भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೃದುಕೂಜಿತ

[ನಾ] ಮೆಲುವಾಗಿ ಕೂಗುವುದು (ಪರಿಪಠನ ನಟನ ಮೃದುಕೂಜಿತ ರಸಿತ ದರಹಸಿತ ಕ್ರೇಂಕಾರ ಆರೋಹಣಾದಿ ಯೋಧನಾದಿ ನಾನಾ ವಿನೋದಂಗಳೊಳ್: ಆದಿಪು, ೮. ೩ ವ)

ಮೃದುಬಂಧ

[ನಾ] ಮೃದುವಾದ ಶಬ್ದಗಳ ಜೋಡಣೆ (ಬಗೆ ಪೊಸತಪ್ಪುದಾಗೆ ಮೃದು ಬಂಧದೊಳೊಂದುವುದೊಂದಿ ದೇಸಿಯೊಳ್ ಪುಗುವುದು: ಪಂಪಭಾ, ೧.೮)

ಮೆಚ್ಚವಣಿಗೆ

[ನಾ] ಮೆಚ್ಚಿಕೆಯನ್ನು ಹೊಂದಿರುವುದು (ಓಲಗವುರುಡಿಲ್ಲ ಮೆಚ್ಚವಣಿಗಿಲ್ಲ ಕರಂ ಮುಳಿಸಿಲ್ಲ ಕೆಮ್ಮಗೆ ಬೞಿಸಂದು ಕೊಂದಪನಕಾರಣದಿಂ ಮೊಱೆಯೋ ಮನೋಭವಾ: ಆದಿಪು, ೧೨. ೩೩)

ಮೆಚ್ಚು

[ನಾ] ಬಹುಮಾನ (ಮುಂದಟ್ಟಿದ ದೂತಂಗೆ ಪ್ರೀತನಾಗಿ ಮೆಚ್ಚಿ ಮೆಚ್ಚಿತ್ತು: ಆದಿಪು, ೪. ೨೩ ವ); [ನಾ] ಇಷ್ಟಾರ್ಥ (ಕಿನ್ನರಯುವತೀ ಮೃಗೀವ್ರಾತಮಂ ತನ್ನ ನಲ್ಲಂಬುಗಳಿಂದೆಚ್ಚೆಚ್ಚು ಮೆಚ್ಚಂ ಸಲಿಸುವನದಱಿಂ ರಮ್ಯಮಿಂತೀ ನಗೇಂದ್ರಂ; ಪಂಪಭಾ, ೪. ೨೩); [ನಾ] ಅಪೇಕ್ಷೆ (ಉಗ್ರಾಜಿಯೊಳ್ ದೋರ್ವಳದಿಂದಂ ತನ್ನ ಮೆಚ್ಚಂ ಸಲಿಸಿಯೆ ನೆಲನಂ ಕೊಳ್ವೆಂ: ಪಂಪಭಾ, ೯. ೯೩)

ಮೆಚ್ಚುಗೊಡು

[ಕ್ರಿ] ಬಹುಮಾನ ನೀಡು (ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗವ್ಯಾಯಾಮ ಕಾರ್ತಿಕೇಯಂ ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದಟ್ಟಿ ನಾರಾಯಣನುಂ ತಾನುಂ .. .. ಬೇಂಟೆಗೆ ಪೊಱಮಟ್ಟು: ಪಂಪಭಾ, ೫. ೪೭ ವ)

ಮೆಚ್ಚುಗೊಳ್

[ಕ್ರಿ] ಬಹುಮಾನ ಸ್ವೀಕರಿಸು (ಗಣಿಕಾತಿಳಕಮಿವಳ್ ನರ್ತನರಸದೊಳೆ ನಿಚ್ಚಂ ಮೆಚ್ಚುಗೊಳ್ವಳಿಂದ್ರನ ಕೈಯೊಳ್: ಆದಿಪು, ೯. ೧೮)

