Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಭಕ್ಷ
[ನಾ] ಆಹಾರ (ನಿಡಿಯರ್ ಬಲ್ಲಾಯದ ಬಲ್ದಡಿಗರ್ ವಂದಿರ್ದರಯ್ವರಾಲವ ಕೆೞಗಿಂ ತೊಡರ್ದರ್ ನಮ್ಮಯ ಭಕ್ಷದೊಳ್: ಪಂಪಭಾ, ೩. ೧೨)
ಭಕ್ಷ್ಯ
[ನಾ] ತಿಂಡಿ, ಆಹಾರ (ಶಾರ್ದೂಲ ವರಾಹ ಗೋಲಾಂಗೂಲ ನಕುಳಂಗಳಂ ನೋಡುತ್ತುಂ ಅವರ್ಕೆ ಭಕ್ತ್ಯಾಪೂಪಂಗಳಂ ತರಿಸಿ ನೀಡುತ್ತುಂ ಇರ್ದು: ಆದಿಪು, ೫. ೨ ವ)
ಭಂಗ
[ನಾ] ಅವಮಾನ (ಭರತಾವನೀಶ್ವರಂ ಗುರು ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರಂ ಈ ದೊರೆಯನುಂ ಅಳವೞಿಯೆ ವಸುಂಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ: ಆದಿಪು, ೧೪. ೧೧೨); [ನಾ] ಮುರಿಯುವುದು (ತುಂಗವನ್ಯಮತಂಗಜ ದಂತಾಘಾತ ನಿಪಾತಿತಸಲ್ಲಕೀ ಭಂಗಮಂ .. .. ನೃಪನೆಯ್ದಿದಂ ಉದ್ಯತ್ಛೃಂಗಮನಾ ಶತಶೃಂಗಮಂ: ಪಂಪಭಾ, ೧. ೧೧೫)
ಭಗವತಿಯೇಱು
[ನಾ] [ಭಗವತಿಯ+ಏಱು] ದೇವಿಯ ಯುದ್ಧ, ದೇವಿ ಮೈಮೇಲೆ ಬಂದಾಗ ಉಂಟಾಗುವ ಉರುಬು (ಭಗವತಿಯೇಱುವೆರ್ವ ತೆಱದಿನಾಯ್ತಿವರೇಱು: ಪಂಪಭಾ, ೧೦. ೧೩)
ಭಗವತ್ಕೃತ
[ಗು] [ಜೈನ] ತೀರ್ಥಂಕರನಿಂದ ಆದ (ವಿತತಾಷಾಢದ ಬಹುಳ ಪ್ರತಿಪದ್ದಿನದಂದು ಕೀರ್ತಿ ನೆಗೞ್ದಿರೆ ಭಗವತ್ಕೃತಯುಗಮಾದುದರಿಂದಂ ಕೃತಯುಗಮೆಂಬರ್ ಪುರಾಣವಿದರಿದನೀಗಳ್: ಆದಿಪು, ೮. ೬೬)
ಭಗವದ್ರೂಪ
[ನಾ] [ಜೈನ] ಗಣಧರರೂಪ (ಭಗವದರುಹನ ಸಮಕ್ಷದೊಳ್ ಅಗಣ್ಯಪುಣ್ಯಪ್ರಭಾವದಿಂದಂ ಕೊಂಡಂ ಭಗವದ್ರೂಪಮಂ ಇಂದ್ರಾದಿಗಳೆಲ್ಲಂ ಪೊಗೞೆ ಕಾಲಲಬ್ಧಿಯನಾಗಳ್: ಆದಿಪು, ೧೦. ೪೮)
ಭಂಗಿ
[ನಾ] ನಿಲವು (ಭಂಗಿಗಳೊಳೆಮ್ಮೊಳಾದೀ ಸಂಗಡಮಂ ನೀಮೆ ಮನದೆಗೊಂಡೆಮ್ಮ ಕಿಸುರ್ ಪಿಂಗುಗೆ ಅಗಲ್ವೆಡೆಯೊಳ್: ಆದಿಪು, ೧೧. ೧೩೩); [ನಾ] ತಿರುವು (ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್ನಯಂ ನಯಂ ನೆಲೆ ನೆಲೆ ಭಂಗಿ ಭಂಗಿ : ಪಂಪಭಾ, ೫. ೧೨)
ಭಂಗುರ
[ಗು] ಚಂಚಲವಾದ (ತುಂಗತರಂಗ ಭಂಗುರ ಪಯೋಧಿಪರೀತ ಮಹಾಮಹೀತಳಾಲಿಂಗಿತಕೀರ್ತಿ ಕೇಳ್ದು ಬಡಪಾರ್ವನ ಪುಯ್ಯಲಂ ಒರ್ಮೆ: ಪಂಪಭಾ, ೬. ೨)
ಭಗ್ನಮನ
[ನಾ] ಒಡೆದುಹೋದ ಮನಸ್ಸಿನವನು (ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ: ಪಂಪಭಾ, ೮. ೪೧ ವ)
ಭಗ್ನೋತ್ಸಾಹ
[ನಾ] ಉತ್ಸಾಹವನ್ನು ಕಳೆದುಕೊಂಡವನು (ಕ್ಷುತ್ಪಿಪಾಸಾಶೀತಾತಪಪ್ರಮುಖ ಪರೀಷಹಂಗಳಂ ಸೈರಿಸಲಾಱದೆ ಭಗ್ನೋತ್ಸಾಹರುಂ ದೂರೋತ್ಸಾರಿತ ಅಭಿಮಾನಿಗಳುಂ ಆಗಿ: ಆದಿಪು, ೯. ೮೮ ವ)
