भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೆಯ್ಯನಾಱಿಸು

[ಕ್ರಿ] ಮೈಯನ್ನು [ಕಾಮದ ತಾಪದಿಂದ] ನಂದಿಸು (ಎಲ್ಲಿಯುಂ ಮೆಯ್ಯನಾಱಿಸಲಾಱದೆ ಪೂತ ಚೂತಲತೆಗಳೊಳ್ ತಳ್ಪೊಯ್ದು ಪೊಸಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿಮಗುಳ್ಗಳೊಳ್ ತುಱುಗಿದ: ಪಂಪಭಾ, ೫. ೫ ವ)

ಮೆಯ್ಯಱಿ

[ಕ್ರಿ] ಮೈತಿಳಿ, ಎಚ್ಚರವಿರು (ಸುತಶೋಕದ ಪೊಂಪುೞಿಯೊಳ್ ಮೆಯ್ಯಱಿಯದೆ ನೀರಿೞಿವಂತೆವೊಲ್ ಇೞಿದಂ ಅಪರಜಳಧಿಗೆ ದಿನಪಂ: ಪಂಪಭಾ, ೧೨. ೨೨೦)

ಮೆಯ್ಯಲಸು

[ಕ್ರಿ] ದೈಹಿಕವಾಗಿ ದಣಿ (ಅಂಬುಜೋದರನಂ ಮೆಲ್ಲನೆ ನೋಡಿ ಮೆಯ್ಯಲಸಿದಂತೆ ಎಂತಾನುಂ ಎೞ್ದೆರ್ದು ಕೇಸರಿಪೀಠಾಗ್ರದಿನಪ್ಪಿಕೊಂಡು: ಪಂಪಭಾ, ೯. ೩೧)

ಮೆಯ್ಯಾನ್

[ಕ್ರಿ] ಶರೀರವನ್ನು ಒಡ್ಡು (ವಿನತಾಪುತ್ರನ ವಜ್ರ ತುಂಡಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು: ಪಂಪಭಾ, ೪. ೨೬)

ಮೆಯ್ಯಿಕ್ಕು

[ಕ್ರಿ] ನಮಸ್ಕರಿಸು (ಅಧಿವ್ಯಾಧಿತಶರೀರರ್ ಮಾನವರ್ ಅಭಿಮಾನವಂ ಬಿಸುಟು ನಾಭಿರಾಜನನುಮತದಿಂದಂ ಆದಿಬ್ರಹ್ಮನಲ್ಲಿಗೆ ವಂದು ಮೆಯ್ಯಕ್ಕಿ ಪೊಡೆವಟ್ಟು: ಆದಿಪು, ೮. ೬೧ ವ)

ಮೆಯ್ಯೊಡ್ಡು

[ಕ್ರಿ] ದೇಹವನ್ನು ಒಪ್ಪಿಸು (ಕೌರವರ್ ದ್ರುಪದನಂಬೇಱಿಂಗೆ ಮೆಯ್ಯೊಡ್ಡದೆ ಒಡ್ಡು ಒಡೆದು ಓಡುತ್ತಿರೆ: ಪಂಪಭಾ, ೨. ೬೨)

ಮೆಯ್ಯೊಳ್

[ಗು] ಏಕಾಂಗಿಯಾಗಿ (ಕಲಿ ಮಾರ್ಕೊಳ್ಳದೆ ಕೊಟ್ಟು ಮೆಯ್ಯೊಳೆ ಸಿಡಿಲ್ ತಾಪಂತೆವೋಲ್ ತಾಗೆ: ಪಂಪಭಾ, ೬. ೨೭)

ಮೆಯ್ವಣ್ಣ

[ನಾ] ದೇಹದ ಬಣ್ಣ, ಕಾಂತಿ (ಇಂತುಟಪ್ಪ ಮೆಯ್ವಣ್ಣಕ್ಕಿಂತೀ ಪೂವಿನೊಳೀ ತುಡುಗೆಯೊಳೀ ಪುಟ್ಟಿಗೆಯೊ ಬೆಡಂಗುವಡೆದೆಸೆದಿರ್ಕುಂ: ಪಂಪಭಾ, ೩. ೪೫)

