भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಧುಸಮಯ

[ನಾ] ವಸಂತಕಾಲ (ಆಗಳ್ ಸುತಮುಖನಿರೀಕ್ಷಣ ಮಧುಸಮಯಸಮುಪಜನಿತ ಪುಳಕಕಳಿಕಾಕಳಿತ ಕಲ್ಪವೃಕ್ಷನಪ್ಪ ನಾಭಿಮಹೀಜನುಂ: ಆದಿಪು, ೭. ೧೧೦ ವ) [ಎಲ್. ಬಸವರಾಜು ಆವೃತ್ತಿ]

ಮಧ್ಯ

[ನಾ] ಸೊಂಟ (ಆ ಕಾಮಕಾರ್ಮುಕ ಯಷ್ಟಿಮುಷ್ಟಿ ಸಮಾಯತ ಮಧ್ಯೆಯರೊಳ್ ಆ ರಾಜಕಂಠೀರವಮಧ್ಯಂ: ಆದಿಪು, ೮. ೨೩ ವ); [ನಾ] ವೇಗವೂ ಅಲ್ಲದ ನಿಧಾನವೂ ಅಲ್ಲದ ನಡುವಣ ಗತಿಯ ಲಯ (ಅತನುರಸೋಪೇತ ವಿಳಂಬಿತ ಮಧ್ಯ ದ್ರುತಲಯಂಗಳೊಳ್ ಲಕ್ಷಣಸಂಯುತ ತತ್ತ್ವಾನುಗತೌಘ ಪ್ರತೀತವಾದ್ಯಂಗಳೆಸೆದುವು: ಆದಿಪು, ೯. ೨೩)

ಮಧ್ಯಪ್ರದೇಶ

[ನಾ] ಸೊಂಟ, ನಡು (ಕರಮಸಿದಾದ ಪರಾಕ್ರಮಧವಳನ ಮಧ್ಯಪ್ರದೇಶಂ .. .. ಬರ್ದೆಯರ ಮನಮನಳ್ಳಾಡಿಸುವಂತಾದುದು: ಪಂಪಭಾ, ೨. ೩೯ ವ)

ಮಧ್ಯಮತನು

[ನಾ] ಅತಿರೇಕಗಳಿಲ್ಲದ ಹದವಾದ ದೇಹಗಾತ್ರ (ಮೃದುಮಧ್ಯಮತನು ಹಿತಮಿತಮೃದುವಚನಂ ಲಲಿತಮಧುರ ಸುಂದರವೇಷಂ: ಆದಿಪು, ೧. ೨೯)

ಮಧ್ಯಮನಿಷಾದಿ

[ನಾ] ಮಧ್ಯದಲ್ಲಿರುವ ಮಾವತಿಗ (ವಿಜಯಲಕ್ಷ್ಮೀವಿಲಾಸಿನೀ ಭ್ರೂಲತಾವಿಭ್ರಮಾನುಕಾರಿ ಎನಿಪುದಂ ಮಧ್ಯಮನಿಷಾದಿಯ ಕೈಯಿಂ ಕೊಂಡು: ಆದಿಪು, ೧೪. ೯೮ ವ)

ಮಧ್ಯಮಪಾತ್ರ

[ನಾ] [ಜೈನ] ದಾನಸ್ವೀಕರಿಸುವವರಲ್ಲಿನ ಒಂದು ಬಗೆ, ಸಮ್ಯಗ್ದರ್ಶನಶುದ್ಧನೂ ಅಣುವ್ರತಧಾರಿಯೂ ಆದವನು (ಶ್ರೀಸಮ್ಯಗ್ದರ್ಶನವಿಶುದ್ಧನುಂ ಅಣುವ್ರತಧಾರಿಯುಮಪ್ಪ ಶ್ರಾವಕಂ ಮಧ್ಯಮಪಾತ್ರಂ: ಆದಿಪು, ೧೦. ೯ ವ)

ಮಧ್ಯಲೋಕ

[ನಾ] ಊರ್ಧ್ವಲೋಕ ಮತ್ತು ಅಧೋಲೋಕಗಳ ನಡುವಣ ಭೂಲೋಕ (ನೆಲಸಿರ್ದಪ್ಪುದಧಸ್ಸ್ಥಳಂಬಿಡಿದ ಅಧೋಲೋಕಂ ಸಮಂತೆಯ್ದೆ ಸುತ್ತಲುಮಿರ್ದಪ್ಪುದು ಮಧ್ಯಲೋಕಂ ಎಸೆದಿರ್ದಾ ಚೂಳಿಕಾಭಾಗದಾದಲೆಯೊಳ್ ನಿಂದಪ್ಪುದೂರ್ಧ್ವಲೋಕಂ: ಆದಿಪು, ೧. ೫೦)

