भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೆಲ್ಪಂ

[ಅ] ಮೃದುವಾಗಿ (ನವವಧುವ ಶಂಕೆಯಂ ಕಳೆವ ವಿದಗ್ಧವಿಟಂಬೊಲಲೆವ ತೆರೆಗಳ್ ಮೆಲ್ಪಂ ಬವರಿಸಿ ಸೋಂಕುತ್ತುಂ ಕಳೆದುವು ಘನಕುಚಕಳಶಕುಂಕುಮಸ್ಥಾಸಕಮಂ: ಆದಿಪು, ೧೧. ೧೪೫)

ಮೆಲ್ಪು

[ನಾ] ಮೃದುತೆ, ಮಾರ್ದವ (ಮೆಲ್ಪಿಂಗೆ ಮೆಚ್ಚಿತ್ತು ತನ್ನ ಸಮಸ್ತಂ ಪರಿವಾರಮೆಂಬ ಗುಣಸಂಘಾತಂಗಳಂ ತಾಳ್ದಿ: ಆದಿಪು, ೧. ೭೮)

ಮೆಲ್ಪು ಬಲ್ಪನೞಿಗುಂ

ಮೃದುತೆಯು ಕಾಠಿಣ್ಯವನ್ನು ನಾಶಪಡಿಸುತ್ತದೆ (ಸಲೆ ಮೆಲ್ಪು ಬಲ್ಪನೞಿಗುಂ ಕೈವಾರಮುಂ ಕೂಡೆ ಕೂರಿಸುಗುಂ ನಿಕ್ಕುವಂ: ಪಂಪಭಾ, ೯. ೧೯)

ಮೆಲ್ಲಡಿ

[ನಾ] ಕೋಮಲ ಪಾದ (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಮೆಲ್ಲು

[ಕ್ರಿ] ತಿನ್ನು (ಪುಗಲಿಲ್ಲ ಈ ಬನಂ ಆರ್ಗಂ ಇಂಬು ನೆಲಸಲ್ ನಾರುಂಟು ಉಡಲ್ ಮೆಲ್ಲೆ ಕೊಂಬುಗಳೊಳ್ ಪಣ್ಪಲಮುಂಟು: ಪಂಪಭಾ, ೭. ೩೦ ವ)

ಮೆಲ್ಲುಲಿ

[ನಾ] ಇನಿದನಿ (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಗಳ ಗೆಡೆಗೊಳೆ: ಪಂಪಭಾ, ೪. ೧೧೦)

ಮೆಲ್ಲೆರ್ದೆ

[ನಾ] ಮಿದುವೆದೆ, ಮೃದು ಹೃದಯ (ಮಲ್ಲಿಗೆಗಳ್ ವಸಂತದೊಳ್ ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ನಿರಂತರಂ ಬಿರಿದುವು: ಆದಿಪು, ೧೧. ೧೧೦)

ಮೆೞಸು

[ನಾ] ಮೆಣಸು (ಮುತ್ತುಂ ಮೆೞಸುಂ ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ: ಪಂಪಭಾ, ೭. ೯೨)

ಮೆೞ್ಪಡಿತು

[ನಾ] ಮೋಸ, ಕೇಡು (ಭೀಮಸೇನಂ ಧರ್ಮಪುತ್ರಂಗೆಂದಂ ಉಪ್ಪಿಕ್ಕಿದೊಡೆ ತುಪ್ಪದ ಮೆೞ್ಪಡಿತೆಂಬಂತೆ ನಮ್ಮ ಕೆಮ್ಮನಿರ್ಪಿರಿದೇ ಕಾರಣಂ: ಪಂಪಭಾ, ೭. ೧೬ ವ)

ಮೆೞ್ಪಡಿಸು

[ಕ್ರಿ] ಮೋಸಪಡಿಸು (ಅದಲ್ಲದೆಯುಂ ಅತ್ಯಾದರಸ್ಸಂಭ್ರಮಮುತ್ಪಾದಯತಿ ಎಂಬುದೀ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ .. .. ನಮ್ಮಂ ಮೆೞ್ಪಡಿಸಲೆಂದೆ ಮಾಡಿದಂ: ಪಂಪಭಾ, ೩. ೪ ವ)