ಮೆಯ್ವಿಡಿ

[ಕ್ರಿ] ಸಾಕಾರಗೊಳ್ಳು, ರೂಪ ಪಡೆ (ಬಾಯೞಿದು ಎನಿತೆರೆದೊಡಮಾಹಾಯೆನ್ನಯ ಕರಮೆ ಮಱುಗಿ ಮೆಯ್ವಿಡಿದುರಿವೆಂ ಈ ಎರ್ದೆಯನಾಱಿಸಲ್ ನೀಂ ಬಾಯೊಳ್ದಂಬುಲಮನಪ್ಪೊಡಂ ದಯೆಗೆಯ್ವೋ: ಪಂಪಭಾ, ೮. ೬೯)

ಮೆಯ್ವಿಡು

[ಕ್ರಿ] ತಂಗು, ನೆಲಸು (ಉಷ್ಣಾಂಶುವಿನ ಊರ್ಧ್ವಗಾಂಶುನಿವಹಂ ಮೆಯ್ಯಿಟ್ಟು ಅಲರ್ಚುತ್ತುಂ ಇರ್ಪುದು: ಪಂಪಭಾ, ೪. ೨೨); [ಕ್ರಿ] ಮೈಯನ್ನು ಹಿಡಿ (ಮೆಯ್ವಿಡಿದು ಎನ್ನ ಕಣ್ಗಳೊಳ್ ಸುೞಿದುವು ತಾಮೆ ಕನ್ನಡಿಸಿದಪ್ಪುದವು ಕನ್ನೆಯ ಕನ್ನೆವೇಟಮಂ: ಪಂಪಭಾ, ೪. ೬೧)

ಮೆಯ್ವೆರ್ಚಿಸು

[ಕ್ರಿ] ಸಂತಸಪಡಿಸು (ಪ್ರಿಯಕುಬ್ಜವಾಮನ ಗಣಾಲಾಪಂಗಳ್ ಅತ್ಯಂತಸೌಂದರಶುದ್ಧಾಂತವಧೂ ಕದಂಬಕಮನೇಂ ಮೆಯ್ವೆರ್ಚಿಸಲ್ಕಾರ್ತುದೋ: ಆದಿಪು, ೧೧. ೪೨)

ಮೆಯ್ವೆರ್ಚು

[ಕ್ರಿ] ಮೈಯುಬ್ಬು (ನೀಂ ಮೆಲ್ಲಮೆಲ್ಲನೆ ಮಂದಾನಿಳ ತೀಡು ಕೋಗಿಲೆ ಸರಂದೋಱು ಎಂದು ಮೆಯ್ವೆರ್ಚಿ ತನ್ನಿನಿಯಂ ಬಂದೊಡೆ ನಲ್ಲಳೇಂ ನಲಿದಳೋ ನಾನಾವಿಳಾಸಂಗಳಂ: ಆದಿಪು, ೧೨. ೪೩); [ಕ್ರಿ] ಅಧಿಕವಾಗು (ನನೆಯಂಬನೆ ಕರ್ಚಿ ಪಾಱಿದಪುದೋ ಶೃಂಗಾರವಾರಾಶಿ ಭೋಂಕನೆ ಬೆಳ್ಳಂಗೆಡೆದತ್ತೊ ಕಾಮನ ಎಱೆ ಮೆಯ್ವೆರ್ಚಿತ್ತೊ ಪೇೞ್ ಈಕೆಗೆ ಎಂಬಿನಂ: ಪಂಪಭಾ, ೪. ೪೨)

ಮೆಯ್ವೆಱು

[ಕ್ರಿ] [ಮೆಯ್+ಪೆಱು] ಸಾಕಾರಗೊಳ್ಳು (ಗಾಲಿಗಳೆತ್ತಂ ತಳರದೆ ಜಿಗಿಲ್ತು ನಿಲೆ ಧರೆಗಿೞಿದಾ ಆರ್ದು ಎತ್ತಿ ಪರಿಯಿಸಿದರ್ ಏಂ ಮೆಯ್ವೆತ್ತುದೊ ರಥಕಲ್ಪಂ ಅಲ್ಲಿ ಸೂತರ್ ಕೆಲಬರ್: ಪಂಪಭಾ, ೧೦. ೯೦)

ಮೆಯ್ವೊಣರ್ಚು

[ಕ್ರಿ] [ಮೆಯ್+ಪೊಣರ್ಚು] ಮೈಗೆ ಮೈಸೇರಿಸು (ಜಾಣೊಳ್ ಅಳ್ಳಾಟಮೆಲ್ಲಮಂ ಕಿಡಿಸಿ ಸೋಂಕಿನೊಳ್ ಒಯ್ಯನೆ ಮೆಯ್ವೊಣರ್ಚಿ: ಪಂಪಭಾ, ೩. ೮೨)

