Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮದೋತ್ಕ
[ಗು] ಅಮಲೇರಿದ, ಸೊಕ್ಕಿದ (ಮೆಲ್ಲನಲ್ಲಿ ಸುೞಿಗುಂ ಮಂದಾನಿಳಂ ನೀರ್ ಸುಧಾಸಮಂ ಉದ್ಯಾನವನಂ ಮದೋತ್ಕಪರಪುಷ್ಟಕೋಳಾಹಳಂ: ಆದಿಪು, ೫. ೨೯)
ಮದೋತ್ಕಟ
[ಗು] ಅಹಂಕಾರದಿಂದ ತೀವ್ರವಾದ (ಮಱೆವುದೆಮ್ಮ ಮದೋತ್ಕಟಚೇಷ್ಟಿತಂಗಳಂ: ಆದಿಪು, ೧೧. ೧೩೧)
ಮದೋದಯ
[ನಾ] ಅತಿಶಯವಾದ ಸೊಕ್ಕು (ಆತನರಸಿನಿವಿರಿದಾದೊಡಂ ಏನೆನಗೆ ಎಂಬ ಮದೋದಯದೊಳ್ ದೇವ ಬಾಹುಬಲಿ ಬಲ್ದಿರ್ದಂ: ಆದಿಪು, ೧೪. ೧೮)
ಮದ್ಗದಾಹತಿ
[ನಾ] [ಮತ್+ಗದಾ+ಆಹತಿ] ನನ್ನ ಗದೆಯ ಏಟು (ಮಹಾಪ್ರಳಯೋಲ್ಕೋಪಮ ಮದ್ಗದಾಹತಿಯಿಂ ಅತ್ಯುಗ್ರಾಜಿಯೊಳ್ ಮುನ್ನಮೀ ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞ್ದಿಕ್ಕಿ: ಪಂಪಭಾ, ೭. ೧೨)
ಮದ್ಯಾಂಗ
[ನಾ] [ಜೈನ] ಹತ್ತು ಕಲ್ಪಕುಜಗಳಲ್ಲಿ ಒಂದು, ಮದ್ಯ ನೀಡುವಂಥದು (ಮಧುಗಳನೆಡೆಯುಡುಗದೆ ಕುಡುಗುಂ ಉಚಿತ ಮದ್ಯಾಂಗಕುಜಂ: ಆದಿಪು, ೫. ೩೨)
ಮಂದ್ರ
[ಗು] ಗಂಭೀರವಾದ (ಕರಿಣೀವೃಂದದ ಮೇಲೆ ತಳ್ತ ತೞೆಗಳ್ ವಾರಾಂಗನಾಗೀತಮಂದ್ರರವಂಗಳ್: ಆದಿಪು, ೧೧. ೪೨)
ಮದ್ರಪತಿ
[ನಾ] ಮದ್ರದೇಶದ ರಾಜ, ಶಲ್ಯ (ಪೆಱತನಣಂ ಬಗೆಯದೆ ಮದ್ರಪತಿಯನೆಂದಂ: ಪಂಪಭಾ, ೧೨. ೧೯೯)
ಮದ್ರೂಪ
[ನಾ] [ಮತ್+ರೂಪ] ನನ್ನ ಆಕಾರ (ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದೆ: ಪಂಪಭಾ, ೧. ೮೫ ವ)
ಮದ್ವೃತ್ತಕಂ
[ನಾ] [ಮತ್+ವೃತ್ತಕಂ] ನನ್ನ ವಿಷಯ, ನನ್ನ ಸಮಾಚಾರ (ಇದು ನಾಕಲೋಕವಿಭವಂ ಮದ್ವೃತ್ತಕಂ ತಪ್ಪದೀ ಈ ಮೃಗಶಾಬೇಕ್ಷಣೆ ಮನ್ಮನೋರಮೆ: ಆದಿಪು, ೩. ೮೮)
ಮಂಧರ
[ನಾ] [ಜೈನ] ಮೇರುಪರ್ವತ (ಭರತಂ ದರ್ಶನದೊಳ್ ಮಂದರಮಾ ಪ್ರಾಗ್ಭಾರಭೂತಳಂಬರೆಗಂ ನೀಳ್ದಿರೆ ಕಂಡು ವಿಸ್ಮಿತಾಂತಃಕರಣಂ: ಆದಿಪು, ೧೬. ೪೧)
ಮಧು
[ನಾ] ಮದ್ಯ (ಕುಡಿದೊಡೆ ಸೊರ್ಕಿಸದವು ನಾಣ್ಗಿಡಿಸದವು ಮನಕ್ಕಲಂಪನೀವುವು ರತಮಂ ನಡೆಯಿಪುವೆನಿಸುವ ಮಧುಗಳನೆಡೆಯುಡುಗದೆ ಕುಡುಗುಂ: ಆದಿಪು, ೫. ೩೨); [ನಾ] ವಸಂತ (ಮಧುಮನೋಭವರಿರ್ವರುಮೞ್ತಿವಟ್ಟು ಮಲ್ಲಿಗೆಗೆ ಬಸಂತದೊಳ್ ಬಯಸಿ ಮಾಡಿದರಲ್ಲರೆ ಪಟ್ಟಬಂಧಮಂ: ಆದಿಪು, ೧೧. ೧೦೭); [ನಾ] ಒಂದು ಬಗೆಯ ಹೆಂಡ (ಮಧು ಸೀತುಂ ಕಟು ಸೀಧು ಪೋ ಪುಳಿತ ಕಳ್ಳಲ್ತುಂ ಕರಂ ಕಯ್ತುಬರ್ಪುದು: ಪಂಪಭಾ, ೪. ೮೮); [ನಾ] ಮಕರಂದ (ಎತ್ತಿದ ಪರಾಗರಾಗ ಮುದಿತ ಆಶಾ ಭಾಸಂ ಉದ್ಯತ್ ಮಧು ಉನ್ಮದಭೃಂಗಧ್ವನಿ ಮಂಗಳಧ್ವನಿಯೆನಲ್: ಪಂಪಭಾ, ೫. ೬)