ಮಧ್ಯಸ್ಥ

[ನಾ] ಮಧ್ಯಸ್ಥಿಕೆಗಾರ (ಬಾಹುಬಲಿಕುಮಾರನ ಭರತೇಶ್ವರನ ಪಕ್ಷದ ರಾಜಲೋಕಮನೆರಡುಂ ದೆಸೆಯೊಳಂ ಮಧ್ಯಸ್ಥರಾಗಿ ಮಿಡುಕದೆ ನೋಡುತ್ತಿರ್ಪಂತು ನಿಯಮಿಸಿದಾಗಳ್: ಆದಿಪು, ೧೪. ೧೦೪ ವ); [ನಾ] ಮಧ್ಯಪ್ರದೇಶದಲ್ಲಿರುವ (ಮಧ್ಯಸ್ಥಂಗಳಾಗಿರ್ದುವರ್ಕಲೆಯಲ್ ತಕ್ಕುದೆ ಕೆನ್ನಂ ಆ ತ್ರಿವಳಿಗಳ್ಗೆನ್ನಂ ಸರೋಜಾಕ್ಷಿಯಾ: ಪಂಪಭಾ, ೪. ೭೪)

ಮನಕತ

[ನಾ] [ಮನಃಕ್ಷತ] ಮನಸ್ತಾಪ (ಉದಯಾಸ್ತಸಮಯಮೀ ಚಂದ್ರದಿವಾಕರಮಂಡಲಕ್ಕಂ ಇಲ್ಲಿಂದಂ ತೋರ್ಪುದು ತಾರಕಾಳಿ ನಭಮಂ ಪುದಿದಿರ್ಕುಮಿದರ್ಕೆ ನಿಮಗೆ ಮನಕತಮುಂಟೇ: ಆದಿಪು, ೬. ೫೫); ದುಃಖ (ರಥಮಂ ಬಂದೇಱಿ ಮಗನ ಮನಕತಂ ಒಂದುತ್ತರಮೆರ್ದೆಯನಲೆಯೆ ನರನಿಂತೆಂದಂ: ಪಂಪಭಾ, ೧೧. ೧೧೪)

ಮನಃಕಂಪ

[ನಾ] ಎದೆನಡುಕ, ಭಯ (ಎನ್ನ ನುಡಿದ ನುಡಿಯೇ ತನಗೆ ಮನಃಕಂಪಮಂ ಪಡೆಯೆ: ಆದಿಪು, ೩. ೬೪ ವ)

ಮನಕ್ಕೆ ವರ್

[ಕ್ರಿ] ನಿರ್ಧರಿಸು (ಬಳೆದ ಮುನಿಸಿನೊಳ್ ಕೆಚ್ಚನಾದ ಕಣ್ ದೆಸೆಗೆ ಕೆಂಪನೊದವಿಸಿದುದು ದಿಗ್ವನಿತೆಯರ್ಗೆ ರಕ್ತಬಲಿಯಂ ಮನಕ್ಕೆವರೆ ಬಳೆದ ಮುನಿಸೆ ಕುಡುವಂತಾಗಳ್: ಆದಿಪು, ೧೪. ೨೩)

ಮನಃಕ್ಷತ

[ನಾ] ಮನಸ್ಸಿನ ಮೇಲಾದ ಪೆಟ್ಟು (ಅತಿವಿಶದವಿಶಾಲ ಊರುಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನಃಕ್ಷತದೊಡನೆ ಎೞ್ಚರಿಸಿದುದು: ಪಂಪಭಾ, ೧. ೧೦೫)

ಮನಂಗಲಿ

[ನಾ] ತಾನು ಪರಾಕ್ರಮಿ ಅಂದುಕೊಂಡವನು (ಸೆರಗಂ ಬಗೆದೋಡಿದರೊಂದು ಪೊೞ್ತುಮೊಂದರ್ಕಮಿದಿರ್ಚಲಾಱದೆ ಮನಂಗಲಿಗಳ್ ಕದನತ್ರಿಣೇತ್ರನಂ: ಪಂಪಭಾ, ೮. ೧೦೮)

ಮನಂಗಲ್

[ಕ್ರಿ] [ಮನಂ+ಕಲ್] ಮತ್ತೊಬ್ಬರ ಮನಸ್ಸನ್ನು ಅರಿತುಕೊ (ನಿನ್ನ ಬಲ್ಲ ಮಾೞ್ಕೆಯೊಳೆಲ್ಲಮೆಲ್ಲಂದದೊಳಂ ಒಡಂಬಡಿಸಿ ಮನಂಗಲ್ವುದೆಂದು ನಿಯೋಜಿಸಿ: ಆದಿಪು, ೩. ೨೬ ವ)

