Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಮಂಗಳಗೀತಿ
[ನಾ] ಮಂಗಳ ಸಂಗೀತ (ಪಾಸಱೆ ಸಿಂಹಪೀಠಂ ಅಳಿನಿರುತಿ ಮಂಗಳಗೀತಿ ಭೂತಳಂ ಪಾಸು ಮೃಗವ್ರಜಂ ಪರಿಜನಂ ಪೊದಱ್ ಓಲಗಸಾಲೆ: ಪಂಪಭಾ, ೭. ೨೯)
ಮಂಗಳತೂರ್ಯ
[ನಾ] ಮಂಗಳವಾದ್ಯ (ಮಂಗಳತೂರ್ಯನಾದಂ ಎಸೆಯುತ್ತಿರ್ಪನ್ನೆಗಂ ಚಕ್ರಿ ರಾಗಿಸಿ ಕೆಯ್ನೀರ್ ಎಱೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ: ಪಂಪಭಾ, ೫. ೨೫)
ಮಂಗಳಧಾರಿಣಿ
[ನಾ] ಮಂಗಳದ್ರವ್ಯಗಳನ್ನು ಹಿಡಿದವಳು (ಮಂಗಳಮನೆ ಪಾಡುತ್ತುಂ ಮಂಗಳಧಾರಿಣಿಯರಾಗಿ ಮುಂದಂ ನಡೆವಾಶಾಂಗನೆಯರಿಂದೆ: ಆದಿಪು, ೭. ೪೮)
ಮಂಗಳಪಾಠಕ
[ನಾ] ಹೊಗಳುಭಟ್ಟ (ಆಗಳ್ ಮಜ್ಜನಾವಸರ ಮಂಗಳಪಾಠಕ ಮಧುರನಿನದಮನಾಲಿಸುತ್ತುಂ: ಆದಿಪು, ೮. ೭೦ ವ)
ಮಂಗಳಭಂಗ
[ನಾ] ಶುಭಕ್ಕೆ ಉಂಟಾಗುವ ವಿಘ್ನ ಅಪಶಕುನ (ಒಯ್ಯನೆ ಮಂಗಳಭಂಗ ಭೀತಿಯಂ ತಳ್ವದೆ ಮಾಡೆ ಬಾಷ್ಪಜಳಮಂ ಕಳೆದು: ಪಂಪಭಾ, ೭. ೬೮)
ಮಂಗಳರಶ್ಮಿ
[ನಾ] ಮಂಗಳಕರವಾದ ಕಿರಣ (ಫಣೀಂದ್ರಾಳಯದಿಂದಂ ಉರ್ಚಿದ ಫಣಾಮಣಿ ಮಂಗಳರಶ್ಮಿಯೋ ಕರಂ ಮೇಳಿಸಿದಪ್ಪುದು ಎನ್ನೆರ್ದೆಯಂ: ಪಂಪಭಾ, ೧. ೯೬)
ಮಂಗಳವಸದನ
[ನಾ] [ಮಂಗಳ+ಪಸದನ] ಶುಭಕಾರ್ಯಕ್ಕೆ ತಕ್ಕ ಅಲಂಕಾರ (ಪಲ್ಲಂ ಸುಲಿದು ಅಗಣ್ಯಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು: ಪಂಪಭಾ, ೧೦. ೪೬ ವ)
ಮಂಗಳವೃತ್ತ
[ನಾ] ಮಂಗಳಗೀತ (ಎಂದು ಮಂಗಳವೃತ್ತಂಗಳನೋದೆ ಕಿಱಿದುಂ ಬೇಗಂ ಇರ್ದು ಎತ್ತಿದ ಬೋನದೊಳ್ ಕಲ್ಯಾಣಾಮೃತಮನಾರೋಗಿಸಿ: ಪಂಪಭಾ, ೭. ೭೯ ವ)
ಮಂಗಳಾನಕ
[ನಾ] ಶುಭಸಂದರ್ಭಗಳಲ್ಲಿ ಬಾರಿಸುವ ವಾದ್ಯ (ಈ ನಿಜತನೂಜೆಯಂ ಉತ್ಸವಮಂಗಳಾನಕ ಧ್ವನಿದೆಸೆಯಂ ಪಳಂಚಲೆವಿನಂ ನೆರಪೀಗಳೆ ವಜ್ರಜಂಘನೊಳ್: ಆದಿಪು, ೪. ೨೬)
ಮಗುೞೆ ಕುಡಿಸು
[ಕ್ರಿ] ವಾಪಸು ಕೊಡಿಸು (ಎಮ್ಮಾಳ್ವ ನೆಲನೊತ್ತೆಯೆಂದೊಡೆ ಬಗೆದು ನೋಡಿ ಗೆಲ್ದಿಂ ಬೞಿಯಂ ಮುದುಗಣ್ಗಳ್ ಮಗುೞೆ ಕುಡಿಸುವರೆಂಬ ಬಗೆಯೊಳಂ: ಪಂಪಭಾ, ೭. ೩ ವ)
ಮಗುೞ್