ಮೆೞ್ಪಡು

[ನಾ] ಭ್ರಮೆ (ಪುತ್ರಕಳತ್ರಮೋಹದೆಳ್ ಇದೇಕೞ್ದಿರ್ದಪೈ ನಿನ್ನ ಮೆೞ್ಪಡು ಇದೇಕಾರಣಂ ಅಂತಕಂ ಕಡುಪಿನಿಂ ಕಂಠಗ್ರಹಂಗೆಯ್ಯದಿಂ ತಡೆಯಂ: ಆದಿಪು, ೧. ೭೯); ಭ್ರಾಂತನಾಗು (ತಡೆಯದೆ ನಿನಗಪ್ಪುದನೀಗಡೆ ಬಗೆ ಮೆೞ್ಪಡದಿರು ಎಂಬುದುಂ: ಆದಿಪು, ೩. ೭೨); [ಕ್ರಿ] ಮರುಳಾಗು (ಇಂತು ಕಣ್ಬಡಿಗರಪ್ಪರೆ ಮಾನಸರಪ್ಪರ್ ಎಂದು ಮೆೞ್ಪಡೆ ನುಡಿದು ಎಯ್ದೆವಂದು: ಪಂಪಭಾ, ೮. ೭೬); [ಕ್ರಿ] ಮೋಸಹೋಗು (ನೀನುಂ ಮೆೞ್ಪಟ್ಟು ವಿದುರನೆಂಬೀ ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ ನುಡಿದೈ: ಪಂಪಭಾ, ೯. ೫೮); [ನಾ] ವ್ಯಾಮೋಹ (ಇದೊಂದೆ ಮೆಯ್ ಉೞಿದುದು ಇನ್ನೆನಗಾವುದೊ ಮೆೞ್ಪಡು ಎಯ್ದೆ ಮುಂದಾದ ವಿರೋಧಿಸಾಧನಮಂ ಎನ್ನ ಗದಾಶನಿತಿಂದುರುಳ್ಚುವೆಂ: ಪಂಪಭಾ, ೧೩. ೪೯)

ಮೇಖಳಾಭಿತ್ತಿ

[ನಾ] ಪರ್ವತಾಗ್ರದ ಗೋಡೆ (ಆ ವೃಷಭಾದ್ರಿಯ ಮೇಖಳಾಭಿತ್ತಿಯೊಳ್ ಆತ್ಮೀಯವಿಶ್ವವಿಶ್ವಂಭರಾ ವಿಜಯಪ್ರಶಸ್ತಿಯನೞ್ತಿಯೊಳ್ ಬರೆಯಿಸುವೆನೆಂದು ಪೋಗಿ ನೋಡುವನ್ನೆಗಂ: ಆದಿಪು, ೧೩. ೭೦ ವ)

ಮೇಖಳೆ

[ನಾ] ಡಾಬು (ಸರಿಗೆಗಿವು ಲಂಬಣಕ್ಕಿವು ಬರಗಲೆಗಿವು ಮುಗುಳ್ಗಳೆಮ್ಮ ಮೇಖಳೆಗಿವು ನೂಪುರರಚನೆಗಿಂತಿವೆಂದು: ಆದಿಪು, ೭. ೬೯); [ನಾ] ಬೆಟ್ಟದ ತಪ್ಪಲು (ಕಳಧೌತೋಜ್ಜ್ವಳ ಕುಂಭನಿರ್ಗತಪಯಃಪೂರಂ ಪೊದಳ್ದೆಯ್ದೆ ಮೇಖಳೆಗಳ್ ನಾಲ್ಕುಮನೀ ಈ ನಗಂ ಸುರನಗಂ ಮುನ್ನೀಗಳೆಂತೋ ಹಿಮಾಳಯಮಾಯ್ತು: ಆದಿಪು, ೭. ೧೦೦)

ಮೇಗಿಲ್ಲದೆ

[ಗು] ಕೀಳ್ತನದಿಂದ (ಅಂತು ಕೃಷ್ಣೆಯ ಕೃಷ್ಣಕಬರಿಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಣೋರಗಮಂ ಪಿಡಿದ ಬೆಳ್ಳಾಳಂತೆ ಉಮ್ಮನೆ ಬೆಮರುತ್ತುಂ ಇರ್ದ ದುಶ್ಶಾಸನನುಮಂ: ಪಂಪಭಾ, ೭. ೫ ವ)