ಮಧುಕರ
[ನಾ] ದುಂಬಿ (ಸ್ಪರ್ಶನ ರಸನ ಘ್ರಾಣ ಚಕ್ಷುರಿಂದ್ರಿಯಸಮನ್ವಿತಂಗಳಪ್ಪ ಮಧುಕರಾದಿ ಚತುರಿಂದ್ರಿಯಂಗಳ್: ಆದಿಪು, ೧೦. ೬೩ ವ)
ಮಧುಕೈಟಭಹಾರಿ
[ನಾ] ಮಧು ಮತ್ತು ಕೈಟಭ ಎಂಬ ರಾಕ್ಷಸರನ್ನು ಕೊಂದವನು, ಕೃಷ್ಣ (ಎಂದು ಅಂದು ಗುಣಾರ್ಣವಂಗೆ ಮಧುಕೈಟಭಹಾರಿ ತೊೞಲ್ದು ತೋಱಿದಂ: ಪಂಪಭಾ, ೫. ೬೮)
ಮಧುಕೈಟಭಾರಾತಿ
[ನಾ] ಮಧುಕೈಟಭಹಾರಿ (ಅಂತು ಯುಧಿಷ್ಠಿರಂ ನಿಷ್ಠಿತಾಹವವ್ಯಾಪಾರನಾಗಿ ಮಧುಕೈಟಭಾರಾತಿಯಂ ಬೀಡಿಂಗೆ ಪೋಗಲ್ವೇೞ್ದು: ಪಂಪಭಾ, ೧೨. ೩೨ ವ)
ಮಧುಪ
[ನಾ] ದುಂಬಿ (ತೂಗಿ ತೊನೆವ ನಾರಾಚಂ ಅದೇನೆಸೆದುದೊ ತದ್ವದನಾಂಭೋಜ ಸೌರಭಾಕೃಷ್ಟ ಮಧುಪಮಾಲಾಕೃತಿಯಿಂ: ಪಂಪಭಾ, ೧೨. ೭೦)
ಮಧುಪರ್ಕ
[ನಾ] ಮೊಸರು, ತುಪ್ಪ ನೀರು, ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣ (ಅರ್ಘ್ಯಮೆತ್ತಿ ಮಧುಪರ್ಕ ವೇತ್ರಾಸನ ತಾಂಬೂಲ ದಾನಾದಿಗಳಿಂ ಸಂತಸಂಬಡಿಸಿ: ಪಂಪಭಾ, ೨. ೫೨ ವ)
ಮಧುಮಂತ್ರ
[ನಾ] ಹೆಂಡ ಕುಡುಕರ ಮಂತ್ರ (ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಂ ಮಂತ್ರಿಸಿ ನೆಲದೊಳೆಱೆದು ತಲೆಯೊಳ್ ತಳಿದು ಕಳ್ಳೊಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ ಬೊಟ್ಟನಿಟ್ಟು: ಪಂಪಭಾ, ೪. ೯೭ ವ)
ಮಧುಮಥನ
[ನಾ] ಮಧು ಎಂಬ ರಾಕ್ಷಸನನ್ನು ಕೊಂದವನು, ಕೃಷ್ಣ (ಅತ್ತ ಮನುಜಮನೋಜನುಂ ಮದನಪರಿತಾಪಕ್ಕಾಱದೆ ಉಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ .. .. ವನಮಂ ಎಯ್ದೆವಂದು: ಪಂಪಭಾ, ೫. ೧೦ ವ)
ಮಧುವನಿತಾವದನಕಮಳಹಿಮಕರ
[ನಾ] ಮಧು [ರಾಕ್ಷಸ] ಎಂಬ ಹೆಣ್ಣಿನ ಮುಖಕಮಲಕ್ಕೆ ಚಂದ್ರನಂತಿರುವವನು, ಮಧುವಿನ ಶತ್ರು, ಶ್ರೀಕೃಷ್ಣ (ಏಗೆಯ್ವಂ ಪೇೞಿಂ ಎಂದು ನಾರಾಯಣನಂ ಬೆಸಗೊಳೆ ಮಧುವನಿತಾವದನಕಮಳಹಿಮಕರಂ ಇಂತೆಂದಂ: ಪಂಪಭಾ, ೧೩. ೭೪ ವ)
ಮಧುವ್ರತ