भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಘಮಘಿಸು

[ಕ್ರಿ] ಪ್ರಕಾಶಿಸು (ಗಂಗಾನದಿಯ ಬಡಗಣ ತಡಿಯ ಮಘಮಘಿಸುವ ವಾರಣಾಸಿಪುರಮನಾಳ್ವ ಬೃಹದ್ದಳಂ: ಪಂಪಭಾ, ೬. ೨೬ ವ)

ಮಘವ

[ನಾ] ಸೌಧರ್ಮೇಂದ್ರ (ಮಘವಂ ಅಘವಿಘಾತಾರ್ಥಂ ಉದ್ಧತಾಭಿನಯಪ್ರಾಯಮುಂ ಆರಭಟೀವೃತ್ತಿಯುಕ್ತಮುಂ ಅಪ್ಪ ತಾಂಡವಮನಾಡಲ್ ಉದ್ಯೋಗಂಗೆಯ್ದು: ಆದಿಪು, ೭. ೧೧೫ ವ); [ನಾ] ಇಂದ್ರ (ಬೆಸನೇಂ ಏಗೆಯ್ವುದೊ ನಿನಗೊಸೆದೇನಂ ಕುಡುವುದು ಎಂದೊಡೆ ಅವಳ್ ಮಕ್ಕಳ ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯)

ಮಂಚದ ಕಾಲೊಳ್ ಕಟ್ಟು

[ಕ್ರಿ] ಬಂಧಿಸು (ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ: ಪಂಪಭಾ, ೨. ೬೨ ವ)

ಮಚ್ಚರ

[ನಾ] ಅಸೂಯೆ (ಪಿರಿದುಂ ಕಾಯ್ಪಿನೊಳ್ ಎಯ್ದೆ ಕಾಯ್ವ ಸಮಕಟ್ಟಿಂ ದೋಷಮಲ್ತೆ ಅಕ್ಕ ಮಚ್ಚರಮುಂ ಮೋಘಂ ಎಡಂಬಡುಂ ಕಲುಷಮುಂ ಮುನ್ನುಳ್ಳುದು .. .. ನಿಷ್ಕಾರಣಂ ಕಾಯ್ವರೇಂ: ಪಂಪಭಾ, ೭. ೩೫)

ಮಚ್ಚರಿಸು

[ಕ್ರಿ] ಸ್ಪರ್ಧಿಸು (ತನ್ನಿಂ ತಾನುಂ ಶರದದ ಚಂದ್ರಮನೊಳ್ ಮಚ್ಚರಿಪಂತಿರೆ ಚಂದ್ರಚರಿತಮಂ ಕೈಕೊಂಡಂ: ಆದಿಪು, ೧೨. ೪೬); [ಕ್ರಿ] ದ್ವೇಷಿಸು (ಮಚ್ಚರಿಪದಟಂ ಇನ್ನಾವನೊ ಭರತೇಶ್ವರಚಕ್ರವರ್ತಿಗಿನ್ನುಂ ಜಗದೊಳ್: ಆದಿಪು, ೧೪ ೪)

ಮಚ್ಚು

ಪರಿಚಯ (ಅರಸರ ಮಚ್ಚು ತಮ್ಮ ಮನದೊಳ್ ನಿಲೆ ಸೈರಿಸದಂತನಿತ್ಯಮೀ ನರರ ವಿಭೂತಿಯೆಂಬ ಬಗೆ: ಆದಿಪು, ೨. ೫೧); [ನಾ] ಬಹುಮಾನ (ಪುಂಡರೀಕಿಣಿಗೆ ಮುಂದಟ್ಟಿದ ದೂತಂಗೆ ಪ್ರೀತನಾಗಿ ಮೆಚ್ಚಿ ಮಚ್ಚಿತ್ತು ವಜ್ರದಂತಚಕ್ರವರ್ತಿಯುಂ .. .. ಬಂಧುರಗಂಧ ಸಿಂಧುರಾರೂಢನುಮಾಗಿ: ಆದಿಪು, ೪, ೨೩ ವ)

