भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮದವಳಿಗೆ

[ನಾ] ಮದುವಣಗಿತ್ತಿ (ಮಂಗಳವಸದನಮಿಕ್ಕಿಯುಂ ಪೊಸಮದವಳಿಗೆಯಪ್ಪುದಱಿಂ ತುಡಿಸಲೆ ವೇೞ್ಕುಮೆಂದು ನೆಱೆಯೆ ಪಸದನಂಗೊಳಿಸೆ: ಪಂಪಭಾ, ೩. ೪೬ ವ)

ಮದಶಕ್ತಿ

[ನಾ] ಉನ್ಮತ್ತಗೊಳಿಸುವ ಶಕ್ತಿ (ಮನಸಿಜನ ಅಂಗನಾಜನ ವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)

ಮಂದಶ್ವಸನ

[ನಾ] ಮಂದಮಾರುತ (ಯಮುನಾನದೀತರಂಗಮಂ ಅಮುಂಕಿ ವನಲತೆಯ ಮನೆಗಳಂ ಸೋಂಕಿ ವನಭ್ರಮಣ ಪರಿಶ್ರಮಮಂ ಮುನ್ನಮೆ ಕಳೆದುದು ಬಂದದೊಂದು ಮಂದಶ್ವಸನಂ: ಪಂಪಭಾ, ೫. ೫೩)

ಮದಸ್ತಂಬೇರಮಬೃಂಹಿತ

[ನಾ] ಮದ್ದಾನೆಯ ಘೀಂಕಾರ (ಬಹುಸ್ನಿಗ್ಧಂಗಳಪ್ಪ ಮದಸ್ತಂಬೇರಮಬೃಂಹಿತಂಗಳಿಂದಂ ಯುಗಪದಾಸ್ಖಾಲಿತಾನೇಕದುಂದುಭಿಧ್ವನಿ ಮಧುರಗೀತಂಗಳಪ್ಪ ಹಯಹೇಷಿತಂಗಳಿಂದಂ: ಆದಿಪು, ೧೪. ೮೬ ವ)

ಮದಹಸ್ತಿ

[ನಾ] ಮದ್ದಾನೆ (ದೆಸೆಗಳ್ಗೆ ಬೆರ್ಚಿ ಮೂಂಕಿಱಿವ ವನಮಹಿಷಿಗಳಿಂ ಮದಹಸ್ತಿಯಂತೆ ಮರವಾಯ್ವ ಪುಲಿಗಳಂ ಅತಿಭಯಂಕರಾಕಾರಮಪ್ಪ ದ್ವೈತವನಕ್ಕೆ ಬಂದು: ಪಂಪಭಾ, ೭. ೨೯ ವ)

ಮಂದಾಕಿನಿ

[ನಾ] ಗಂಗೆ (ಎಂದು ಮುಂತಪ್ಪ ಕಜ್ಜಮಂ ತನ್ನೊಳೆ ಬಗೆದು ಅವಾರ್ಯವೀರ್ಯಂ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು: ಪಂಪಭಾ, ೯. ೭೧ ವ)

ಮಂದಾಕಿನೀತನೂಜ

[ನಾ] ಭೀಷ್ಮ (ದುರ್ಯೋಧನಂ ಸಹಸ್ರಕಿರಣೋದಯದೊಳ್ ಅನೇಕಸಹಸ್ರ ನರಪತಿ ಪರಿವೃತನುಮಾಗಿ ಮಂದಾಕಿನೀತನೂಜಂಗೆ ಬೞಿಯನಟ್ಟಿ: ಪಂಪಭಾ, ೧೦. ೧೪ ವ)

ಮಂದಾನಿಳ

[ನಾ] ಮೆಲುಗಾಳಿ (ಅಂತು ಮಳಯಜರಸಶಿಶಿರ ಶೀಕರಾಸಾರಿಯಾಗಿ ಬಂದ ಮಂದಾನಿಳನ ಬೞಿಯನೆ ಬಂದು: ಆದಿಪು, ೧೧. ೫೫ ವ)

ಮದಾನೇಕಪ

[ನಾ] ಮದ್ದಾನೆ (ನಾಲಕೋಕಮದಾನೇಕಪಂ ನಟ್ಟು ನಿಂದು ಬೀಸಿದೊಡೆ ಬಿಸುಡುವುದುಂ: ಆದಿಪು, ೩. ೪೦ ವ)

ಮಂದಾರ

[ನಾ] ಮಂದರ ಪರ್ವತ (ಆ ಮಂದಾರದ ಪೂರ್ವಾಪರ ದಿಗ್ವಿಭಾಗಂಗಳೊಳ್ ವಿದೇಹಂಗಳಿರ್ದುವು: ಆದಿಪು, ೧. ೫೦ ವ)