ಮೇಗು

[ನಾ] ಹೆಚ್ಚಿನ[ವನು] (ಸೆಣಸುವ ಅಹಿತರ್ ಮೇಲೇೞ್ವ ಉದ್ಯೋಗಮಂ ಬಗೆದಿರ್ದರ್ ಎನ್ನಣುಗಿನ ಅಳಿಯಂಗೆ ಎನ್ನಿಂ ಮೇಗಿಲ್ಲ ಕೂರ್ಪವರ್: ಆದಿಪು, ೪. ೯೦); [ನಾ] , ಮಿಗಿಲು (ಆ ನರಸಿಂಹನಿಂ ಅತ್ತ ನಾಲ್ವೆರಲ್ ಮೇಗು ಪೊದಳ್ದ ಚಾಗದೊಳಂ ಒಂದಿದ ಬೀರದೊಳಂ ಗುಣಾರ್ಣವಂ: ಪಂಪಭಾ, ೧. ೫೦); [ನಾ] ಘನತೆ (ದ್ರುಪದಂ ರಾಜ್ಯಮದಿರಾಮದೋನ್ಮತ್ತನುಂ ಗರ್ವಗ್ರಹ ವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ: ಪಂಪಭಾ, ೨. ೪೬ ವ); [ನಾ] ಮುಂದೆ ಸಂಭವಿಸುವುದು (ದೀವದ ಬೇಂಟೆಯಂ ಬಿನ್ನಪಂಗೆಯ್ವೊಡೆ ಗಾಳಿಯುಂ ಕೞಿವುಮುಂ ಉೞಿವುಂ ಕಾಪುಂ ಮೇಪುಂ ತೋಡುಂ ಬೀಡುಂ ದೆಸೆಯುಂ ಕೊಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಱು ಕೆದಱುಂ ಪೆರ್ಚುಂ ಕುಂದುಮನಱಿದು: ಪಂಪಭಾ, ೫. ೪೩ ವ)

ಮೇಗುವೇೞ್

[ಕ್ರಿ] ಮೋಸದ ನುಡಿಯನ್ನಾಡು (ಎನಗಂ ಮೇಗುವೇೞ್ದಪ್ಪೆಯಿಲ್ಲಾರ್ಪೊಡೆ ನಿನ್ನಂ ಕಾವ ಗಂಧರ್ವರ ಬಿಡಿಸುಗೆ ಪೋಗು: ಪಂಪಭಾ, ೮. ೭೦)

ಮೇಘಕಾಲ

[ನಾ] ಮೋಡದ ಕಾಲ, ಮಳೆಗಾಲ (ಉದಾರ ಕದಂಬ ಕೇತಕೀಪ್ರಸರ ರಜಸ್ವರ ಪ್ರಕಟ ಪ್ರಾಂಸುಳಮಾದುದು ಮೇಘಕಾಲದೊಳ್: ಪಂಪಭಾ, ೭. ೨೨)

ಮೇಘನಾದ

[ನಾ] ಮೋಡದ ಶಬ್ದ, ಗುಡುಗು (ಮರುಳ್ಗೆ ಧೂಪಮಂ ತೋಱಿದ ಮಾೞ್ಕೆಯಿಂ ದ್ರುಪದರಾಜಸುತಾವಚನಂಗಳಲ್ಲಿ ಮೆಯ್ದೋಱೆ ಮರುತ್ಸುತಂ ನುಡಿದಂ ಆ ಸಭೆಯೊಳ್ ನವಮೇಘನಾದದಿಂ: ಪಂಪಭಾ, ೭. ೧೧)

ಮೇಘಮಾಲಿಕಾ[ಕೆ]

[ನಾ] ಮೋಡಗಳ ಮಾಲೆ (ಮಾರುತಬಾಣದೆ ಮೇಘಮಾಲಿಕಾನಿವಹಮಂ ಎಚ್ಚು ಕೂಡೆ ಶರಪಂಜರಮಂ ಪಡೆದಂ ಗುಣಾರ್ಣವಂ: ಪಂಪಭಾ, ೫. ೯೬)

ಮೇಘಸ್ವರ

[ನಾ] ಒಂದು ಬಿರುದು (ಮೇಘನಾದಸಮಾನಮಾದ ಸಿಂಹನಾದಕ್ಕೆ ಚಕ್ರವರ್ತಿ ಮೆಚ್ಚಿ ಮೇಘಸ್ವರನಾಮಮಂ ವೀರಾಗ್ರಗಣ್ಯಪದವಿಯಂ ದಯೆಗೆಯ್ದು: ಆದಿಪು, ೧೩. ೬೭ ವ)

Search Dictionaries

Loading Results

Follow Us :   
  Download Bharatavani App
  Bharatavani Windows App