ಮಚ್ಛೌರ್ಯ

[ನಾ] [ಮತ್+ಶೌರ್ಯ] ನನ್ನ ಪ್ರತಾಪ (ಪಗೆವಂ ಬಂದುಱದಿಂತು ಮೂದಲಿಸೆಯುಂ ಮಾತಂ ಕಿವುೞ್ಗೇಳ್ದು ಕೆಮ್ಮಗೆ ನೀರೊಳ್ ಮುೞುಗಿದರ್ಪಡೆ ಕಿಡುಗುಂ ಮಚ್ಛೌರ್ಯಂ: ಪಂಪಭಾ, ೧೩. ೮೧)

ಮಂಜರೀ

[ನಾ] ಗೊಂಚಲು (ಅನಂತಸಾಮಂತಮಕುಟಮಾಣಿಕ್ಯ ಮಯೂಖಮಂಜರೀಜಾಳಪಲ್ಲವಿತ ಆಸ್ಥಾನಮಂಟಪನುಂ: ಪಂಪಭಾ, ೯. ೨೮ ವ)

ಮಂಜೀರಕ

[ನಾ] ಒಡ್ಯಾಣ (ವಿದ್ಯಾಧರೀರಮ್ಯನರ್ತನ ರಾಗೋತ್ಥಿತ ಪಾರಿಹಾರ್ಯ ರಶನಾ ಮಂಜೀರಕೋದ್ದಾಮನಿಸ್ವನದೊಳ್: ಆದಿಪು, ೧. ೭೦)

ಮಂಜು

[ಗು] ಮಂಜುಳವಾದ, ಇನಿದಾದ (ಸುರವಿಳಾಸಿನೀ ಲಲಿತಮೃದುಪದವಿನ್ಯಾಸ ಮಂಜುಗುಂಜನ್ಮಂಜೀರಕ ಮನೋಹರ ಝಂಕಾರಪ್ರವರ್ಧಮಾನ ಮದಾಳಿಕುಳ ಕೋಳಾಹಳದೊಳ್: ಆದಿಪು, ೮. ೬೭ ವ)

ಮಂಜುಶಿಂಜಿತ

[ನಾ] ಮಧುರ ಧ್ವನಿ (ಅತ್ತಲಿತ್ತಲೆಡೆಯಾಡುವ ದಂದುಗದಾಗಳೇಂ ಪೊದಳ್ದೆಸೆದುದೊ ಚಾರುದೇವಗಣಿಕಾ ಮಣಿನೂಪುರ ಮಂಜುಶಿಂಜಿತಂ: ಆದಿಪು, ೭. ೨೨)

ಮಜ್ಜನ

[ನಾ] [ಮಾರ್ಜನ] ಸ್ನಾನ (ಆ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು: ಪಂಪಭಾ ಪರಿಷತ್ತು, ೪. ೫೧); ೨ ಸ್ನಾನಮಾಡುವ ಕ್ಷೇತ್ರ (ಪಿರಿಯ ಮರಂಗಳೆ ಮಾಡಮಾಗೆ ಪೊಳೆದೆಳೆದಳಿರ್ಗಳೆ ಸೆಜ್ಜೆಯಾಗೆ ಪಿರಿಯ ಮಡುಗಳೆ ಮಜ್ಜನಮಾಗೆ: ಪಂಪಭಾ, ೭. ೨೮)

ಮಜ್ಜನಗೃಹ

[ನಾ] ಸ್ನಾನದ ಮನೆ (ವಸುಧಾರಕಮೆಂಬ ಕೋಶಾಗಾರಮುಂ ಜೀಮೂತವೆಂಬ ಮಜ್ಜನಗೃಹಮುಂ: ಆದಿಪು, ೧೫. ೩ ವ)