ಮೆಟ್ಟು

[ಕ್ರಿ] ನರ್ತನದಲ್ಲಿ ಹೆಜ್ಜೆಯಿಡು ಹಾಗು ಹೆಜ್ಜೆ (ಭುಜಲತಾಭ್ರೂಚಾಪ ನೇತ್ರೋತ್ಪಲ ಪ್ರಸರಂಗಳ್ ಪಸರಂಗೆಯ್ಯುತ್ತಿರೆ ಲಸನ್ನೇತ್ರಂಗಳಂ ಕೂಡೆ ಬಂಚಿಸುತುಂ ಮೆಟ್ಟುವ ಮೆಟ್ಟಿನೊಳ್ಪು: ಆದಿಪು, ೭. ೧೨೩); [ಕ್ರಿ] ತುಳಿ (ಸಾವದ್ಯಭೀರುಗಳ್ ಕೆಲರ್ ಆ ವಿವಿಧ ಫಲ ಪ್ರಸೂನ ಪಲ್ಲವತತಿಯಿಂ ತೀವಿದ ರಾಜಾಂಗಣಮಂ ಇಳಾವಂದ್ಯರ್ ಮೆಟ್ಟಲೊಲ್ಲದಲ್ಲಿಯೆ ನಿಂದರ್: ಆದಿಪು, ೧೫. ೯); [ಕ್ರಿ] ಕುಟ್ಟು (ಶಕುನಿ ಮುನ್ನೆ ತನ್ನ ಮಾಡಿದ ನಾೞವಾಸಗೆಗಳಂಂ ಅರಸಾಳಂತೆ ಕಣ್ಣಱಿದು ಮೆಟ್ಟಿ ಮಟ್ಟಮಱಿದಿಕ್ಕುವಾಗಳ್: ಪಂಪಭಾ, ೬. ೭೧ ವ); [ನಾ] ಪಾದರಕ್ಷೆ ಧರಿಸು (ದುಕೂಲಾಂಬರಮನುಟ್ಟು ಪೊಸವಾವುಗೆಯಂ ಮೆಟ್ಟಿ: ಪಂಪಭಾ, ೧೨. ೧೦೮ ವ);

ಮೆಡಱು

[ಕ್ರಿ] ಹೆಣೆ (ಗಂಗಾಸುತನ ವಾಮಭಾಗದೊಳ್ ಅಂಬರಭಾಗಂ ಆ ತಟ್ಟಿ ಮೆಡಱಿದಂತಾಗಿ ತನ್ನ ರಥದೊಳೊಟ್ಟಿದ ಕೆಯ್ದುಗಳ ಬೆಳಗೆ ಬೆಳಗಾಗೆ: ಪಂಪಭಾ, ೧೦. ೫೬)

ಮೆಣಸುಗಡಲೆ

[ನಾ] [ಮೆಣಸು+ಕಡಲೆ] ಕಾರ ಹಚ್ಚಿದ ಕಡಲೆ (ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುಡಿನ ಮೆಣಸುಗಡಲೆಯ ಪುಡಿಯೊಳಡಸಿದದಲ್ಲದ ಅಲಲ್ಲಣಿಗೆಯ ಚಕ್ಕಣಮಂ ಸವಿಸವಿದು: ಪಂಪಭಾ, ೪. ೮೭ ವ)

ಮೆಯ್

[ನಾ] ಭಾಗ, ಕಡೆ (ಒಂದು ಮೆಯ್ಯೊಳ್ ಅಮರರ್ ಮತ್ತೊಂದು ಮೆಯ್ಯೊಳ್ ನರರ್ ನೆರೆದಿಂಬಾಗಿರೆ: ಆದಿಪು, ೮. ೨೦); [ನಾ] ಶರೀರ (ಓಡುಗೆ ನಿಮ್ಮ ಮೆಯ್ಯ ಪಸಿವು ಆಂತ ವಿರೋಧಿಗಳೆನ್ನ ಕೆಯ್ಯೊಳೞ್ಕಾಡುಗೆ: ಪಂಪಭಾ, ೫. ೮೫); [ನಾ] ಕಥಾವಸ್ತು (ಸಮಸ್ತಭಾರತಮುಂ ಆದಿಪುರಾಣಮುಂ ಎಂದು ಮೆಯ್ ಅಸುಂಗೊಳುತಿರೆ: ಪಂಪಭಾ, ೧೪. ೬೦)

ಮೆಯ್ ಮೆಯ್ಗೆ

[ಅ] ಪ್ರತಿಯೊಬ್ಬರಿಗೂ, ಪ್ರತ್ಯೇಕವಾಗಿ (ಎಮ್ಮ ಗಂಡವಾತುಂ ಅಳುಂಬಂ ಭೃತಮಕ್ಕುಮೆಂದು ಮೆಯೆ ಮೆಯ್ಗೆ ಬೆಸಸೆಂಬುದುಂ: ಪಂಪಭಾ, ೬. ೨೬ ವ)

ಮೆಯ್ಗರೆ

[ಕ್ರಿ] ತಪ್ಪಿಸಿಕೊ (ಕರೆದೊಡೆ ಜೂದಿಂಗಂ ಧುರಭರಕೆ ಆಖೇಟಕ್ಕೆ ಭೂಭುಜಂಗೆ ಆಗದು ಮೆಯ್ಗರೆದಿರಲ್ ಆಗದು ಎಂಬ ಪುರಾತನ ಗುರುವಚನಂ ತನಗೆ ನಿಟ್ಟೆಪಟ್ಟುದಱಿಂ: ಪಂಪಭಾ, ೬. ೭೧); [ಕ್ರಿ] ಮರೆಮಾಚು, ಮೈಮರೆಸು (ಒಂದು ದಿವಸಂ ದುರ್ಯೋಧನನ ಮಯ್ದುನಂ ಸಿಂಧುದೇಶಾಧೀಶ್ವರಂ ಸೈಂಧವಂ ಅವರಂ ಛಿದ್ರಿಸಲೆಂದು ಮೆಯ್ಗರೆದು ಬಂದು: ಪಂಪಭಾ, ೭. ೩೦ ವ)