ಮನಂಗಾಣ್

[ಕ್ರಿ] ಮನಸ್ಸನ್ನು ಕಾಣು, ಅರ್ಥಮಾಡಿಕೊ (ಅಂತು ನಡನಡನಡುಗಿ ಜಲದೇವತೆಗಳಪ್ಪೊಡಂ ಮನಂಗಾಣ್ಬರೆಂದು ನಿಧಾನಮನೀಡಾಡುವಂgತೆ ಕೂಸಂ ಗಂಗೆಯೊಳೀಡಾಡಿ ಬಂದಳ್: ಪಂಪಭಾ, ೧. ೯೫ ವ)

ಮನಂಗಾಪು

[ನಾ] ಮನೋನಿಗ್ರಹ, ಮನಸ್ಸಿನ ಎಚ್ಚರ (ಕೀಚಕಂ ಕಾಮದೇವಂ ಮಾಡಿದ ಯಾಚಕನಂತೆ ಕರಮೆ ನಾಣ್ಗೆಟ್ಟು ಮನಂಗಾಪು ಅೞಿದು ಅಳಿಪಿ ನೋಡಿ: ಪಂಪಭಾ, ೮. ೫೯ ವ)

ಮನಂಗೊಳಿಸು

[ಕ್ರಿ] ಆಹ್ಲಾದವುಂಟುಮಾಡು (ತಳಿರ್ಗಳಸಂ ಮುಕುಂದ ರವಂ ಎತ್ತಿದ ಮುತ್ತಿನ ಮಂಟಪಂ ಮನಂಗೊಳಿಪ ವಿತಾನಪಙ್ಕ್ತಿ ಪಸುರ್ವಂದಲೊಳ್ ಒಲ್ದು ಎಡೆಯಾಡುವ ಎಯ್ದೆಯರ್: ಪಂಪಭಾ, ೧. ೧೦೭)

ಮನಂಗೊಳ್

[ಕ್ರಿ] ನೆನೆಸಿಕೊ (ಮನಂಗೊಳಲ್ಕೆನಗಂ ಅತ್ತಳಗಂ ತರಳಾಯತಾಕ್ಷಿಯಾ: ಆದಿಪು, ೧೨. ೩೮); [ಕ್ರಿ] ಮನಸ್ಸಿಗೆ ಹಿಡಿಸು (ಆ ನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂಗೊಳೆ ಕೊಟ್ಟಂ ದುರ್ವಾಸಂ ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ: ಪಂಪಭಾ, ೧. ೮೮ ಮತ್ತು ೧. ೮೯); [ಕ್ರಿ] ಮನಸ್ಸಿನಲ್ಲಿ ಹಿಗ್ಗು (ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ ಅಗುೞ್ದಿರಲ್: ಪಂಪಭಾ, ೧. ೯೬ ವ ಮತ್ತು ೧. ೯೭); [ಕ್ರಿ] ಮನಸ್ಸನ್ನು ಗೆಲ್ಲು (ಮುಳಿಸಱಿದು ಅಂಜಿ ಬಾೞ್ತೆಯಱಿದಿತ್ತು ಮನಂಗೊಳೆಯುಂ ಕನಲ್ವುದರ್ಕಳವಿಯುಂ ಅಂತುಂ ಇಲ್ಲ : ಪಂಪಭಾ, ೪. ೯೮)

ಮನದ ಶಂಕೆ

[ನಾ] ಮನಸ್ಸಿನ ಸಂದೇಹ (ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕಮಂ ಕಿಡೆ ನುಡಿದು: ಪಂಪಭಾ, ೧. ೯೨ ವ)

ಮನದನ್ನ

[ನಾ] ಪ್ರೀತಿಪಾತ್ರ (ಗಿಳಿಯ ಬಣ್ಣದ ಕುದುರೆಗಳೊಳ್ ಪೂಡಿದಜಿತಂಜಯಮೆಂಬ ರಥಮನೇಱಿ ತನ್ನ ಮನದನ್ನನಪ್ಪ ಸಾರಥಿಯಂ ಚೋದಿಸಲ್ವೇೞ್ದು: ಆದಿಪು, ೧೨. ೭೪ ವ); [ನಾ] ತನ್ನಂತೆಯೇ ಮನಸ್ಸುಳ್ಳ (ದುರ್ಯೋಧನನವರ ಪೋಗನಱಿದು ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮಂ ಚರ್ಚಿಸಿ: ಪಂಪಭಾ, ೨. ೯೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App