧೧)

Search Dictionaries

Loading Results

Follow Us :   
  Download Bharatavani App
  Bharatavani Windows App