भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಭೋಂಕನೆ

[ಅ] ಬೇಗನೆ (ಮೆಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ: ಪಂಪಭಾ, ೧. ೧೧೧); [ಅ] ಇದ್ದಕ್ಕಿದ್ದಂತೆ (ನನೆಯಂಬನೆ ಕರ್ಚಿ ಪಾಱಿದಪುದೋ ಶೃಂಗಾರವಾರಾಶಿ ಭೋಂಕನೆ ಬೆಳ್ಳಂಗೆಡೆದತ್ತೊ ಕಾಮನ ಎಱೆ ಮೆಯ್ವೆರ್ಚಿತ್ತೊ ಪೇೞ್ ಈಕೆಗೆ ಎಂಬಿನಂ: ಪಂಪಭಾ, ೪. ೪೨)

ಭೋಂಕಲ್

[ಅ] ಭೋಂಕನೆ, ತಟ್ಟನೆ (ಶ್ರೀನಾರೀಪತಿ ದೀಕ್ಷೆಯಂ ಕೊಳಲೊಡಂ ಭೋಂಕಲ್ ಮನಃಪರ್ಯಾಯಜ್ಞಾನಂ ಪುಟ್ಟಿದುದು: ಆದಿಪು, ೧೬. ೭೩)

ಭೋಗ

[ನಾ] ಹಾವಿನ ಹೆಡೆ (ತನು ರೂಪ ವಿಭವ ಯೌವನ ಧನ ಸೌಭಾಗ್ಯ ಆಯುರಾದಿಗಳ್ಗೆಣೆ ಕುಡುಮಿಂಚಿನ ಪೊಳೆಪು ಮುಗಿಲ ನೆೞಲ್ ಇಂದ್ರನ ಬಿಲ್ ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ: ಆದಿಪು, ೯. ೯. ೪೬); [ನಾ] ಸುಖ (ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರ್: ಪಂಪಭಾ, ೨. ೨೯)

ಭೋಗತೃಷ್ಣೆ

[ನಾ] ಭೋಗಾಕಾಂಕ್ಷೆ (ಅಂತಪಗತಗುರುಶೋಕವೇಗನಾಗಿ ಗಣಧರಚರಣ ಸರಸಿಜಂಗಳ್ಗೆಱಗಿ ತನ್ನ ಭೋಗತೃಷ್ಣೆಯಂ ತಾನೆ ತನ್ನ ಮನದೊಳ್ ನಿಂದಿಸುತ್ತುಂ: ಆದಿಪು, ೧೬. ೬೦ ವ)

ಭೋಗನಾಯಕ

[ನಾ] ಮಂಡಲವನ್ನು ರಕ್ಷಿಸುವವನು (ಭೋಗಿಗಳ್ ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯ ಭೋಗನಾಯಕರ್: ಪಂಪಭಾ, ೪. ೧೬)

ಭೋಗಭೂಮಿ

[ನಾ] [ಜೈನ] ಭೂಮಿಯ ಮೇಲೆಯೇ ಇರುವುದುದೆಂದು ಹೇಳಲಾದ, ಪುಣ್ಯವಂತರು ಹುಟ್ಟುವ ಸ್ಥಳ, ಇಲ್ಲಿ ರೋಗರುಜಿನಾದಿಗಳಿರುವುದಿಲ್ಲ (ಫಳಮುಂ ಸುಪಾತ್ರದಾನದ ಫಳಮೆ ದಲ್ ಉತ್ಕೃಷ್ಟಂ ಭೋಗಭೂಮಿಯೊಳಂ: ಆದಿಪು, ೧೦. ೧೦)

ಭೋಗಾಂಗ

[ನಾ] ಸುಖಸಾಧನ (ಭೋಗಾಂಗಮಾಗಿಯುಂ ಕೃಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ ಭೋಗಿಗಳಂ: ಆದಿಪು, ೫. ೨೫)

ಭೋಗಾಭೋಗ

[ನಾ] ಭೋಗಸಾಮಗ್ರಿಗಳಿಂದ ಸಿಕ್ಕುವ ಸುಖ (ವಿದ್ಯುತ್ ಕ್ಷಣಿಕಂ ನಿಟ್ಟಿಯೆ ತನುಭೃದ್ಗಣ ಯೌವನ ರೂಪ ವಿಭವ ಭೋಗಾಭೋಗಂ: ಆದಿಪು, ೪. ೭೫)

ಭೋಗಿ

[ನಾ] ವಿಲಾಸವತಿ (ಚರಿತಂ ಬಂದರ್ ಕಣ್ಗೊಪ್ಪಿರಲ್ ವರಭೋಗಿಯರ್: ಪಂಪಭಾ, ೯. ೧೦೨); [ನಾ] ನಾಗ ಮತ್ತು ಸುಖಪಡುವವ (ಭೋಗಿಗಳ್ ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯ ಭೋಗನಾಯಕರ್: ಪಂಪಭಾ, ೪. ೧೬); [ನಾ] ಸರ್ಪ (ತತ್ ಭೋಗಿ ಫಣಾದ್ಯುತಿಯೆ ಕೞ್ತಲೆಯಂ ತಲೆದೋಱಲೀಯದು: ಪಂಪಭಾ, ೪. ೧೬); [ನಾ] ಸುಖಿ [ಅರ್ಜುನ] (ಆಗಳ್ ಅನಂತಂ ಅನಂತಫಣಾಗಣಮಣಿ ಕಿರಣಂ ಎಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಿಸೆ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)