ಮಂದಾರಮಾಲಿಕೆ

[ನಾ] ಮಂದಾರಪುಷ್ಪದ ಹಾರ (ಉತ್ಪಳಿಕೆಯಂ ಕೈಘಟ್ಟಿ ನೀಡಲುಂ ಮಂದಾರಿಕೆಯಂ ಮಂದಾರಮಾಲಿಕೆಯನೆತ್ತಲುಂ: ಆದಿಪು, ೭. ೨೧ ವ)

ಮದಾಲಸ

[ಗು] ಮದದಿಂದ ಅಲಸಿದ (ಇದಂದು ಲಲಿತಾಂಗನೆನೆ ಸಂದ ಮದ್ರೂಪಂ ಈ ಮದಾಲಸವಿಲೋಲಲೋಚನೆ ದಲ್ ಎನ್ನ ಮಾದೇವಿ: ಆದಿಪು, ೪. ೭)

ಮದಾಳಿ

[ನಾ] ಸೊಕ್ಕಿದ ದುಂಬಿ (ಮುಗುಳ್ವದನಾದ ಸಂಪಗೆ ಮಡಲ್ತ ಅದಿರ್ಮುತ್ತೆ ಮರಲ್ದರಲ್ದ ಮಲ್ಲಿಗೆ ಕಾಕಳಿಯೊಳ್ ಆಣತಿಗೆಯ್ವ ಮದಾಳಿ: ಪಂಪಭಾ, ೫. ೩೫)

ಮದಿರಾಮದೋನ್ಮತ್ತ

[ನಾ] ಹೆಂಡ ಕುಡಿದ ಅಮಲುಳ್ಳವನು (ದ್ರುಪದಂ ರಾಜ್ಯಮದಿರಾಮದೋನ್ಮತ್ತಂ ಗರ್ವಗ್ರಹ ವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ: ಪಂಪಭಾ, ೨. ೪೬ ವ)

ಮದಿಲ್

[ನಾ] ಕೋಟೆಯ ಗೋಡೆ (ಬಳಸಿದ ಕೆಂಬೊನ್ನ ಮದಿಲ್ಗಳೊಳಗೆ ಮಣಿಮಯ ಭವನಾಳಿ ಬೆಳಗೆ: ಪಂಪಭಾ, ೪. ೧೦)

ಮದೀಯ

[ಗು] ನನ್ನ, ನನಗೆ ಸಂಬಂಧಪಟ್ಟ (ಮದೀಯ ಮನೋಗತ ಕಾಮಸಾಗರದ ಒದವಿಂಗೆ ನಲ್ಲಳ ವಿಲೋಚನ ಚಂದ್ರಿಕೆಯೊಂದೆ ಸಾಲದೇ: ಪಂಪಭಾ, ೫. ೧೧)

ಮದುವೆಗೞಿಪು

[ಕ್ರಿ] ಮದುವೆಗೆ ಬಂದವರನ್ನು ಬೀಳ್ಕೊಡು (ಬಿನ್ನನಿರ್ದುದು ಸುರಶೈಳಮದೊಂದು ಮದುವೆಗೞಿಪಿದ ಮನೆವೊಲ್: ಆದಿಪು, ೭. ೧೦೮)

ಮದುವೆನಿಱಿಸು

[ಕ್ರಿ] ಮದುವೆ ಮಾಡಿಕೊಡು (ಈ ಮಹೀತಳ ರಾಜ್ಯದೊಳ್ ನಿಱಿಸುವುದುಂ ಮದುವೆನಿಱಿಸುವುದುಂ ಎನಗಶಕ್ಯಾನುಷ್ಠಾನಂ: ಆದಿಪು, ೮. ೮ ವ)

ಮದುವೆನಿಲ್

[ಕ್ರಿ] ಮದುವೆಯಾಗು (ಆನಕಧ್ವನಿ ದೆಸೆಯೊಳ್ ಪಸರಿಸೆ ತಂದರ್ ಪಿರಿದೊಂದೊಸಗೆಯೊಳಿರದರಸ ಮದುವೆನಿಲ್ಲೆಂದರೆಬರ್: ಆದಿಪು, ೯. ೧೨೭)

ಮದೇಭ

[ನಾ] ಮದ್ದಾನೆ (ಪಾರಿಜಾತಂ ಅಗ್ಗಳಮೆಸೆದೊಪ್ಪುವಂತೆ ತಳಿರಿಂ ಮುಗುಳಿಂ ನವಯೌವನಂ ಮನಂಗೊಳೆ ಕರಮೊಪ್ಪಿದಂ ದಶಸಹಸ್ರಮದೇಭಬಳಂ ವೃಕೋದರಂ: ಪಂಪಭಾ, ೨. ೩೮)

Search Dictionaries

Loading Results

Follow Us :   
  Download Bharatavani App
  Bharatavani Windows App