ಮಜ್ಜನಂಬುಗಿಸು

[ಕ್ರಿ] ಸ್ನಾನಮಾಡಿಸು (ದಿಕ್ಕರಿಗಳ್ ಅಂಬುಜ ಪತ್ರಾಂಬುವಿಂ ಬೆಡಂಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್: ಪಂಪಭಾ, ೧. ೧೪೦)

ಮಜ್ಜನಂಬುಗು

[ಕ್ರಿ] ಸ್ನಾನಮಾಡು (ಉದಿತೋದಿತನಂ ದಿಗಿಭಂಗಳೆಂಟುಂ ಒಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಿಂ ಕಮಲಾಭಿರಾಮನಂ: ಪಂಪಭಾ, ೧. ೧೪೧)

ಮಜ್ಜನವಳ್ಳ

[ನಾ] ಸ್ನಾನಮಾಡಿಸುವವನು (ಮಜ್ಜನಪೀಠಂ ಸುರಗಿರಿ ಮಜ್ಜನಜಳವಮೃತಜಳಧಿಜಳವು ಅಮರೇಂದ್ರಂ ಮಜ್ಜನವಳ್ಳನುಮೆನೆ ಜಿನಮಜ್ಜನಮಹಿಮೆಯ ಬೆಡಂಗಂ ಏವಣ್ಣಿಪುದೋ: ಆದಿಪು, ೭. ೧೦೩)

ಮಜ್ಜಾ

[ನಾ] ನೆಣ, ಕೊಬ್ಬು (ವಿಚಳತ್ ಅಸ್ಥಿ ನಿರ್ಯತ್ ಮಜ್ಜಾ ಶುಷ್ಯತ್ ಕಂಠ ಸ್ವಿದ್ಯತ್ ವದನ ನಿಮೀಳತ್ ನೇತ್ರ ಸೀದತ್ ಗಾತ್ರ ಮುಹ್ಯತ್ ಮಾನಸ ಆಕ್ರಂದತ್ ಸ್ವರ ಪರಿಗತರ್: ಆದಿಪು, ೫. ೮೭ ವ)

ಮಟ್ಟ

[ನಾ] ಸಮಪ್ರದೇಶ (ಪಡೆಗಡ್ಡಮಿರ್ದ ಬೆಟ್ಟಿಟ್ಟೆಡೆ ಮಟ್ಟಮಿಱುಂಬಮೆಂಬಿವಂ ಸಣ್ಣಿಸಿ ಸಾರ್ವೆಡೆ ನಡೆವ ದಂಡರತ್ನಂ ಮುಂದೆ ನಡೆಯೆ: ಆದಿಪು, ೧೧. ೪೭)

ಮಟ್ಟನಾಗು

[ಕ್ರಿ] ಖಾಲಿಯಾಗು (ಬನದ ತಳಿರ್ ಕಳಿಕೆ ಮುಗುಳ್ ನನೆ ಬಿರಿಮುಗುಳ್ ಅಲರ ಗೊಂಚಲೆಂಬಿವು ವನಜಾನನೆಯರ ಪೂದುಡುಗೆಗೆ ಮಟ್ಟನಾದುವೇಂ ಪೆಂಪೊ ಭರತನಂತಃಪುರದಾ: ಆದಿಪು, ೧೧. ೧೨೯)

ಮಟ್ಟಂಪರಿ

[ಕ್ರಿ] ಸಲೀಸಾಗಿ ಮುಂದೆ ಸಾಗು (ತೆರೆಗಳ ಪೊಯ್ಲಂ ಸ್ಯಂದನತುರಂಗಂಗಳ್ ಮೊಗಮನೆತ್ತಿ ಬಂಚಿಸಿ ಮಟ್ಟಂಪರಿಯೆ ತೆರೆಯಿಲ್ಲದೆಡೆಯೊಳ್ ವರೂಥಮವಯವದೆ ತಡಿಯನೆಯ್ದಿದುದಾಗಳ್: ಆದಿಪು, ೧೨. ೧೨೭)

Search Dictionaries

Loading Results

Follow Us :   
  Download Bharatavani App
  Bharatavani Windows App