ಭೋಗಿಭೋಗ

[ನಾ] ಹಾವಿನ ಹೆಡೆ (ಇಂತು ಸಂಸೃತಿಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್: ಆದಿಪು, ೨೫)

ಭೋಗಿಸು

[ಕ್ರಿ] ಅನುಭವಿಸು (ನಿಚ್ಚಲುಮಾ ಬಿಯಮಾ ವಿನೋದಮಾ ಪಸದನಮಾ ವಿಳಸದೊಳೊಡಂಬಡೆ

ಭೋಜನಭೂಮಿ

[ನಾ] ಊಟದ ಮನೆ (ಭೋಜನಭೂಮಿಗೆ ರಾಜಹಂಸ ವಿಳಾಸದಿಂ ಬಿಜಯಂಗೆಯ್ದು: ಆದಿಪು, ೧೧. ೨೬ ವ)

ಭೋಜನಾಂಗ

[ನಾ] [ಜೈನ] ಬಯಸಿದ ಆಹಾರ ನೀಡುವ ಕಲ್ಪವೃಕ್ಷ, ನೋಡಿ (ಅಮರ್ದಿನ ಸವಿಯೊಳಗೀಸವಿ ಸಮನೆನೆ ತೇಜೋಬಳ ಆಯುರಾರೋಗ್ಯಸಮೇತಮಂ ಅಮೃತಾನ್ನಮನೊಲ್ದೀಗುಂ ಆಗಳುಂ ಭೋಜನಾಂಗ ಕಲ್ಪಾವನಿಜಂ: ಆದಿಪು, ೫. ೩೯), ‘ಅಂಗಕಲ್ಪಕುಜ’

ಭೋಜ್ಯ

[ನಾ] ತಿನ್ನಬಹುದಾದುದು (ಪಕ್ವಫಲನಮ್ರ ಆಮ್ರಾದಿಭೂಜಂಗಳ್ ಈ ಯುಗದೊಳ್ ಕಲ್ಪಕುಜಂಗಳಂತೆ ಇವಱ ಪಣ್ ಭೋಜ್ಯಂಗಳ್: ಆದಿಪು, ೬. ೭೭)

ಭೋರ್ಗರೆ

[ಕ್ರಿ] ಭೋರ್ ಎಂದು ಶಬ್ದಮಾಡು (ಭೋರ್ಗರೆದೂದುವ ಗಾಳಿ ಸಿಡಿದು ಪೊಯ್ವ ಸಿಡಿಲ್: ಆದಿಪು, ೬. ೩೨)

ಭೌತಿಕ

[ಗು] ಪಂಚಭೂತಗಳಿಂದಾದ (ಈ ಧರಣೀಭಾರಮನಾಂ ಬಿಸುೞ್ಪೊಡದು ಚಿಃ ಲೋಕಕ್ಕೆ ಖಾತ್ವಾಸಮೀಕರಣಂ ಭೌತಿಕಮೋದಕವ್ಯತಿಕರಂ ತಾನೆಂಬುದಂ ಮಾಡದೇ: ಆದಿಪು, ೪. ೮೧)

ಭೌತಿಕಮೋದಕವ್ಯತಿಕರ

[ನಾ] ಒಂದು ಲೌಕಿಕ ನ್ಯಾಯ, ಗುಂಡಿಯನ್ನು ಅಗೆಯುವುದು ಅದನ್ನು ಮುಚ್ಚುವುದು, ನಿರರ್ಥಕ ಕೆಲಸ (ಈ ಧರಣೀಭಾರಮನಾಂ ಬಿಸುೞ್ಪೊಡದು ಚಿಃ ಲೋಕಕ್ಕೆ ಖಾತ್ವಾ ಸಮೀಕರಣಂ ಭೌತಿಕಮೋದಕ ವ್ಯತಿಕರಂ ತಾನೆಂಬುದಂ ಮಾಡದೇ: ಆದಿಪು, ೪. ೮೧)

ಭ್ರಮಣ

[ನಾ] ಅಲೆದಾಟ (ಯಮುನಾನದೀತರಂಗಮಂ ಅಮುಂಕಿ ವನಲತೆಯ ಮನೆಗಳಂ ಸೋಂಕಿ ವನಭ್ರಮಣ ಪರಿಶ್ರಮಮಂ ಮುನ್ನಮೆ ಕಳೆದುದು ಬಂದುದೊಂದು ಮಂದಶ್ವಸನಂ: ಪಂಪಭಾ, ೫. ೫೩)

ಭ್ರಮತ್

[ಗು] ಸುತ್ತುವ (ಭ್ರಮತ್ ಭ್ರಮರಭಗ್ನ ಮಾಧವೀಲತಾ ಲತಾಂತಂ ಅಧಿಕಮಕರಂದಬಿಂದುಚಿತ್ರಿತ ವಿಪುಳಪುಳಿನ ತಳಂಗಳೆ ವಿಶ್ರಮಣಭೂಮಿಗಳಾಗೆಯುಂ: ಆದಿಪು, ೪. ೫೨ ವ)

ಭ್ರಮರ

[ನಾ] ದುಂಬಿ (ಭ್ರಮತ್ ಭ್ರಮರಭಗ್ನ ಮಾಧವೀಲತಾ ಲತಾಂತಂ ಅಧಿಕಮಕರಂದಬಿಂದುಚಿತ್ರಿತ ವಿಪುಳಪುಳಿನ ತಳಂಗಳೆ ವಿಶ್ರಮಣಭೂಮಿಗಳಾಗೆಯುಂ: ಆದಿಪು, ೪. ೫೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App