ಮೆಯ್ವೋಗ

[ನಾ] [ಮೆಯ್+ಭೋಗ] ದೇಹದ ಸುಖ (ಸೀಗುರಿ ಕಾಪಿನಾಳ್ ಕುಣಿದು ಮೆಟ್ಟುವ ಗುಜ್ಜರಿಗೞ್ತೆ ಬೀರಮಂ ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊಳ್ಪಿನಿಂದೆ ಮೆಯ್ವೋಗದಳುಂಬಮಪ್ಪ ಬಿಯಂ; ಪಂಪಭಾ, ೪. ೮೭)

ಮೆಯ್ಸುಕ

[ನಾ] ದೇಹದ ಸುಖ (ಅಕ್ಕರಗೊಟ್ಟಿಯುಂ ಚದುರರ ಒಳ್ವಾತುಂ ಕುಳಿರ್ ಕೋೞ್ಪ ಜೊಂಪಮುಂ ಏವೇೞ್ಪುದನುಳ್ಳ ಮೆಯ್ಸುಕಮುಂ: ಪಂಪಭಾ, ೪. ೩೧)

ಮೆಯ್ಸೊಕ

[ನಾ] ದೇಹಸುಖ (ಬಗೆಯದೆ ಮೆಯ್ಸೊಕಮಂ ಬಗೆ ಪಗೆವರ ಕಡುವೆರ್ಚಂ ಎನ್ನ ಪೂಣ್ಕೆಯಂ ಎರ್ದೆಯೊಳ್ ಬಗೆ ಮುನಿಯ ಮಂತ್ರಪದಮಂ: ಪಂಪಭಾ, ೭. ೬೭)

ಮೆಯ್ಸೊಗ

[ನಾ] ದೇಹಸುಖ (ಅಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂಬಲಿಸದೆ .. .. ನೋಂಪಿಗಳೊಳ್ ನಿಯಮಕ್ರಮಂಗಳಂ ಸಲಿಸಿದರಿಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ: ಪಂಪಭಾ, ೧. ೧೩೬)

ಮೆಱೆ

[ಕ್ರಿ] ಪ್ರಕಟಿಸು, ತೋರಿಸು (ನೆಱೆಯೆ ಧನುರ್ವಿದ್ಯೆಯ ಕಣ್ದೆಱೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್ ಮೆಱೆದಪ್ಪೆಂ ಎನ್ನ ವಿದ್ದೆಯಂ: ಪಂಪಭಾ, ೨. ೬೫); [ಕ್ರಿ] ಪ್ರದರ್ಶಿಸು (ವನರಾಜಿಕ್ರೀಡೆಯಂ ಯೌವನದೊಳೆ ತೋಱಲ್ ಜಲಕ್ರೀಡೆಯಂ ನೂತನಲಾವಣ್ಯಾಚ್ಛ ತೋಯಾಶಯದೊಳೆ ಮೆಱೆಯಲ್: ಆದಿಪು, ೧. ೮೩); [ಕ್ರಿ] ವ್ಯಕ್ತಪಡಿಸು (ಅಮರೇಂದ್ರಾರ್ಚನಕ್ಕೆ ಇಂತಿದಾಯ್ತಗ್ಗಳಮೆಂಬಂತಾಗೆ ದಿವ್ಯಾರ್ಚನೆಯೊಳೆ ಮೆಱೆದಂ ಭಕ್ತಿಯಂ ಚಕ್ರನಾಥಂ: ಆದಿಪು, ೧೬. ೨)

ಮೆಲ್ನುಡಿ

[ನಾ] ಮೃದು ಮಾತು (ಸೂಳೆಯರ ತುಱುಂಬು ಸೂಳೆಯರ ಮೆಲ್ನುಡಿ ಸೂಳೆಯರಿರ್ಪ ಪಾಂಗು ಸೂಳೆಯರ ನೆಗೞ್ತೆ ನಾಡೆ ತನಗೞ್ತಿ ದಲ್ ಅಕ್ಕನೆ ಸೂಳೆಯಾಗಳೇ: ಪಂಪಭಾ, ೪. ೯೪)

Search Dictionaries

Loading Results

Follow Us :   
  Download Bharatavani App
  Bharatavani Windows App