[ಕ್ರಿ] ವಾಪಸಾಗು (ಅರಸರೀಗಳೆ ಬಂದಪ್ಪರ್ ಅಂಜದಿರಿಂ ಎಂದು ಆಸೆವಾತುಗಳೊಳಾಱಿಸಿ ನುಡಿದೊಡಗೊಂಡು ಮಂದಿರಕ್ಕೆ ಮಗುೞ್ದರ್: ಆದಿಪು, ೯. ೭೬ ವ); [ಕ್ರಿ] ಸಂತೋಷಿಸು (ಸುರಯಿಯೊಳ್ ಗಿಳಿ ಮಗುೞ್ವರಗಿಳಿ ಬಿರಯಿಗೆ ಮೊರೆವಂತೆ ಮೊರೆವ ಮಱಿದುಂಬಿ: ಆದಿಪು, ೬. ೧೦೦)
ಮಗುೞ್ಚು
[ಕ್ರಿ] ಹಿಂದೆ ಕಳಿಸು (ಎಂದತಿಲಲಿತಸಮುಚ್ಚಳಿತ ರಶನಾಕಳಾಪ ನೂಪುರಕಿಂಕಿಣೀಕ್ವಣಿತ ಅನುಸಾರಿಯಾಗಿ ಬರ್ಪ ರಾಜಹಂಸಮಂಡಲಮಂ ಮಗುೞ್ಚಿ ಬರ್ಪಾಗಳ್: ಆದಿಪು, ೧೧. ೧೩೮ ವ)
ಮಗುೞ್ದು
[ಗು] ರಭಸದಿಂದ (ಪೊಸೆದೊಡೆ ಪಾಲ್ಗಡಲಂ ಮಗುೞ್ದಸುರರ್ ಪೊಸೆದಲ್ಲಿ ಕಾಳಕೂಟಾಂಕುರಂ ಅಂದು ಅಸದಳಮೊಗೆದಂತೊಗೆದುವು ಬಸಿಱಿಂ ನೂಱೊಂದು ಪಿಂಡಂ ಅರುಣಾಕೀರ್ಣಂ; ಪಂಪಭಾ, ೧. ೧೩೦)
ಮಗುೞ್ದುಂ
[ಅ] ಮತ್ತೆ, ಪುನಃ (ವಿವಾಹಸಮಯದೊಳ್ ತನ್ನನಾ ಶ್ರೀಧರದೇವನೇ ಬಂದು ಮಗುೞ್ದುಂ ಮೂದಲಿಸೆ: ಆದಿಪು, ೫. ೯೬ ವ)
ಮಗುೞ್ದುಬರ್
[ಕ್ರಿ] ವಾಪಸು ಬಾ (ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಂ ಇತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ: ಪಂಪಭಾ, ೧. ೧೦೫ ವ)
ಮಗುೞ್ದುಮಗುೞ್ದುಂ
[ಅ] ಮತ್ತೆ ಮತ್ತೆ (ಅಂತು ಮುನಿವೃಷಭನಂ ಕಿಱಿದಂತರಮಂ ಕೞಿಪಿ ಮಗುೞ್ದುಮಗುೞ್ದುಂ ಕಾಂತಾರಾಂತರಮಂ ಪುಗುವನ್ನೆಗಂ ಅಂತವರೆಯಿಕ್ಕದಂತೆ ನೋಡಿದರಾಗಳ್: ಆದಿಪು, ೧೦. ೭)
ಮಗುೞ್ದುವರ್
[ಕ್ರಿ] ವಾಪಸು ಬಾ (ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದು ವಂದು ಗಾಂಗೇಯಧೃತರಾಷ್ಟ್ರವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು: ಪಂಪಭಾ, ೧. ೧೧೩ ವ)
ಮಗ್ಗು
[ಕ್ರಿ] [<ಮೞ್ಗು] ಬೀಳು (ಭವಭ್ರಮಣದುಃಖೋಗ್ರಾಗ್ನಿಯೊಳ್ ಮಗ್ಗಿದಪ್ಪುದು ಜೀವಂಗಳಂ ಎಂಬಿನಂ ಬಳಸಿದೀ ಮಿಥ್ಯಾತ್ವಬಂಧಂ: ಆದಿಪು, ೧೫. ೧೯)
ಮಗ್ನ
[ಗು] ಮುಳುಗಿದವನು (ಧರ್ಮಪೋತಚ್ಯುತರ್ ಅನವಧಿಸಂಸಾರವಾರಾಶಿಮಧ್ಯಾಸ್ಪದ ಸರ್ವಗ್ರಾಸಿ ಭೀಮಾಂತಕ ವದನಮಹಾಗರ್ತದೊಳ್ ಮಗ್ನರಾದರ್: ಆದಿಪು, ೯. ೫೮)
ಮಘ