ಭಟಖಡ್ಗಮಂಡಲ
[ನಾ] ಯೋಧರ ಕತ್ತಿಗಳ ಸಮೂಹ (ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಲೋತ್ಪನವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ: ಆದಿಪು, ೧೪. ೧೩೦)
ಭಟ್ಟಾರಕ
[ನಾ] ಗುರು, ಗೌರವಸೂಚಕ ಪದ (ಎನಗೀವುದು ನಿನ್ನನೆ ಪೋಲ್ವ ಪುತ್ರನಂ ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕಂ ಅಂತರ್ಧಾನಕ್ಕೆ ಸಂದಂ : ಪಂಪಭಾ, ೧. ೧೧೯)
ಭಂಡಾರಿಗ
[ನಾ] ಕೋಶಾಗಾರದ ಮುಖ್ಯಾಧಿಕಾರಿ, ಚಕ್ರವರ್ತಿಯ ಏಳು ಜೀವರತ್ನಗಳಲ್ಲಿ ಒಂದು (ಬುದ್ಧಿಸಾಗರನೆಂಬ ಪುರೋಹಿತನುಂ ಕಾಮವೃಷ್ಟಿಯೆಂಬ ಭಂಡಾರಿಗನುಂ: ಆದಿಪು, ೧೫. ೩ ವ)
ಭದ್ರ
[ನಾ] ಉಪ್ಪರಿಗೆ (ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ .. .. ಇಂದ್ರನೀಲದ ಭದ್ರದೊಳಂ .. .. ಚಂದ್ರಕಾಂತದ ಚಂದ್ರಶಾಲೆಯೊಳಂ ಒಪ್ಪುವ ವಿವಾಹಗೇಹಮಂ ಸಮೆಯಿಸಿ: ಪಂಪಭಾ, ೩. ೭೪ ವ)
ಭದ್ರದೇವ
[ನಾ] ಮೊದಲನೆಯ ಅರಿಕೇಸರಿಯ ಇಬ್ಬರು ಮಕ್ಕಳಲ್ಲಿ ಒಬ್ಬ; ಮೊದಲನೆಯ ಭದ್ರದೇವ (ಅರಿಕೇಸರಿಗೆ ಆತ್ಮಜರ್ ಅರಿನೃಪಶಿರೋದಳನ ಪರಿಣತೋಗ್ರಾಸಿ ಭಯಂಕರರ್ ಆ ಇರ್ವರೊಳ್ ಆರ್ ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್: ಪಂಪಭಾ, ೧. ೨೨)
ಭದ್ರಮನ
[ನಾ] ಒಂದು ಜಾತಿಯ ಆನೆ (ಅನವರತ ಗಳತ್ ಮದದುರ್ದಿನಾನನಂ ವರ್ಷಜಳಸಮನ್ವಿತಂ ಅಂಭೋದ ನಿನಾದಂ ಭದ್ರಮನಂ ಮನೋಜವಂ ಚತುರಶೀತಿಲಕ್ಷ ಪ್ರಮಿತಂ: ಆದಿಪು, ೧೧. ೨೯)
ಭದ್ರಮುಖ
[ನಾ] [ಜೈನ] ಭರತ ಚಕ್ರವರ್ತಿಯ ಏಳು ಜೀವರತ್ನಗಳಲ್ಲೊಂದಾದ ತಕ್ಷಕರತ್ನದ ಹೆಸರು (ಮಹಾನದಾವಗಾಹನ ಸಮಯ ನೌ ದ್ರೋಣಿ ಸಂಕ್ರಮಾದಿವಿಧಾನ ಪ್ರಾಗ್ಲಲ್ಭ್ಯನುಂ ಅನುಸ್ಮರಣಮಾತ್ರ ನಿಷ್ಪಾದಿತ ಸಪ್ತತಳಾದಿ ಪ್ರಾಸಾದಪ್ರಕರಣನುಮಪ್ಪ ಭದ್ರಮುಖನೆಂಬ ತಕ್ಷಕರತ್ನಮುಂ: ಆದಿಪು, ೧೧. ೩ ವ)
ಭದ್ರಲಕ್ಷಣಲಕ್ಷಿತ
[ನಾ] ಶುಭಲಕ್ಷಣಗಳಿಂದ ಕೂಡಿದವನು (ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಂ ಅತ್ಯಂತಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕುಂ: ಪಂಪಭಾ, ೧. ೮೫ ವ)
ಭದ್ರಶಾಲ
[ನಾ] [ಜೈನ] ಮೇರುಪರ್ವತದ ಮೇಲಿರುವ ನಾಲ್ಕು ವನಗಳಲ್ಲಿ ಒಂದು, ಉಳಿದ ಮೂರು: ನಂದನ ಸೌಮನಸ ಮತ್ತು ಪಾಂಡುಕ (ಇದು ಭದ್ರಶಾಲನಂದನಂ ಅದು ನನ್ದನವನಂ ಅದಲ್ತೆ ಸೌಮನಸಂ ಅದೇಂ ತುದಿಯೊಳ್ ಪಾಂಡುಕವೆಸೆದಿರ್ಪಿದೊ: ಆದಿಪು, ೨. ೨೯)
ಭದ್ರಹಸ್ತಿ