ಮೆಯ್ಗಲಿ

[ನಾ] ಶೂರ (ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀಮನನತಿ ಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ: ಪಂಪಭಾ, ೧. ೨೬)

ಮೆಯ್ಗಾಪು

[ನಾ] ಮೈಗಾವಲು (ಕಳಭಾಷಿಣಿಗಮರಿಯರೆ ಬಳಸಿ ಮೆಯ್ಗಾಪಾದರ್: ಆದಿಪು, ೭. ೧೩)

ಮೆಯ್ಗಿಡು

[ಕ್ರಿ] ವಸ್ತುವಿನ್ಯಾಸವು ಕೆಡು (ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾರತಮನಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ: ಪಂಪಭಾ, ೧. ೧೧)

ಮೆಯ್ದರ್

[ಕ್ರಿ] [ಮೆಯ್+ತರ್] ಇಷ್ಟಪಡು (ಜೈನದೀಕ್ಷೆಗೆ ಮೆಯ್ಯಂ ತರುಣಜನಂಗಳೆ ತರ್ಪರ್ ಪರಿಣತವಯಸರ್ಕಳಪ್ಪವರ್ ಮೆಯ್ದಾರರ್: ಆದಿಪು, ೧೫. ೪೪)

ಮೆಯ್ದೋಱು

[ಕ್ರಿ] ಕಾಣಿಸಿಕೊ (ಪೊಳೆವ ಅಂಗಚ್ಛಾಯೆಯುಂ ಬೇಱೆ ತೊಟ್ಟನೆ ಮೆಯ್ದೋಱೆ ವಿಶುದ್ಧಮಪ್ಪ ಪಳಿಕಿಂ ಪೆಣ್ಮಾಡಿದಂತೊಪ್ಪಿದಳ್: ಆದಿಪು, ೭. ೨೩); [ಕ್ರಿ] ಎದುರಿಸು (ವಯಲ್ಗೆ ಮೆಯ್ದೋಱುವೆವೆಂಬ ಪೂಣಿಗರ್ ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ ನಭಕ್ಕೆ ಪಾಱಿದುದು: ಪಂಪಭಾ, ೧. ೧೦೯); [ಕ್ರಿ] ಪ್ರಕಟಪಡಿಸು (ಚೇಟಿಕೆ ಬೀಸುವ ಕುಂಚಮೆಯ್ದೆ ಮೆಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡೆ ಆರುಮಂ ಮಾಱೆ: ಪಂಪಭಾ, ೯. ೧೦೦)

ಮೆಯ್ಮಱೆ

[ಕ್ರಿ] ಪರವಶವಾಗು, ದೇಹದ ಅರಿವಿಲ್ಲದಾಗು (ಮೆಯ್ಮಱೆದು ಕರ್ಣನೊಳಾದ ಶೋಕಾನಲದೊಳ್ ಬಾಯೞಿದು ಧೃತರಾಷ್ಟ್ರನುಂ ಗಾಂಧಾರಿಯುಂ ಬರೆವರೆ: ಪಂಪಭಾ, ೧೩. ೬ ವ)

ಮೆಯ್ಮಱೆ

[ಕ್ರಿ] ಮೂರ್ಚೆ ಹೋಗು (ಎಂದು ಕರ್ಣನೊಳಾದ ಶೋಕಾನಲದೊಳ್ ಬಾಯೞಿದು ಮೆಯ್ಮಱೆದು ಪಳಯಿಸುವ ನಿಜತನೂಜನ ಶೋಕಮನಾಱಿಸಲೆಂದು: ಪಂಪಭಾ, ೧೩. ೬ ವ)

ಮೆಯ್ಮೆಯ್ಯೊಳೆ

[ಅ] ಅಕ್ಕಪಕ್ಕದಲ್ಲಿಯೇ (ಸಕಳಚಮೂಪತಿಯುಮಂ ಅಶ್ವರತ್ನಮುಮಂ ದಂಡರತ್ನಮುಮಂ ಮೆಯ್ಮೆಯ್ಯೊಳೆ ಕಾವ ದೇವತೆಗಳ್: ಆದಿಪು, ೧೩. ೩೯ ವ)

Search Dictionaries

Loading Results

Follow Us :   
  Download Bharatavani App
  Bharatavani Windows App